ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಯನ್ನು ನಾಯಕತ್ವದಿಂದ ಹೊರಹಾಕಿದ ಬೆನ್ನಲ್ಲೇ ರೋಹಿತ್‌ ಜೊತೆ ಕೈಜೋಡಿಸಲು ರಾಹುಲ್ ರೆಡಿ

KL Rahul likely to be named as Indias Vice Captain in ODI and t20

ಈ ವರ್ಷ ಟೀಮ್ ಇಂಡಿಯಾದಲ್ಲಿ ಭಾರೀ ಬದಲಾವಣೆಗಳು ನಡೆದಿವೆ. ಅದರಲ್ಲಿಯೂ ಇತ್ತೀಚಿನ ನಾಲ್ಕೈದು ತಿಂಗಳಲ್ಲಿ ಟೀಮ್ ಇಂಡಿಯಾ ದೊಡ್ಡ ದೊಡ್ಡ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ವರ್ಷದ ಆರಂಭದಲ್ಲಿ ಭಾರತ ಟಿ ಟ್ವೆಂಟಿ, ಏಕದಿನ ಮತ್ತು ಟೆಸ್ಟ್ ಹೀಗೆ ಎಲ್ಲಾ ಮಾದರಿಯ ತಂಡಗಳಿಗೂ ನಾಯಕನಾಗಿದ್ದ ವಿರಾಟ್ ಕೊಹ್ಲಿ ವರ್ಷದ ಕೊನೆಯ ತಿಂಗಳಲ್ಲಿ ಇದೀಗ ಕೇವಲ ಭಾರತ ಟೆಸ್ಟ್ ತಂಡದ ನಾಯಕನಾಗಿ ಮಾತ್ರ ಉಳಿದುಕೊಂಡಿದ್ದಾರೆ.

ದ.ಆಫ್ರಿಕಾ ಪ್ರವಾಸಕ್ಕೆ 18 ಆಟಗಾರರ ಟೆಸ್ಟ್ ತಂಡ ಪ್ರಕಟಿಸಿದ ಬಿಸಿಸಿಐ; ಕಳಪೆ ಆಟಗಾರರಿಗೆ ಮತ್ತೆ ಅವಕಾಶ!ದ.ಆಫ್ರಿಕಾ ಪ್ರವಾಸಕ್ಕೆ 18 ಆಟಗಾರರ ಟೆಸ್ಟ್ ತಂಡ ಪ್ರಕಟಿಸಿದ ಬಿಸಿಸಿಐ; ಕಳಪೆ ಆಟಗಾರರಿಗೆ ಮತ್ತೆ ಅವಕಾಶ!

ಹೌದು, ಈ ವರ್ಷದ ಆರಂಭದಲ್ಲಿ ಭಾರತ ತಂಡದ ನಾಯಕನಾರು ಎಂಬ ಪ್ರಶ್ನೆ ಕಿವಿಗೆ ಬಿದ್ದ ಕೂಡಲೇ ಎಲ್ಲರ ಬಾಯಲ್ಲಿಯೂ ಬರುತ್ತಿದ್ದ ಏಕೈಕ ಹೆಸರು ವಿರಾಟ್ ಕೊಹ್ಲಿ. ಆದರೆ ವರ್ಷಾಂತ್ಯದಲ್ಲಿ ಇದೇ ಪ್ರಶ್ನೆ ಕಿವಿಗೆ ಬಿದ್ದಾಗ ಸದ್ಯಕ್ಕೆ 2-3 ಉತ್ತರಗಳು ಕೇಳಿಬರುತ್ತಿದ್ದು, ಭಾರತ ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕ ಹಾಗೂ ಭಾರತ ಟಿ ಟ್ವೆಂಟಿ ಮತ್ತು ಏಕದಿನ ತಂಡಗಳಿಗೆ ರೋಹಿತ್ ಶರ್ಮಾ ನಾಯಕರಾಗಿದ್ದಾರೆ. ಹೀಗೆ ವರ್ಷಾಂತ್ಯದ ವೇಳೆಗೆ ಇಬ್ಬರು ನಾಯಕರನ್ನು ಟೀಮ್ ಇಂಡಿಯಾ ಹೊಂದಿದೆ. ಇನ್ನು ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಆರಂಭಕ್ಕೂ ಮುನ್ನವೇ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸುತ್ತಿರುವುದಾಗಿ ಸ್ವಇಚ್ಛೆಯಿಂದ ನಿರ್ಧಾರವನ್ನು ಘೋಷಿಸಿದ್ದ ವಿರಾಟ್ ಕೊಹ್ಲಿ ಭಾರತ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕನಾಗಿ ಮುಂದುವರಿಯುವುದಾಗಿ ಆಶ್ವಾಸನೆ ನೀಡಿದ್ದರು.

ಟಿ20 ನಂತರ ಏಕದಿನ ನಾಯಕತ್ವವನ್ನೂ ಕಳೆದುಕೊಂಡ ಕೊಹ್ಲಿ; ರೋಹಿತ್ ನಾಯಕತ್ವದ ಯುಗ ಶುರು!ಟಿ20 ನಂತರ ಏಕದಿನ ನಾಯಕತ್ವವನ್ನೂ ಕಳೆದುಕೊಂಡ ಕೊಹ್ಲಿ; ರೋಹಿತ್ ನಾಯಕತ್ವದ ಯುಗ ಶುರು!

ಆದರೆ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವಾಗ ಹೇಳಿದ್ದ ಈ ಮಾತುಗಳು ಇಂದು ಹುಸಿಯಾಗಿದ್ದು ಕೊಹ್ಲಿ ಭಾರತ ಏಕದಿನ ತಂಡದ ನಾಯಕತ್ವವನ್ನು ಕೂಡ ಕಳೆದುಕೊಂಡಿದ್ದಾರೆ. ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸಿರುವ ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಭಾರತ ಏಕದಿನ ತಂಡದ ನೂತನ ನಾಯಕನನ್ನಾಗಿ ಘೋಷಣೆ ಮಾಡಿದ್ದು, ಸದ್ಯ ರೋಹಿತ್ ಶರ್ಮಾ ಭಾರತ ಟಿ ಟ್ವೆಂಟಿ ಮತ್ತು ಏಕದಿನ ತಂಡಗಳೆರಡಕ್ಕೂ ನಾಯಕನಾಗಿದ್ದಾರೆ. ಹೀಗಾಗಿ ಈ ಹಿಂದೆ ರೋಹಿತ್ ಶರ್ಮಾ ನಿಭಾಯಿಸುತ್ತಿದ್ದ ಭಾರತ ಏಕದಿನ ಮತ್ತು ಟಿ ಟ್ವೆಂಟಿ ತಂಡಗಳ ಉಪನಾಯಕನ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂಬ ಪ್ರಶ್ನೆ ಇದೀಗ ಎದ್ದಿದ್ದು, ಬಿಸಿಸಿಐನ ಅಧಿಕಾರಿಯೋರ್ವರು ಈ ಪ್ರಶ್ನೆಗೆ ಈ ಕೆಳಕಂಡಂತೆ ಉತ್ತರ ನೀಡಿದ್ದಾರೆ..

ರೋಹಿತ್ ನಂತರ ಕೆಎಲ್ ರಾಹುಲ್ ಉಪನಾಯಕ

ರೋಹಿತ್ ನಂತರ ಕೆಎಲ್ ರಾಹುಲ್ ಉಪನಾಯಕ

ಬಿಸಿಸಿಐ ರೋಹಿತ್ ಶರ್ಮಾ ಅವರಿಗೆ ಟೀಮ್ ಇಂಡಿಯಾ ಟಿ ಟ್ವೆಂಟಿ ಮತ್ತು ಏಕದಿನದ ನಾಯಕನ ಜವಾಬ್ದಾರಿಯನ್ನು ನೀಡಿದೆ. ಹೀಗಾಗಿ ಈ ಹಿಂದೆ ರೋಹಿತ್ ಶರ್ಮಾ ನಿರ್ವಹಿಸುತ್ತಿದ್ದ ಭಾರತ ಏಕದಿನ ಮತ್ತು ಟಿ ಟ್ವೆಂಟಿ ತಂಡದ ಉಪನಾಯಕನ ಜವಾಬ್ದಾರಿಯನ್ನು ಬಿಸಿಸಿಐ ಕೆಎಲ್ ರಾಹುಲ್ ಅವರ ಹೆಗಲಿಗೆ ಹಾಕಲು ತೀರ್ಮಾನ ಮಾಡಿದೆ. ಬಿಸಿಸಿಐ ಅಧಿಕಾರಿಯೋರ್ವರು ನೀಡಿರುವ ಮಾಹಿತಿ ಪ್ರಕಾರ ಕೆಎಲ್ ರಾಹುಲ್ ಭಾರತ ಏಕದಿನ ಮತ್ತು ಟಿ ಟ್ವೆಂಟಿ ತಂಡಗಳೆರಡಕ್ಕೂ ಉಪನಾಯಕನಾಗಲಿದ್ದಾರೆ.

ಈಗಾಗಲೇ ಭಾರತ ಟಿ ಟ್ವೆಂಟಿ ತಂಡದ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ ಕೆಎಲ್ ರಾಹುಲ್

ಈಗಾಗಲೇ ಭಾರತ ಟಿ ಟ್ವೆಂಟಿ ತಂಡದ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ ಕೆಎಲ್ ರಾಹುಲ್

ರೋಹಿತ್ ಶರ್ಮಾ ಇತ್ತೀಚೆಗಷ್ಟೇ ನಡೆದ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮೂಲಕ ಭಾರತ ಟಿ ಟ್ವೆಂಟಿ ತಂಡದ ಪೂರ್ಣಾವಧಿ ನಾಯಕನಾಗಿ ಅಧಿಕಾರ ಸ್ವೀಕರಿಸಿದರು. ಹಾಗೂ ಈ ಸರಣಿಯಲ್ಲಿ ಕೆಎಲ್ ರಾಹುಲ್ ಭಾರತ ಟಿ ಟ್ವೆಂಟಿ ತಂಡದ ಉಪನಾಯಕನಾಗಿ ಕೆಲಸ ನಿರ್ವಹಿಸಿದರು. ಈ ಮೂಲಕ ಕೆಎಲ್ ರಾಹುಲ್ ಭಾರತ ಟಿ ಟ್ವೆಂಟಿ ತಂಡದ ಉಪನಾಯಕನಾಗಿ ಈಗಾಗಲೇ ಆಯ್ಕೆಯಾಗಿದ್ದು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಡೆಯಲಿರುವ ಏಕದಿನ ಸರಣಿಯ ಮೂಲಕ ಭಾರತ ಏಕದಿನ ತಂಡದ ಉಪನಾಯಕನಾಗಿಯೂ ಕೆಲಸ ಆರಂಭಿಸಲಿದ್ದಾರೆ.

ಏಕದಿನ, ಟಿ ಟ್ವೆಂಟಿ ಮತ್ತು ಟೆಸ್ಟ್ ಮೂರೂ ಆವೃತ್ತಿಗಳಲ್ಲಿಯೂ ರೋಹಿತ್ ಶರ್ಮಾಗೆ ಅಧಿಕಾರ

ಏಕದಿನ, ಟಿ ಟ್ವೆಂಟಿ ಮತ್ತು ಟೆಸ್ಟ್ ಮೂರೂ ಆವೃತ್ತಿಗಳಲ್ಲಿಯೂ ರೋಹಿತ್ ಶರ್ಮಾಗೆ ಅಧಿಕಾರ

ಇತ್ತೀಚೆಗಷ್ಟೇ ಭಾರತ ಟಿ ಟ್ವೆಂಟಿ ತಂಡದ ನಾಯಕನಾಗಿ ಆಯ್ಕೆಯಾದ ರೋಹಿತ್ ಶರ್ಮಾ ಇದೀಗ ಭಾರತ ಏಕದಿನ ತಂಡದ ನಾಯಕನಾಗಿ ಕೂಡ ಆಯ್ಕೆಯಾಗಿದ್ದಾರೆ. ಅಷ್ಟು ಮಾತ್ರವಲ್ಲದೇ ಭಾರತ ಟೆಸ್ಟ್ ತಂಡದ ಉಪನಾಯಕನಾಗಿ ಕೂಡ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ಹೌದು, ಮುಂಬರಲಿರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಬಿಸಿಸಿಐ ಭಾರತ ಟೆಸ್ಟ್ ತಂಡವನ್ನು ಪ್ರಕಟಿಸಿದ್ದು ರೋಹಿತ್ ಶರ್ಮಾ ಅವರನ್ನು ಉಪನಾಯಕನನ್ನಾಗಿ ನೇಮಿಸಿದೆ. ಈ ಮೂಲಕ ಈ ಹಿಂದೆ ಭಾರತ ಟೆಸ್ಟ್ ತಂಡದ ಉಪನಾಯಕನಾಗಿದ್ದ ಅಜಿಂಕ್ಯ ರಹಾನೆ ಅಧಿಕಾರ ಕಳೆದುಕೊಂಡಿದ್ದು ರೋಹಿತ್ ಶರ್ಮಾ ನೂತನ ಟೆಸ್ಟ್ ಉಪನಾಯಕನಾಗಿದ್ದಾರೆ.

ವಿರಾಟ್ ಕೊಹ್ಲಿ ಅಂದು ಗಂಗೂಲಿ ಹೇಳಿದ ಮಾತನ್ನು ಕೇಳಿರಲಿಲ್ಲವಂತೆ | Oneindia Kannada

Story first published: Thursday, December 9, 2021, 14:25 [IST]
Other articles published on Dec 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X