ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ನಾಯಕತ್ವಕ್ಕೆ ವಿರಾಟ್ ನಂತರ ಕನ್ನಡಿಗನೇ ಮುಂದೆ: ಆಕಾಶ್ ಚೋಪ್ರ

Kl Rahul May Be Next In Line To Be Indias Captain After Virat Kohli : Aakash Chopra

ಐಪಿಎಲ್ ಆರಂಭಕ್ಕೆ ಇನ್ನಿರುವುದು ಬೆರಳೆಣಿಕೆಯ ದಿನಗಳು ಮಾತ್ರ. ಕ್ರಿಕೆಟ್ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಪ್ರತಿಯೊಬ್ಬರೂ ಎದುರು ನೋಡುತ್ತಿದ್ದಾರೆ. ಭವಿಷ್ಯದ ದೃಷ್ಠಿಯಿಂದ ಕೆಲ ನಿರ್ದಿಷ್ಟ ಆಟಗಾರರು ಈ ಬಾರಿಯ ಐಪಿಎಲ್‌ನಲ್ಲಿ ಹೇಗೆ ಪ್ರದರ್ಶನವನ್ನು ನೀಡುತ್ತಾರೆ ಎಂಬುದು ಅಭಿಮಾನಗಳಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಅಂತಾ ಆಟಗಾರರಲ್ಲಿ ಕನ್ನಡಿಗ ಆಟಗಾರನೂ ಓರ್ವ.

ಐಪಿಎಲ್ ಹಿನ್ನೆಲೆಯಲ್ಲಿ ಫೆಸ್‌ಬುಕ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿರುವ ಮಾಜಿ ಕ್ರಿಕೆಟಿಗ ಕಾಮೆಂಟೇಟರ್ ಆಕಾಶ್ ಚೋಪ್ರಾಗೆ ಈ ಬಗ್ಗೆ ಪ್ರಶ್ನೆಗಳು ಎದುರಾಗಿದೆ. ಆ ಆಟಗಾರ ಬೇರೆ ಯಾರೂ ಅಲ್ಲ ಅದು ಕೆ ಎಲ್ ರಾಹುಲ್. ಕಿಂಗ್ಸ್ XI ಪಂಜಾಬ್ ತಂಡದ ನಾಯಕನಿ ಭಡ್ತಿ ಪಡೆದುಕೊಂಡಿರುವ ಕೆಎಲ್ ರಾಹುಲ್ ಬಗ್ಗೆ ಆಕಾಶ್ ಚೋಪ್ರಾ ಭಾರೀ ನಿರೀಕ್ಷೆಯನ್ನು ವ್ಯಕ್ತಡಿಸಿದ್ದು ಮಾತ್ರವಲ್ಲ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವದ ರೇಸ್‌ನಲ್ಲೂ ಕೆಎಲ್ ಮುಂದಿದ್ದಾರೆ ಎಂದಿದ್ದಾರೆ.

ಬ್ರಾಡ್ ಹಾಗ್ ನೆಚ್ಚಿನ 'ಪ್ರಿ-ಐಪಿಎಲ್ 2020 ‍XI'ನಲ್ಲಿ ಧೋನಿ, ಎಬಿಡಿ ಇಲ್ಲ!ಬ್ರಾಡ್ ಹಾಗ್ ನೆಚ್ಚಿನ 'ಪ್ರಿ-ಐಪಿಎಲ್ 2020 ‍XI'ನಲ್ಲಿ ಧೋನಿ, ಎಬಿಡಿ ಇಲ್ಲ!

ಕೆಎಲ್ ರಾಹುಲ್ ವಿಚಾರವಾಗಿ ಆಕಾಶ್ ಚೋಪ್ರಾ ಏನೆಲ್ಲಾ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ರಾಹುಲ್ ನಾಯಕತ್ವಕ್ಕೆ ಸೂಕ್ತ ಎನ್ನಲು ಆಕಾಶ್ ಚೋಪ್ರ ಕೊಟ್ಟ ಕಾರಣಗಳೇನು ಮುಂದೆ ಓದಿ..

ಅಭಿಮಾನಿ ಪ್ರಶ್ನೆಗೆ ಆಕಾಶ್ ಉತ್ತರ

ಅಭಿಮಾನಿ ಪ್ರಶ್ನೆಗೆ ಆಕಾಶ್ ಉತ್ತರ

ಫೇಸ್‌ಬುಕ್‌ನಲ್ಲಿ ಅಭಿಮಾನಿಯೋರ್ವ ಆಕಾಶ್ ಚೋಪ್ರಾ ಬಳಿ ಕಿಂಗ್ಸ್ XI ತಂಡದ ನಾಯಕನಾಗಿರುವ ಕೆಎಲ್ ರಾಹುಲ್ ಅವರನ್ನು ಹೇಗೆ ನೋಡುವಿರಿ? ಅವರು ಟೀಮ್ ಇಂಡಿಯಾವನ್ನು ಭವಷ್ಯದಲ್ಲಿ ಮುನ್ನಡೆಸಬಲ್ಲರೇ ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಆಕಾಶ್ ಚೋಪ್ರ ಕೆಎಲ್ ರಾಹುಲ್ ಆಟದ ಮೇಲೆ ಬಾರೀ ದೊಡ್ಡ ನಿರೀಕ್ಷೆಯಿಟ್ಟುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಕೆಎಲ್ ಆ ನೀರೀಕ್ಷೆಯನ್ನು ಪೂರೈಸಲಿದ್ದಾರೆ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.

ಈ ಐಪಿಎಲ್ ಕೆಎಲ್‌ಗೆ ಉತ್ತಮ ಅವಕಾಶ

ಈ ಐಪಿಎಲ್ ಕೆಎಲ್‌ಗೆ ಉತ್ತಮ ಅವಕಾಶ

ರಾಹುಲ್ ನಾಯಕತ್ವದ ಬಗ್ಗೆ ಮಾತನಾಡಿದ ಚೋಪ್ರ "ಕೆಎಲ್ ರಾಹುಲ್ ನಾಯಕತ್ವ ಉತ್ತಮವಾಗಿರಲಿದೆ ಎಂಬ ಭರವಸೆ ನನಗಿದೆ ಎಂದಿದ್ದಾರೆ. ಜೊತೆಗೆ ಈ ಬಾರಿಯ ಐಪಿಎಲ್ ಪ್ರತಿಯೊಬ್ಬರಿಗೂ ರಾಹುಲ್ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಯಾವ ರೀತಿಯ ತಂತ್ರಗಳನ್ನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಅರಿತುಕೊಳ್ಳಲು ಇದು ಉತ್ತಮ ಅವಕಾಶ ಎಂದು ಪ್ರತಿಕ್ರಿಯಿಸಿದ್ದಾರೆ.

ಕೊಹ್ಲಿ ನಂತರ ಟೀಮ್ ಇಂಡಿಯಾ ನಾಯಕತ್ವ

ಕೊಹ್ಲಿ ನಂತರ ಟೀಮ್ ಇಂಡಿಯಾ ನಾಯಕತ್ವ

ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯ ನಾಯಕತ್ವದ ಬಳಿಕ ಮುಂದಿನ ನಾಯಕತ್ವ ಕೆಎಲ್ ರಾಹುಲ್ ಪಾಲಾಗುವ ಸಾಧ್ಯತೆಯನ್ನು ಹಂಚಿಕೊಂಡರು. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಒಂದೇ ವಯಸ್ಸಿನವರಾಗಿರುವುದರಿಂದ ಕೊಹ್ಲಿ ನಾಯಕತ್ವ ತ್ಯಜಿಸಿದ ನಂತರ ಯುವ ಆಟಗಾರ ಮುನ್ನಡೆಸುವುದನ್ನು ಬಯಸುವ ಸಾಧ್ಯತೆಯೇ ಇರುತ್ತದೆ. ಹೀಗಾಗಿ ಕೆಎಲ್ ರಾಹುಲ್ ನಾಯಕನಾಗುವ ಸಾಧ್ಯತೆ ಹೆಚ್ಚಿದ ಎಂದು ಆಕಾಶ್ ಚೋಪ್ರ ಆಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉತ್ತಮ ನಾಯಕನಾಗುತ್ತಾರೆ

ಉತ್ತಮ ನಾಯಕನಾಗುತ್ತಾರೆ

ಈ ಐಪಿಎಲ್ ಕೆಎಲ್ ರಾಹುಲ್ ನಾಯಕಾಗಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂದುದನ್ನು ತೋರಿಸಲಿದೆ. ಆದರೆ ನಾನು ಆತ ಆಡುವ ರೀತಿ ಹಾಗೂ ಆತನ ಮನೋಧರ್ಮದಿಂದ ಆತನೋರ್ವ ಉತ್ತಮ ನಾಯಕನಾಗುತ್ತಾನೆ ಎಂದು ಭಾವಿಸುತ್ತೇನೆ ಎಂದು ಕೆಎಲ್ ರಾಹುಲ್ ಬಗ್ಗೆ ಆಕಾಶ್ ಚೋಪ್ರ ಮುಕ್ತಕಂಠದಿಂದ ಹೊಗಳಿದ್ದಾರೆ.

Story first published: Tuesday, September 15, 2020, 15:53 [IST]
Other articles published on Sep 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X