ಈ ಬಾರಿಯ ಐಪಿಎಲ್ ಭಾರೀ ರೋಚಕವಾಗಿ ನಡೆದು ಅಂತ್ಯಗೊಂಡಿದೆ. ಆಟಗಾರರೆಲ್ಲರೂ ಭವಿಷ್ಯದತ್ತ ಚಿತ್ತ ನೆಟ್ಟಿದ್ದಾರೆ. ಆದರೆ ಐಪಿಎಲ್ ವಿಚಾರವಾಗಿ ಚರ್ಚೆಗಳು ಇನ್ನೂ ನಡೆಯುತ್ತಲೇ ಇದೆ. ಕಾಮೆಂಟೇಟರ್ ಹಾಗೂ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕೆಎಲ್ ರಾಹುಲ್ ಈ ಬಾರಿಯ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಮಿಂಚಿದ್ದಾರೆ. ತಂಡ ಲೀಗ್ ಹಂತದಿಂದಲೇ ಹೊರಬಿದ್ದರೂ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಆರೆಂಜ್ ಕ್ಯಾಪ್ ಮುಡಿಗೆರಿಸಿಕೊಂಡಿದ್ದಾರೆ. ಆದರೆ ನಾಯಕನಾಗಿ ಕೆಎಲ್ ರಾಹುಲ್ ಒಂದು ಆಪಾದನೆಯನ್ನು ಸ್ವೀಕರಿಸಲೇಬೇಕು ಎಂದಿದ್ದಾರೆ ಆಕಾಶ್ ಚೋಪ್ರ.
ಟೀಮ್ ಇಂಡಿಯಾದ ನಾಯಕತ್ವ ವಿಭಜನೆ ಬಗ್ಗೆ ಅಭಿಪ್ರಾಯ ಮಂಡಿಸಿದ ಶೋಯೆಬ್ ಅಖ್ತರ್
ಕೆಎಲ್ ರಾಹುಲ್ ನಾಯಕತ್ವದಲ್ಲಿ ಪಂಜಾಬ್ ಆರಂಭದ 7 ಪಂದ್ಯಗಳಲ್ಲಿ 6ರಲ್ಲಿ ಸೋಲು ಕಂಡಿತ್ತು. ಬಳಿಕ ತಿರುಗಿ ಬಿದ್ದ ಪಂಜಾಬ್ ಸತತ ಗೆಲುವು ಕಾಣಲು ಆರಂಭಿಸಿತ್ತು. ಆದರೆ ಅಂತಿಮ ಎರಡು ಪಂದ್ಯಗಳನ್ನು ಸೋತು ಪ್ಲೇಆಫ್ನಿಂದ ಹೊರಬಿದ್ದಿತ್ತು. ಈ ಮಿಶ್ರ ಫಲಿತಾಂಶಕ್ಕೆ ಚೋಪ್ರ ಪ್ರತಿಕ್ರಿಯೆ ನೀಡಿದ್ದಾರೆ.
"ಕೆಎಲ್ ರಾಹುಲ್ ನಾಯಕತ್ವಕ್ಕೆ ನಾನು 50:50 ಅಂಕಗಳನ್ನಷ್ಟೇ ನೀಡುತ್ತೇನೆ. ಯಾಕೆಂದರೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಅತ್ಯುತ್ತಮ ಆಡುವ ಬಳಗವನ್ನು ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೆಲ್ಲವೂ ತಂಡದ ಮ್ಯಾನೇಜ್ಮೆಂಟ್ನ ಭಾಗವಾಗಿರುತ್ತದೆ. ಆದರೆ ನಾಯಕನಾಗಿ ತಮ್ಮ ಪಾತ್ರವೂ ಅಲ್ಲಿರುತ್ತದೆ. ಅದೇ ಕಾರಣಕ್ಕೆ ತಂಡ ಮೇಲೇಳಲು ಸಾಕಷ್ಟು ತಡವಾಯಿತು" ಎಂದು ಚೋಪ್ರ ಹೇಳಿದ್ದಾರೆ.
ಮಧ್ಯಮ ವೇಗದ ಬೌಲಿಂಗ್ಗೆ ತಿಣುಕಾಡುತ್ತಿದ್ದ ಲ್ಯಾಂಗರ್ಗೆ ನೆರವಾಗಿದ್ದರು ದಿಗ್ಗಜ ಕ್ರಿಕೆಟಿಗ
"ಕೆಎಲ್ ರಾಹುಲ್ ಬೌಲರ್ಗಲನ್ನು ಚೆನ್ನಾಗಿ ಬಳಸಿಕೊಂಡರು. ಆರಂಭದಲ್ಲಿ ನಿಗದಿತವಾಗಿ ಬಳಸಿಕೊಂಡಿರಲಿಲ್ಲ. ಆದರೆ ಬಳಿಕ ರವಿ ಬಿಶ್ನೋಯ್ , ಮುರುಗನ್, ಶಮಿ ಅವರನ್ನು ಅದ್ಭುತವಾಗಿ ಉಪಯೋಗಿಸಿಕೊಂಡರು. ಟೂರ್ನಮೆಂಟ್ ಮುಂದುವರಿಯುತ್ತಿದ್ದಂತೆಯೇ ರಾಹುಲ್ ಅವರ ನಾಯಕತ್ವ ಪಕ್ವತೆಯನ್ನು ಪಡೆದುಕೊಂಡಿತ್ತು" ಎಂದು ಆಕಾಶ್ ಚೋಪ್ರ ವಿವರಿಸಿದ್ದಾರೆ.
ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ