ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೀಪಿಂಗ್ ಮಾಡಲು ಕಷ್ಟದ ಬೌಲರ್ ಯಾರೆಂದು ಹೇಳಿದ ಕೆಎಲ್ ರಾಹುಲ್

KL Rahul Names The Toughest Bowler To Keep Wickets

ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ಪ್ರಮುಖ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ಧಾರಿಯನ್ನೂ ಕೂಡ ಈಗ ಹೊತ್ತುಕೊಂಡಿದ್ದಾರೆ. ಕಳೆದ ನ್ಯೂಜಿಲೆಂಡ್ ವಿರುದ್ದದ ಪ್ರವಾಸದಲ್ಲಿ ಸಂಪೂರ್ಣವಾಗಿ ಟಿ20 ಹಾಗೂ ಏಕದಿನ ಸರಣಿಯಲ್ಲಿ ರಾಹುಲ್ ಕೀಪಿಂಗ್ ಜವಾಬ್ಧಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.

ಅಭಿಮಾನಿಗಳೊಂದಿಗೆ ಟ್ವಿಟ್ಟರ್‌ನಲ್ಲಿ ಪ್ರಶ್ನೋತ್ತರ ನಡೆಸಿದ್ರು ಕೆಎಲ್ ರಾಹುಲ್. ಅಭಿಮಾನಿಗಳು ಕೇಳಿದ ಬಹುತೇಕ ಪ್ರಶ್ನೆಗಳಿಗೆ ಕೆಎಲ್ ರಾಹುಲ್ ಉತ್ತರವನ್ನು ನೀಡಿದ್ದರು. ಈ ವೇಳೆ ರಾಹುಲ್‌ಗೆ ವಿಕೆಟ್ ಕೀಪಿಂಗ್ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳು ಅಭಿಮಾನಿಗಳ ಕಡೆಯಿಂದ ಕೇಳಿಬಂತು.

ರೋಹಿತ್, ವಿರಾಟ್, ಎಬಿ ಡಿ ಅಲ್ಲ: ಆರ್ಚರ್‌ಗೆ ಕಠಿಣ ಬ್ಯಾಟ್ಸ್‌ಮನ್ ಕನ್ನಡಿಗರೋಹಿತ್, ವಿರಾಟ್, ಎಬಿ ಡಿ ಅಲ್ಲ: ಆರ್ಚರ್‌ಗೆ ಕಠಿಣ ಬ್ಯಾಟ್ಸ್‌ಮನ್ ಕನ್ನಡಿಗ

ವಿಕೆಟ್ ಕೀಪಿಂಗ್ ಅನ್ನು ನೀವು ಎಂಜಾಯ್ ಮಾಡುತ್ತಿದ್ದೀರಾ? ವಿಕೆಟ್ ಕೀಪಿಂಗ್ ಮಾಡಲು ಕಠಿಣವಾದ ಬೌಲರ್ ಯಾರು ಎಂದು ಟ್ವಿಟ್ಟರ್‌ನಲ್ಲಿ ಕ್ರಿಕೆಟ್ ಪ್ರೇಮಿಯೊಬ್ಬರು ರಾಹುಲ್ ಬಳಿ ಕೇಳಿದ್ದರು. ಇದಕ್ಕೆ ಕೆಎಲ್ ರಾಹುಲ್ ಖಂಡಿತವಾಗಿಯೂ ವಿಕೆಟ್ ಕೀಪಿಂಗನ್ನು ನಾನು ಅನುಭವಿಸುತ್ತಿದ್ದೇನೆ ಎಂದು ಉತ್ತರವನ್ನು ನೀಡಿದ್ದಾರೆ.

ಏಕದಿನದಲ್ಲಿ ನಾಯಕರಾಗಿ ಅತ್ಯಧಿಕ ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳುಏಕದಿನದಲ್ಲಿ ನಾಯಕರಾಗಿ ಅತ್ಯಧಿಕ ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು

ಯಾವ ಬೌಲರ್‌ಗೆ ವಿಕೆಟ್ ಕೀಪಿಂಗ್ ಮಾಡುವುದು ಎಂಬ ಪ್ರಶ್ನೆಗೆ ರಾಹುಲ್ ಟೀಮ್ ಇಂಡಿಯಾದ ವೇಗದ ಬೌಲರ್ ಹೆಸರನಗನು ಹೇಳಿದ್ದಾರೆ. ಅದು ಬೇರೆ ಯಾರು ಅಲ್ಲ ಟೀಮ್ ಇಂಡಿಯಾದ ಯುವ ವೇಗಿ ಜಸ್ಪ್ರೀತ್ ಬೂಮ್ರಾ. ಆತನ ಬೌಲಿಂಗ್‌ಗೆ ವಿಕೆಟ್ ಕೀಪಿಂಗ್ ಮಾಡುವುದು ಕಷ್ಟದ ಕೆಲಸ ಎಂದಿದ್ದಾರೆ ಕೆಎಲ್ ರಾಹುಲ್.

ಆಸ್ಟ್ರೇಲಿಯಾ ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದ ವೇಳೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ಆಗಿದ್ದ ರಿಷಭ್ ಪಂತ್ ಗಾಯಗೊಂಡು ಹೊರವಿದ್ದಿದ್ದರು. ಈ ಸಂದರ್ಭದಲ್ಲಿ ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್ ಆವರಿಗೆ ಹೆಚ್ಚುವರಿ ಜವಾಬ್ಧಾರಿಯನ್ನು ನೀಡಲಾಗಿತ್ತು. ಈ ಜವಾಬ್ಧಾರಿಯನ್ನು ರಾಹುಲ್ ಯಶಸ್ವಿಯಾಗಿ ನಿರ್ವಹಿಸಿದ್ದರು. ಮುಂದೆ ನ್ಯೂಜಿಲೆಂಡ್ ಸರಣಿಯಲ್ಲೂ ಪೂರ್ಣಕಾಲಿಕ ವಿಕೆಟ್ ಕೀಪರ್ ಆಗಿ ಮುಂದುವರಿದ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಕೆಎಲ್ ರಾಹುಲ್ ಪೂರ್ಣಕಾಲಿಕ ವಿಕೆಟ್ ಕೀಪರ್ ಆಗಿ ಮುಂದುವರಿಯುವ ಸಾಧ್ಯತೆಗಳು ಕಂಡುಬರುತ್ತಿದೆ.

Story first published: Tuesday, May 12, 2020, 17:49 [IST]
Other articles published on May 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X