ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ, ಬಾಬರ್ ಹಿಂದಿಕ್ಕಿ ವಿಶ್ವದಾಖಲೆ ಬರೆಯಲಿದ್ದಾರೆ ರಾಹುಲ್!

KL Rahul on the verge of surpassing Babar Azam and Virat Kohli in illustrious T20I list

ಲಾಡರ್ಹಿಲ್, ಆಗಸ್ಟ್ 3: ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟ್ಸ್ಮನ್, ಕನ್ನಡಿಗ ಕೆಎಲ್ ರಾಹುಲ್‌ಗೆ ವೆಸ್ಟ್ ಇಂಡೀಸ್ ಪ್ರವಾಸ ಸರಣಿಯ ಟಿ20ಯಲ್ಲಿ ವಿಶ್ವ ದಾಖಲೆ ನಿರ್ಮಿಸಲು ಅವಕಾಶವಿದೆ. ಟಿ20 ಮೊದಲ ಪಂದ್ಯದಲ್ಲಿ ರಾಹುಲ್ ಏನಾದರೂ ಶತಕಕ್ಕೂ ಮಿಕ್ಕಿ ರನ್ ಬಾರಿಸಿದರೆ ಟಿ20ಯಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಲಿದೆ.

ಟೆಸ್ಟ್ ವೇಗದ 24 ಶತಕ: ಕೊಹ್ಲಿ ಹಿಂದಿಕ್ಕಿದ ಆಸೀಸ್‌ ಕ್ರಿಕೆಟರ್ ಸ್ಟೀವ್ ಸ್ಮಿತ್!ಟೆಸ್ಟ್ ವೇಗದ 24 ಶತಕ: ಕೊಹ್ಲಿ ಹಿಂದಿಕ್ಕಿದ ಆಸೀಸ್‌ ಕ್ರಿಕೆಟರ್ ಸ್ಟೀವ್ ಸ್ಮಿತ್!

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನ ಸ್ಫೋಟಕ ಬ್ಯಾಟ್ಸ್ಮನ್ ಬಾಬರ್ ಅಝಾಮ್ ಅವರ ಹೆಸರಿನಲ್ಲಿರುವ ಟಿ20 ದಾಖಲೆಯನ್ನು ಸರಿಗಟ್ಟಲು ರಾಹುಲ್‌ಗೆ ಅವಕಾಶವಿದೆ. ಶನಿವಾರದ (ಆಗಸ್ಟ್ 3) ಪಂದ್ಯದಲ್ಲಿ ಟಿ20 ವೇಗದ 1000 ರನ್ ದಾಖಲೆ ನಿರ್ಮಾಣವಾಗುವ ಸಾಧ್ಯತೆಯಿದೆ.

ಭಾರತ vs ವೆಸ್ಟ್ ಇಂಡೀಸ್, ಮೊದಲ ಟಿ20, Live ಸ್ಕೋರ್‌ಕಾರ್ಡ್

1
46244

ಫ್ಲೋರಿಡಾದ ಲಾಡರ್‌ಹಿಲ್‌ನ ಸೆಂಟ್ರಲ್ ಬ್ರೋವರ್ಡ್ ರೀಜಿನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್‌ನಲ್ಲಿ ನಡೆಯುವ ಮೊದಲ ಟಿ20ಯಲ್ಲಿ ರಾಹುಲ್‌ ಮಿನುಗಲು ಅವಕಾಶವಿದೆ.

ವೇಗದ 1000 ರನ್ ದಾಖಲೆ

ವೇಗದ 1000 ರನ್ ದಾಖಲೆ

ಅಂತಾರಾಷ್ಟ್ರೀಯ ಟಿ20ಯಲ್ಲಿ ಕೆಎಲ್ ರಾಹುಲ್ ಕೇವಲ 24 ಇನ್ನಿಂಗ್ಸ್‌ಗಳಲ್ಲಿ 879 ರನ್ ಗಳಿಸಿದ್ದಾರೆ. ಇನ್ನು 121 ರನ್ ಪೇರಿಸಿದರೆ ರಾಹುಲ್, ಟಿ20ಐನಲ್ಲಿ 1000 ರನ್ ಪೂರೈಸಲಿದ್ದಾರೆ. ಶನಿವಾರದ ಪಂದ್ಯದಲ್ಲೇ ರಾಹುಲ್ 121 ರನ್ ಗಳಿಸಿದರೆ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಝಾಮ್ ವಿಶ್ವದಾಖಲೆ ಮುರಿದು ಹೋಗಲಿದೆ.

ಕೊಹ್ಲಿ-ಬಾಬರ್ ಸಾಧನೆ ಬದಿಗೆ

ಕೊಹ್ಲಿ-ಬಾಬರ್ ಸಾಧನೆ ಬದಿಗೆ

ಟಿ20ಐನಲ್ಲಿ ಅತೀ ವೇಗದ ವಿಶ್ವ ದಾಖಲೆ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ಪಾಕ್ ಕ್ರಿಕೆಟರ್ ಬಾಬರ್, ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಬಾಬರ್ 26 ಇನ್ನಿಂಗ್ಸ್‌ಗಳಲ್ಲಿ (2 ವರ್ಷ, 58 ದಿನಗಳು) ಮತ್ತು ಕೊಹ್ಲಿ 27 ಇನ್ನಿಂಗ್ಸ್‌ಗಳಲ್ಲಿ (5 ವರ್ಷ, 112 ದಿನಗಳು) ಟಿ20ಐ 1000 ರನ್ ಮಾಡಿದ್ದರು.

ಫಿಂಚ್‌ಗೆ 3ನೇ ಸ್ಥಾನ

ಫಿಂಚ್‌ಗೆ 3ನೇ ಸ್ಥಾನ

ಅಂತಾರಾಷ್ಟ್ರೀಯ ಟಿ20 ವೇಗದ 1000 ರನ್‌ ಸಾಲಿನಲ್ಲಿ ತೃತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾದ ಆ್ಯರನ್ ಫಿಂಚ್ (29 ಇನ್ನಿಂಗ್ಸ್), ನಾಲ್ಕನೇ ಸ್ಥಾನದಲ್ಲಿ ಇಂಗ್ಲೆಂಡ್‌ನ ಕೆವಿನ್ ಪೀಟರ್‌ಸನ್ (32 ಇನ್ನಿಂಗ್ಸ್), 5ನೇ ಸ್ಥಾನದಲ್ಲಿ ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ (32 ಇನ್ನಿಂಗ್ಸ್), 6 ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಫಾ ಡು ಪ್ಲೆಸಿಸ್ (32 ಇನ್ನಿಂಗ್ಸ್) ಇದ್ದಾರೆ.

ಅಗ್ರಸ್ಥಾನಕ್ಕೇರಲು ಅವಕಾಶ

ಅಗ್ರಸ್ಥಾನಕ್ಕೇರಲು ಅವಕಾಶ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಿಂಗ್ಸ್ XI ಪಂಜಾಬ್‌ ಪರ ಭರ್ಜರಿ ಬ್ಯಾಟ್ ಬೀಸುವ ಕೆಎಲ್ ರಾಹುಲ್‌ಗೆ ವಿಂಡೀಸ್ ವಿರುದ್ಧದ ಈ ಮೊದಲ ಟಿ20 ಪಂದ್ಯ 25ನೇ ಇನ್ನಿಂಗ್ಸ್ ಆಗಿರಲಿದೆ. ಹೀಗಾಗಿ ಈ ಪಂದ್ಯದಲ್ಲೇ ರಾಹುಲ್ 121 ರನ್ ಗಳಿಸಿದರೆ ಟಿ20ಐ ವೇಗದ 1000 ರನ್‌ ದಾಖಲೆಗಾಗಿ ರಾಹುಲ್ ಮೊದಲ ಸ್ಥಾನಕ್ಕೇರಲಿದ್ದಾರೆ. ವಿಂಡೀಸ್ ಟಿ20 ಸರಣಿ 3 ಪಂದ್ಯಗಳನ್ನು ಒಳಗೊಂಡಿದೆ.

Story first published: Saturday, August 3, 2019, 14:57 [IST]
Other articles published on Aug 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X