ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೇತರಿಸಿಕೊಳ್ಳುತ್ತಿದ್ದಾರೆ ಕೆಎಲ್ ರಾಹುಲ್, ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧತೆ

KL Rahul recovering well, can fly with India team to England

ಬೆಂಗಳೂರು: ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ಕೆಎಲ್ ರಾಹುಲ್ ಅಪೆಂಡಿಸಿಟೀಸ್‌ನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇಂಗ್ಲೆಂಡ್‌ಗೆ ಪ್ರವಾಸ ಹೋಗಲಿರುವ ಟೀಮ್ ಇಂಡಿಯಾ ಜೊತೆ ರಾಹುಲ್ ಕೂಡ ಇಂಗ್ಲೆಂಡ್‌ಗೆ ಪ್ರಯಾಣಿಸುವ ನಿರೀಕ್ಷೆಯಿದೆ.

 ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ ಬಿಸಿಸಿಐ ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ ಬಿಸಿಸಿಐ

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ವೇಳೆ ಕೆಎಲ್ ರಾಹುಲ್‌ಗೆ ಕರುಳುವಾಳ (ಅಪೆಂಡಿಸಿಟೀಸ್) ಇದ್ದಿದ್ದು ಕಂಡುಬಂದಿತ್ತು. ಹೀಗಾಗಿ 2021ರ ಆವೃತ್ತಿಯ ಐಪಿಎಲ್‌ನಿಂದ ರಾಹುಲ್ ಹಿಂದೆ ಸರಿದಿದ್ದರು. ಆದರೆ ರಾಹುಲ್ ಅನಾರೋಗ್ಯಕ್ಕೀಡಾಗಿ ಸ್ವಲ್ಪ ದಿನಗಳಲ್ಲೇ 14ನೇ ಆವೃತ್ತಿಯ ಐಪಿಎಲ್ ಕೋವಿಡ್-19 ಕಾರಣದಿಂದಾಗಿ ಅಮಾನತಾಗಿತ್ತು.

'ಕೆಎಲ್ ರಾಹುಲ್ ಚೆನ್ನಾಗಿದ್ದಾರೆ. ನನಗೆ ಗೊತ್ತಿರುವ ಪ್ರಕಾರ ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಭಾರತ ತಂಡದೊಂದಿಗೆ ಇಂಗ್ಲೆಂಡ್‌ಗೆ ಪ್ರಯಾಣಿಸುವ ಎಲ್ಲಾ ನಿರೀಕ್ಷೆಗಳಿವೆ,' ಎಂದು ರಾಹುಲ್‌ಗೆ ಹತ್ತಿರದ ಮೂಲವೊಂದು ಐಎಎನ್‌ಎಸ್‌ಗೆ ಮಾಹಿತಿ ನೀಡಿದೆ.

ವರ್ಷವಾದ್ರೂ ಆಟಗಾರ್ತಿಯರಿಗೆ ವಿಶ್ವಕಪ್‌ನ ಹಣ ಕೊಟ್ಟಿಲ್ಲ ಬಿಸಿಸಿಐ!ವರ್ಷವಾದ್ರೂ ಆಟಗಾರ್ತಿಯರಿಗೆ ವಿಶ್ವಕಪ್‌ನ ಹಣ ಕೊಟ್ಟಿಲ್ಲ ಬಿಸಿಸಿಐ!

ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ ನಾಯಕರಾಗಿದ್ದ ರಾಹುಲ್, ಇಂಗ್ಲೆಂಡ್‌ಗೆ ಪ್ರವಾಸ ಹೋಗಲಿದ್ದ ಭಾರತೀಯ ತಂಡದಲ್ಲಿ ಹೆಸರಿಸಲ್ಪಟ್ಟಿದ್ದರು. ಆದರೆ ಫಿಟ್ನೆಸ್‌ ಅವಲಂಬಿಸಿ ರಾಹುಲ್ ಲಭ್ಯತೆ ನಿರ್ಧರಿಸಲಾಗುತ್ತದೆ ಎಂದು ಪಟ್ಟಿಯಲ್ಲಿ ತಿಳಿಸಲಾಗಿತ್ತು. ಭಾರತ ತಂಡ ಜೂನ್ 2ಕ್ಕೆ ಇಂಗ್ಲೆಂಡ್‌ಗೆ ಹೋಲಿದ್ದು, ಅಲ್ಲಿ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಮತ್ತು 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

Story first published: Tuesday, July 27, 2021, 15:45 [IST]
Other articles published on Jul 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X