ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇರುವುದನ್ನು ಹೇಳಲು ನಾಚಿಕೆ ಇಲ್ಲ; ದ.ಆಫ್ರಿಕಾ ವಿರುದ್ಧದ ಸೋಲಿಗೆ ಕಾರಣ ಯಾರೆಂಬುದನ್ನು ಬಿಚ್ಚಿಟ್ಟ ರಾಹುಲ್!

KL Rahul revealed the reason for Team Indias loss against South Africa in the third ODI match
ಸರಣಿ ಸೋತ ಬಳಿಕ Rahul ಹೇಳಿದ್ದೇನು | Oneindia Kannada

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಕಳೆದೊಂದು ತಿಂಗಳಿಂದ ನಡೆಯುತ್ತಿದ್ದ ಕ್ರಿಕೆಟ್ ಹಣಾಹಣಿಗೆ ಕಳೆದ ಜನವರಿ 23ರ ಭಾನುವಾರದಂದು ನಡೆದ ಅಂತಿಮ ಏಕದಿನ ಪಂದ್ಯದ ಮೂಲಕ ತೆರೆಬಿದ್ದಿದೆ.

ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಇವರೇ, ಇದಕ್ಕೆಲ್ಲಾ ವಿರಾಟ್ ಭಯ ಪಡಬಾರದು: ಮಾಜಿ ಕ್ರಿಕೆಟಿಗ!ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಇವರೇ, ಇದಕ್ಕೆಲ್ಲಾ ವಿರಾಟ್ ಭಯ ಪಡಬಾರದು: ಮಾಜಿ ಕ್ರಿಕೆಟಿಗ!

ಹೌದು, ಕಳೆದ ಡಿಸೆಂಬರ್ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದ್ದ ಟೀಮ್ ಇಂಡಿಯಾ ಹರಿಣಗಳ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲಿಗೆ ಭಾಗವಹಿಸಿತ್ತು. ಈ ಸರಣಿಯಲ್ಲಿ 1-2 ಅಂತರದಿಂದ ಟೀಂ ಇಂಡಿಯಾ ಹರಿಣಗಳ ವಿರುದ್ಧ ಸೋಲನುಭವಿಸಿತು. ಈ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕೆಂಬ ಭಾರತದ ಕನಸು ಈ ಬಾರಿಯೂ ಕೂಡ ಕನಸಾಗಿಯೇ ಉಳಿದುಬಿಟ್ಟಿತು.

ಲೆಜೆಂಡ್ಸ್ ಲೀಗ್: ಬೃಹತ್ 209 ರನ್ ಗಳಿಸಿ ಆ ಓರ್ವ ಬೌಲರ್‌ನಿಂದ ಸೋತ ಇಂಡಿಯಾ ಮಹಾರಾಜಸ್!ಲೆಜೆಂಡ್ಸ್ ಲೀಗ್: ಬೃಹತ್ 209 ರನ್ ಗಳಿಸಿ ಆ ಓರ್ವ ಬೌಲರ್‌ನಿಂದ ಸೋತ ಇಂಡಿಯಾ ಮಹಾರಾಜಸ್!

ಇನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲನ್ನು ಕಂಡ ಟೀಮ್ ಇಂಡಿಯಾ ನಂತರ ಆರಂಭವಾದ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳುವುದರ ಮೂಲಕ ಸೇಡು ತೀರಿಸಿಕೊಳ್ಳುವ ಯೋಜನೆಯಲ್ಲಿತ್ತು. ಆದರೆ ಟೀಮ್ ಇಂಡಿಯಾದ ಈ ಯೋಜನೆಯನ್ನು ಜಾರಿಯಾಗದಂತೆ ತಡೆದ ದಕ್ಷಿಣ ಆಫ್ರಿಕಾ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಕೂಡಾ ಗೆಲ್ಲುವುದರ ಮೂಲಕ ಟೀಮ್ ಇಂಡಿಯಾಕ್ಕೆ ವೈಟ್ ವಾಷ್ ಬಳಿದಿದೆ. ಭಾನುವಾರದಂದು ( ಜನವರಿ 23 ) ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ತೃತೀಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ಸನಿಹಕ್ಕೆ ಬಂದು ಪಂದ್ಯದ ಅಂತಿಮ ಹಂತದಲ್ಲಿ ಎಡವಿ 4 ರನ್‌ಗಳ ಸೋಲನ್ನು ಅನುಭವಿಸಿತು. ಅಂತಿಮವಾಗಿ ದೀಪಕ್ ಚಹರ್ ಹೋರಾಟ ಕೂಡ ವ್ಯರ್ಥವಾಯಿತು. ಹೀಗೆ ಗೆಲ್ಲಬಹುದಾಗಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಸೋತ ಟೀಂ ಇಂಡಿಯಾ ವೈಟ್ ವಾಷ್ ಮುಖಭಂಗಕ್ಕೆ ಒಳಗಾಗಿದ್ದು, ಸಾಕಷ್ಟು ದೊಡ್ಡ ಮಟ್ಟದಲ್ಲಿ ಟೀಕೆಗಳನ್ನು ಎದುರಿಸುತ್ತಿದೆ. ಇನ್ನು ಸರಣಿ ಮುಗಿದ ನಂತರ ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡಿದ್ದ ಕೆಎಲ್ ರಾಹುಲ್ ತೃತೀಯ ಪಂದ್ಯದ ಸೋಲಿನ ಕುರಿತಾಗಿ ಮಾತನಾಡಿದ್ದು ಕಾರಣವೇನೆಂಬುದನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ನಮ್ಮ ತಂಡ ಈ ವಿಷಯದಲ್ಲಿ ಎಡವಿತು ಎಂದ ರಾಹುಲ್

ನಮ್ಮ ತಂಡ ಈ ವಿಷಯದಲ್ಲಿ ಎಡವಿತು ಎಂದ ರಾಹುಲ್

ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಏಕದಿನ ಪಂದ್ಯದಲ್ಲಿ ನಮ್ಮ ತಂಡ ಒಂದಿಷ್ಟು ಅಂಶಗಳಲ್ಲಿ ಎಡವಿತು ಎನ್ನುವುದನ್ನು ಬಿಚ್ಚಿಡುವುದರಲ್ಲಿ ಯಾವುದೇ ನಾಚಿಕೆ ಇಲ್ಲ ಎಂದು ಹೇಳುವ ಮೂಲಕ ಕೆ ಎಲ್ ರಾಹುಲ್ ಪಂದ್ಯ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನ್ನು ಆರಂಭಿಸಿದರು. ಇನ್ನೂ ಮುಂದುವರಿದು ಮಾತನಾಡಿದ ಕೆಎಲ್ ರಾಹುಲ್ ನಮ್ಮ ತಂಡದ ಬ್ಯಾಟ್ಸ್‌ಮನ್‌ಗಳ ಶಾಟ್ ಸೆಲೆಕ್ಷನ್ ಕಳಪೆಯಾಗಿತ್ತು ಮತ್ತು ಬೌಲಿಂಗ್ ವಿಭಾಗ ಕೂಡ ಸತತವಾಗಿ ಉತ್ತಮ ರೀತಿಯಲ್ಲಿ ಬೌಲಿಂಗ್ ಮಾಡುವಲ್ಲಿ ವಿಫಲವಾಯಿತು ಎಂದು ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ತೃತೀಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲಲು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳು ಕಾರಣವಾದವು ಎಂಬುದನ್ನು ರಾಹುಲ್ ತಿಳಿಸಿದ್ದಾರೆ.

ಉತ್ತಮ ಪ್ರದರ್ಶನ ನೀಡಿದರೂ ಎದುರಾಳಿಗಳ ಮೇಲೆ ಒತ್ತಡವನ್ನು ಹೇರಲು ಆಗಲಿಲ್ಲ

ಉತ್ತಮ ಪ್ರದರ್ಶನ ನೀಡಿದರೂ ಎದುರಾಳಿಗಳ ಮೇಲೆ ಒತ್ತಡವನ್ನು ಹೇರಲು ಆಗಲಿಲ್ಲ

ಇನ್ನು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಕೂಡ ನಮ್ಮ ತಂಡದ ಆಟಗಾರರು ಎದುರಾಳಿಗಳ ಮೇಲೆ ಸತತವಾಗಿ ಒತ್ತಡವನ್ನು ಹೇರಲು ಆಗಲಿಲ್ಲ ಎಂದು ಕೆ ಎಲ್ ರಾಹುಲ್ ಹೇಳಿದ್ದಾರೆ. ಆದರೆ, ಇದರಲ್ಲಿ ಆಟಗಾರರ ತಪ್ಪಿದೆ ಎಂದು ಹೇಳಲು ನಾನು ಇಚ್ಛಿಸುವುದಿಲ್ಲ ಏಕೆಂದರೆ ಇಂತಹ ತಪ್ಪುಗಳು ಆಗಾಗ ಆಗುತ್ತವೆ ಎಂದು ಕೆಎಲ್ ರಾಹುಲ್ ತಿಳಿಸಿದ್ದಾರೆ.

ದೀಪಕ್ ಚಹರ್ ಗೆಲ್ಲುವ ಅವಕಾಶವನ್ನು ಮಾಡಿಕೊಟ್ಟಿದ್ದರು

ದೀಪಕ್ ಚಹರ್ ಗೆಲ್ಲುವ ಅವಕಾಶವನ್ನು ಮಾಡಿಕೊಟ್ಟಿದ್ದರು

ಇನ್ನು ದೀಪಕ್ ಚಹರ್ 34 ಎಸೆತಗಳಿಗೆ 54 ರನ್ ಬಾರಿಸಿ ಗೆಲುವಿನ ಭರವಸೆಯನ್ನು ಹುಟ್ಟುಹಾಕಿದ್ದರು. ಈ ಕುರಿತು ವಿಶೇಷವಾಗಿ ಮಾತನಾಡಿರುವ ಕೆ ಎಲ್ ರಾಹುಲ್ ದೀಪಕ್ ಚಹರ್ ತಂಡಕ್ಕೆ ಗೆಲ್ಲುವ ನಿಜವಾದ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರು, ಆದರೆ ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ನಮ್ಮ ತಂಡ ಎಡವಿತು ಮತ್ತು ಇದರಿಂದ ಪಾಠವನ್ನು ಕೂಡ ಕಲಿತೆವು ಎಂದು ರಾಹುಲ್ ಹೇಳಿದ್ದಾರೆ. ಈ ಮೂಲಕ ಪಂದ್ಯದ ಕೊನೆಯಲ್ಲಿ ದೀಪಕ್ ಚಹರ್ ಗೆಲ್ಲುವ ಅವಕಾಶವನ್ನು ಕಲ್ಪಿಸಿಕೊಟ್ಟರೂ ಕೂಡ ಆಟಗಾರರು ಉತ್ತಮ ಪ್ರದರ್ಶನ ನೀಡದೇ ಇರುವುದು ಸೋಲಿಗೆ ಕಾರಣವಾಯಿತು ಎಂಬುದನ್ನು ಕೆಎಲ್ ರಾಹುಲ್ ಪರೋಕ್ಷವಾಗಿ ತಿಳಿಸಿದ್ದಾರೆ.

Story first published: Monday, January 24, 2022, 10:16 [IST]
Other articles published on Jan 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X