ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಕಾಫೀ ವಿತ್ ಕರಣ್' ವಿವಾದದ ಬಗ್ಗೆ ಮತ್ತೆ ತುಟಿ ಬಿಚ್ಚಿದ ಕೆಎಲ್ ರಾಹುಲ್

KL Rahul reveals about Koffee with Karan controversy

ನವದೆಹಲಿ, ಆಗಸ್ಟ್ 19: ಇಂಡಿಯನ್ ಪ್ರೀಮಿಯರ್ ಲೀಗ್‌ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಕೆಲ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕನ್ನಡಿಗರ ಮನ ಗೆದ್ದಿದ್ದ ಕೆಎಲ್ ರಾಹುಲ್ 'ಕಾಫೀ ವಿತ್ ಕರಣ್' ಟಿವಿ ಶೋ ಮೂಲಕ ವಿವಾದಕ್ಕೆ ಗುರಿಯಾಗಿದ್ದರು. ಆ ವಿವಾದಕ್ಕೆ ಸಂಬಂಧಿಸಿ ರಾಹುಲ್ ತುಟಿ ಬಿಚ್ಚಿದ್ದಾರೆ.

ಭಾರತ vs ವಿಂಡೀಸ್: ಭಾರತ ತಂಡಕ್ಕೆ ಭದ್ರತಾ ಬೆದರಿಕೆ, ಪಿಸಿಬಿ ಎಚ್ಚರಿಕೆ!ಭಾರತ vs ವಿಂಡೀಸ್: ಭಾರತ ತಂಡಕ್ಕೆ ಭದ್ರತಾ ಬೆದರಿಕೆ, ಪಿಸಿಬಿ ಎಚ್ಚರಿಕೆ!

'ನಾನು ಸುಳ್ಳು ಹೇಳುತ್ತಿಲ್ಲ. ಆ ವಿವಾದದಿಂದ ಕೊಂಚ ಕಹಿ ಅನುಭವ ಆಗಿತ್ತು. ಅದು ನನ್ನ ಮೇಲೆ ಪರಿಣಾಮ ಬೀರಿತ್ತು, ನನ್ನನ್ನು ದೂರುವಂತೆ ಮಾಡಿತ್ತು. ಆ ವೇಳೆ ನಾನು ಸಿಟ್ಟುಗೊಂಡಿದ್ದೆ ಕೂಡ. ಆದರೆ ನಾನು ಈಗ ಅದರಿಂದ ಹೊರ ಬಂದಿದ್ದೇನೆ. ಎಲ್ಲವನ್ನೂ ಸ್ವೀಕರಿಸುವ ವ್ಯಕ್ತಿಯಾಗಿದ್ದೇನೆ,' ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ರಾಹುಲ್ ಹೇಳಿದ್ದಾರೆ.

ಟಿ20 ಕ್ರಿಕೆಟ್‌: ಮಹಿಳಾ ಸೂಪರ್‌ ಲೀಗ್‌ನಲ್ಲಿ ಡೇನಿಯೆಲ್‌ ವ್ಯಾಟ್‌ ಐತಿಹಾಸಿಕ ಶತಕಟಿ20 ಕ್ರಿಕೆಟ್‌: ಮಹಿಳಾ ಸೂಪರ್‌ ಲೀಗ್‌ನಲ್ಲಿ ಡೇನಿಯೆಲ್‌ ವ್ಯಾಟ್‌ ಐತಿಹಾಸಿಕ ಶತಕ

ಬಾಲಿವುಡ್ ನಟ, ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಜನಪ್ರಿಯ ಟಿವಿ ಶೋ 'ಕಾಫೀ ವಿತ್ ಕರಣ್‌'ನಲ್ಲಿ ರಾಹುಲ್ ಮತ್ತು ಸಹ ಆಟಗಾರ, ಟೀಮ್ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪಾಲ್ಗೊಂಡಿದ್ದರು. ಆ ಶೋನಲ್ಲಿ ಮಹಿಳೆಯರ ಕುರಿತು ಮತ್ತು ಲೈಂಗಿಕತೆ ಬಗ್ಗೆ ಕೀಳು ಅಭಿರುಚಿಯ, ಸ್ವೇಚ್ಛೆಯ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು.

ಮಾತು ಮುಂದುವರೆಸಿದ ರಾಹುಲ್, 'ನಾನು ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸಬೇಕಿದೆ. ಜಿಮ್, ಮೈದಾನ, ಅಭ್ಯಾಸದಲ್ಲಿ ಜಾಸ್ತಿ ಸಮಯ ಕಳೆಯಬೇಕಿದೆ. ಇದು ನಾನು ವೃತ್ತಿಪರನಾಗಿ ರೂಪುಗೊಳ್ಳಲು ನೆರವಾಗಲಿದೆ. ಈ ಮೊದಲೇ ನಾನು ಹೇಳಿರುವಂತೆ ಕ್ರಿಕೆಟ್ ಒಂದೇ ನನಗೆ ಗೊತ್ತಿರುವ ಕಲೆ. ಅದು ಬಿಟ್ಟು ಜೀವನೋಪಾಯಕ್ಕೆ ನನಗೆ ಇನ್ಯಾವುದು ಗೊತ್ತಿಲ್ಲ. ಹಾಗಾಗಿ ಕ್ರಿಕೆಟ್‌ಗೆ ಏನೆಲ್ಲಾ ಬೇಕಿದೆಯೋ ಅವೆಲ್ಲವನ್ನೂ ನಾನು ಮಾಡಬೇಕಿದೆ,' ಎಂದರು. ಜೊತೆಗೆ ಈಗಲೂ ತಾನು ಮತ್ತು ಹಾರ್ದಿಕ್ ಉತ್ತಮ ಸ್ನೇಹಿತರು ಅನ್ನೋದನ್ನು ಹೇಳಲು ಮರೆಯಲಿಲ್ಲ.

ಸ್ಫೋಟಕ ಬ್ಯಾಟ್ಸ್ಮನ್ ಶಹಝಾದ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತು!ಸ್ಫೋಟಕ ಬ್ಯಾಟ್ಸ್ಮನ್ ಶಹಝಾದ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತು!

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ತಂಡದಲ್ಲಿರುವ ರಾಹುಲ್, ಆ್ಯಂಟಿಗುವಾದಲ್ಲಿನ ಅಭ್ಯಾಸ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 36 ರನ್ ಬಾರಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ವಿಂಡೀಸ್ 181 ರನ್ ಮಾಡಿದ್ದರೆ, ಭಾರತ 297 ರನ್ ಗಳಿಸಿತ್ತು. ದ್ವಿತೀಯ ಇನ್ನಿಂಗ್ಸ್‌ಗೆ ಇಳಿದಿದ್ದ ಭಾರತ 200 ರನ್ ಮುನ್ನಡೆಯಲ್ಲಿತ್ತು.

Story first published: Monday, August 19, 2019, 19:20 [IST]
Other articles published on Aug 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X