ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಟೆಸ್ಟ್ ತಂಡದ ನೂತನ ನಾಯಕ ಫಿಕ್ಸ್: ಉಪನಾಯಕನ ರೇಸ್‌ನಲ್ಲಿ ಈ ಮೂವರು ಆಟಗಾರರು!

KL Rahul, Rishabh Pant and Jasprit Bumrah are in the race of Team India Test Vice Captain

ಸದ್ಯ ದಕ್ಷಿಣ ಆಫ್ರಿಕಾದಲ್ಲಿರುವ ಟೀಮ್ ಇಂಡಿಯಾ ಇತ್ತೀಚೆಗಷ್ಟೇ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1 - 2 ಅಂತರದಿಂದ ಹೀನಾಯ ಸೋಲನ್ನು ಕಂಡಿದೆ. ಟೂರ್ನಿ ಆರಂಭವಾಗುವುದಕ್ಕೂ ಮುನ್ನ ಫೇವರಿಟ್ ತಂಡವಾಗಿದ್ದ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಟೂರ್ನಿ ಮುಕ್ತಾಯದ ಸಮಯಕ್ಕೆ ಸೋಲುಂಡು ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಈ ಮೂಲಕ ಹರಿಣಗಳ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿಯನ್ನು ಗೆಲ್ಲುವ ಟೀಮ್ ಇಂಡಿಯಾದ ಕನಸು ಕನಸಾಗಿಯೇ ಉಳಿದಿದ್ದು, ಈ ಟೂರ್ನಿ ಮುಕ್ತಾಯಗೊಂಡ ಬೆನ್ನಲ್ಲೇ ಭಾರತ ಟೆಸ್ಟ್ ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ ನಾಯಕ ಸ್ಥಾನಕ್ಕೆ ರಾಜೀನಾಮೆಯನ್ನು ಘೋಷಿಸಿದ್ದಾರೆ.

ಐಪಿಎಲ್ 2022: ಮನೀಶ್ ಪಾಂಡೆ ಅಲ್ಲ ಮುಂಬೈನ ಈ ಆಟಗಾರ ಆಗಲಿದ್ದಾರೆ ಆರ್‌ಸಿಬಿ ನಾಯಕ!ಐಪಿಎಲ್ 2022: ಮನೀಶ್ ಪಾಂಡೆ ಅಲ್ಲ ಮುಂಬೈನ ಈ ಆಟಗಾರ ಆಗಲಿದ್ದಾರೆ ಆರ್‌ಸಿಬಿ ನಾಯಕ!

ಹೌದು, ಜನವರಿ 15ರಂದು ತಮ್ಮ ಈ ನಿರ್ಧಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಿಸಿದ ವಿರಾಟ್ ಕೊಹ್ಲಿ ತಮ್ಮ ಅಭಿಮಾನಿಗಳು ಹಾಗೂ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಲ್ಲಿ ಬೇಸರ ಉಂಟಾಗುವಂತೆ ಮಾಡಿದರು. ಹೀಗೆ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ದಿಢೀರ್ ರಾಜೀನಾಮೆ ಘೋಷಿಸಿದ ನಂತರ ಇದೀಗ ಭಾರತ ಟೆಸ್ಟ್ ತಂಡಕ್ಕೆ ನಾಯಕ ಹಾಗೂ ಉಪ ನಾಯಕನಾಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬ ಪ್ರಶ್ನೆಗಳು ಎದ್ದಿವೆ.

ಐಪಿಎಲ್ 2022: ಟೂರ್ನಿ ಆರಂಭಕ್ಕೂ ಮುನ್ನವೇ ರಾಜಸ್ಥಾನ್ ರಾಯಲ್ಸ್‌ಗೆ ಕೈಕೊಟ್ಟ ಬೆನ್ ಸ್ಟೋಕ್ಸ್ಐಪಿಎಲ್ 2022: ಟೂರ್ನಿ ಆರಂಭಕ್ಕೂ ಮುನ್ನವೇ ರಾಜಸ್ಥಾನ್ ರಾಯಲ್ಸ್‌ಗೆ ಕೈಕೊಟ್ಟ ಬೆನ್ ಸ್ಟೋಕ್ಸ್

ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಭಾರತ ಟೆಸ್ಟ್ ತಂಡದ ಉಪನಾಯಕನಾಗಿ ಆಯ್ಕೆಯಾಗಿದ್ದ ರೋಹಿತ್ ಶರ್ಮಾ ಅವರೇ ವಿರಾಟ್ ಕೊಹ್ಲಿ ನಂತರ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಒಂದೆಡೆ ಇದ್ದರೆ, ಮತ್ತೊಂದೆಡೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವ ಕೆಎಲ್ ರಾಹುಲ್ ಅವರೇ ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕನಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಭಾರತ ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ ನಂತರ ರೋಹಿತ್ ಶರ್ಮ ಮತ್ತು ಕೆಎಲ್ ರಾಹುಲ್ ಇಬ್ಬರಲ್ಲಿ ಯಾರು ನಾಯಕನಾಗಿ ಆಯ್ಕೆಯಾಗಲಿದ್ದಾರೆ ಎಂಬ ಪ್ರಶ್ನೆಗೆ ಬಿಸಿಸಿಐನ ಅಧಿಕಾರಿಯೋರ್ವರು ಉತ್ತರವನ್ನು ನೀಡಿದ್ದು, ರೋಹಿತ್ ಶರ್ಮಾ ನಾಯಕನಾಗುವುದರಲ್ಲಿ ಯಾವುದೇ ರೀತಿಯ ಅನುಮಾನಗಳು ಬೇಡ ಎಂದಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಕಂಡಂತಿದೆ.

ರೋಹಿತ್ ನಾಯಕನಾದರೆ ನೂತನ ಉಪನಾಯಕನ ಅಗತ್ಯತೆಯಿದೆ

ರೋಹಿತ್ ನಾಯಕನಾದರೆ ನೂತನ ಉಪನಾಯಕನ ಅಗತ್ಯತೆಯಿದೆ

ಸದ್ಯ ಗಾಯದ ಸಮಸ್ಯೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳಿಂದ ಹೊರಗುಳಿದಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ನಿಭಾಯಿಸಬೇಕಿದ್ದ ಭಾರತ ಏಕದಿನ ತಂಡದ ನಾಯಕತ್ವ ಹಾಗೂ ಭಾರತ ಟೆಸ್ಟ್ ತಂಡದ ಉಪನಾಯಕತ್ವದ ಜವಾಬ್ದಾರಿಯನ್ನು ಕೆಎಲ್ ರಾಹುಲ್ ನಿಭಾಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಭಾರತ ಟೆಸ್ಟ್ ತಂಡದ ಉಪನಾಯಕರಾಗಿ ಆಯ್ಕೆಯಾಗಿದ್ದ ರೋಹಿತ್ ಶರ್ಮಾ ಇದೀಗ ವಿರಾಟ್ ಕೊಹ್ಲಿ ನಂತರ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದು, ರೋಹಿತ್ ಶರ್ಮಾ ನಿಭಾಯಿಸುತ್ತಿದ್ದ ಉಪನಾಯಕನ ಸ್ಥಾನಕ್ಕೆ ನೂತನ ಆಟಗಾರನನ್ನು ನೇಮಿಸಬೇಕಾದ ಅಗತ್ಯತೆ ಇದೆ.

ಉಪನಾಯಕನ ಸ್ಥಾನಕ್ಕೆ ಮೂವರ ಹೆಸರು

ಉಪನಾಯಕನ ಸ್ಥಾನಕ್ಕೆ ಮೂವರ ಹೆಸರು

ರೋಹಿತ್ ಶರ್ಮಾ ನಾಯಕನಾಗಲಿರುವ ಕಾರಣದಿಂದಾಗಿ ಶರ್ಮಾ ನಿರ್ವಹಿಸುತ್ತಿದ್ದ ಉಪನಾಯಕನ ಸ್ಥಾನಕ್ಕೆ ಯಾರು ಸೂಕ್ತ ಎಂಬ ವಿಚಾರ ಇದೀಗ ಬಿಸಿಸಿಐಗೆ ತಲೆನೋವಾಗಿ ಪರಿಣಮಿಸಿದೆ. ಈಗ ಬಿಸಿಸಿಐ ಉಪನಾಯಕನನ್ನಾಗಿ ಆರಿಸಲಿರುವ ಆಟಗಾರನೇ ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾ ನಾಯಕನಾಗಲಿದ್ದು, ಬಿಸಿಸಿಐ ಸರಿಯಾದ ಅಭ್ಯರ್ಥಿಯನ್ನೇ ಆರಿಸಬೇಕಾದ ಅಗತ್ಯತೆಯಿದೆ. ಸದ್ಯ ಬಿಸಿಸಿಐ ಕೆಎಲ್ ರಾಹುಲ್, ರಿಷಭ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಈ ಮೂವರು ಆಟಗಾರರಲ್ಲಿ ಓರ್ವನನ್ನು ಭಾರತ ಟೆಸ್ಟ್ ತಂಡಕ್ಕೆ ಉಪ ನಾಯಕನನ್ನಾಗಿ ನೇಮಿಸುವುದು ಖಚಿತವಾಗಿದೆ.

IPLನಲ್ಲಿ ಈ ನೂತನ ತಂಡದ captain Hardik Pandya | Oneindia Kannada
ನಾಯಕ ಮತ್ತು ಉಪನಾಯಕನನ್ನು ಬಿಸಿಸಿಐ ಯಾವಾಗ ಘೋಷಿಸಲಿದೆ?

ನಾಯಕ ಮತ್ತು ಉಪನಾಯಕನನ್ನು ಬಿಸಿಸಿಐ ಯಾವಾಗ ಘೋಷಿಸಲಿದೆ?

ಸದ್ಯ ರೋಹಿತ್ ಶರ್ಮಾ ಅವರನ್ನು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕನನ್ನಾಗಿ ಆಯ್ಕೆ ಮಾಡಲು ತೀರ್ಮಾನಿಸಿರುವ ಬಿಸಿಸಿಐ ಆದಷ್ಟು ಬೇಗ ಉಪನಾಯಕನನ್ನು ಕೂಡ ಆರಿಸಲಿದೆ. ಹೀಗೆ ಅಂತಿಮವಾಗಿ ಆಯ್ಕೆಯಾಗಲಿರುವ ನಾಯಕ ರೋಹಿತ್ ಶರ್ಮಾ ಹಾಗೂ ಯಾರು ಉಪನಾಯಕನಾಗಿ ಆಯ್ಕೆಯಾಗುತ್ತಾರೋ ಅವರ ಹೆಸರುಗಳನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸದ ನಂತರ ಬಿಸಿಸಿಐ ಅಧಿಕೃತವಾಗಿ ಘೋಷಿಸಲಿದೆ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Story first published: Tuesday, January 18, 2022, 0:54 [IST]
Other articles published on Jan 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X