ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯಿಂದಲೂ KL ರಾಹುಲ್ ಔಟ್‌: ವರದಿ

KL RAHUL

ಟೀಂ ಇಂಡಿಯಾ ಲಿಮಿಟೆಡ್ ಓವರ್ ಕ್ರಿಕೆಟ್‌ನ ಉಪನಾಯಕ ಕೆ.ಎಲ್‌. ರಾಹುಲ್‌ಗೆ ಬ್ಯಾಡಲಕ್ ಬೆಂಬಿಡದೇ ಕಾಡುತ್ತಿದೆ. ದಕ್ಷಿಣ ಆಫ್ರಿಕಾ, ಐರ್ಲೆಂಡ್, ಇಂಗ್ಲೆಂಡ್ ವಿರುದ್ಧದ ಚುಟುಕು ಕ್ರಿಕೆಟ್‌ ಸರಣಿಗಳಿಂದ ಹೊರಬಿದ್ದಿದ್ದ ಕೆ.ಎಲ್ ರಾಹುಲ್ ಮುಂಬರುವ ವಿಂಡೀಸ್ ವಿರುದ್ಧದ ಟಿ20 ಸರಣಿಗೂ ಅಲಭ್ಯರಾಗಿದ್ದಾರೆ ಎಂದು ವರದಿಯಾಗಿದೆ.

ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಪ್ರಕಾರ ಕೋವಿಡ್-19 ಪಾಸಿಟಿವ್ ಆಗಿದ್ದ ಕೆ.ಎಲ್ ರಾಹುಲ್ ಐಸೋಲೇಷನ್ ಅವಧಿಯು ಬುಧವಾರ ಮುಕ್ತಾಗೊಳ್ಳಲಿದ್ದು, ಬಿಸಿಸಿಐ ವೈದ್ಯಕೀಯ ಸಿಬ್ಬಂದಿಯು ರಾಹುಲ್‌ಗೆ ಇನ್ನೊಂದು ವಾರಗಳ ವಿಶ್ರಾಂತಿ ಪಡೆದು ಸಂಪೂರ್ಣ ಗುಣಮುಖರಾಗಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಒಂದು ವೇಳೆ ಕೆ.ಎಲ್ ರಾಹುಲ್ ಎರಡು ಬಾರಿ ನೆಗೆಟಿವ್ ವರದಿ ಬಂದರೂ ಸಹ ಕೆ.ಎಲ್ ರಾಹುಲ್ ಶುಕ್ರವಾರದಿಂದ ಪ್ರಾರಂಭಗೊಳ್ಳುವ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗವಹಿಸುವುದು ಅನುಮಾನವಾಗಿದೆ. ಜೊತೆಗೆ ಬೆಂಗಳೂರಿನ ಎನ್‌ಸಿಎಗೆ ಮರಳಲಿದ್ದು, ಅಭ್ಯಾಸ ನಡೆಸಲಿದ್ದಾರೆ.

ಜಿಂಬಾಬ್ವೆ ವಿರುದ್ಧದ ಸರಣಿಗೆ ರಾಹುಲ್ ಕಂಬ್ಯಾಕ್ ಸಾಧ್ಯತೆ

ಜಿಂಬಾಬ್ವೆ ವಿರುದ್ಧದ ಸರಣಿಗೆ ರಾಹುಲ್ ಕಂಬ್ಯಾಕ್ ಸಾಧ್ಯತೆ

ಕೆ.ಎಲ್ ರಾಹುಲ್ ವಿಂಡೀಸ್ ವಿರುದ್ಧದ ಸರಣಿಗೆ ಮಿಸ್‌ ಆದಲ್ಲಿ, ನಂತರದಲ್ಲಿ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚಿದೆ. ಆಗಸ್ಟ್ 18, 20, 22ರಂದು ಹರಾರೆ ಸ್ಟೇಡಿಯಂನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಸರಣಿಯಲ್ಲಿ ಆಡಲಿದ್ದಾರೆ.

ರಾಹುಲ್‌ ಇತ್ತೀಚೆಗಷ್ಟೇ ಜರ್ಮನಿಯಿಂದ ಶಸ್ತ್ರಚಿಕಿತ್ಸೆ ಬಳಿಕ ಬೆಂಗಳೂರಿಗೆ ಮರಳಿದ್ದರು. ಜೊತೆಗೆ ಎನ್‌ಸಿಎನಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದರ ಕುರಿತಾಗಿ ಸಾಕಷ್ಟು ಫೋಟೊಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಆದ್ರೆ ವಿಂಡೀಸ್ ಪ್ರವಾಸಕ್ಕೂ ಮುನ್ನ ಕೋವಿಡ್-19 ಪಾಸಿಟಿವ್‌ಗೆ ತುತ್ತಾದ ಪರಿಣಾಮ ಐಸೋಲೇಷನ್‌ಗೆ ಒಳಪಟ್ಟರು.

ಚೆಸ್‌ ಒಲಿಂಪಿಯಾಡ್ 2022: ಚೆನ್ನೈನಲ್ಲಿ ಭರ್ಜರಿ ತಯಾರಿ, 61 ದೇಶಗಳಲ್ಲಿ ಭಾರತ ನನ್ನ ಫೇವರಿಟ್ ಎಂದ ವಿದೇಶಿ ಪ್ಲೇಯರ್

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡವನ್ನ ಮುನ್ನಡೆಸುವ ಅವಕಾಶ ಕೈ ತಪ್ಪಿತು

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡವನ್ನ ಮುನ್ನಡೆಸುವ ಅವಕಾಶ ಕೈ ತಪ್ಪಿತು

ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ರಾಹುಲ್, ಐಪಿಎಲ್ ನಂತರ ಗಾಯಗೊಂಡು ಜರ್ಮನಿಯಲ್ಲಿ ಹರ್ನಿಯಾಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದರೂ, ಗಾಯದ ಕಾರಣದಿಂದ ಹೊರಗುಳಿದಿದ್ದರು. ಅವರ ಅನುಪಸ್ಥಿತಿಯಲ್ಲಿ ರಿಷಬ್ ಪಂತ್ ನಾಯಕತ್ವವನ್ನು ವಹಿಸಿಕೊಂಡರು. ಹಾರ್ದಿಕ್ ಪಾಂಡ್ಯ ಐರ್ಲೆಂಡ್‌ನಲ್ಲಿ ಭಾರತ ಟಿ20 ತಂಡವನ್ನು ಮುನ್ನಡೆಸಿದರು.

ಇದರ ನಂತರ ವಿಂಡೀಸ್ ವಿರುದ್ಧದ ಸರಣಿಗೆ ಫಿಟ್ನೆಸ್ ಟೆಸ್ಟ್ ಕೂಡ ಪಾಸ್ ಆಗಿದ್ದ ಕೆ.ಎಲ್ ರಾಹುಲ್‌ಗೆ ಕೋವಿಡ್‌ ಕಾರಣದಿಂದ ಕೆರಿಬಿಯನ್ ಸರಣಿಯನ್ನೂ ಕಳೆದುಕೊಂಡಿರುವುದು ನಿಜಕ್ಕೂ ಬೇಸರ ತರಿಸಿದೆ.

ಕಾಮನ್‌ವೆಲ್ತ್ ಗೇಮ್ಸ್ 2022 ಉದ್ಘಾಟನಾ ಸಮಾರಂಭದ ಸಮಯವೇನು? ಭಾರತದಲ್ಲಿ ಯಾವ ಸಮಯಕ್ಕೆ ಲೈವ್?

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್‌

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಸ್ಕ್ವಾಡ್‌

ಜುಲೈ 29ರಂದು ಮೊದಲ ಟಿ20 ಪಂದ್ಯಕ್ಕೆ ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಸ್ಟೇಡಿಯಂ ಆತಿಥ್ಯ ವಹಿಸಿದೆ. ಮೊದಲ ಪಂದ್ಯದ ಬಳಿಕ ಸೈಂಟ್ ಕಿಟ್ಸ್‌ಗೆ ಎರಡೂ ತಂಡಗಳು ತೆರಳಲಿದ್ದು, ಎರಡು ಮತ್ತು ಮೂರನೇ ಟಿ20 ಪಂದ್ಯದಲ್ಲಿ ಆಡಲಿವೆ. ಆಗಸ್ಟ್ 1 ಮತ್ತು 2ರಂದು ಎರಡು ಮತ್ತು ಮೂರನೇ ಪಂದ್ಯಗಳ ಬಳಿಕ ಅಂತಿಮ ಎರಡು ಪಂದ್ಯಗಳು ಫ್ಲೋರಿಡಾ (ಯುಎಸ್‌ಎ)ದಲ್ಲಿ ನಡೆಯಲಿದೆ.

ಟೀಂ ಇಂಡಿಯಾ ಸ್ಕ್ವಾಡ್‌
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಕೆಎಲ್ ರಾಹುಲ್ (ಆಡುವುದು ಅನುಮಾನ), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ಅವೇಶ್ ಖಾನ್, ಅರ್ಶ್‌ದೀಪ್ ಸಿಂಗ್‌, ಕುಲದೀಪ್ ಯಾದವ್, ರವಿ ಬಿಷ್ಣೋಯ್.

Story first published: Wednesday, July 27, 2022, 18:24 [IST]
Other articles published on Jul 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X