ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ಇಂಡಿಯಾಗೆ ಮತ್ತೊಂದು ಆಘಾತ: ಟೆಸ್ಟ್ ಸರಣಿಯಿಂದ ಹೊರಬಿದ್ದ ಕೆಎಲ್ ರಾಹುಲ್

KL Rahul ruled out of the Test series against Australia
ಭಾರತಕ್ಕೆ ಎದುರಾಯ್ತು ಮತ್ತೊಂದು ದೊಡ್ಡ ಆಟಗಾರನ ಗಾಯದ ಸಮಸ್ಯೆ | Oneindia Kannada

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನಾಡುತ್ತಿರುವ ಟೀಮ್ ಇಂಡಿಯಾಗೆ ಗಾಯದ ಸಮಸ್ಯೆಗಳು ಸಾಕಷ್ಟು ಕಾಡುತ್ತಿದೆ. ಈಗ ಕೆಎಲ್ ರಾಹುಲ್ ಸರದಿ. ಸುದೀರ್ಘ ಕಾಲದ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡ ಕೆಎಲ್ ರಾಹುಲ್ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆಸಿದ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ. ಹೀಗಾಗಿ ಮುಂದಿನ ಎರಡು ಪಂದ್ಯಗಳಿಂದಲೂ ರಾಹುಲ್ ಹೊರಬಿದ್ದಿದ್ದಾರೆ.

ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ನೆಟ್ ನಲ್ಲಿ ಅಭ್ಯಾಸವನ್ನು ನಡೆಸುತ್ತಿದ್ದ ವೇಳೆ ಕೆಎಲ್ ರಾಹುಲ್ ಅವರ ಎಡ ಮಣಿಕಟ್ಟು ಉಳುಕಿದೆ. ಹೀಗಾಗಿ ಮುಂದಿನ ಎರಡು ಪಂದ್ಯಗಳಿಂದ ಕೆಎಲ್ ರಾಹುಲ್ ಹೊರಬಿದ್ದಿದ್ದಾರೆ. ಶನಿವಾರ ರಾಹುಲ್ ಗಾಯಗೊಂಡಿದ್ದು ಈ ಬಗ್ಗೆ ಬಿಸಿಸಿಐ ಖಚಿತಪಡಿಸಿದೆ.

ಸ್ಟೋಯ್ನಿಸ್ ಬ್ಯಾಟಿಂಗ್ ಆರ್ಭಟ, ಹೊಬರ್ಟ್ ವಿರುದ್ಧ ಮೆಲ್ಬರ್ನ್‌ಗೆ ಜಯಸ್ಟೋಯ್ನಿಸ್ ಬ್ಯಾಟಿಂಗ್ ಆರ್ಭಟ, ಹೊಬರ್ಟ್ ವಿರುದ್ಧ ಮೆಲ್ಬರ್ನ್‌ಗೆ ಜಯ

ಆಡುವ ಬಳಗದಲ್ಲಿ ಸ್ಥಾನ ಪಡೆಯದ ರಾಹುಲ್

ಆಡುವ ಬಳಗದಲ್ಲಿ ಸ್ಥಾನ ಪಡೆಯದ ರಾಹುಲ್

ಸೀಮಿತ ಓವರ್‌ಗಳ ಸರಣಿಯಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡುತ್ತಿರುವ ಕೆಎಲ್ ರಾಹುಲ್ ಟೆಸ್ಟ್‌ ಸ್ಕ್ವಾಡ್‌ನಲ್ಲಿದ್ದರೂ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯುವಲ್ಲಿ ವಿಫಲರಾಗಿದ್ದರು. ಮೊದಲ ಎರಡು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಸ್ಥಾನವನ್ನು ಪಡೆಯುವ ನಿರೀಕ್ಷೆ ಹೊಂದಿತ್ತಾದರೂ ನಿರಾಸೆ ಅನುಭವಿಸಿದ್ದರು. ಈಗ ಉಳಿದೆರಡು ಪಂದ್ಯಗಳಿಂದಲೂ ರಾಹುಲ್ ಹೊರಬಿದ್ದಿದ್ದಾರೆ.

ಗಾಯಗೊಂಡವರ ಪಟ್ಟಿಗೆ ಕೆಎಲ್ ಸೇರ್ಪಡೆ

ಗಾಯಗೊಂಡವರ ಪಟ್ಟಿಗೆ ಕೆಎಲ್ ಸೇರ್ಪಡೆ

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಸಾಕಷ್ಟು ಗಾಯದ ಸಮಸ್ಯೆಯಿಂದ ಬಳಲುತ್ತಿದೆ. ಅನೇಕ ಪ್ರಮುಖ ಆಟಗಾರರು ಗಾಯದ ಕಾರಣದಿಂದಾಗಿ ಈ ಸರಣಿಯನ್ನು ತಪ್ಪಿಸಿಕೊಂಡಿದ್ದಾರೆ. ಈಗ ಆ ಪಟ್ಟಿಗೆ ಕೆಎಲ್ ರಾಹುಲ್ ಕೂಡ ಸೇರಿಕೊಂಡಿದ್ದಾರೆ.

ಕುತೂಹಲ ಮೂಡಿಸಿದ ಸರಣಿ

ಕುತೂಹಲ ಮೂಡಿಸಿದ ಸರಣಿ

ಮೊದಲ ಟೆಸ್ಟ್‌ ಪಂದ್ಯವನ್ನು ಆಘಾತಕಾರಿ ರೀತಿಯಲ್ಲಿ ಸೋಲು ಕಂಡಿದ್ದ ಟೀಮ್ ಇಂಡಿಯಾ ಮೆಲ್ಬರ್ನ್ ಅಂಗಳದಲ್ಲಿ ನಡೆದ ಎರಡನೇ ಪಂದ್ಯವನ್ನು ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಭರ್ಜರಿಯಾಗಿ ಗೆದ್ದುಕೊಂಡಿತ್ತು. ಸರಣಿಯಲ್ಲಿ ಈಗ ಎರಡು ಪಂದ್ಯ ಬಾಕಿಯಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.

Story first published: Tuesday, January 5, 2021, 12:11 [IST]
Other articles published on Jan 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X