ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ ಆರಂಭಿಕನಾಗಿ ಕಣಕ್ಕಿಳಿದರೆ ದ್ವಿಶತಕ ಬಾರಿಸಬಲ್ಲ: ಕನ್ನಡಿಗನ ಬಗ್ಗೆ ಚೋಪ್ರ ಮಾತು

KL Rahul should open for India in ODIs: Aakash Chopra

ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿಯಬೇಕೆಂದು ಒತ್ತಾಯಿಸಿದ್ದಾರೆ. ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಶಿಖರ್ ಧವನ್‌ಗೆ ಕೆಎಲ್ ರಾಹುಲ್ ಅಊಕ್ತ ಜೊತೆಗಾರ ಎಂದು ಆಕಾಶ್ ಚೋಪ್ರ ವಿವರಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಆರಂಭಿಕನಾಗಿ ಕೆಎಲ್ ರಾಹುಲ್ ಕಣಕ್ಕಿಳಿದರೆ ಆತ ಸುಲಭವಾಗಿ ದ್ವಿಶತಕವನ್ನು ಬಾರಿಸಬಲ್ಲ ಎಂದು ಆಕಾಶ್ ಚೋಪ್ರ ಹೇಳಿದ್ದಾರೆ. ಕೆಎಲ್ ರಾಹುಲ್ ಅದ್ಭುತ ಪ್ರತಿಭೆಯಾಗಿದ್ದು ಆರಂಭಿಕನಾಗಿ ಆತ ಯಶಸ್ಸು ಸಾಧಿಸಲಿದ್ದಾರೆ ಎಂದು ಚೋಪ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

3 ವಿಶ್ವಕಪ್‌ಗಳಲ್ಲಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುವ ಆಶಯ ವ್ಯಕ್ತಪಡಿಸಿದ ರಾಹುಲ್3 ವಿಶ್ವಕಪ್‌ಗಳಲ್ಲಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುವ ಆಶಯ ವ್ಯಕ್ತಪಡಿಸಿದ ರಾಹುಲ್

ಕೆಎಲ್ ರಾಹುಲ್ ಕಳೆದ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದರು. ಈ ಕಾರಣಕ್ಕೆ ಆಸ್ಟ್ರೆಲಿಯಾ ವಿರುದ್ಧದ ಮೂರು ಮಾದರಿಯಲ್ಲೂ ರಾಹುಲ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ರಾಹುಲ್ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. 14 ಪಂದ್ಯಗಳಲ್ಲಿ 670 ರನ್ ಗಳಿಸಿದ್ದರು ಕೆಎಲ್.

"ಆರಂಭಿಕನಾಗಿ ಶಿಖರ್ ಧವನ್ ಜೊತೆಗೆ ಯಾರು ಕಣಕ್ಕಿಳಿಯಬೇಕು ಎಂಬ ಪ್ರಶ್ನೆಗೆ ನನ್ನ ಹೃದಯ ಕೆಎಲ್ ರಾಹುಲ್ ಎಂದು ಹೇಳುತ್ತದೆ. ಯಾಕೆಂದರೆ ಆತನೋರ್ವ ವಿಶೇಷವಾದ ಆಟಗಾರ. ಆತ ಶತಕಗಳನ್ನು ಬಾರಿಸಬಲ್ಲ ಆಟಗಾರ. ಆತ ಆರಂಭಿಕನಾಗಿ ಕಣಕ್ಕಿಳಿದರೆ ದ್ವಿಶತಕವನ್ನೂ ದಾಖಲಿಸಬಲ್ಲ ಆಟಗಾರನಾಗಿದ್ದಾನೆ" ಎಂದು ಆಕಾಶ ಚೋಪ್ರ ವಿವರಿಸಿದ್ದಾರೆ.

ಟೀಮ್ ಇಂಡಿಯಾ ನೂತನ ಜೆರ್ಸಿಯಲ್ಲಿ 'ಬೈಜುಸ್' ಲೋಗೋ ವಿವಾದಟೀಮ್ ಇಂಡಿಯಾ ನೂತನ ಜೆರ್ಸಿಯಲ್ಲಿ 'ಬೈಜುಸ್' ಲೋಗೋ ವಿವಾದ

ಕೆಎಲ್ ರಾಹುಲ್ ಈ ಬಾರಿಯ ಆಸ್ಟ್ರೇಲಿಯಾ ವಿರುದ್ದದ ಸೀಮಿತ ಓವರ್‌ಗಳ ಸರಣಿಗೆ ಉಪನಾಯಕನಾಗಿಯೂ ಕರ್ತವ್ಯವನ್ನು ನಿರ್ವಹಿಸಲಿದ್ದಾರೆ. ರೋಹಿತ್ ಶರ್ಮಾ ಅಲಭ್ಯತೆಯ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿಗೆ ನಾಯಕತ್ವದಲ್ಲಿ ಸಹಕಾರವನ್ನು ನೀಡಲಿದ್ದಾರೆ.

Story first published: Wednesday, November 25, 2020, 20:20 [IST]
Other articles published on Nov 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X