KL ರಾಹುಲ್‌ಗೆ 17 ಕೋಟಿ ನೀಡಿ ಖರೀದಿಸಿದ ಲಕ್ನೋ ಫ್ರಾಂಚೈಸಿ: ಐಪಿಎಲ್‌ನಲ್ಲೇ ಗರಿಷ್ಠ ಮೊತ್ತ

ಟೀಂ ಇಂಡಿಯಾದ ಆಟಗಾರ ಕೆ.ಎಲ್ ರಾಹುಲ್‌ರನ್ನ ಹೊಸ ಫ್ರಾಂಚೈಸಿ ಲಕ್ನೋ ಭಾರೀ ಮೊತ್ತಕ್ಕೆ ತನ್ನತ್ತ ಸೆಳೆದುಕೊಂಡಿದ್ದು, 17 ಕೋಟಿ ರೂಪಾಯಿಗೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಈ ಮೂಲಕ ಕನ್ನಡಿಗ ಕೆ.ಎಲ್ ರಾಹುಲ್ ಐಪಿಎಲ್‌ನಲ್ಲಿ ಗರಿಷ್ಠ ಮೊತ್ತಕ್ಕೆ ಬಿಕರಿಯಾದ ಎರಡನೇ ಆಟಗಾರ ಎಂಬ ಸಾಧನೆ ಮಾಡಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಸಮನಾದ ಮೊತ್ತಕ್ಕೆ ರಾಹುಲ್ ಹೊಸ ಫ್ರಾಂಚೈಸಿ ಸೇರಿದ್ದಾರೆ.

ಕೆ.ಎಲ್ ರಾಹುಲ್ ಜೊತೆಗೆ ಆಸ್ಟ್ರೇಲಿಯಾದ ಆಲ್ ರೌಂಡರ್ ಮಾರ್ಕಸ್ ಸ್ಟೊಯ್ನಿಸ್ ಮತ್ತು ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಮುಂಬರುವ ಐಪಿಎಲ್ 2022 ಋತುವಿನಲ್ಲಿ ಹೊಸ ಫ್ರಾಂಚೈಸಿ ಲಕ್ನೋವನ್ನು ಪ್ರತಿನಿಧಿಸಲಿದ್ದಾರೆ.

ಅತಿ ಹೆಚ್ಚು ಬೆಲೆಯ ಲಕ್ನೋ ಫ್ರಾಂಚೈಸಿಯನ್ನು ಪಡೆದುಕೊಂಡಿರುವ RPSG ಗೋಯೆಂಕಾ ಗ್ರೂಪ್ ಮುಂಬರುವ ಸೀಸನ್‌ಗೆ ಸಿದ್ಧವಾಗಿದೆ. ಲಕ್ನೋ ತಂಡವು ಈಗಾಗಲೇ ಜಿಂಬಾಬ್ವೆಯ ಮಾಜಿ ನಾಯಕ ಆ್ಯಂಡಿ ಫ್ಲವರ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ಮತ್ತು ವಿಜಯ್ ದಹಿಯಾ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದೆ. ಗೌತಮ್ ಗಂಭೀರ್ ಅವರನ್ನು ಮೆಂಟರ್ ಆಗಿ ಆಯ್ಕೆ ಮಾಡಿದೆ.

ವಿರಾಟ್ ಕೊಹ್ಲಿ ಸಮನಾದ ಮೊತ್ತಕ್ಕೆ ಕೆ.ಎಲ್ ರಾಹುಲ್ ಹರಾಜು

ವಿರಾಟ್ ಕೊಹ್ಲಿ ಸಮನಾದ ಮೊತ್ತಕ್ಕೆ ಕೆ.ಎಲ್ ರಾಹುಲ್ ಹರಾಜು

ಟೀಂ ಇಂಡಿಯಾ ಸೂಪರ್ ಸ್ಟಾರ್‌ ವಿರಾಟ್ ಕೊಹ್ಲಿ 2018ರ ಸೀಸನ್‌ನಲ್ಲಿ ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತಕ್ಕೆ ಆರ್‌ಸಿಬಿ ರೀಟೈನ್ ಮಾಡಿಕೊಂಡಿತ್ತು. 2018ರ ಐಪಿಎಲ್ ಹರಾಜು ಸಂದರ್ಭದಲ್ಲಿ ಆರ್‌ಸಿಬಿ ಕೊಹ್ಲಿಗೆ 17ಕೋಟಿ ನೀಡಿ ತನ್ನ ತಂಡದಲ್ಲೇ ಉಳಿಸಿಕೊಂಡಿತು. ಆದ್ರೀದ ಅದಾದ ಬಳಿಕ ಕೆ.ಎಲ್ ರಾಹುಲ್‌ರನ್ನ ಹೊಸ ಫ್ರಾಂಚೈಸಿ ಲಕ್ನೋ ಬರೋಬ್ಬರಿ 17 ಕೋಟಿಗೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಆರ್‌ಸಿಬಿ ಪರ ಆಡಿದ್ದ ರಾಹುಲ್‌ ಈಗ ಹೊಸ ತಂಡದ ನಾಯಕ!

ಆರ್‌ಸಿಬಿ ಪರ ಆಡಿದ್ದ ರಾಹುಲ್‌ ಈಗ ಹೊಸ ತಂಡದ ನಾಯಕ!

ರಾಹುಲ್ 2013 ರಲ್ಲಿ RCB ಗಾಗಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 2014 ರಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಪರ ಆಡಿ 2016 ರಲ್ಲಿ ಆರ್‌ಸಿಬಿಗೆ ಗೆ ಮತ್ತೆ ಸೇರಿಕೊಂಡರು. 2018 ರಲ್ಲಿ ಪಂಜಾಬ್ ಕಿಂಗ್ಸ್ ಅವರಿಗೆ 11 ಕೋಟಿ ರೂಪಾಯಿ ಕೊಟ್ಟು ತೆಗೆದುಕೊಂಡಿದೆ. ಅವರು 2020 ಮತ್ತು 2021 ರ ಐಪಿಎಲ್‌ಗೆ ನಾಯಕರಾಗಿದ್ದರು. ಆದರೆ, ರಾಹುಲ್ ಅದ್ಭುತ ಪ್ರದರ್ಶನ ನೀಡಿದರೂ ತಂಡಕ್ಕೆ ಗೆಲುವು ಸಾಧ್ಯವಾಗಲಿಲ್ಲ.

ಕೆ.ಎಲ್ ರಾಹುಲ್‌ ಐಪಿಎಲ್‌ನ 55 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ ಮತ್ತು 56.62 ಸರಾಸರಿಯಲ್ಲಿ 2548 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಹಾಗೂ 25 ಅರ್ಧ ಶತಕಗಳು ಸೇರಿವೆ. ಐಪಿಎಲ್ 2020 ಮತ್ತು 2021 ಸೀಸನ್‌ಗಳಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರನಾಗಿದ್ದಾನೆ.

ಲೆಜೆಂಡ್ಸ್ ಕ್ರಿಕೆಟ್ ಲೀಗ್: 206 ರನ್ ಚೇಸ್ ಮಾಡಿದ ಏಷ್ಯಾ ಲಯನ್ಸ್‌ಗೆ ರೋಚಕ ಜಯ

ಮಾರ್ಕಸ್ ಸ್ಟೋಯ್ನಿಸ್ ಗೆ 9.2 ಕೋಟಿ ರೂಪಾಯಿ

ಮಾರ್ಕಸ್ ಸ್ಟೋಯ್ನಿಸ್ ಗೆ 9.2 ಕೋಟಿ ರೂಪಾಯಿ

ಮತ್ತೊಂದೆಡೆ ಆಸ್ಟ್ರೇಲಿಯಾ ಮೂಲದ ಮಾರ್ಕಸ್ ಸ್ಟೋಯ್ನಿಸ್ 9.2 ಕೋಟಿ ರೂಪಾಯಿ ಲಕ್ನೋ ಫ್ರಾಂಚೈಸಿ ಪರ ವಾಲಿದ್ದಾರೆ. ಅನ್‌ಕ್ಯಾಪ್ಡ್‌ ಪ್ಲೇಯರ್‌ ರವಿ ಬಿಷ್ಣೋಯಿ 4 ಕೋಟಿ ರೂಪಾಯಿಗೆ ಐಪಿಎಲ್ 2022ರ ಸೀಸನ್‌ನಲ್ಲಿ ಲಕ್ನೋ ಪರ ಆಡಲಿದ್ದಾರೆ.

ಲಕ್ನೋ ತಂಡವು 59.89 ಕೋಟಿ ರೂಪಾಯಿಗಳ ಪರ್ಸ್‌ನೊಂದಿಗೆ ಐಪಿಎಲ್ 2022ರ ಆಟಗಾರರ ಹರಾಜಿಗೆ ತೆರಳಲಿದೆ.

ಮಾರ್ಕೊ ಸ್ಟೊಯ್ನಿಸ್ ಮತ್ತು ರವಿ ಬಿಷ್ಣೊಯ್ ಐಪಿಎಲ್ ರೆಕಾರ್ಡ್ಸ್

ಮಾರ್ಕೊ ಸ್ಟೊಯ್ನಿಸ್ ಮತ್ತು ರವಿ ಬಿಷ್ಣೊಯ್ ಐಪಿಎಲ್ ರೆಕಾರ್ಡ್ಸ್

ಮಾರ್ಕೊ ಸ್ಟೊಯ್ನಿಸ್ 2015 ರಿಂದ ಕಳೆದ ಋತುವಿನವರೆಗೆ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಿದ್ದರು. ಅವರು 27 ಪಂದ್ಯಗಳಲ್ಲಿ 441 ರನ್‌ಗಳಿಗೆ 44 ವಿಕೆಟ್‌ಗಳನ್ನು ಪಡೆದರು. ವಿಶೇಷವಾಗಿ ಕಳೆದ ಎರಡು ಸೀಸನ್‌ಗಳಲ್ಲಿ ಅವರು ಉತ್ತಮ ಟಚ್‌ನಲ್ಲಿದ್ದಾರೆ.

ಈ ಹಿಂದೆ ಆರ್‌ಸಿಬಿ ಜೊತೆಗೆ ಕಿಂಗ್ಸ್ ಪಂಜಾಬ್ ಪರ ಕೂಡ ಈತ ಆಡಿದ್ದ. 2020ರ ಅಂಡರ್-19 ವಿಶ್ವಕಪ್ ಮೂಲಕ ಎಲ್ಲರ ಗಮನ ಸೆಳೆದಿದ್ದ ರವಿ ಬಿಷ್ಣೋಯ್ ಅವರನ್ನು ಪಂಜಾಬ್ ಕಿಂಗ್ಸ್ ಕಣಕ್ಕಿಳಿಸಿತು. ಐಪಿಎಲ್ 2021 ರ ಋತುವಿನಲ್ಲಿ 12 ವಿಕೆಟ್‌ಗಳನ್ನು ಪಡೆದ ಬಿಷ್ಣೋಯ್, ತಮ್ಮ ನಾಯಕ KL ರಾಹುಲ್ ಅವರೊಂದಿಗೆ ಲಕ್ನೋವನ್ನು ಸೇರಿಕೊಂಡರು.

ಐಪಿಎಲ್ 2022: ಫ್ರಾಂಚೈಸಿ ಮಾಲೀಕರ ಸಭೆ ಕರೆದ ಬಿಸಿಸಿಐ

ಕೊಹ್ಲಿ ರಾಹುಲ್ ಮಧ್ಯೆ ವೈಮನಸ್ಸಿದೆ ಅನ್ನೋದಕ್ಕೆ ಸಾಕ್ಷಿಯಾಯ್ತು ಈ ಘಟನೆ | Oneindia Kannada
ಅಹಮದಾಬಾದ್‌ ಫ್ರಾಂಚೈಸಿಗೆ 15 ಕೋಟಿಗೆ ಬಿಕರಿಯಾದ ಹಾರ್ದಿಕ್ ಪಾಂಡ್ಯ

ಅಹಮದಾಬಾದ್‌ ಫ್ರಾಂಚೈಸಿಗೆ 15 ಕೋಟಿಗೆ ಬಿಕರಿಯಾದ ಹಾರ್ದಿಕ್ ಪಾಂಡ್ಯ

ಈಗಾಗಲೇ ವರದಿಯಾಗಿರುವಂತೆ, ಅಹಮದಾಬಾದ್ ಫ್ರಾಂಚೈಸ್ ಹಾರ್ದಿಕ್ ಪಾಂಡ್ಯ (15 ಕೋಟಿ ರೂಪಾಯಿ), ರಶೀದ್ ಖಾನ್ (15 ಕೋಟಿ ರೂಪಾಯಿ) ಮತ್ತು ಶುಬ್ಮನ್ ಗಿಲ್ (8 ಕೋಟಿ ರೂಪಾಯಿ) ಪಡೆಯುವ ಮೂಲಕ ಅಹಮದಾಬಾದ್ ತಂಡಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ 52 ಕೋಟಿ ರೂಪಾಯಿಗಳ ಪರ್ಸ್‌ನೊಂದಿಗೆ ಹರಾಜಿಗೆ ತೆರಳಲಿದೆ.

ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮೆಗಾ ಹರಾಜಿಗೂ ಮೊದಲು ಎರಡು ಹೊಸ ತಂಡಗಳು ತಲಾ ಮೂರು ಆಟಗಾರರನ್ನು ಪಡೆಯಲು ಅನುಮತಿಸಲಾಗಿತ್ತು.

For Quick Alerts
ALLOW NOTIFICATIONS
For Daily Alerts
Story first published: Saturday, January 22, 2022, 10:27 [IST]
Other articles published on Jan 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X