ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೊಸ ಇನ್ನಿಂಗ್ಸ್ ನಲ್ಲೂ ಮಿಂಚುತ್ತಿರುವ ಕೆಎಲ್ ರಾಹುಲ್

By Mahesh
KL Rahul success in his new innings Team Indias Instagram account

ಬೆಂಗಳೂರು, ಜುಲೈ 06: ಕರ್ನಾಟಕದ ಯುವ ಪ್ರತಿಭೆ ಕೆ. ಎಲ್. ರಾಹುಲ್ ಅವರು ಕ್ರಿಕೆಟ್ ಮೈದಾನದಲ್ಲಿ ಮಿಂಚುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದೇ ರೀತಿ ಮೈದಾನದ ಹೊರಗೂ ಅವರ ಅಭಿಮಾನಿಗಳ ಸಂಖ್ಯೆ ಪ್ರತಿ ದಿನ ಬೆಳೆಯುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ರಾಹುಲ್ ಅವರಿಗೆ ಟೀಂ ಇಂಡಿಯಾದಿಂದ ಹೊಸ ಇನ್ನಿಂಗ್ಸ್ ಆರಂಭಿಸಲು ಸೂಚಿಸಲಾಗಿದೆ.

#TeamIndia boys sweating it out in the nets ahead of the 2nd T20I against England. #ENGvIND

A post shared by Team India (@indiancricketteam) on



ಭಾರತ ಕ್ರಿಕೆಟ್ ತಂಡದ ಅಧಿಕೃತ ಇನ್​​ಸ್ಟಾಗ್ರಾಂ ಖಾತೆಯನ್ನು ನಿಭಾಯಿಸುವ ಜವಾಬ್ದಾರಿ ನೀಡಲಾಗಿದೆ. ಕಳೆದ ಐದಾರು ದಿನಗಳಿಂದ ಅಧಿಕೃತ ಖಾತೆಯನ್ನು ರಾಹುಲ್ ಅವರು ನಿಭಾಯಿಸುತ್ತಿದ್ದು, ಇದರಲ್ಲೂ ಒಳ್ಳೆ ಸ್ಕೋರ್ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದ ರಾಹುಲ್, 'ಜುಲೈ 1ರಿಂದ ಭಾರತೀಯ ಕ್ರಿಕೆಟ್ ತಂಡದ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯನ್ನು ನಾನು ನಿಭಾಯಿಸುತ್ತಿದ್ದೇನೆ.



ಇನ್ನು ಮುಂದೆ ನಿಮಗಾಗಿ ತಂಡದ ಪ್ರಾಕ್ಟೀಸ್ ಸೆಷನ್, ಮೋಜು ಮಸ್ತಿಗಳ ಅಪ್ಡೇಟ್ ಮಾಡುತ್ತೇನೆ' ಎಂದಿದ್ದರು. ಸಾಮಾಜಿಕ ಜಾಲ ತಾಣಗಳ ಮೂಲಕ ಅಭಿಮಾನಿಗಳ ಜತೆ ಉತ್ತಮ ಸಂವಾದ, ಸಂವಹನ ಹೊಂದಬಹುದು ಎಂಬ ಆಶಯ ಹೊಂದಿದ್ದಾರೆ.

ಕೆಎಲ್ ರಾಹುಲ್ ಅವರ ಇನ್​ಸ್ಟಾಗ್ರಾಂನಲ್ಲಿ ಖಾತೆಯಲ್ಲಿ 20 ಲಕ್ಷಕ್ಕೂ ಅಧಿಕ ಹಿಂಬಾಲಕರಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗಾಗಿ ತಂಡದ ಸದಸ್ಯರು ನಡೆಸಿರುವ ಅಭ್ಯಾಸ, ಆಟಗಾರರ ಸಾಧನೆ, ಹುಟ್ಟುಹಬ್ಬ ಆಚರಣೆ ಮುಂತಾದ ವಿಷಯಗಳನ್ನು ಹಂಚಿಕೊಳ್ಳಲಾಗಿದೆ. ಸರಾಸರಿ 2 ಲಕ್ಷದಂತೆ ಲೈಕ್ಸ್ ಸಿಕ್ಕಿವೆ.

Story first published: Friday, July 6, 2018, 21:11 [IST]
Other articles published on Jul 6, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X