ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಪಂಜಾಬ್‌ ತಂಡದಿಂದ ಹೊರಕ್ಕೆ, ಲಖನೌ ತಂಡವನ್ನ ಮುನ್ನೆಡೆಸಲಿದ್ದಾರೆ ಕೆ.ಎಲ್ ರಾಹುಲ್?

KL RAHUL IPL
KL Rahul ಹಾಗು Pandya ಇಬ್ಬರು ಮುಂದಿನ IPLಗೆ ಹೊಸ ತಂಡ ಸೇರಲಿದ್ದಾರೆ | Oneindia Kannada

2022ರ ಏಪ್ರಿಲ್‌ನಲ್ಲಿ ಪ್ರಾರಂಭಗೊಳ್ಳಲಿದೆ ಎನ್ನಲಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್ ತಯಾರಿ ಈಗಾಗಲೇ ಚುರುಕುಗೊಂಡಿದೆ. ಫ್ರಾಂಚೈಸಿಗಳು ಆಟಗಾರರನ್ನ ರೀಟೇನ್ ಮಾಡಿಕೊಳ್ಳುವುದನ್ನ ಬಹುತೇಕ ಫೈನಲ್ ಮಾಡಿದ್ದು, ನಾಲ್ವರು ಸ್ಟಾರ್ ಆಟಗಾರರನ್ನ ಫ್ರಾಂಚೈಸಿಗಳು ರೀಟೇನ್ ಮಾಡಿಕೊಳ್ಳುತ್ತಿವೆ.

ಇದೇ ಸಾಲಿನಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ ಪಂಜಾಬ್ ಕಿಂಗ್ಸ್‌ ನಾಯಕ ಹಾಗೂ ಪ್ರಮುಖ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ತಂಡದಿಂದ ಹೊರಬೀಳಲಿದ್ದು, ಐಪಿಎಲ್ 2022ರ ಹೊಸ ಫ್ರಾಂಚೈಸಿ ಲಖನೌ ತಂಡವನ್ನ ಮುನ್ನೆಡೆಸಲಿದ್ದಾರೆ ಎಂದು ವರದಿಯಾಗಿದೆ.

ಲಕ್ನೋ ಮತ್ತು ಅಹಮದಾಬಾದ್‌ಗಳನ್ನು ಎರಡು ಹೊಸ ಐಪಿಎಲ್ ಫ್ರಾಂಚೈಸಿಗಳಾಗಿ ಆಯ್ಕೆ ಮಾಡಲಾಗಿದ್ದು, ಅವುಗಳ ಮಾಲೀಕರು ಸ್ಟಾರ್ ಆಟಗಾರರೊಂದಿಗೆ ಮಾತನಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿವೆ. ಇದರ ಜೊತೆಗೆ ವರದಿಗಳ ಪ್ರಕಾರ, ಕೆ.ಎಲ್ ರಾಹುಲ್ ಲಕ್ನೋ ಜೊತೆಗಿನ ಒಪ್ಪಂದವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ನವೆಂಬರ್ 30ರೊಳಗೆ ಆಟಗಾರರನ್ನ ರೀಟೇನ್ ಮಾಡಿಕೊಳ್ಳಬೇಕು!

ನವೆಂಬರ್ 30ರೊಳಗೆ ಆಟಗಾರರನ್ನ ರೀಟೇನ್ ಮಾಡಿಕೊಳ್ಳಬೇಕು!

ಬಿಸಿಸಿಐನ ನೀತಿಯ ಪ್ರಕಾರ, ಫ್ರಾಂಚೈಸಿಗಳು ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು ಮತ್ತು ಅಂತಿಮ ಪಟ್ಟಿಯನ್ನು ನವೆಂಬರ್ 30 ರೊಳಗೆ ತಂಡಗಳು ಸಲ್ಲಿಸಬೇಕು. ಮುಂದಿನ ತಿಂಗಳು ಮೆಗಾ ಹರಾಜಿಗೆ ಎಲ್ಲಾ ಸಿದ್ಧವಾಗಿರುವುದರಿಂದ, ಯಾವ ತಂಡಗಳು ಮುಂದಿನ ಸೀಸನ್‌ಗಳಿಗೆ ಯಾವ ನಾಲ್ಕು ಪ್ರಮುಖ ಆಟಗಾರರನ್ನ ಉಳಿಸಿಕೊಳ್ಳಲಿದೆ ಎಂದು ಕಾದು ನೋಡಬೇಕು.

ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್‌: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ LIVE SCORE

ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಯಾವೆಲ್ಲಾ ಆಟಗಾರರು ರೀಟೇನ್?

ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಯಾವೆಲ್ಲಾ ಆಟಗಾರರು ರೀಟೇನ್?

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ರಿಷಬ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ ಮತ್ತು ಸ್ಟಾರ್ ವೇಗಿ ಅನ್ರಿಚ್ ಮೊರ್ಟ್ಜೆಯನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ ಎಂದು ನಿರ್ಧರಿಸಿದೆ. ವರದಿಗಳ ಪ್ರಕಾರ, ಶ್ರೇಯಸ್ ಅಯ್ಯರ್ ಫ್ರಾಂಚೈಸಿಯನ್ನು ಮುನ್ನಡೆಸಲು ಬಯಸಿದ್ದರು, ಆದರೆ ಕ್ಯಾಪಿಟಲ್ಸ್ ತಂಡ ಪಂತ್ ಅವರೊಂದಿಗೆ ಮುಂದುವರಿಯಲು ಬಯಸಿದೆ.

ಧೋನಿ ಮೂರು ವರ್ಷಗಳ ಕಾಲ ರೀಟೇನ್?

ಧೋನಿ ಮೂರು ವರ್ಷಗಳ ಕಾಲ ರೀಟೇನ್?

ಚೆನ್ನೈ ಸೂಪರ್ ಕಿಂಗ್ಸ್‌ ಚಾಂಪಿಯನ್ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನ ಮೂರು ಸೀಸನ್‌ಗೆ ರೀಟೇನ್ ಮಾಡಿಕೊಂಡಿದೆ ಎನ್ನಲಾಗಿದೆ. ಇವರ ಜೊತೆಗೆ 2021ರ ಐಪಿಎಲ್ ಸೀಸನ್‌ನ ಆರೆಂಜ್ ಕ್ಯಾಪ್ ವಿನ್ನರ್ ರುತುರಾಜ್ ಗಾಯಕ್ವಾಡ್, ಆಲ್‌ರೌಂಡರ್ ರವೀಂದ್ರ ಜಡೇಜಾ, ಜೊತೆಗೆ ಮತ್ತೊಬ್ಬ ಆಲ್‌ರೌಂಡರ್ ಮೋಯಿನ್ ಅಲಿ, ಇಲ್ಲವೇ ಸ್ಯಾಮ್ ಕರನ್ ಮೇಲೆ ನಾಲ್ಕನೇ ಆಯ್ಕೆಯನ್ನು ಇಟ್ಟುಕೊಂಡಿದೆ.

ಐಪಿಎಲ್ 2022 ರಿಟೆನ್ಷನ್: ತಂಡದಿಂದ ಸ್ಟಾರ್ ಆಟಗಾರ ಔಟ್; ಈ 4 ಆಟಗಾರರು ಸೇಫ್

ಹಾರ್ದಿಕ್ ಪಾಂಡ್ಯರನ್ನ ಕೈ ಬಿಟ್ಟಿದ್ಯಾ ಮುಂಬೈ ಇಂಡಿಯನ್ಸ್‌?

ಹಾರ್ದಿಕ್ ಪಾಂಡ್ಯರನ್ನ ಕೈ ಬಿಟ್ಟಿದ್ಯಾ ಮುಂಬೈ ಇಂಡಿಯನ್ಸ್‌?

ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಳೆದ ಸೀಸನ್‌ನಲ್ಲಿ ಸಾಧಾರಣ ಪ್ರದರ್ಶನ ತೋರಿ ಲೀಗ್ ಹಂತದಲ್ಲೇ ಹೊರಬಿದ್ದಿತು. ಪ್ಲೇ ಆಫ್‌ನಲ್ಲಿ ಮುಂಬೈ ಮುಗ್ಗರಿಸಿಲು ಪ್ರಮುಖ ಆಟಗಾರರು ತಮ್ಮ ಪ್ರದರ್ಶನ ತೋರಲು ವಿಫಲಗೊಂಡ್ರು. ಹೀಗಾಗಿ ಮುಂದಿನ ಸೀಸನ್‌ಗಳಿಗೆ ಮುಂಬೈ ಯಾವ ನಾಲ್ಕು ಆಟಗಾರರನ್ನ ರೀಟೇನ್ ಮಾಡಿಕೊಳ್ಳಲಿದೆ ಎಂಬ ವರದಿ ಹೊರಬಂದಿದೆ.

ನಾಯಕ ರೋಹಿತ್ ಶರ್ಮಾ, ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ, ಪ್ರಮುಖ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಮತ್ತು ಸ್ಫೋಟಕ ಆಲ್‌ರೌಂಡರ್ ಕೀರನ್ ಪೊಲಾರ್ಡ್‌ರನ್ನ ಮೆಗಾ ಹರಾಜಿನಲ್ಲಿ ರೀಟೇನ್ ಮಾಡಿಕೊಳ್ಳಲಿದೆ ಎಂದು ಸುದ್ದಿಯಾಗಿದೆ. ಇದರಿಂದಾಗಿ ಫಾರ್ಮ್ ವೈಫಲ್ಯ ಅನುಭವಿಸಿರುವ ಹಾರ್ದಿಕ್ ಪಾಂಡ್ಯರನ್ನ ತಂಡವು ಕೈ ಬಿಡಲಿದೆ ಎನ್ನಲಾಗಿದೆ.

ಕಳೆದ ಸೀಸನ್‌ನಲ್ಲಿ ಮುಂಬೈ ಪರ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಎಡವಿದ್ದ ಹಾರ್ದಿಕ್ ಪಾಂಡ್ಯರನ್ನ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯಿಂದಲೂ ಕೈ ಬಿಡಲಾಗಿತ್ತು. ಐಪಿಎಲ್‌ನಲ್ಲಿ ಒಂದೂ ಓವರ್ ಬೌಲಿಂಗ್ ಮಾಡದ ಪಾಂಡ್ಯರನ್ನ ಮುಂಬೈ ಮತ್ತೆ ತನ್ನ ತಂಡಕ್ಕೆ ಸೇರಿಸಿಕೊಳ್ಳಲಿದ್ಯಾ ಎನ್ನುವುದು ನಿಜಕ್ಕೂ ಪ್ರಶ್ನೆಯಾಗಿದೆ

Story first published: Thursday, November 25, 2021, 10:07 [IST]
Other articles published on Nov 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X