ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆ.ಎಲ್ ರಾಹುಲ್‌ನಂತಾ ಅದ್ಭುತ ಆಟಗಾರ ಎಲ್ಲಾ ಮಾದರಿಯಲ್ಲೂ ಆಡಬೇಕು: ದೀಪ್‌ದಾಸ್ ಗುಪ್ತಾ

Kl Rahul Too Good A Player To Not Be Playing All 3 Formats: DeepDas gupta

ಟೀಮ್ ಇಂಡಿಯಾದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಮಿಂಚು ಹರಿಸುತ್ತಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸುವ ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಾನವನ್ನು ಪಡೆಯಲು ಕಷ್ಟಪಡುತ್ತಿದ್ದಾರೆ. ಕೆ.ಎಲ್ ರಾಹುಲ್ ಆಟದ ಬಗ್ಗೆ ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ದೀಪ್‌ದಾಸ್‌ ಗುಪ್ತ ಪ್ರಶಂಸೆಯ ಮಾತನ್ನಾಡಿದ್ದಾರೆ.

ಕೆಎಲ್ ರಾಹುಲ್ ನಂತಾ ಆಟಗಾರು ಟೀಮ್ ಇಂಡಿಯಾಗೆ ಮೂರೂ ಮಾದರಿಯಲ್ಲೂ ಅವಶ್ಯಕವಿದ್ದಾರೆ ಎಂದು ದೀಪ್‌ದಾಸ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ. ಆದರೆ ಟಿ20 ಕ್ರಿಕೆಟ್‌ನಲ್ಲಿ ಮಾತ್ರ ರಾಹುಲ್ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಜವಾಬ್ಧಾರಿಯನ್ನೂ ಹೊತ್ತುಕೊಳ್ಳಬೇಕೆಂದಿದ್ದಾರೆ.

ಯುವಿ-ಧೋನಿ ಭಾರತ ತಂಡವನ್ನು ಹೇಗೆ ಬದಲಾಯಿಸಿದರು ಎಂದು ಹೇಳಿದ ಪಾಕ್ ಮಾಜಿ ವೇಗಿಯುವಿ-ಧೋನಿ ಭಾರತ ತಂಡವನ್ನು ಹೇಗೆ ಬದಲಾಯಿಸಿದರು ಎಂದು ಹೇಳಿದ ಪಾಕ್ ಮಾಜಿ ವೇಗಿ

ಕೆಎಲ್ ರಾಹುಲ್ ಕಳೆದ ಕೆಲ ಸರಣಿಯಲ್ಲಿ ಸೀಮಿತ ಓವರ್‌ಗಳ ಪಂದ್ಯದಲ್ಲಿ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಕೂಡ ಮಾಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ರಿಷಭ್ ಪಂತ್ ಗಾಯಗೊಂಡ ಕಾರಣ ರಾಹುಲ್ ಪೂರ್ಣ ಪ್ರಮಾಣದ ವಿಕೆಟ್ ಕೀಪಿಗ್ ಜವಾಬ್ಧಾರಿಯನ್ನು ಹೊತ್ತುಕೊಂಡಿದ್ದರು.

ಬಳಿಕ ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿ ರಾಹುಲ್ ಪೂರ್ಣ ಪ್ರಮಾಣದ ಕೀಪರ್ ಆಗಿ ಅದ್ಭುತ ರೀತಿಯಲ್ಲಿ ನಿಭಾಯಿಸಿದರು. ಇದು ಸೀಮಿತ ಓವರ್‌ನಲ್ಲಿ ಕೀಪರ್ ಆಗಿ ರಾಹುಲ್ ಮುಂದುವರಿಯುವ ಚರ್ಚೆಗೆ ನಾಂದಿಯಾಯಿತು.

ವಿಚಿತ್ರ ಬ್ಯಾಟಿಂಗ್ ಶೈಲಿಯ ರಹಸ್ಯ ಬಹಿರಂಗ ಪಡಿಸಿದ ಸ್ಟೀವ್ ಸ್ಮಿತ್ವಿಚಿತ್ರ ಬ್ಯಾಟಿಂಗ್ ಶೈಲಿಯ ರಹಸ್ಯ ಬಹಿರಂಗ ಪಡಿಸಿದ ಸ್ಟೀವ್ ಸ್ಮಿತ್

ವಿಶ್ವಕಪ್‌ನ ದೃಷ್ಟಿಯಿಂದ ಕೆಎಲ್ ರಾಹುಲ್ ಭಾರತ ತಂಡಕ್ಕೆ ಅಗತ್ಯವಾದ ಆಯುಧ ಎಂದು ದೀಪ್‌ ದಾಸ್ ಗುಪ್ತಾ ಹೇಳಿದ್ದಾರೆ. ಜೊತೆಗೆ ಟೆಸ್ಟ್ ತಂಡದಲ್ಲೂ ರಾಹುಲ್ ಭಾರತ ತಂಡಕ್ಕೆ ಉಪಯುಕ್ತವಾಗಲಿದ್ದಾರೆ ಎಂದು ಮಾಜಿ ವಿಕೆಟ್ ಕೀಪರ್ ಹೇಳಿದ್ದಾರೆ.

Story first published: Monday, April 13, 2020, 17:50 [IST]
Other articles published on Apr 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X