ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಟ್ಟ ಫೀಲ್ಡಿಂಗ್‌ನಿಂದ ಮತ್ತೆ ಟ್ರಾಲ್ಗೆ ಒಳಗಾದ ಕೆ.ಎಲ್. ರಾಹುಲ್

KL Rahul trolled in twitter for his bad fielding effort against west indies

ಕೋಲ್ಕತಾ, ನವೆಂಬರ್ 5: ಪ್ರತಿಭೆ ಮತ್ತು ಕಲಾತ್ಮಕ ಶೈಲಿ ಎರಡನ್ನೂ ಒಳಗೊಂಡ ಕನ್ನಡಿಗ ಕೆ.ಎಲ್. ರಾಹುಲ್, ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ, ಅವರ ಇತ್ತೀಚಿನ ಫಾರ್ಮ್ ಕಳೆದುಕೊಂಡ ಕಾರಣಕ್ಕೆ ಪದೇ ಪದೇ ಟ್ರಾಲ್ಗೆ ಒಳಗಾಗುತ್ತಿದ್ದಾರೆ.

ದೊರೆತ ಅವಕಾಶಗಳಲ್ಲಿಯೂ ರಾಹುಲ್ ವಿಫಲರಾಗುತ್ತಿದ್ದಾರೆ. ಆಟಕ್ಕಿಂತಲೂ ಫ್ಯಾಷನ್‌ಗೆ ಅವರು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗುತ್ತಿದೆ.

ಮ್ಯಾಚ್ ಫಿಕ್ಸರ್ ಅಜರುದ್ದೀನ್‌ಗೆ ಗೌರವ ಏಕೆ?: ಬಿಸಿಸಿಐ ವಿರುದ್ಧ ಗಂಭೀರ್ ಕಿಡಿಮ್ಯಾಚ್ ಫಿಕ್ಸರ್ ಅಜರುದ್ದೀನ್‌ಗೆ ಗೌರವ ಏಕೆ?: ಬಿಸಿಸಿಐ ವಿರುದ್ಧ ಗಂಭೀರ್ ಕಿಡಿ

ಇತ್ತೀಚೆಗೆ ಅವರು ಸ್ಟೈಲಿಶ್ ಆಗಿರುವ ಫೋಟೊವೊಂದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಅನೇಕ ಫಾಲೋವರ್‌ಗಳು ಲೇವಡಿ ಮಾಡಿದ್ದರು. ಫ್ಯಾಷನ್‌ಗಿಂತ ರನ್ ಗಳಿಸುವುದರ ಕಡೆಗೆ ಗಮನ ನೀಡಿ. ನೀವು ಕ್ರಿಕೆಟರ್, ರೂಪದರ್ಶಿ ಅಲ್ಲ ಎಂದು ಟ್ರಾಲ್ ಮಾಡಿದ್ದರು.

ಈ ನಡುವೆ ರಾಹುಲ್, ಆಡುವ ಅವಕಾಶಗಳನ್ನು ಅಷ್ಟಾಗಿ ಪಡೆದುಕೊಳ್ಳುತ್ತಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20ಯಲ್ಲಿ ಆಡಿದರೂ ಮತ್ತೆ ಫಾರ್ಮ್‌ಗೆ ಮರಳುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲಿಲ್ಲ. ಬ್ಯಾಟಿಂಗ್‌ಗಿಂತಲೂ ಅವರು ಮಾಡಿದ ಕಳಪೆ ಫೀಲ್ಡಿಂಗ್ ಮತ್ತೆ ಟ್ರಾಲ್‌ಗೆ ಒಳಗಾಗಿದೆ. ಕ್ರಿಕೆಟ್ ಅಭಿಮಾನಿಗಳು ರಾಹುಲ್ ಕ್ಷೇತ್ರರಕ್ಷಣೆಯ ಪ್ರಯತ್ನವನ್ನು ಟೀಕಿಸಿದ್ದಾರೆ.

ರಣಜಿ ತಂಡದ ನಾಯಕತ್ವ ತೊರೆದ ಗೌತಮ್ ಗಂಭೀರ್ರಣಜಿ ತಂಡದ ನಾಯಕತ್ವ ತೊರೆದ ಗೌತಮ್ ಗಂಭೀರ್

ಆದರೆ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಲಿಪ್‌ನಲ್ಲಿ ರಾಹುಲ್ ಅಮೋಘ ಕ್ಷೇತ್ರರಕ್ಷಣೆ ಮಾಡಿದ್ದರು ಎನ್ನುವುದನ್ನು ಮರೆಯುವಂತಿಲ್ಲ.

ಸುಲಭದ ರನೌಟ್ ಅವಕಾಶ

ಖಲೀಲ್ ಬೌಲಿಂಗ್‌ನಲ್ಲಿ ಶಾಯ್ ಹೋಪ್ ಬಾರಿಸಿದ ಚೆಂಡು ಸಮೀಪದಲ್ಲಿಯೇ ಇದ್ದ ರಾಹುಲ್ ಅವರ ಕೈ ಸೇರಿತು. ರನ್‌ಗಾಗಿ ಗಡಿಬಿಡಿ ಮಾಡಿದ್ದ ಶಾಯ್ ಹೋಪ್ ಇನ್ನೊಂದು ತುದಿಯತ್ತ ಓಡಿದರು. ಅತ್ತ ಇದ್ದ ಶಿಮ್ರೋನ್ ಹೆಟ್ಮೇರ್ ಮೊದಲು ರನ್‌ಗಾಗಿ ಯೋಚಿಸಿದರೂ ಬಳಿಕ ವಾಪಸ್ ತಮ್ಮ ಕ್ರೀಸ್‌ನತ್ತ ಮರಳಿದ್ದರು.

ಇಬ್ಬರೂ ಬ್ಯಾಟ್ಸ್‌ಮನ್‌ಗಳು ಒಂದೇ ತುದಿಯಲ್ಲಿ ಇದ್ದರೆ, ಇತ್ತ ವಿಕೆಟ್ ಕೀಪರ್‌ ಕಡೆಗೆ ರಾಹುಲ್ ಎಸೆದ ಚೆಂಡು ಕೀಪರ್ ದಿನೇಶ್ ಕಾರ್ತಿಕ್ ಅವರ ಜಿಗಿತಕ್ಕೂ ಸಿಗದಷ್ಟು ಎತ್ತರದಲ್ಲಿತ್ತು. ಅದೃಷ್ಟವಶಾತ್ ಕಾರ್ತಿಕ್ ಹಿಂದಿನಿಂದ ಕವರ್ ಮಾಡಿದ ಮನೀಶ್ ಪಾಂಡೆ, ಚೆಂಡು ಹಿಡಿದು ರನೌಟ್ ಮಾಡಿದರು. ಒಂದು ವೇಳೆ ಮನೀಶ್ ಪಾಂಡೆ ಸಮಯ ಪ್ರಜ್ಞೆ ಮೆರೆಯದೆ ಹಿಂದೆ ಬಾರದೆ ಇದ್ದಿದ್ದರೆ ಸುಲಭದ ರನೌಟ್ ಅವಕಾಶ ಕೈತಪ್ಪುತ್ತಿತ್ತು.

ಕೆಟ್ಟ ಫೀಲ್ಡಿಂಗ್

ಕೆಎಲ್ ರಾಹುಲ್ ಇಂದು ಮೈದಾನದಲ್ಲಿ ಕಳಪೆ ಪ್ರದರ್ಶನ ನೀಡಿದರು. ಮೊದಲು, ತಮ್ಮ ಕೆಟ್ಟ ಎಸೆತದಿಂದ ರನೌಟ್ ಅವಕಾಶವನ್ನು ಹೆಚ್ಚೂ ಕಡಿಮೆ ಮಿಸ್ ಮಾಡಿದ್ದರು. ಬಳಿಕ ಬೌಂಡರಿಯಲ್ಲಿ ಎತ್ತರದ ಕ್ಯಾಚ್‌ಅನ್ನು ಕೈಚೆಲ್ಲಿದರು. ಅವರು ತಮ್ಮ ಫೀಲ್ಡಿಂಗ್ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ ಎಂದು ತೇಜನ್ ಗುಪ್ತಾ ಟ್ವೀಟ್ ಮಾಡಿದ್ದಾರೆ.

ಕೊಹ್ಲಿಗೆ 30: 'ನಿನ್ನನ್ನು ಹುಟ್ಟಿಸಿದ ದೇವರಿಗೆ ಥ್ಯಾಂಕ್ಸ್‌' ಎಂದ ಅನುಷ್ಕಾ

ನಗೆ ಪ್ರಹಸನ

ಕೆಎಲ್ ರಾಹುಲ್ ಅವರ ನಗೆಯುಕ್ಕಿಸುವ ಎಸೆತ, ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳು ಒಂದೇ ಕ್ರೀಸ್‌ಕಡೆಗೆ ಓಡಿದ ಹಾಸ್ಯ... ಎಂತಹ ಪ್ರಹಸನ ಎಂದು ಅರುಣ್ ರತ್ನಂ ಟ್ವೀಟಿಸಿದ್ದಾರೆ.

ಪಾಂಡೆಗೆ ಶ್ರೇಯಸ್ಸು

ಆ ಥ್ರೋ ಎಷ್ಟು ಕೆಟ್ಟದಾಗಿತ್ತು ಎಂದರೆ, ರನೌಟ್ ಮಾಡಿದ್ದು ಮನೀಶ್ ಪಾಂಡೆ ಎಂದೇ ಪರಿಗಣಿಸಿದ್ದಾರೆಯೇ ಹೊರತು ಕೆಎಲ್ ರಾಹುಲ್ ಎಂದು ಅಲ್ಲ ಎಂಬುದಾಗಿ ಮನೀಶ್ ಎಂಬುವವರು ತಮಾಷೆ ಮಾಡಿದ್ದಾರೆ.

ವೈರಲ್ ವಿಡಿಯೋ: ಧೋನಿಯ ಹೆಲಿಕಾಪ್ಟರ್ ಶಾಟ್ ಕದ್ದ ಆಸೀಸ್‌ನ ಸ್ಮಿತ್!

ಕರ್ನಾಟಕ-ತಮಿಳುನಾಡು

ಅದು ಕೆಎಲ್ ರಾಹುಲ್ ಅವರ ಎಸೆತ. ಕರ್ನಾಟಕ ಸೊಗಸಾಗಿ ತಮಿಳುನಾಡನ್ನು ನಿರ್ಲಕ್ಷಿಸಿದೆ ಎಂದು ವಿನಾಯಕ್ ಕೆ ಎಂಬುವವರು ಎರಡು ರಾಜ್ಯಗಳ ವಿವಾದದ ಎಳೆಯನ್ನು ನೆನಪಿಸಿದ್ದಾರೆ. ತಮಿಳುನಾಡು ಮತ್ತು ಕರ್ನಾಟಕಗಳ ನಡುವೆ ಯಾವಾಗಲೂ ಸಂವಹನದ ಕೊರತೆ ಸ್ವಲ್ಪ ಇರುತ್ತದೆಯಲ್ಲವೇ ಎಂಬ ವೀಕ್ಷಕ ವಿವರಣೆಗಾರ ಸುನಿಲ್ ಗವಾಸ್ಕರ್ ಅವರ ಹೇಳಿಕೆಯನ್ನೂ ಅವರು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಕೊಹ್ಲಿ ಥರ ಕಾಣುವುದಕ್ಕೆ...

ಕೆಎಲ್ ರಾಹುಲ್ ತಂಡದಲ್ಲಿ ಇರುವುದು ದೂರದಿಂದ ಅವರು ವಿರಾಟ್ ಕೊಹ್ಲಿ ತರಹ ಕಾಣಿಸುತ್ತಾರೆ ಎಂಬ ಕಾರಣಕ್ಕೆ ಮಾತ್ರ ಎಂದು ಸೌರಭ್ ಕುಮಾರ್ ಎಂಬುವವರು ಟ್ರಾಲ್ ಮಾಡಿದ್ದಾರೆ.

Story first published: Monday, November 5, 2018, 16:42 [IST]
Other articles published on Nov 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X