ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತನ್ನ ಫಿಟ್ನೆಸ್ ಕುರಿತು ಪ್ರಮುಖ ಮಾಹಿತಿ ನೀಡಿದ ಕೆ.ಎಲ್‌ ರಾಹುಲ್‌: ಟೀಂ ಇಂಡಿಯಾ ಕಂಬ್ಯಾಕ್ ಯಾವಾಗ?

KL Rahul

ಟೀಂ ಇಂಡಿಯಾ ಓಪನರ್ ಕೆ.ಎಲ್ ರಾಹುಲ್‌ ವಿಂಡೀಸ್ ಟಿ20 ಸರಣಿಯನ್ನೂ ಮಿಸ್ ಮಾಡಿಕೊಂಡ ಬಳಿಕ ಜಿಂಬಾಬ್ವೆ ಪ್ರವಾಸವನ್ನಾದ್ರೂ ಮಾಡಬಹುದು ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದರು. ಆದ್ರೆ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೂ ರಾಹುಲ್ ಆಯ್ಕೆಗೊಳ್ಳುವಲ್ಲಿ ವಿಫಲಗೊಂಡಿದ್ದಾರೆ. ಹೀಗಾಗಿ ಕೆ.ಎಲ್ ಫಿಟ್ನೆಸ್ ಕುರಿತಾಗಿ ಸಾಕಷ್ಟು ವದಂತಿಗಳು, ಸುದ್ದಿಗಳು ಹರಿದಾಡಿದ್ದವು.

ಈ ಎಲ್ಲಾ ವದಂತಿಗಳ ಕುರಿತಾಗಿ ಸ್ಪಷ್ಟನೆ ನೀಡಿರುವ ಕೆ.ಎಲ್ ರಾಹುಲ್ ತಾನು ಸಂಫೂರ್ಣವಾಗಿ ಫಿಟ್ನೆಸ್‌ ಮರಳಲಿದ್ದು, ಸದ್ಯದಲ್ಲೇ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಲಿದ್ದೇನೆ ಎಂಬ ಸಂದೇಶ ನೀಡಿದ್ದಾರೆ. ಜೊತೆಗೆ ಫಿಟ್ನೆಸ್ ಕುರಿತಾಗಿಯೂ ಅಪ್‌ಡೇಟ್ ನೀಡಿದ್ದಾರೆ.

ಆರೋಗ್ಯ ಮತ್ತು ಫಿಟ್ನೆಸ್ ಕುರಿತಾಗಿ ಕೆ.ಎಲ್ ರಾಹುಲ್ ಟ್ವೀಟ್

ಆರೋಗ್ಯ ಮತ್ತು ಫಿಟ್ನೆಸ್ ಕುರಿತಾಗಿ ಕೆ.ಎಲ್ ರಾಹುಲ್ ಟ್ವೀಟ್

'' ನನ್ನ ಆರೋಗ್ಯ ಮತ್ತು ಫಿಟ್ನೆಸ್‌ ಕುರಿತಾಗಿ ಕೆಲವೊಂದು ವಿಚಾರಗಳನ್ನ ಹಂಚಿಕೊಳ್ಳಲು ಬಯಸುತ್ತೇನೆ. ಜೂನ್‌ನಲ್ಲಿ ಯಶಸ್ವಿಯಾಗಿ ನನಗೆ ಸರ್ಜರಿ ಆಗಿದೆ ಮತ್ತು ರಾಷ್ಟ್ರೀಯ ತಂಡಕ್ಕೆ ಮರಳಲು ಸಾಕಷ್ಟು ಪ್ರಯತ್ನ ನಡೆಸಿದ್ದೆ ಮತ್ತು ವೆಸ್ಟ್ ಇಂಡೀಸ್‌ ಪ್ರವಾಸಕ್ಕೆ ತೆರಳುವ ತಯಾರಿ ನಡೆಸುತ್ತಿದ್ದೆ. ದುರಾದೃಷ್ಟವಶಾತ್ ನನಗೆ ಕೋವಿಡ್‌-19 ಪಾಸಿಟಿವ್ ಆದ ಕಾರಣ ಮತ್ತೆ ಫಿಟ್ನೆಸ್ ಸಾಭೀತು ಪಡಿಸಬೇಕಾಯಿತು''

'' ಈ ಕಾರಣದಿಂದಾಗಿ ಸ್ವಭಾವಿಕವಾಗಿ ಫಿಟ್ನೆಸ್‌ಗೆ ಮರಳುವುದನ್ನ ಮುಂದೂಡಿದೆ, ಆದ್ರೆ ನಾನು ಶೀಘ್ರದಲ್ಲೇ ಚೇತರಿಸಿಕೊಳ್ಳಲಿದ್ದು, ಟೀಂ ಇಂಡಿಯಾ ಆಯ್ಕೆಗೆ ಲಭ್ಯನಿರಲಿದ್ದೇನೆ''

''ರಾಷ್ಟ್ರವನ್ನ ಪ್ರತಿನಿಧಿಸುವುದು ಬಹುದೊಡ್ಡ ಗೌರವವಾಗಿದೆ. ಹೀಗಾಗಿ ನಾನು ಮತ್ತೆ ಬ್ಲ್ಯೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲು ನನಗೆ ಕಾಯಲು ಸಾಧ್ಯವಿಲ್ಲ. ಶ್ರೀಘ್ರದಲ್ಲೇ ಕಾಣುವೆ'' ಎಂದು ಕೆ.ಎಲ್ ರಾಹುಲ್ ತಮ್ಮ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಜಿಂಬಾಬ್ವೆ ವಿರುದ್ಧ ಪ್ರವಾಸಕ್ಕೆ ಕೊಹ್ಲಿ ಜೊತೆಗೆ ರಾಹುಲ್ ಕೂಡ ಇಲ್ಲ

ಜಿಂಬಾಬ್ವೆ ವಿರುದ್ಧ ಪ್ರವಾಸಕ್ಕೆ ಕೊಹ್ಲಿ ಜೊತೆಗೆ ರಾಹುಲ್ ಕೂಡ ಇಲ್ಲ

ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಗಾದ್ರೂ ರಾಹುಲ್ ಹಾಗೂ ಕೊಹ್ಲಿ ಆಯ್ಕೆಯಾಗಬಹುದು ಎಂಬುದು ಸುಳ್ಳಾಗಿದೆ. ಶಿಖರ್ ಧವನ್ ನಾಯಕತ್ವದಲ್ಲಿ ಮುನ್ನಡೆಯುವ ತಂಡದಲ್ಲಿ ಈ ಇಬ್ಬರು ಸ್ಟಾರ್‌ಗಳ ಜೊತೆಗೆ ಬುಮ್ರಾ, ಶಮಿ ನಾಯಕ ರೋಹಿತ್ ಶರ್ಮಾ ಕೂಡ ಮಿಸ್ ಆಗಿದ್ದಾರೆ.

ಮೊದಲ ಬಾರಿಗೆ ಏಕದಿನ ಸ್ಕ್ವಾಡ್‌ನಲ್ಲಿ ರಾಹುಲ್ ತ್ರಿಪಾಠಿ ಕಾಣಿಸಿಕೊಂಡಿದ್ದು, ವಾಷಿಂಗ್ಟನ್ ಸುಂದರ್ ಮತ್ತು ದೀಪಕ್ ಚಹಾರ್ ಬಹಳ ಸಮಯದ ಬಳಿಕ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್‌ 2022: ಭಾರತದ ವನಿತೆಯರಿಗೆ ಪಾಕಿಸ್ತಾನ ವನಿತೆಯರ ಸವಾಲು

26 ಟಿ20, 9 ಏಕದಿನ ಪಂದ್ಯ ಮಿಸ್ ಮಾಡಿಕೊಂಡ ಕೆ.ಎಲ್ ರಾಹುಲ್

26 ಟಿ20, 9 ಏಕದಿನ ಪಂದ್ಯ ಮಿಸ್ ಮಾಡಿಕೊಂಡ ಕೆ.ಎಲ್ ರಾಹುಲ್

ಐಪಿಎಲ್ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದ ಕೆ.ಎಲ್ ರಾಹುಲ್ ಪಂದ್ಯ ಶುರುಗೂ ಒಂದು ದಿನ ಮೊದಲು ತೊಡೆಸಂದು ನೋವಿನಿಂದ ಇಡೀ ಸರಣಿ ಕಳೆದುಕೊಂಡರು. ಅದಾದ ಬಳಿಕ ಜರ್ಮನಿಯಲ್ಲಿ ಶಸ್ತ್ತಚಿಕಿತ್ಸೆಗೆ ಒಳಗಾದ ಕೆ.ಎಲ್ ಇಂಗ್ಲೆಂಡ್‌ ಪ್ರವಾಸ, ಐರ್ಲೆಂಡ್, ವೆಸ್ಟ್ ಇಂಡೀಸ್, ಇದೀಗ ಜಿಂಬಾಬ್ವೆ ಸರಣಿಗೂ ಅಲಭ್ಯರಾಗಿದ್ದಾರೆ.

ಈ ವರ್ಷ ಒಂದೇ ಒಂದು ಟಿ20 ಅಂತರಾಷ್ಟ್ರೀಯ ಪಂದ್ಯವನ್ನಾಡದ ಕೆ.ಎಲ್ ರಾಹುಲ್, ಇದುವರೆಗೂ ಒಟ್ಟಾರೆ 26 ಟಿ20 ಅಂತರಾಷ್ಟ್ರೀಯ ಪಂದ್ಯಗಳು ಮತ್ತು 9 ಏಕದಿನ ಪಂದ್ಯಗಳಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಕೆ.ಎಲ್ ರಾಹುಲ್‌ಗೆ ಇಂಜ್ಯುರಿ ಪದೇ ಪದೇ ಕಾಡುತ್ತಿರುವುದು ನಿಜಕ್ಕೂ ಹಿನ್ನಡೆಯಾಗಿದೆ. ಐಪಿಎಲ್‌ 2022ರ ಟೂರ್ನಿಗೂ ಮೊದಲು ಹ್ಯಾಮ್‌ಸ್ಟ್ರಿಂಗ್‌ನಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಮಿಸ್ ಆಗಿದ್ದರು. ಐಪಿಎಲ್ ಬಳಿಕ ಸಾಲು ಸಾಲು ಅಂತರಾಷ್ಟ್ರೀಯ ಕ್ರಿಕೆಟ್ ಸರಣಿಯಲ್ಲಿ ಆಡುವ ಅವಕಾಶ ವಂಚಿತರಾಗಿದ್ದಾರೆ.

ಮಹಾರಾಜ ಟ್ರೋಫಿ 2022: 6 ತಂಡಗಳು ಸೆಣಸಾಡಲಿರುವ ಹೊಸ ಕೆಪಿಎಲ್‌ನ ವೇಳಾಪಟ್ಟಿ ಪ್ರಕಟ

ಟಿ20 ವಿಶ್ವಕಪ್‌ ಪ್ಲಾನ್‌ನಿಂದಲೂ ರಾಹುಲ್ ಔಟ್‌?

ಟಿ20 ವಿಶ್ವಕಪ್‌ ಪ್ಲಾನ್‌ನಿಂದಲೂ ರಾಹುಲ್ ಔಟ್‌?

ಈ ಪರಿಸ್ಥಿತಿಯಲ್ಲಿ ಕೆಎಲ್ ರಾಹುಲ್ ವೆಸ್ಟ್ ಇಂಡೀಸ್ ಸರಣಿಯಿಂದ ಮಾತ್ರವಲ್ಲದೆ ಟಿ20 ವಿಶ್ವಕಪ್ ತಂಡದಿಂದಲೂ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಈ ವರ್ಷದ ಅಕ್ಟೋಬರ್ , ನವೆಂಬರ್‌ನಲ್ಲಿ ಟಿ20 ವಿಶ್ವಕಪ್‌ ಸರಣಿ ನಡೆಯಲಿದೆ. ಭಾರತ ತಂಡದ ಬಳಿ ವೆಸ್ಟ್ ಇಂಡೀಸ್ ಸರಣಿ ಮತ್ತು ಏಷ್ಯಾಕಪ್ ಮಾತ್ರ ಇದೆ. ಆದರೆ ಈ ವರ್ಷ ಕೆಎಲ್ ರಾಹುಲ್ ಒಂದೇ ಒಂದು ಟಿ20 ಅಂತರಾಷ್ಟ್ರೀಯ ಪಂದ್ಯವನ್ನೂ ಆಡಿಲ್ಲ. ಹೀಗಿರುವಾಗ ಸದ್ಯದಲ್ಲೇ ಟಿ20 ವಿಶ್ವಕಪ್‌ಗೆ ಸ್ಕ್ವಾಡ್ ಫೈನಲ್ ಮಾಡಬೇಕಿರುವುದರಿಂದ ರಾಹುಲ್‌ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಟಿ20 ಯೋಜನೆಯಿಂದ ಕೆ.ಎಲ್ ರಾಹುಲ್ ಹೊರಬಿದ್ದರೂ ಆಶ್ಚರ್ಯವಿಲ್ಲ.

Story first published: Sunday, July 31, 2022, 14:18 [IST]
Other articles published on Jul 31, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X