ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್: ಬಿಜಾಪುರ್ ಎದುರು ಸೋತರೂ ಪ್ಲೇ ಆಫ್ ಪ್ರವೇಶಿಸಿದ ಶಿವಮೊಗ್ಗ!

KLP 2019: Bijapur Bulls beat Shivamogga Lions by 17 runs

ಮೈಸೂರು, ಆಗಸ್ಟ್ 28: ಶಿವಮೊಗ್ಗ ಲಯನ್ಸ್ ಮತ್ತು ಬಿಜಾಪುರ್ ಬುಲ್ಸ್ ನಡುವಣ ಕರ್ನಾಟಕ ಪ್ರೀಮಿಯರ್ ಲೀಗ್ 21ನೇ ಪಂದ್ಯದಲ್ಲಿ ಬಿಜಾಪುರ್ ಬುಲ್ಸ್ 17 ರನ್ ಜಯ ಗಳಿಸಿದೆ. ಆದರೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದ ಶಿವಮೊಗ್ಗ ಲಯನ್ಸ್ ಪಂದ್ಯಗಳ ಗೆಲುವಿನ ಸಂಖ್ಯೆಯ (3) ಆಧಾರದಲ್ಲಿ ಪ್ಲೇ ಆಫ್‌ಗೆ ಪ್ರವೇಶಿಸಿದೆ.

ವಿಂಡೀಸ್ 2ನೇ ಟೆಸ್ಟ್‌ಗೆ ಪಂತ್, ಸಾಹರಲ್ಲಿ ಕಿರ್ಮಾನಿ ಆರಿಸಿದ್ಯಾರನ್ನ?!ವಿಂಡೀಸ್ 2ನೇ ಟೆಸ್ಟ್‌ಗೆ ಪಂತ್, ಸಾಹರಲ್ಲಿ ಕಿರ್ಮಾನಿ ಆರಿಸಿದ್ಯಾರನ್ನ?!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಿಜಾಪುರ್ ಬುಲ್ಸ್ ತಂಡ ರಾಜು ಭಟ್ಕಳ್ 66, ನವೀನ್ ಎಂಜಿ 68, ಸುನಿಲ್ ರಾಜು 36 ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 195 ರನ್ ಗಳಿಸಿತು. ಬುಲ್ಸ್ ಇನ್ನಿಂಗ್ಸ್‌ನಲ್ಲಿ ರಿಷಬ್ ಸಿಂಗ್ 2 ವಿಕೆಟ್‌ ಪಡೆದರು.

KPLನಲ್ಲಿ ಮೈಸೂರು ವಾರಿಯರ್ಸ್ ದಾಖಲೆ ರನ್ ಚೇಸ್KPLನಲ್ಲಿ ಮೈಸೂರು ವಾರಿಯರ್ಸ್ ದಾಖಲೆ ರನ್ ಚೇಸ್

ಗರಿಷ್ಠ ರನ್ ಗುರಿ ಬೆಂಬತ್ತಿದ ಶಿವಮೊಗ್ಗ ಲಯನ್ಸ್‌ಗೆ ಆರಂಭಿಕ ಬ್ಯಾಟ್ಸ್ಮನ್ ಅರ್ಜುನ್ ಹೊಯ್ಸಳ 69, ನಿಹಾಲ್ ಉಲ್ಲಾಳ್ 18, ಅಕ್ಷಯ್ ಬಲ್ಲಾಳ್ 22, ನಿದೀಶ್ ಎಂ ಅಜೇಯ 44 ರನ್ ಸೇರಿಸಿಯೂ ತಂಡ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 178 ರನ್ ಗಳಿಸಲಷ್ಟೇ ಶಕ್ತವಾಯ್ತು.

ICC Test Rankingನಲ್ಲಿ ಎತ್ತರಕ್ಕೇರಿದ ಆ್ಯಷಸ್ ಹೀರೋ ಬೆನ್ ಸ್ಟೋಕ್ಸ್!ICC Test Rankingನಲ್ಲಿ ಎತ್ತರಕ್ಕೇರಿದ ಆ್ಯಷಸ್ ಹೀರೋ ಬೆನ್ ಸ್ಟೋಕ್ಸ್!

ಬುಜಾಪುರ್-ಶಿವಮೊಗ್ಗ ನಡುವಿನ ಈ ಪಂದ್ಯ ಲೀಗ್ ಹಂತದ ಕೊನೇ ಪಂದ್ಯವಾಗಿತ್ತು. ಅಂತೂ ಲೀಗ್ ಕೊನೇ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಬಳ್ಳಾರಿ ಟಸ್ಕರ್ಸ್, ಬೆಳಗಾವಿ ಪ್ಯಾಂಥರ್ಸ್ ಮತ್ತು ಹುಬ್ಳಿ ಟೈಗರ್ಸ್ ಮೊದಲ ಮೂರು ಸ್ಥಾನಗಳಲ್ಲಿದ್ದು, ಈ ಮೂರೂ ಪ್ಲೇ ಆಫ್ ಪ್ರವೇಶಿಸಿವೆ.

ಕೆಪಿಎಲ್: ವಿನಯ್ ಸ್ಫೋಟಕ ಅರ್ಧಶತಕ, ಹುಬ್ಳಿಗೆ ಶರಣಾದ ಬೆಂಗಳೂರುಕೆಪಿಎಲ್: ವಿನಯ್ ಸ್ಫೋಟಕ ಅರ್ಧಶತಕ, ಹುಬ್ಳಿಗೆ ಶರಣಾದ ಬೆಂಗಳೂರು

4ನೇ ಸ್ಥಾನಿ ಶಿವಮೊಗ್ಗ -0.836, 5ನೇ ಸ್ಥಾನಿ ಮೈಸೂರು -0.323 ನೆಟ್ ರನ್ ರೇಟ್ ಹೊಂದಿದ್ದವು. ಆದರೆ ಲೀಗ್‌ನಲ್ಲಿ ಪಂದ್ಯಗಳ ಗೆಲುವನ್ನು ಆಧರಿಸಿ ಶಿವಮೊಗ್ಗ ಲಯನ್ಸ್ ಪ್ಲೇ ಆಫ್‌ಗೆ ಪ್ರವೇಶಿಸಿದೆ. ಪ್ಲೇ ಆಫ್ ಪಂದ್ಯಗಳು ಆಗಸ್ಟ್ 28ರಿಂದ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಬಳ್ಳಾರಿ-ಬೆಳಗಾವಿ, ಆಗಸ್ಟ್ 29ರ ಎಲಿಮಿನೇಟರ್‌ನಲ್ಲಿ ಹುಬ್ಳಿ ಮತ್ತು ಶಿವಮೊಗ್ಗ ಮುಖಾಮುಖಿಯಾಗಲಿವೆ.

Story first published: Wednesday, August 28, 2019, 1:01 [IST]
Other articles published on Aug 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X