ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಅಂಪೈರ್ಸ್ ಪ್ಯಾನೆಲ್‌ಗೆ ಭಾರತೀಯ ಅಂಪೈರ್ ಸೇರ್ಪಡೆ

KN Ananthapadmanabhan included in ICC’s umpires panel

ನವದೆಹಲಿ, ಆಗಸ್ಟ್ 11: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ನ ಅಂತಾರಾಷ್ಟ್ರೀಯ ಅಂಪೈರ್‌ಗಳ ಸಮಿತಿಗೆ ಭಾರತೀಯ ಅಂಪೈರ್ ಕೆಎನ್ ಅನಂತಪದ್ಮನಾಭನ್ ಸೇರ್ಪಡೆಗೊಂಡಿದ್ದಾರೆ. ಮತ್ತೊಬ್ಬ ಭಾರತೀಯ ಅಂಪೈರ್ ನಿತಿನ್ ಮೆನನ್ ಎಲೈಟ್ ಪ್ಯಾನೆಲ್‌ಗೆ ಬಡ್ತಿ ಪಡೆದ ನಂತರ ಅನಂತಪದ್ಮನಾಭನ್ ಐಸಿಸಿ ಪ್ಯಾನೆಲ್‌ಗೆ ಆರಿಸಲ್ಪಟ್ಟಿದ್ದಾರೆ.

ಸಿಪಿಎಲ್ 2020: ಈ ಬಾರಿಯ ಸಿಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಲಿರುವ ಭಾರತೀಯಸಿಪಿಎಲ್ 2020: ಈ ಬಾರಿಯ ಸಿಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಲಿರುವ ಭಾರತೀಯ

ಕೇರಳದ ಮಾಜಿ ಸ್ಪಿನ್ನರ್ ಆಗಿರುವ ಕೆಎನ್ ಅನಂತಪದ್ಮನಾಭನ್ ಅವರು ಅಂತಾರಾಷ್ಟ್ರೀಯ ಪ್ಯಾನೆಲ್‌ನಲ್ಲರುವ ಇನ್ನಿತರ ಭಾರತೀಯರಾದ ಸಿ ಸಂಶುದ್ದೀನ್, ಅನಿಲ್ ಚೌಧರಿ, ವೀರೇಂದರ್ ಶರ್ಮಾ ಅವರ ತಂಡವನ್ನು ಸೇರಿಕೊಂಡಿದ್ದಾರೆ.

ಕೆರಿಬಿಯನ್ ಪ್ರೀಮಿಯರ್ ಲೀಗ್: ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳುಕೆರಿಬಿಯನ್ ಪ್ರೀಮಿಯರ್ ಲೀಗ್: ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು

50ರ ಹರೆಯದ ಅನಂತಪದ್ಮನಾಧನ್ ಇನ್ಮುಂದೆ ಜೂನಿಯರ್ ವಿಶ್ವಕಪ್‌ ಹೊರತಾಗಿ ಏಕದಿನ ಮತ್ತು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೆ ಅಂಪೈರಿಂಗ್ ಮಾಡಲು ಅರ್ಹರಾಗಿದ್ದಾರೆ. ಈ ಮೊದಲು ಅನಂತಪದ್ಮನಾಭನ್ ಅವರು ಐಪಿಎಲ್ ಸೇರಿ ಪ್ರಮುಖ ದೇಸಿ ಕ್ರಿಕೆಟ್ ಪಂದ್ಯಗಳಿಗೆ ಅಂಪೈರಿಂಗ್ ಮಾಡಿದ್ದರು.

ಐಪಿಎಲ್ ಟೈಟಲ್ ಪ್ರಾಯೋಜಕತ್ವದ ಬಿಡ್ಡಿಂಗ್‌ಗೆ 'ಪತಂಜಲಿ' ಆಸಕ್ತಿಐಪಿಎಲ್ ಟೈಟಲ್ ಪ್ರಾಯೋಜಕತ್ವದ ಬಿಡ್ಡಿಂಗ್‌ಗೆ 'ಪತಂಜಲಿ' ಆಸಕ್ತಿ

ಹಿಂದಿನ ರಣಜಿ ಟ್ರೋಫಿ ಫೈನಲ್ ವೇಳೆ ಅಂಪೈರಿಂಗ್ ಮಾಡುತ್ತಿದ್ದ ಸಂಶುದ್ದೀನ್ ಗಾಯಗೊಂಡಿದ್ದರು. ಬೆಂಗಾಲ್ ಮತ್ತು ಸೌರಾಷ್ಟ್ರ ನಡುವಿನ ಈ ಫೈನಲ್ ಪಂದ್ಯದಲ್ಲಿ ಅನಂತಪದ್ಮನಾಭನ್ ಅಂಪೈರ್ ಜವಾಬ್ದಾರಿ ನಿರ್ವಹಿಸಿದ್ದರು. 'ಈ ಜವಾಬ್ದಾರಿಯನ್ನು ನೀಡುವ ಮೂಲಕ ಬಿಸಿಸಿಐ ನನ್ನ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ನಾನು ನಿಜವಾಗಿಯೂ ಸಂತೋಷ ಮತ್ತು ಕೃತಜ್ಞನಾಗಿದ್ದೇನೆ,' ಎಂದು ಅನಂತ್ ಖುಷಿ ವ್ಯಕ್ತಪಡಿಸಿದ್ದಾರೆ.

Story first published: Tuesday, August 11, 2020, 12:20 [IST]
Other articles published on Aug 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X