ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡಾನ್ ಬ್ರಾಡ್ಮನ್ ಬಗ್ಗೆ ತಿಳಿಯಬೇಕಾದ 5 ಕುತೂಹಲಕಾರಿ ಸಂಗತಿಗಳು!

Know 7 Interesting Facts about Sir Donald Bradman

ಸಿಡ್ನಿ: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅಜರಾಮರ ಹೆಸರು ಸರ್ ಡೊನಾಲ್ಡ್ ಬ್ರಾಡ್ಮನ್. ಆಗಸ್ಟ್ 27, 1908ರಲ್ಲಿ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ಬ್ರಾಡ್ಮನ್ ಜನಿಸಿದರು. ಸರ್ ಡೊನಾಲ್ಡ್ ಬ್ರಾಡ್ಮನ್ ತನ್ನ ವೃತ್ತಿ ಬದುಕು ಆರಂಭಿಸಿದ್ದು 30 ನವೆಂಬರ್ 1928ರಲ್ಲಿ ಇಂಗ್ಲೆಂಡ್ ವಿರುದ್ಧ. ಒಟ್ಟು 52 ಟೆಸ್ಟ್ ಪಂದ್ಯಗಳನ್ನಾಡಿರುವ ಬ್ರಾಡ್ಮನ್ ಅವರ ರನ್ ಸರಾಸರಿ 99.94. ಈ ರನ್ ಸರಾಸರಿ ಸದ್ಯಕ್ಕಂತೂ ಯಾರಿಂದಲೂ ಸುಲಭಕ್ಕೆ ಮುರಿಯಲಾರದ್ದು.

ಕೊಹ್ಲಿ, ರೋಹಿತ್, ಗೇಲ್ ಯಾರಿಂದಲೂ ಮುರಿಯಲಾಗದ 5 ವಿಶ್ವದಾಖಲೆಗಳು!ಕೊಹ್ಲಿ, ರೋಹಿತ್, ಗೇಲ್ ಯಾರಿಂದಲೂ ಮುರಿಯಲಾಗದ 5 ವಿಶ್ವದಾಖಲೆಗಳು!

ಟೆಸ್ಟ್ ಕ್ರಿಕೆಟ್‌ನಲ್ಲಿನ ಅದ್ಭುತ ಸಾಧನೆಗಾಗಿಯೇ ಸರ್ ಬ್ರಾಡ್ಮನ್ ಅವರು ಕ್ರಿಕೆಟ್‌ ರಂಗದಲ್ಲಿ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ ವಿಚಾರಕ್ಕೆ ಬಂದರಂತೂ ಬ್ರಾಡ್ಮನ್ ನಿಜಕ್ಕೂ 'ಡಾನ್' ಅನ್ನೋದೇ ಹೌದು.

ಕೊಹ್ಲಿ ಇಲ್ಲ ಧೋನಿ ಇಲ್ಲ.. ವಾರ್ನ್ ಹೆಸರಿಸಿದ 'ಸಾರ್ವಕಾಲಿಕ ಟೀಮ್ ಇಂಡಿಯಾ'ದಲ್ಲಿ ಅಚ್ಚರಿಯೋ ಅಚ್ಚರಿಕೊಹ್ಲಿ ಇಲ್ಲ ಧೋನಿ ಇಲ್ಲ.. ವಾರ್ನ್ ಹೆಸರಿಸಿದ 'ಸಾರ್ವಕಾಲಿಕ ಟೀಮ್ ಇಂಡಿಯಾ'ದಲ್ಲಿ ಅಚ್ಚರಿಯೋ ಅಚ್ಚರಿ

ಸುಮಾರು 20 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿನ ಬಳಿಕ 1948ರಲ್ಲಿ ನಿವೃತ್ತಿ ಘೋಷಿಸಿರುವ ಸರ್ ಬ್ರಾಡ್ಮನ್ ಬಗ್ಗೆ ತಿಳಿದುಕೊಳ್ಳಬೇಕಾದ ಸಾಕಷ್ಟು ಕುತೂಹಲಕಾರಿ ಸಂಗತಿಗಳಿವೆ. ಅವುಗಳಲ್ಲಿ ಪ್ರಮುಖ ಐದನ್ನು ನಿಮ್ಮ ಮುಂದೆ ತಂದಿದ್ದೇವೆ.

1. ಪಾದಾರ್ಪಣೆ ಪಂದ್ಯದಲ್ಲಿ ಪ್ಲಾಪ್

1. ಪಾದಾರ್ಪಣೆ ಪಂದ್ಯದಲ್ಲಿ ಪ್ಲಾಪ್

ಬ್ರಾಡ್ಮನ್ ಅವರು ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು 30 ನವೆಂಬರ್ 1928ರಲ್ಲಿ ಇಂಗ್ಲೆಂಡ್ ವಿರುದ್ಧ ಎಂದು ಆಗಲೇ ಹೇಳಿದೆವಲ್ಲವೆ? ಆದರೆ ಬ್ರಾಡ್ಮನ್ ಪಾದಾರ್ಪಣೆ ಪಂದ್ಯ ಅವರ ಪಾಲಿಗೆ ಮೆಚ್ಚುಗೆ ತರಲಿಲ್ಲ. ಯಾಕೆಂದರೆ ಅಂದು ಮೊದಲ ಇನ್ನಿಂಗ್ಸ್‌ನಲ್ಲಿ ಬ್ರಾಡ್ಮನ್ ಗಳಿಸಿದ್ದು ಕೇವಲ 18 ರನ್. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೂಡ ಬರೀ 1 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಆ ಪಂದ್ಯದಲ್ಲಿ ಇಂಗ್ಲೆಂಡ್ 675 ರನ್ ಗೆಲುವನ್ನಾಚರಿಸಿತ್ತು.

2. ಮುರಿಯಲಾಗದ ಸರಾಸರಿ

2. ಮುರಿಯಲಾಗದ ಸರಾಸರಿ

ಒಟ್ಟು 52 ಟೆಸ್ಟ್ ಪಂದ್ಯಗಳಲ್ಲಿ 6996 ರನ್ ಗಳಿಸಿರುವ ಸರ್ ಡಾನ್ ಬ್ರಾಡ್ಮನ್ ಬರೋಬ್ಬರಿ 99.94 ಸರಾಸರಿ ದಾಖಲಿಸಿದ್ದಾರೆ. ಈ ದಾಖಲೆ ಸದ್ಯಕ್ಕಂತೂ ಯಾವುದೇ ಕ್ರಿಕೆಟಿಗನಿಂದ ಮುರಿಯಲಾಧ್ಯ ರನ್ ಸರಾಸರಿ. ಅಲ್ಲದೆ ಬ್ರಾಡ್ಮನ್, ಟೆಸ್ಟ್‌ನಲ್ಲಿ ಅನೇಕ ದಾಖಲೆಗಳನ್ನೂ ಮಾಡಿದ್ದಾರೆ.

3. 12 ದ್ವಿಶತಕಗಳು

3. 12 ದ್ವಿಶತಕಗಳು

ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ರಾಡ್ಮನ್ ಭರ್ಜರಿ 12 ದ್ವಿಶತಕಗಳ ದಾಖಲೆ ಹೊಂದಿದ್ದಾರೆ. ಈ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ 11 ದ್ವಿಶತಕ ಬಾರಿಸಿದ್ದಾರೆ. ಇನ್ನು ಭಾರತದ ಸಚಿನ್ ತೆಂಡೂಲ್ಕರ್ ಮತ್ತು ಈಗಿನ ನಾಯಕ ವಿರಾಟ್ ಕೊಹ್ಲಿ ತಲಾ 6 ದ್ವಿಶತಕಗಳ ದಾಖಲೆ ಹೊಂದಿದ್ದಾರೆ.

4. ಕೇವಲ ಆರು ಸಿಕ್ಸರ್‌ಗಳು

4. ಕೇವಲ ಆರು ಸಿಕ್ಸರ್‌ಗಳು

12 ದ್ವಿಶತಕ, 29 ಶತಕ ಮತ್ತು 13 ಅರ್ಧ ಶತಕ ಹೀಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಬರೆದಿರುವ ಬ್ರಾಡ್ಮನ್ ತನ್ನಿಡೀ ಕ್ರಿಕೆಟ್ ಬದುಕಿನಲ್ಲಿ ಬಾರಿಸಿದ್ದು ಕೇವಲ 6 ಸಿಕ್ಸರ್ ಮಾತ್ರ. ಆದರೆ ಫೋರ್‌ಗಳ ಸಂಖ್ಯೆ ಬರೋಬ್ಬರಿ 681.

5. ಐಸಿಸಿ ಹಾಲ್ ಆಫ್ ಫೇಮ್

5. ಐಸಿಸಿ ಹಾಲ್ ಆಫ್ ಫೇಮ್

ಟೆಸ್ಟ್‌ನಲ್ಲಿ ಬ್ರಾಡ್ಮನ್ ಬಾರಿಸಿದ ಅತ್ಯಧಿಕ ವೈಯಕ್ತಿಕ ರನ್ ಎಂದರೆ 334. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 452 ಅತ್ಯಧಿಕ ರನ್ ಬಾರಿಸಿದ್ದಾರೆ. ಈ ಸಾಧನೆಗಾಗಿ ಬ್ರಾಡ್ಮನ್‌ಗೆ 19 ನವೆಂಬರ್ 2009ರಲ್ಲಿ ಐಸಿಸಿಯಿಂದ ಹಾಲ್ ಆಫ್ ಫೇಮ್ ಪ್ರಶಸ್ತಿ ಲಭಿಸಿತು. ಆದರೆ ಬ್ರಾಡ್ಮನ್ 25 ಫೆಬ್ರವರಿ 2001ರಲ್ಲೇ ಸಾವನ್ನಪ್ಪಿದ್ದರು. ಬ್ರಾಡ್ಮನ್‌ಗೆ ಗೌರವಾರ್ಥವಾಗಿ ಆಸ್ಟ್ರೇಲಿಯಾ ಸರ್ಕಾರ ಪೋಸ್ಟಲ್ ಸ್ಟ್ಯಾಂಪ್ ಕೂಡ ಹೊರ ತಂದಿತ್ತು.

Story first published: Thursday, August 27, 2020, 13:06 [IST]
Other articles published on Aug 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X