ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಂಕಡಿಂಗ್ ಮಾಡಿದ್ದ ಕಪಿಲ್ ದೇವ್, ವಿಶ್ವ ಕ್ರಿಕೆಟ್‌ನಲ್ಲಿ ಭಾರಿ ವಿವಾದ ಸೃಷ್ಟಿಸಿದ 5 ಮಂಕಡಿಂಗ್‌ ಘಟನೆಗಳಿವು

Know About Five Of The Most Controversial Mankading in World Cricket History

ಭಾರತದ ವಿನೂ ಮಂಕಡ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ನಾನ್-ಸ್ಟ್ರೈಕಿಂಗ್ ಬ್ಯಾಟರ್ ಅನ್ನು ಔಟ್ ಮಾಡಿದ್ದರಿಂದ ಅದೇ ಹೆಸರಿನಿಂದ ಕರೆಯಲಾಗುತ್ತಿದೆ. 1947 ರಲ್ಲಿ ಆಸ್ಟ್ರೇಲಿಯಾದ ಬಿಲ್ ಬ್ರೌನ್ ಅವರನ್ನು ರನ್ ಔಟ್ ಮಾಡಲು ವಿನೂ ಮಂಕಡ್ ಈ ವಿಧಾನವನ್ನು ಅಳವಡಿಸಿಕೊಂಡರು.

ಭಾರತ-ಇಂಗ್ಲೆಂಡ್ ಮಹಿಳಾ ತಂಡದ ನಡುವಿನ ಏಕದಿನ ಸರಣಿಯ 3ನೇ ಪಂದ್ಯದಲ್ಲಿ ದೀಪ್ತಿ ಶರ್ಮಾ ಇಂಗ್ಲೆಂಡ್‌ನ ಚಾರ್ಲಿ ಡೀನ್ ಅವರನ್ನು ಮಂಕಡಿಂಗ್ ಮೂಲಕ ಔಟ್ ಮಾಡಿದ್ದರಿಂದ ಇದರ ಬಗ್ಗೆ ಮತ್ತೆ ವ್ಯಾಪಕ ಚರ್ಚೆಯಾಗುತ್ತಿದೆ.

ಆತ ವಿಶ್ವಶ್ರೇಷ್ಠ ಟಿ20 ಬ್ಯಾಟರ್ ಆಗಲು ಹೀಗೆ ಮಾಡಬೇಕಿದೆ ಎಂದ ಸಬಾ ಕರೀಂಆತ ವಿಶ್ವಶ್ರೇಷ್ಠ ಟಿ20 ಬ್ಯಾಟರ್ ಆಗಲು ಹೀಗೆ ಮಾಡಬೇಕಿದೆ ಎಂದ ಸಬಾ ಕರೀಂ

ಅಕ್ಟೋಬರ್ 1 ರಿಂದ ಐಸಿಸಿಯ ಹೊಸ ನಿಯಮಗಳಲ್ಲಿ ಮಂಕಡಿಂಗ್ ಮಾಡುವುದು ಅನೈತಿಕವಲ್ಲ, ಅದು ನಿಯಮಬದ್ಧ ಔಟ್ ಎಂದು ಪರಿಗಣಿಸಲಾಗುವುದು ಎಂದು ಹೇಳಿದೆ. ನಾನ್-ಸ್ಟ್ರೈಕರ್‌ನ ಕೊನೆಯಲ್ಲಿ ರನ್ ಔಟ್ ಮಾಡುವುದು ಕ್ರಿಕೆಟ್ ವಲಯಗಳಲ್ಲಿ ಆಗಾಗ್ಗೆ ಚರ್ಚೆಯಾಗುತ್ತಿದೆ. ವಿಶ್ವ ಕ್ರಿಕೆಟ್‌ನಲ್ಲಿ ಅನೇಕ ಬಾರಿ ಮಂಕಡಿಂಗ್ ಮೂಲಕ ಹಲವು ಆಟಗಾರರು ಔಟಾಗಿದ್ದಾರೆ.

ಕೆಲವರು ಇದು ಕ್ರೀಡಾಸ್ಫೂರ್ತಿಗೆ ವಿರುದ್ಧ ಎಂದು ವಾದಿಸಿದರೆ ಮತ್ತೆ ಕೆಲವರು ನಿಯಮದ ಪ್ರಕಾರ ಇರುವಾಗ ಈ ರೀತಿ ಮಾಡುವುದು ತಪ್ಪಲ್ಲ ಎಂದು ವಾದಿಸುತ್ತಾರೆ, ಈ 5 ಮಂಕಡಿಂಗ್ ಘಟನೆಗಳು ವಿಶ್ವಕ್ರಿಕೆಟ್‌ನಲ್ಲಿ ಭಾರಿ ವಿವಾದ ಸೃಷ್ಟಿಸಿದ್ದವು.

ರಿಚರ್ಡ್ ನಾಗರವಾರನ್ನು ಮಂಕಡಿಂಗ್ ಮಾಡಿದ್ದ ಕೀಮೋಪೌಲ್

2016ರ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಲ್‌ರೌಂಡರ್ ಕೀಮೋ ಪೌಲ್ ರಿಚರ್ಡ್ ನಾಗರವಾರನ್ನು ಮಂಕಡಿಂಗ್ ಮಾಡಿ ಸುದ್ದಿಯಾಗಿದ್ದರು. ಅಂತಿಮ ಓವರ್ ನಲ್ಲಿ ಜಿಂಬಾಬ್ವೆ ಗೆಲುವಿಗೆ 3 ರನ್ ಮಾತ್ರ ಬೇಕಿತ್ತು ಆದರೆ ಕೇವಲ ಒಂದು ವಿಕೆಟ್ ಮಾತ್ರ ಉಳಿದಿತ್ತು.

ಅಂತಿಮ ಓವರ್ ನಲ್ಲಿ ಬೌಲಿಂಗ್ ಮಾಡಿದ ಕೀಮೋ ಪೌಲ್ ಮೊದಲ ಎಸೆತದಲ್ಲೇ ಮಂಕಡಿಂಗ್ ಮಾಡಿದರು. ಅವರು ಬೌಲಿಂಗ್ ಮಾಡುವ ಮುನ್ನವೇ ಬೇಲ್ ಎಗರಿಸಿ ಔಟ್‌ಗೆ ಮನವಿ ಮಾಡಿದರು. ಮೂರನೇ ಅಂಪೈರ್ ನೀಡಿದ ವಿವಾದಿತ ತೀರ್ಪಿಗೆ ಜಿಂಬಾಬ್ವೆ ತಂಡ ಪಂದ್ಯದಲ್ಲಿ ಸೋಲಬೇಕಾಯಿತು. ಯಾಕೆಂದರೆ ನಾಗರವ ಬ್ಯಾಟ್ ಇನ್ನೂ ಕ್ರೀಸ್‌ನಲ್ಲೇ ಇದ್ದರು ಔಟ್ ಎಂದು ನಿರ್ಣಯಿಸಲಾಗಿತ್ತು. ಪಂದ್ಯದಲ್ಲಿ ಗೆದ್ದ ವೆಸ್ಟ್ ಇಂಡೀಸ್ ಕ್ವಾಟರ್ ಫೈನಲ್‌ಗೆ ಪ್ರವೇಶ ಪಡೆದರು.

ದೀಪ್ತಿ ಶರ್ಮಾರಿಂದ ರನೌಟ್ ಆದ ಬಗ್ಗೆ ಚಾರ್ಲಿ ಡೀನ್ ಪ್ರತಿಕ್ರಿಯೆ ಏನು ಗೊತ್ತಾ?

ಮೊದಲ ಬಾರಿ ಮಂಕಡಿಂಗ್ ಆದ ಜೋಸ್ ಬಟ್ಲರ್

2014 ರಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಏಕದಿನ ಪಂದ್ಯದ ಸಂದರ್ಭದಲ್ಲಿ ಈ ಘಟನೆ ನಡೆಯಿತು. ಈ ಸರಣಿಯಲ್ಲಿ ಜೋಸ್ ಬಟ್ಲರ್ ಅವರು ತಮ್ಮ ಚೊಚ್ಚಲ ಏಕದಿನ ಶತಕ ಗಳಿಸಿದರು. ಆದರೆ, ನಾನ್‌ಸ್ಟ್ರೈಕರ್‌ನ ಕೊನೆಯಲ್ಲಿ ಅವರು ರನೌಟ್ ಆದ ರೀತಿ ಇಂದಿಗೂ ನೆನಪಿನಲ್ಲಿ ಉಳಿಯುತ್ತದೆ.

ಸಚಿತ್ರ ಸೇನಾನಾಯಕ್ ಅವರು ಬಟ್ಲರ್‌ಗೆ ಒಮ್ಮೆ ಎಚ್ಚರಿಕೆ ನೀಡಿದ್ದರು, ಆದಾಗ್ಯೂ, ಚೆಂಡನ್ನು ಎಸೆಯುವ ಮೊದಲು ಬಟ್ಲರ್ ತನ್ನ ಕ್ರೀಸ್‌ನಿಂದ ಪದೇ ಪದೇ ಹೊರಹೋಗುವುದರೊಂದಿಗೆ, ಶ್ರೀಲಂಕಾದ ಸ್ಪಿನ್ನರ್ ಬೇಲ್‌ಗಳನ್ನು ಎಗರಿಸಿ ರನ್ ಔಟ್‌ಗೆ ಮನವಿ ಮಾಡಿದರು. ಹೀಗೆ ಮೊದಲ ಬಾರಿಗೆ ಜೋಸ್ ಬಟ್ಲರ್ ಮಂಕಡಿಂಗ್‌ಗೆ ಬಲಿಯಾಗಿದ್ದರು.

ಮಂಕಡಿಂಗ್ ಮಾಡಿದ್ದ ಕಪಿಲ್ ದೇವ್‌

ಮಂಕಡಿಂಗ್ ಮಾಡಿದ್ದ ಕಪಿಲ್ ದೇವ್‌

ಭಾರತದ ಲೆಜೆಂಡರಿ ನಾಯಕ ಕಪಿಲ್ ದೇವ್ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು. ಆದಾಗ್ಯೂ, ಅವರು ನಾನ್ ಸ್ಟ್ರೈಕರ್‌ನ ಕೊನೆಯಲ್ಲಿ ಬ್ಯಾಟರ್ ಔಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

1992 ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಗುಂಪಿನ ಪಂದ್ಯದಲ್ಲಿ, ಕಪಿಲ್‌ ದೇವ್ ಚೆಂಡನ್ನು ತಲುಪಿಸುವ ಮೊದಲೇ ಪೀಟರ್ ಕರ್ಸ್ಟನ್ ರನ್‌ ಕದಿಯಲು ಮುಂದಾಗುತ್ತಿದ್ದರು. ಹಲವಾರು ಎಚ್ಚರಿಕೆಗಳನ್ನು ನೀಡಿದ ನಂತರವೂ ಪೀಟರ್ ಕರ್ಸ್ಟನ್ ನಾನ್-ಸ್ಟ್ರೈಕರ್ ಕ್ರೀಸ್‌ನಿಂದ ಹೊರಬರುವುದನ್ನು ಮುಂದುವರೆಸಿದರು. ನಂತರ ಕಪಿಲ್ ದೇವ್, ಮಂಕಡಿಂಗ್ ಮೂಲಕ ಅವರನ್ನು ಔಟ್ ಮಾಡಿದರು, ಆ ಘಟನೆಯ ನಂತರ ಕಪಿಲ್‌ ದೇವ್ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾದವು.

ಎರಡನೇ ಬಾರಿಗೆ ಮಂಕಡಿಂಗ್‌ಗೆ ಬಲಿಯಾದ ಬಟ್ಲರ್

ಎರಡನೇ ಬಾರಿಗೆ ಮಂಕಡಿಂಗ್‌ಗೆ ಬಲಿಯಾದ ಬಟ್ಲರ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ದಾಖಲದ ಮೊದಲ ಮತ್ತು ಏಕೈಕ ಮಂಕಡಿಂಗ್ ಘಟನೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಇಂಗ್ಲೆಂಡ್ ಬ್ಯಾಟರ್ ಜೋಸ್ ಬಟ್ಲರ್ ಎರಡನೇ ಬಾರಿಗೆ ಮಂಕಡಿಂಗ್‌ಗೆ ಬಲಿಯಾದರು.

2019ರ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿತ್ತು. ಪಂಜಾಬ್ ನಾಯಕ ಅಶ್ವಿನ್ ಬಟ್ಲರ್ ಬೌಲ್ ಆಗುವ ಮೊದಲೇ ಕ್ರೀಸ್‌ನಿಂದ ಪದೇ ಪದೇ ಹೊರ ಹೋಗುತ್ತಿರುವುದನ್ನು ಗಮನಿಸಿದರು. ಅನುಭವಿ ಆಫ್-ಸ್ಪಿನ್ನರ್ ಜಾಣತನದಿಂದ ತನ್ನ ಎಸೆತದ ಸ್ಟ್ರೈಡ್‌ನಲ್ಲಿ ಬೇಲ್ ಎಗರಿಸಿದರು ಮತ್ತು ಇಂಗ್ಲಿಷ್ ಬ್ಯಾಟರ್ ನಾನ್-ಸ್ಟ್ರೈಕರ್‌ನ ಕೊನೆಯಲ್ಲಿ ರನ್ ಔಟ್ ಆದರು. ರಾಜಸ್ಥಾನ ರಾಯಲ್ಸ್ ಪಂದ್ಯದಲ್ಲಿ ಸೋಲನುಭವಿಸಿತು.

ಮಂಕಡಿಂಗ್ ಕುರಿತಾಗಿ ಕಾನೂನುಗಳ ಬಗ್ಗೆ ತಿಳಿದುಕೊಳ್ಳಲು, ಆಧುನಿಕ ಕ್ರಿಕೆಟ್‌ನಲ್ಲಿ ವ್ಯಾಪಕ ಚರ್ಚೆಯಾಗಲು ಈ ಘಟನೆ ಕಾರಣವಾಯಿತು.

 ದೀಪ್ತಿ ಶರ್ಮಾ vs ಚಾರ್ಲಿ ಡೀನ್

ದೀಪ್ತಿ ಶರ್ಮಾ vs ಚಾರ್ಲಿ ಡೀನ್


ಮಂಕಡಿಂಗ್ ಮಾಡುವುದು ಅನೈತಿಕವಲ್ಲ ಅದು ಎಂದು ಹೇಳಿದ್ದ ಐಸಿಸಿ ಹೊಸ ನಿಯಮಗಳು ಅಕ್ಟೋಬರ್ 1 ರಿಂದ ಜಾರಿಯಾಗಲಿದೆ. ಇದರ ಬೆನ್ನಲ್ಲೇ, ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ದೀಪ್ತಿ ಶರ್ಮಾ ಇಂಗ್ಲೆಂಡ್‌ನ ಚಾರ್ಲಿ ಡೀನ್ ಅವರನ್ನು ನಾನ್ ಸ್ಟ್ರೈಕರ್‌ನ ಕೊನೆಯಲ್ಲಿ ರನ್ ಔಟ್ ಮಾಡಿ ಟೀಮ್ ಇಂಡಿಯಾ ಆತಿಥೇಯರನ್ನು 3-0 ಅಂತರದಲ್ಲಿ ವೈಟ್‌ವಾಶ್ ಮಾಡಲು ಸಹಾಯ ಮಾಡಿದರು.

ಭಾರತದ ಗೆಲುವಿಗೆ ಇನ್ನೊಂದು ವಿಕೆಟ್ ಬೇಕಿತ್ತು, ಇಂಗ್ಲೆಂಡ್ ಗೆಲುವಿಗೆ ಇನ್ನು 16 ರನ್‌ಗಳ ಅಗತ್ಯವಿತ್ತು, ಪಂದ್ಯ ರೋಚಕ ಹಂತದಲ್ಲಿ ಇರುವಾಗಲೇ, ಡೀನ್ ಪದೇ ಪದೇ ಬೌಲಿಂಗ್ ಮಾಡುವ ಮುನ್ನವೇ ಕ್ರೀಸ್ ಬಿಡುತ್ತಿರುವುದನ್ನು ಗಮನಿಸಿದ ದೀಪ್ತಿ ಶರ್ಮಾ ಒಮ್ಮೆ ಬ್ಯಾಟರ್ ತನ್ನ ಕ್ರೀಸ್‌ನಿಂದ ಹೊರಬಂದಾಗ, ಬೇಲ್‌ಗಳನ್ನು ಹೊಡೆದು ರನ್ ಔಟ್‌ಗೆ ಮನವಿ ಮಾಡಿದರು. ಔಟಾದ ನಂತರ ಚಾರ್ಲಿ ಡೀನ್ ಕಣ್ಣೀರಿಟ್ಟರು. ಆದರೆ, ಭಾರತ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿತು.

ಇನ್ನು ಈ ಘಟನೆ ಬಗ್ಗೆ ವಿಶ್ವ ಕ್ರಿಕೆಟ್‌ನಲ್ಲಿ ಭಾರಿ ಚರ್ಚೆಯಾಯಿತು. ಅದು ಕ್ರೀಡಾ ಸ್ಫೂರ್ತಿಯಲ್ಲ ಎಂದು ಹಲವರು ವಾದಿಸಿದರು. ಆದರೆ, ನಿಯಮಗಳ ಪ್ರಕಾರವೇ ಔಟ್ ಮಾಡಿರುವಾಗ ಇದು ತಪ್ಪಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

Story first published: Tuesday, September 27, 2022, 12:27 [IST]
Other articles published on Sep 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X