ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SA 2022 : ಮೊದಲನೆ ಏಕದಿನ ಪಂದ್ಯದಲ್ಲಿ ನಿರ್ಮಾಣವಾದ ಮೂರು ದಾಖಲೆಗಳಿವು

Know About The 3 Records That Were Broken During India Vs South Africa First ODI

ಗುರುವಾರ (ಅಕ್ಟೋಬರ್ 6) ಲಕ್ನೋದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅತ್ಯುತ್ತಮ ಆಲ್‌ರೌಂಡ್ ಪ್ರದರ್ಶನ ನೀಡುವ ಮೂಲಕ ಭಾರತವನ್ನು ಒಂಬತ್ತು ರನ್‌ಗಳಿಂದ ಸೋಲಿಸಿತು.

ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭವಾಯಿತು. 50 ಓವರ್ ಗಳ ಬದಲಾಗಿ 40 ಓವರ್‌ಗಳಿಗೆ ಪಂದ್ಯವನ್ನು ಸೀಮಿತಗೊಳಿಸಲಾಯಿತು. ಸ್ಪರ್ಧೆಯಲ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಉತ್ತಮ ಆರಂಭವನ್ನೇ ಪಡೆಯಿತು. ದಕ್ಷಿಣ ಆಫ್ರಿಕಾ ತಂಡವನ್ನು 22.4 ಓವರ್‌ಗಳಲ್ಲಿ 4 ವಿಕೆಟ್‌ಗೆ 110 ಕ್ಕೆ ತಗ್ಗಿಸಿತು.

IND vs SA ODI: ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಸೋಲಿಗೆ ಇದೇ ಕಾರಣ ಎಂದ ಆಕಾಶ್ ಚೋಪ್ರಾIND vs SA ODI: ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಸೋಲಿಗೆ ಇದೇ ಕಾರಣ ಎಂದ ಆಕಾಶ್ ಚೋಪ್ರಾ

ನಂತರ ಬಂದ, ಡೇವಿಡ್ ಮಿಲ್ಲರ್ (63 ಎಸೆತಗಳಲ್ಲಿ 75*) ಮತ್ತು ಹೆನ್ರಿಚ್ ಕ್ಲಾಸೆನ್ (65 ಎಸೆತಗಳಲ್ಲಿ 74*) ನಡುವಿನ ಅಜೇಯ 139 ರನ್‌ಗಳ ಜೊತೆಯಾಟದ ನೆರವಿನಿಂದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 249/4 ಗಳಿಸಿತು. ಎಂಟು ಓವರ್‌ಗಳಲ್ಲಿ 2/35 ಅಂಕಿಗಳೊಂದಿಗೆ ಶಾರ್ದೂಲ್ ಠಾಕೂರ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.

250 ರನ್‌ಗಳ ಕಠಿಣ ಚೇಸ್‌ನಲ್ಲಿ, ಭಾರತವು ಕಳಪೆ ಆರಂಭವನ್ನು ಪಡೆಯಿತು, ಬೋರ್ಡ್‌ನಲ್ಲಿ ಕೇವಲ ಎಂಟು ರನ್‌ಗಳಿರುವಾಗ ಇಬ್ಬರೂ ಆರಂಭಿಕರನ್ನು ಕಳೆದುಕೊಂಡಿತು. ಇಶಾನ್ ಕಿಶನ್ ಮತ್ತು ಚೊಚ್ಚಲ ಆಟಗಾರ ರುತುರಾಜ್ ಗಾಯಕ್ವಾಡ್ ಮೂರನೇ ವಿಕೆಟ್‌ಗೆ 48 ರನ್‌ಗಳ ಜೊತೆಯಾಟದೊಂದಿಗೆ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಲು ಪ್ರಯತ್ನಿಸಿದರು, ಈ ಜೋಡಿಯನ್ನು ದಕ್ಷಿಣ ಆಫ್ರಿಕಾ ಸ್ಪಿನ್ನರ್‌ಗಳು ಕೇವಲ ಏಳು ಎಸೆತಗಳ ಅಂತರದಲ್ಲಿ ಔಟ್ ಮಾಡಿದರು.

ಶ್ರೇಯಸ್ ಅಯ್ಯರ್, ಸ್ಯಾಮ್ಸನ್ ಉತ್ತಮ ಬ್ಯಾಟಿಂಗ್

ಶ್ರೇಯಸ್ ಅಯ್ಯರ್, ಸ್ಯಾಮ್ಸನ್ ಉತ್ತಮ ಬ್ಯಾಟಿಂಗ್

ಶ್ರೇಯಸ್ ಅಯ್ಯರ್ (37 ಎಸೆತಗಳಲ್ಲಿ 50) ಮತ್ತು ಸಂಜು ಸ್ಯಾಮ್ಸನ್ (63 ಎಸೆತಗಳಲ್ಲಿ 86*) ಉತ್ತಮ ಬ್ಯಾಟಿಂಗ್ ಮೂಲಕ ಭಾರತಕ್ಕೆ ಗೆಲುವಿನ ಆಸೆ ಮೂಡಿಸಿದರು. ಅಯ್ಯರ್ ಔಟಾದ ನಂತರ, ಸ್ಯಾಮ್ಸನ್ ಮತ್ತು ಠಾಕೂರ್ (31 ಎಸೆತಗಳಲ್ಲಿ 33) ಭಾರತದ ಮೊತ್ತವನ್ನು ದಾಟಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರು. ಆದಾಗ್ಯೂ, ಭಾರತ ತಂಡದ ಉತ್ತಮ ಬ್ಯಾಟಿಂಗ್ ಹೊರತಾಗಿಯೂ ಅಂತಿಮವಾಗಿ 9 ರನ್‌ಗಳ ಸೋಲನುಭವಿಸಿತು.

ದಕ್ಷಿಣ ಆಫ್ರಿಕಾ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ಅವರ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸರಣಿಯ ಮೊದಲನೇ ಪಂದ್ಯದಲ್ಲಿ ಮೂರು ಮುಖ್ಯ ದಾಖಲೆಗಳು ನಿರ್ಮಾಣವಾದವು.

NZ T20 Tri-Series: ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಶುಭಾರಂಭ ಮಾಡಿದ ಪಾಕಿಸ್ತಾನ

ಅತಿ ಹಚ್ಚು ರನ್ ಬಿಟ್ಟುಕೊಟ್ಟ ಎಡಗೈ ಸ್ಪಿನ್ನರ್‍

ಅತಿ ಹಚ್ಚು ರನ್ ಬಿಟ್ಟುಕೊಟ್ಟ ಎಡಗೈ ಸ್ಪಿನ್ನರ್‍

ರುತುರಾಜ್ ಗಾಯಕ್ವಾಡ್ ವಿಕೆಟ್ ಪಡೆದರೂ, ದಕ್ಷಿಣ ಆಫ್ರಿಕಾ ಸ್ಪಿನ್ನರ್ ತಬ್ರೈಜ್ ಶಮ್ಸಿ ಎಂಟು ಓವರ್‌ಗಳಲ್ಲಿ 89 ರನ್‌ಗಳನ್ನು ಬಿಟ್ಟುಕೊಟ್ಟು ಕೆಟ್ಟ ದಾಖಲೆ ಬರೆದರು. ಏಕದಿನ ಮಾದರಿ ಕ್ರಿಕೆಟ್‌ನಲ್ಲಿ ಎಡಗೈ ಸ್ಪಿನ್ನರ್ ಬಿಟ್ಟುಕೊಟ್ಟ ಅತಿ ಹೆಚ್ಚಿನ ರನ್ ಇದಾಗಿದೆ.

2020ರಲ್ಲಿ ಭಾರತದ ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ನ್ಯೂಜಿಲೆಂಡ್ ವಿರುದ್ಧ 84 ರನ್‌ಗಳನ್ನು ಬಿಟ್ಟುಕೊಟ್ಟಿದ್ದು ಈವೆರಗಿನ ದಾಖಲೆಯಾಗಿತ್ತು. ಈಗ 8 ಓವರ್ ಗಳಲ್ಲಿ 89 ರನ್ ಬಿಟ್ಟುಕೊಡುವ ಕುಲ್ದೀಪ್ ದಾಖಲೆಯನ್ನು ಮುರಿಯುವ ಮೂಲಕ ಶಮ್ಸಿ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಭಾರತದ ವಿರುದ್ಧ 50ನೇ ಜಯ

ಭಾರತದ ವಿರುದ್ಧ 50ನೇ ಜಯ

ಲಕ್ನೋದಲ್ಲಿ ತಮ್ಮ ಕೊನೆಯ ಓವರ್‌ನ ಗೆಲುವಿನೊಂದಿಗೆ, ದಕ್ಷಿಣ ಆಫ್ರಿಕಾ ತಂಡ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ತಮ್ಮ 50 ನೇ ಜಯವನ್ನು ದಾಖಲಿಸುವ ಮೂಲಕ ಮೈಲಿಗಲ್ಲನ್ನು ಸಾಧಿಸಿದರು.

ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ 50 ಓವರ್‌ಗಳ ಸ್ವರೂಪದಲ್ಲಿ 88 ಬಾರಿ ಮುಖಾಮುಖಿಯಾಗಿದ್ದು, ಅವುಗಳಲ್ಲಿ 50 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆದ್ದಿದೆ. ಮತ್ತೊಂದೆಡೆ, ಭಾರತವು 35 ಪಂದ್ಯಗಳನ್ನು ಗೆದ್ದಿದೆ ಮತ್ತು ಅವುಗಳಲ್ಲಿ ಮೂರು ಪಂದ್ಯಗಳು ಫಲಿತಾಂಶಗಳಿಲ್ಲದೆ ಕೊನೆಗೊಂಡಿವೆ.

ದಕ್ಷಿಣ ಆಫ್ರಿಕಾ ಈಗ ಭಾರತವನ್ನು ಕನಿಷ್ಠ 50 ಬಾರಿ ಸೋಲಿಸಿದ ಏಕದಿನ ಇತಿಹಾಸದಲ್ಲಿ ಐದನೇ ತಂಡವಾಗಿದೆ, ಆಸ್ಟ್ರೇಲಿಯಾ, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಗುಂಪಿಗೆ ಸೇರಿಕೊಂಡಿದೆ.

ವೇಗವಾಗಿ 500 ರನ್ ಗಳಿಸಿದ ಗಿಲ್

ವೇಗವಾಗಿ 500 ರನ್ ಗಳಿಸಿದ ಗಿಲ್

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದರೂ ಶುಭ್‌ಮನ್ ಗಿಲ್ ದಾಖಲೆಯನ್ನು ಬರೆಯಲು ಯಶಸ್ವಿಯಾದರು. ಭಾರತದ ಪರವಾಗಿ ಏಕದಿನ ಮಾದರಿ ಕ್ರಿಕೆಟ್‌ನಲ್ಲಿ ವೇಗವಾಗಿ 500 ರನ್ ಗಳಿಸಿದ ವೈಯಕ್ತಿಕ ಮೈಲಿಗಲ್ಲನ್ನು ತಲುಪಿದರು.

9 ಇನ್ನಿಂಗ್ಸ್‌ಗಳಲ್ಲಿ 499 ರನ್ ಗಳಿಸಿದ್ದ ಗಿಲ್, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 3 ರನ್ ಗಳಿಸಿ ಔಟಾದರು. ಈ ಮೂಲಕ 10 ಇನ್ನಿಂಗ್ಸ್‌ಗಳಲ್ಲಿ 502 ರನ್ ಗಳಿಸಿ ದಾಖಲೆ ಬರೆದರು. ನವಜೋತ್ ಸಿಂಗ್ ಸಿಧು 11 ಇನ್ನಿಂಗ್ಸ್‌ಗಳಲ್ಲಿ 500 ರನ್ ಬಾರಿಸಿದ ದಾಖಲೆಯನ್ನು ಗಿಲ್ ಮುರಿದರು. ಗಿಲ್ 10 ಇನ್ನಿಂಗ್ಸ್‌ಗಳಲ್ಲಿ 62.7 ಸರಾಸರಿಯಲ್ಲಿ, 104.4 ಸ್ಟ್ರೈಕ್‌ರೇಟ್‌ನಲ್ಲಿ 502 ರನ್ ಗಳಿಸಿದ್ದಾರೆ.

Story first published: Friday, October 7, 2022, 14:42 [IST]
Other articles published on Oct 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X