ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

100ನೇ ಟೆಸ್ಟ್ ಆಡುತ್ತಿರುವ ವಿರಾಟ್ ಕೊಹ್ಲಿಗೆ ವಿಶೇಷ ಕ್ಯಾಪ್ ನೀಡಿ ಗೌರವಿಸಿದ ದ್ರಾವಿಡ್

Kohli 100th test: Virat felicitated with a special cap by Team India coach Rahul Dravid

ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಿದೆ. ಈ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿಯ 100ನೇ ಟೆಸ್ಟ್ ಪಂದ್ಯ ಎಂಬುದು ವಿಶೇಷ. ಹೀಗಾಗಿ ಈ ಪಂದ್ಯದ ಆರಂಭಕ್ಕೂ ಮುನ್ನ ಬಿಸಿಸಿಐ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶೇಷವಾಗಿ ಗೌರವಿಸಿದೆ. ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಹಾಲಿ ಕೋಚ್ ರಾಹುಲ್ ದ್ರಾವಿಡ್ ವಿರಾಟ್ ಕೊಹ್ಲಿಗೆ ಈ ಸಂದರ್ಭದಲ್ಲಿ ವಿಶೇಷ ಕ್ಯಾಪ್ ನೀಡಿ ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಮೈದಾನದಲ್ಲಿ ಉಪಸ್ಥಿತರಿದ್ದರು.

ಇನ್ನು ವಿರಾಟ್ ಕೊಹ್ಲಿ ಕೋಚ್ ರಾಹಿಲ್ ದ್ರಾವಿಡ್ ಅವರಿಂದ ವಿಶೇಷ ಕ್ಯಾಪ್ ಸ್ವೀಕರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಅವರಿಂದ ಈ ಕ್ಯಾಪ್ ಸ್ವೀಕರಿಸಿದ್ದು ವಿಶೇಷವಾಗಿದೆ ಎಂದ ಕೊಹ್ಲಿ ರಾಹುಲ್ ದ್ರಾವಿಡ್ ಅವರು ತನ್ನ ಬಾಲ್ಯದ ಹೀರೋ. ಈ ಉಡುಗೊರೆ ಸ್ವೀಕರಿಸಲು ಅವರಿಗಿಂತ ವಿಶೇಷ ವ್ಯಕ್ತಿಯಿಂದ ಮತ್ತೊಬ್ಬರಿಲ್ಲ ಎಂದಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಸಾಧನೆಗೆ ಕೊಹ್ಲಿ ಕೊಡುಗೆ ಅಪಾರ : ಟೆಸ್ಟ್ ನಾಯಕನಾಗಿ ರೋಹಿತ್ ಮೊದಲ ಮಾತುಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಸಾಧನೆಗೆ ಕೊಹ್ಲಿ ಕೊಡುಗೆ ಅಪಾರ : ಟೆಸ್ಟ್ ನಾಯಕನಾಗಿ ರೋಹಿತ್ ಮೊದಲ ಮಾತು

ಇನ್ನು ಕೋಚ್ ರಾಹುಲ್ ದ್ರಾವಿಡ್ ವಿರಾಟ್ ಕೊಹ್ಲಿಗೆ ವಿಶೇಷ ಟೋಪಿಯನ್ನು ನೀಡುವ ಸಂದರ್ಭದಲ್ಲಿ ಕೊಹ್ಲಿ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಇದು ಅತ್ಯಂತ ಅರ್ಹ ಗೌರವ. ಇದನ್ನು ಅರ್ಹತೆಯಿಂದಲೇ ಸಂಪಾದಿಸಿದ್ದೀರಿ. ನಾವು ಡ್ರೆಸ್ಸಿಂಗ್ ರೂಮ್‌ನಲ್ಲಿ ಹೇಳಿದ್ದಂತೆಯೇ ಈ ಸಂಭ್ರವನ್ನು ದ್ವಿಗುಣಗೊಳಿಸೋಣ" ಎಂದು ದ್ರಾವಿಡ್ ಹೇಳಿದರು.

ಟೆಸ್ಟ್ ಗೂ ಮುಂಚೆ ಕೊಹ್ಲಿಗೆ ಸಿಕ್ತು ಸ್ಪೆಷಲ್ ಕ್ಯಾಪ್ ದ್ರಾವಿಡ್ ವಿರಾಟ್ ಮಾತುಕತೆ ಸೂಪರ್ | Oneindia Kannada

ನಂತರ ವಿರಾಟ್ ಕೊಹ್ಲಿ "ಧನ್ಯವಾದಗಳು ರಾಹುಲ್ ಭಾಯ್, ಇದು ನನಗೆ ಅತ್ಯಂತ ವಿಶೇಷವಾದ ಕ್ಷಣಗಳು. ಈ ಸಂದರ್ಭದಲ್ಲಿ ನನ್ನ ಪತ್ನಿ ಇಲ್ಲಿ ನನ್ನೊಂದಿಗಿದ್ದಾರೆ. ನನ್ನ ಸೋದರ ಸ್ಟ್ಯಾಂಡ್‌ನಲ್ಲಿದ್ದಾರೆ. ಇದೊಂದು ತಂಡದ ಆಟವಾಗಿದ್ದು ನೀವೆಲ್ಲಾ ಇಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಬಿಸಿಸಿಐಗೆ ಕೂಡ ಧನ್ಯವಾದಗಳು. ನಾನು ಈ ಗೌರವವನ್ನು ರಾಹುಲ್ ದ್ರಾವಿಡ್ ಅವರಿಗಿಂತ ವಿಶೇಷವಾದ ವ್ಯಕ್ತಿಗಿಂತ ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಬಾಲ್ಯದ ಹೀರೋ ಅವರು. ಅಂಡರ್-15 ದಿನಗಳಲ್ಲಿ ಅವರೊಂದಿಗೆ ತೆಗೆದುಕೊಂಡಿದ್ದ ಫೋಟೋ ಈಗಲೂ ನನ್ನ ಬಳಿ ಇದೆ" ಎಂದು ಕೊಹ್ಲಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಇಬ್ಬರು ವೇಗಿಗಳು ಹಾಗೂ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುತ್ತಿದೆ. ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬೂಮ್ರಾ ವೇಗಿಗಳಾಗಿ ತಂಡದಲ್ಲಿದ್ದರೆ ಅನುಭವಿ ಆರ್ ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಜಯಂತ್ ಯಾದವ್ ಸ್ಪಿನ್ನರ್‌ಗಳಾಗಿ ಸಾಥ್ ನೀಡಲಿದ್ದಾರೆ. ಇನ್ನು ಈ ಶ್ರೀಲಂಕಾ ತಂಡ ಈ ಪಂದ್ಯದಲ್ಲಿ ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುತ್ತಿದೆ.

ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ
ಬೆಂಚ್: ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್, ಉಮೇಶ್ ಯಾದವ್, ಕುಲದೀಪ್ ಯಾದವ್, ಪ್ರಿಯಾಂಕ್ ಪಾಂಚಾಲ್, ಶ್ರೀಕರ್ ಭರತ್, ಸೌರಭ್ ಕುಮಾರ್

ಶ್ರೀಲಂಕಾ ಪ್ಲೇಯಿಂಗ್ XI: ದಿಮುತ್ ಕರುಣರತ್ನೆ(ನಾಯಕ), ಲಹಿರು ತಿರಿಮನ್ನೆ, ಪಾತುಮ್ ನಿಸ್ಸಾಂಕ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ(ವಿಕೆಟ್ ಕೀಪರ್), ಸುರಂಗ ಲಕ್ಮಲ್, ವಿಶ್ವ ಫೆರ್ನಾಂಡೊ, ಲಸಿತ್ ಎಂಬುಲ್ಡೆನಿಯಾ, ಲಹಿರು ಕುಮಾರ
ಬೆಂಚ್: ಪ್ರವೀಣ್ ಜಯವಿಕ್ರಮ, ದಿನೇಶ್ ಚಂಡಿಮಲ್, ಚಾಮಿಕಾ ಕರುಣಾರತ್ನೆ, ಜೆಫ್ರಿ ವಾಂಡರ್ಸೆ, ದುಷ್ಮಂತ ಚಮೀರಾ

Story first published: Friday, March 4, 2022, 23:44 [IST]
Other articles published on Mar 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X