ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎರಡನೇ ಟಿ20; ಮತ್ತೊಂದು ಟಿ20 ದಾಖಲೆಗೆ ವಿರಾಟ್ ಕೊಹ್ಲಿ ಸಜ್ಜು

Kohli 25 runs away from becoming first Indian to achieve T20I milestone

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 94 ರನ್ ಗಳಿಸಿ ತಂಡವನ್ನು ಗೆಲ್ಲಿಸಿದ್ದರು. ಇವತ್ತಿನ ಪಂದ್ಯದಲ್ಲಿ ಕೇವಲ 25 ರನ್‌ಗಳಿಸಿದರೆ ಈ ದಾಖಲೆಗೆ ಪಾತ್ರರಾಗಲಿದ್ದಾರೆ.

ಹೌದು ಕೊಹ್ಲಿ ಇಂದಿನ ಪಂದ್ಯದಲ್ಲಿ ಕೇವಲ 25 ರನ್‌ ಗಳಿಸಿದರೆ ಸಾಕು ತವರು ನೆಲದಲ್ಲಿ ಅಂತರಾಷ್ಟ್ರೀಯ ಟಿ20 ಪಂದ್ಯದಲ್ಲಿ 1000 ರನ್ ಗಳಿಸಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ. ಸಧ್ಯ ಕೊಹ್ಲಿ ತವರಿನಲ್ಲಿ 975 ರನ್‌ಗಳಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಈ ದಾಖಲೆಯನ್ನು ಮಾಡುವ ನಿರೀಕ್ಷೆಯಿದೆ.

ಒಟ್ಟಾರೆ ದಾಖಲೆಯನ್ನು ನೋಡಿದರೆ ಕೊಹ್ಲಿ ಈ ಸಾಧನೆಯನ್ನು ಮಾಡಿದ ಮೂರನೇ ಆಟಗಾರನಾಗಲಿದ್ದಾರೆ. ನ್ಯೂಜಿಲೆಂಡ್ ಆಟಗಾರರಾದ ಮಾರ್ಟಿನ್ ಗಪ್ಟಿಲ್(1430) ಮತ್ತು ಕಾಲಿನ್ ಮನ್ರೋ(1000) ಮಾತ್ರ ತವರಿನಲ್ಲಿ ಈ ಸಾಧನೆಯನ್ನು ಮಾಡಿರುವ ದಾಖಲೆ ಹೊಂದಿದ್ದಾರೆ.

ಈ ದಾಖಲೆ ಮಾತ್ರವಲ್ಲದೆ ಟಿ20 ಫಾರ್ಮ್ಯಾಟ್‌ನಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ರನ್‌ಗಳಿಸಲು ಕೊಹ್ಲಿಗೆ ಇನ್ನು ಕೇವಲ 3 ರನ್‌ಬೇಕಾಗಿದೆ. ಸದ್ಯ ರೋಹಿತ್ ಶರ್ಮಾ 2547ರನ್‌ಗಳಿಸಿದ್ದು ರನ್‌ಗಳಿಕೆ ಪಟ್ಟಿಯಲ್ಲಿ ಟೀಮ್ ಇಂಡಿಯಾ ಪರವಾಗಿ ಮೊದಲ ಸ್ಥಾನದಲ್ಲಿದ್ದಾರೆ.

ಕಳೆದ ಪಂದ್ಯದಲ್ಲಿ ಕೇವಲ 6 ರನ್‌ನಿಂದ ಮೊದಲ ಶತಕ ತಪ್ಪಿಸಿಕೊಂಡ ನಾಯಕ 23ನೇ ಅರ್ಧಶತಕ ದಾಖಲಿಸಿದರು. ಇದು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಟಗಾರನೋರ್ವ ದಾಖಲಿಸಿದ ಅತಿಹೆಚ್ಚು ಅರ್ಧ ಶತಕಗಳಾಗಿದೆ. ಮೊದಲ ಪಂದ್ಯವನ್ನು ಗೆದ್ದುಕೊಂಡಿರು ಟೀಮ್ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.

Story first published: Sunday, December 8, 2019, 17:27 [IST]
Other articles published on Dec 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X