ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾಗೆ ಹೊಸ ಕಿಟ್ ಪ್ರಾಯೋಜಕತ್ವ? : ನೈಕಿ ಜೊತೆಗಿನ ಒಪ್ಪಂದ ಅಂತ್ಯ ಸಾಧ್ಯತೆ

Kohli & Boys May Get New Kit Sponsors as Nikes Deal Nears End

ಕಳೆದ 14 ವರ್ಷಗಳಿಂದ ಟೀಮ್ ಇಂಡಿಯಾ ಕಿಟ್ ಪ್ರಾಯೋಜಕತ್ವ ಹೊಂದಿರುವ 'ನೈಕಿ' ಸಂಸ್ಥೆಯ ಲಾಂಚನ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳುವುದು ಅನುಮಾನವೆನಿಸಿದೆ. ಅಮೆರಿಕಾದ ಪ್ರತಿಷ್ಠಿತ ಕ್ರೀಡಾ ಸಾಮಾಗ್ರಿಗಳ ಸಂಸ್ಥೆಯಾಗಿರುವ ನೈಕಿ ಟೀಮ್ ಇಂಡಿಯಾ ಜರ್ಸಿಯಲ್ಲಿ ಸುದೀರ್ಘ ಕಾಲ ರಾರಾಜಿಸಿತ್ತು.

ಕೊರೊನಾ ವೈರಸ್‌ನ ಕಾರಣದಿಂದಾಗಿ ನೈಕಿ ಸಂಸ್ಥೆ ಕೂಡ ದೊಡ್ಡಮಟ್ಟದ ನಷ್ಟವನ್ನು ಅನುಭವಿಸುತ್ತಿದೆ. ಇದರಿಂದ ಎದುರಾಗಿರುವ ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಕೆಲ ಪ್ರಮುಖ ಪ್ರಾಯೋಜಕತ್ವಗಳಿಂದ ಹೊರಬರುವ ನಿರ್ಧಾರ ನೈಕಿ ಸಂಸ್ಥೆ ಕೈಗೊಂಡಿದೆ ಎನ್ನಲಾಗ್ತಿದೆ. ಇದರಲ್ಲಿ ಟೀಮ್ ಇಂಡಿಯಾ ಜೊತೆಗಿನ ಒಪ್ಪಂದವೂ ಸೇರಿಕೊಂಡಿದೆ ಎಂದು ವರದಿಯಾಗಿದೆ.

ಬೃಹತ್ ಮೊತ್ತದ ಒಪ್ಪಂದ

ಬೃಹತ್ ಮೊತ್ತದ ಒಪ್ಪಂದ

ನಾಲ್ಕು ವರ್ಷಗಳ ಈ ಒಪ್ಪಂದ 370 ಕೋಟಿ ರೂ. ಮೊತ್ತದ್ದಾಗಿದೆ. ಇದರನ್ವಯ ಪ್ರತಿ ಪಂದ್ಯಕ್ಕೆ 85 ಲಕ್ಷ ರೂ. ಮೊತ್ತವನ್ನು ಬಿಸಿಸಿಐಗೆ ಪಾವತಿಸುತ್ತದೆ. ಜತೆಗೆ ವಾರ್ಷಿಕ 12-15 ಕೋಟಿ ರೂ. ರಾಯಲ್ಟಿ ನೀಡುತ್ತದೆ. ಇದಲ್ಲದೆ ಟೀಮ್ ಇಂಡಿಯಾಗೆ ಸಮವಸ್ತ್ರ, ಶೂಗಳು ಮತ್ತು ಇತರ ಪರಿಕರಗಳನ್ನು ಉಚಿತವಾಗಿ ಪೂರೈಸುತ್ತದೆ.

ಸೆಪ್ಟೆಂಬರ್‌ನಲ್ಲಿ ಅಂತ್ಯ

ಸೆಪ್ಟೆಂಬರ್‌ನಲ್ಲಿ ಅಂತ್ಯ

ಬಿಸಿಸಿಐ ಜೊತೆ ನೈಕಿ ಸಂಸ್ಥೆ ಹೊಂದಿರುವ ಹಾಲಿ ಒಪ್ಪಂದ ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳಲಿದೆ. ಅದಾದ ಬಳಿಕ ಒಪ್ಪಂದವನ್ನು ಮುಂದುವರಿಸದಿರುವ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ. ಆದರೆ ಸೆಪ್ಟೆಂಬರ್ ನಂತರದಲ್ಲೂ ಒಪ್ಪಂದ ಮುಂದುವರಿಸಬೇಕಾದರೆ, ಹಿಂದಿನ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಚರ್ಚೆ ನಡೆಸಬಹುದು.

ಹೊಸದಾಗಿ ಟೆಂಡರ್ ಅಹ್ವಾನ ಸಾಧ್ಯತೆ

ಹೊಸದಾಗಿ ಟೆಂಡರ್ ಅಹ್ವಾನ ಸಾಧ್ಯತೆ

ಬಿಸಿಸಿಐ ಮತ್ತು ನೈಕಿ ನಡುವಿನ ಸಂಬಂಧ ಬಹಳ ಹಳೆಯದಾಗಿದೆ. 2006ರಿಂದಲೂ ನೈಕಿ ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕನಾಗಿದೆ. ಆದರೆ ಬಿಸಿಸಿಐ ಇದಕ್ಕೆ ಒಪ್ಪಿಕೊಳ್ಳುವುದು ಅನುಮಾನ ಮತ್ತು ಹೊಸದಾಗಿ ಕಿಟ್ ಒಪ್ಪಂದಕ್ಕೆ ಟೆಂಡರ್ ಆಹ್ವಾನಿಸಬಹುದು ಎಂದು ಮಂಡಳಿಯ ಮೂಲಗಳು ತಿಳಿಸಿವೆ.

ಕೊರೊನಾ ವೈರಸ್ ಕಾಟ

ಕೊರೊನಾ ವೈರಸ್ ಕಾಟ

ಲಾಕ್​ಡೌನ್​ನಿಂದಾಗಿ ಟೀಮ್ ಇಂಡಿಯಾದ ಸುಮಾರು 12 ಪಂದ್ಯಗಳು ಈಗಾಗಲೆ ರದ್ದುಗೊಂಡಿವೆ. ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಏಕದಿನ ಸರಣಿ ಮೊಟಕುಗೊಂಡಿದ್ದರೆ, ಶ್ರೀಲಂಕಾ ಮತ್ತು ಜಿಂಬಾಬ್ವೆ ಪ್ರವಾಸಗಳೂ ರದ್ದುಗೊಂಡಿವೆ. ಟೀಮ್ ಇಂಡಿಯಾದ ಕ್ರಿಕೆಟ್ ಅಭಿಯಾನ ಇನ್ನು ಯಾವಾಗ ಆರಂಭವಾಗಲಿದ ಎಂದುದರ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ.

Story first published: Monday, June 29, 2020, 10:30 [IST]
Other articles published on Jun 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X