ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಟಿಂಗ್ಹ್ಯಾಮ್ ಟೆಸ್ಟ್ ಗೆ ಸಂಪೂರ್ಣ ಚೇತರಿಸಿಕೊಳ್ಳುವೆ: ಕೊಹ್ಲಿ ವಿಶ್ವಾಸ

Kohli confident of being fit for Nottingham Test

ಲಂಡನ್, ಆಗಸ್ಟ್ 13: ಇಂಗ್ಲೆಂಡ್ v ಭಾರತ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಗಾಯಕ್ಕೀಡಾಗಿರುವ ಭಾರತದ ನಾಯಕ ವಿರಾಟ್ ಕೊಹ್ಲಿ ಅವರು ನಾಟಿಂಗ್ಹ್ಯಾಮ್ ನ ಟ್ರೆಂಡ್ ಬ್ರಿಡ್ಜ್ ಕ್ರೀಡಾಂಗಣದಲ್ಲಿನ ಮೂರನೇ ಟೆಸ್ಟ್ ವೇಳೆ ಸಂಪೂರ್ಣ ಫಿಟ್ನೆಸ್ ಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್ ಟೆಸ್ಟ್ ಟ್ವಿಟ್ಟರ್ ತಮಾಷೆ: ಧೈರ್ಯವಿದ್ದರೆ ಭಾರತಕ್ಕೆ ಬಂದು ಆಡಿ!ಕ್ರಿಕೆಟ್ ಟೆಸ್ಟ್ ಟ್ವಿಟ್ಟರ್ ತಮಾಷೆ: ಧೈರ್ಯವಿದ್ದರೆ ಭಾರತಕ್ಕೆ ಬಂದು ಆಡಿ!

ಲಾರ್ಡ್ಸ್ ನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ ನ ಮೂರನೇ ದಿನದಾಂತ್ಯದ ಆಟದ ವೇಳೆ ಕೊಹ್ಲಿ ಬೆನ್ನಿನ ಕೆಳಭಾಗದ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ನಾಲ್ಕನೇ ದಿನ ಭಾರತದ ದ್ವಿತೀಯ ಇನ್ನಿಂಗ್ಸ್ ವೇಳೆ ಕೊಹ್ಲಿ ನಾಲ್ಕನೇ ಕ್ರಮಾಂಕಕ್ಕೆ ಬದಲಾಗಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಂತಾಗಿತ್ತು.

ಬ್ಯಾಟಿಂಗ್ ವೇಳೆ ಕೊಹ್ಲಿ ಗಾಯದ ಕಾರಣ ಹೆಣಗಾಡುತ್ತಿದ್ದುದು ಕಂಡು ಬಂದಿತ್ತು. ನೋವಿನಿಂದಾಗಿ ಕೊಹ್ಲಿಗೆ ಸರಿಯಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ರನ್ನಿಂಗ್ ವೇಳೆಯಂತೂ ಕೊಹ್ಲಿ ತುಂಬಾ ಕಷ್ಟಪಡುವಂತಾಗಿತ್ತು. ವೈದ್ಯಕೀಯ ಉಪಚಾರದ ವೇಳೆ ಕೊಹ್ಲಿ ನೋವು ನಿವಾರಕ ಮದ್ದಿನ ಮೊರೆ ಹೋಗುವ ಮಟ್ಟಕ್ಕೆ ನೋವು ಕೊಹ್ಲಿಯನ್ನು ಕಾಡಿತ್ತು.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, 'ಸೊಂಟದ ಸಮೀಪದ ಈ ನೋವಿನ ಸಮಸ್ಯೆ ಮತ್ತೆ ಮತ್ತೆ ಕಾಡುತ್ತಿದೆ. ಹಿಂದಿನ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಈ ನೋವು ಕಾಣಿಸಿಕೊಂಡಿತ್ತು. ಶ್ರಮದ ಹೊರೆಯ ಪರಿಣಾಮವೇ ಈ ಗಾಯ ಮರುಕಳಿಸುತ್ತಿರುವುದಕ್ಕೆ ಕಾರಣ. ಆದರೆ ನಾನು ಇನ್ನೈದೇ ದಿನದಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದೇನೆ. ಮುಂದಿನ ಟೆಸ್ಟ್ ಗಾಗಿ ಕಣಕ್ಕಿಳಿಯಲಿದ್ದೇನೆ' ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದ್ವಿತೀಯ ಟೆಸ್ಟ್ ನಲ್ಲಿ ಭಾರತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತ್ತು. ಇನ್ನೊಂದೆಡೆ ಟೆಸ್ಟ್ ಆರಂಭದಲ್ಲಿ ಕಾಡಿದ ಮಳೆಯೂ ಭಾರತಕ್ಕೆ ನೆಪವಾಯಿತು. ದ್ವಿತೀಯ ಟೆಸ್ಟ್ ನಲ್ಲಿ ಇಂಗ್ಲೆಂಡ್ ಒಂದು ಇನ್ನಿಂಗ್ಸ್ ಜೊತೆ 159 ರನ್ ಗೆಲುವು ದಾಖಲಿಸಿದೆ. ಒಂದೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 396/7 ರನ್ ಗಳಿಸಿ ಡಿಕ್ಲೇರ್ ಘೋಷಿಸಿದ್ದರೆ, ಭಾರತ ಎರಡು ಇನ್ನಿಂಗ್ಸ್ ಗಳಲ್ಲಿ 107+130 ರನ್ ಪೇರಿಸಿತ್ತು. ಭಾರತದ ಈ ಟೆಸ್ಟ್ ಸರಣಿಯಲ್ಲಿ 2-0 ಹಿನ್ನೆಡೆ ಅನುಭವಿಸಿದೆ.

Story first published: Monday, August 13, 2018, 11:47 [IST]
Other articles published on Aug 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X