ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಕೊಹ್ಲಿ, ಧೋನಿ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಕುಲದೀಪ್

Kohli gives us confidence, Dhoni gives us freedom, says Kuldeep

ಲಂಡನ್, ಮೇ 27: ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್‌ನಲ್ಲಿ ಕುಲದೀಪ್ ಯಾದವ್ ಹೇಳಿಕೊಳ್ಳುವ ಪ್ರದರ್ಶನವೇನೂ ನೀಡಿಲ್ಲ. ಆದರೆ ಮೇ 30ರಿಂದ ಆರಂಭಗೊಳ್ಳುತ್ತಿರುವ ವಿಶ್ವಕಪ್‌ನಲ್ಲಿ ಚೈನಾಮನ್ ಬೌಲರ್ ಕುಲದೀಪ್ ಅವರು ವಿರಾಟ್ ಕೊಹ್ಲಿ ಬಳಗಕ್ಕೆ ಬಲ ತುಂಬಲಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಯುಜುವೇಂದ್ರ ಚಾಹಲ್ ಜೊತೆ ಸ್ಪಿನ್ ವಿಭಾಗದಲ್ಲಿರುವ ಕುಲದೀಪ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಎಂಎಸ್ ಧೋನಿ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೊಹ್ಲಿ ನಮ್ಮಲ್ಲಿ ವಿಶ್ವಾಸ ತುಂಬುತ್ತಾರೆ. ಧೋನಿ ನಮಗೆ ಸ್ವಾಂತಂತ್ರ್ಯ ನೀಡುತ್ತಾರೆ ಎಂದು ಯಾದವ್ ಹೇಳಿದ್ದಾರೆ.

ಟೀಮ್ ಇಂಡಿಯಾ ಗುಟ್ಟುಗಳ ರಟ್ಟು ಮಾಡಿದ ಹಿಟ್‌ಮ್ಯಾನ್: ವೈರಲ್ ವಿಡಿಯೋಟೀಮ್ ಇಂಡಿಯಾ ಗುಟ್ಟುಗಳ ರಟ್ಟು ಮಾಡಿದ ಹಿಟ್‌ಮ್ಯಾನ್: ವೈರಲ್ ವಿಡಿಯೋ

ಟೈಮ್ಸ್ ಆಫ್ ಇಂಡಿಯಾದ ಸಂದರ್ಶನದಲ್ಲಿ ವಿಶ್ವಕಪ್ ಬಗ್ಗೆ ಮಾತನಾಡಿದ ಕುಲದೀಪ್, ಮೈದಾನದಲ್ಲಿ ನಾವು (ಚಾಹಲ್ ಮತ್ತು ಕುಲದೀಪ್) ಪರಿಸ್ಥಿಗಳನ್ನು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುತ್ತೇವೆ. ಮಧ್ಯಮ ಕ್ರಮಾಂಕ ಆಟದಲ್ಲಿ ಗಣನೀಯವಾಗಿರುವುದರಿಂದ ಎದುರಾಳಿ ತಂಡದ ಮಧ್ಯಮ ಕ್ರಮಾಂಕವನ್ನು ಬೇಗ ಮುರಿಯಲು ಪ್ರಯತ್ನಿಸುತ್ತೇವೆ' ಎಂದಿದ್ದಾರೆ.

ಕೊಹ್ಲಿ ಮತ್ತು ಧೋನಿಯ ಕುರಿತು ಮಾತನಾಡುತ್ತ ಕುಲದೀಪ್, 'ನಾವೀಸಾರಿ ಕೊಹ್ಲಿ ನಾಯಕತ್ವದಡಿಯಲ್ಲಿ ಆಡುತ್ತಿದ್ದೇವೆ. ಅಂದರೆ ಈ ಸಾರಿ ನಾವು ಪ್ರಶಸ್ತಿ ಗೆದ್ದೇ ಗೆಲ್ಲುತ್ತೇವೆ. ಯಾಕೆಂದರೆ ಕೊಹ್ಲಿ ನಮ್ಮಲ್ಲಿ ಸದಾ ವಿಶ್ವಾಸ ತುಂಬುವ ನಾಯಕ' ಎಂದರು.

ಶೇನ್‌ ವಾರ್ನ್‌ ಪ್ರಕಾರ ಇವರಿಬ್ಬರಿಂದ ಆಸೀಸ್‌ ವಿಶ್ವಕಪ್‌ ಗೆಲ್ಲುತ್ತಂತೆ!ಶೇನ್‌ ವಾರ್ನ್‌ ಪ್ರಕಾರ ಇವರಿಬ್ಬರಿಂದ ಆಸೀಸ್‌ ವಿಶ್ವಕಪ್‌ ಗೆಲ್ಲುತ್ತಂತೆ!

ಮಾತು ಮುಂದುವರೆಸಿದ ಯಾದವ್, 'ತಂಡದ ಶ್ರೇಷ್ಠ ಆಟಗಾರ ಮಹಿ ಭಾಯಿ. ನನಗೇನಾದರೂ ಸಂದೇಹವಿದ್ದರೆ ನಾವು ಧೋನಿಯಲ್ಲಿ ಹೇಳಿಕೊಳ್ಳುತ್ತೇನೆ. ಆತನಲ್ಲಿ ನಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿರುತ್ತದೆ. ಹೀಗಾಗಿ ಎಲ್ಲರೂ ಆತನ ಬಳಿ ಸಮಸ್ಯೆ/ಸಂದೇಹಗಳನ್ನು ಹೇಳಿಕೊಳ್ಳುತ್ತಾರೆ' ಎಂದು ಹೇಳಿದರು.

Story first published: Monday, May 27, 2019, 16:01 [IST]
Other articles published on May 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X