ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಯನ್ನೀಗ ತಡೆಯೋರಿಲ್ಲ, ಬ್ರಿಯಾನ್ ಲಾರಾ ದಾಖಲೆ ಬ್ರೇಕಾಯ್ತಲ್ಲ!

ಕೊಹ್ಲಿಯನ್ನೀಗ ತಡೆಯೋರಿಲ್ಲ, ಬ್ರಿಯಾನ್ ಲಾರಾ ದಾಖಲೆ ಬ್ರೇಕಾಯ್ತಲ್ಲ! | Oneindia Kannada
Kohli Goes Past Brian Lara, Breaks Into Top-10 In ODI Run-Scorers List

ನವದೆಹಲಿ, ಜನವರಿ 24: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞರನ್ನು ಬ್ಯುಸಿಯನ್ನಾಗಿಡುತ್ತಿದ್ದಾರೆ. ಕೊಹ್ಲಿ ಬ್ಯಾಟ್ ಬೀಸಿದರೆ ಸಾಕು; ಅಲ್ಲೊಂದು ಹೊಸ ದಾಖಲೆಯೀಗ ನಿರ್ಮಾಣವಾಗುತ್ತಿದೆ. ಸದ್ಯ ಕೊಹ್ಲಿ ಏಕದಿನದ ಕ್ರಿಕೆಟ್‌ನಲ್ಲಿ ಬ್ರಿಯಾನ್ ಲಾರಾ ಧಾಖಲೆಯನ್ನು ಮೀರಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಕೊನೆ 2 ಪಂದ್ಯಕ್ಕೆ ವಿರಾಟ್ ಕೊಹ್ಲಿ ಅಲಭ್ಯನ್ಯೂಜಿಲೆಂಡ್ ವಿರುದ್ಧದ ಕೊನೆ 2 ಪಂದ್ಯಕ್ಕೆ ವಿರಾಟ್ ಕೊಹ್ಲಿ ಅಲಭ್ಯ

ದಾಖಲೆ ವಿಚಾರದಲ್ಲಿ ಟಾಪ್‌ ಟೆನ್‌ ಒಳಗೆ ಹೆಸರು ಬಂದರೆ ಅದಕ್ಕೆ ಹೆಚ್ಚಿನ ಮಾನ್ಯತೆಯಿದೆ. ಕೊಹ್ಲಿ ಏಕದಿನ ಅತ್ಯಧಿಕ ರನ್‌ಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್‌ ದಿಗ್ಗಜ ಬ್ರಿಯಾನ್‌ ಲಾರಾ ಅವರನ್ನು ಮೀರಿಸಿ ಅಗ್ರ 10ರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ. ಏಕದಿನ ಅಧಿಕ ರನ್ ಸರದಾರರಲ್ಲಿ ಕೊಹ್ಲಿ ಈಗ 10ನೇ ಸ್ಥಾನದಲ್ಲಿದ್ದಾರೆ.

ಕ್ರಿಕೆಟ್‌ಗೆ ವಿದಾಯ ಘೋಷಿಸಿದ ದಕ್ಷಿಣ ಆಫ್ರಿಕಾ ಆಲ್‌ ರೌಂಡರ್ ಜೋಹಾನ್ಕ್ರಿಕೆಟ್‌ಗೆ ವಿದಾಯ ಘೋಷಿಸಿದ ದಕ್ಷಿಣ ಆಫ್ರಿಕಾ ಆಲ್‌ ರೌಂಡರ್ ಜೋಹಾನ್

ಬುಧವಾರ (ಜನವರಿ 23) ನಡೆದ ಭಾರತ-ನ್ಯೂಜಿಲ್ಯಾಂಡ್ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಪರೂಪದ ದಾಖಲೆ ಮಾಡಿದರು. ವಿರಾಟ್ 45 ರನ್ ಕೊಡುಗೆಯೊಂದಿಗೆ ಭಾರತ ಈ ಪಂದ್ಯವನ್ನು 8 ವಿಕೆಟ್‌ನಿಂದ ಸುಲಭವಾಗಿ ಗೆದ್ದುಕೊಂಡಿತು.

ಟಾಪ್ 10ನಲ್ಲಿ ಕೊಹ್ಲಿ

ಟಾಪ್ 10ನಲ್ಲಿ ಕೊಹ್ಲಿ

ಏಕದಿನದಲ್ಲಿ ಅತ್ಯಧಿಕ ರನ್ ಸಾಧಕರಲ್ಲಿ ಈ ಹಿಂದೆ ವಿರಾಟ್ ಕೊಹ್ಲಿ ಎಂಎಸ್ ಧೋನಿಯ ಬಳಿಕ 13ನೇ ಸ್ಥಾನದಲ್ಲಿದ್ದರು. ಈಗ ಕೊಹ್ಲಿ ಒಟ್ಟು 10430 ರನ್ ಸಾಧನೆಯೊಂದಿಗೆ 10ನೇ ಸ್ಥಾನ ಆವರಿಸಿಕೊಂಡಿದ್ದಾರೆ. ಲಾರಾ ಒಟ್ಟು 10405 ರನ್‌ನೊಂದಿಗೆ ಈ ಮೊದಲು 10ನೇ ಸ್ಥಾನದಲ್ಲಿದ್ದರು.

ಸಚಿನ್‌ ನಂಬರ್ ವನ್!

ಸಚಿನ್‌ ನಂಬರ್ ವನ್!

ಏಕದಿನದಲ್ಲಿ 10 ಸಾವಿರಕ್ಕೂ ಅಧಿಕ ರನ್ ಗಳಿಸಿದವರಲ್ಲಿ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ (18426 ರನ್) ಮೊದಲ ಸ್ಥಾನದಲ್ಲಿದ್ದಾರೆ. 2. ಕುಮಾರ ಸಂಗಕ್ಕಾರ (ಶ್ರೀಲಂಕಾ-14234 ರನ್), 3. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ-13704 ರನ್), 4. ಸನತ್ ಜಯಸೂರ್ಯಾ (ಶ್ರೀಲಂಕಾ-13430 ರನ್), 5. ಮಹೇಲಾ ಜಯವರ್ಧನೆ (ಶ್ರೀಲಂಕಾ-12,650 ರನ್), 6. ಇಂಝಮಾಮ್ ಉಲ್ ಹಖ್ (ಪಾಕಿಸ್ತಾನ-11,739 ರನ್, 7. ಜಾಕ್ ಕ್ಯಾಲೀಸ್ (ಸೌತ್ ಆಫ್ರಿಕಾ-11,579 ರನ್), 8. ಸೌರವ್ ಗಂಗೂಲಿ (ಭಾರತ-11,363 ರನ್), 9. ರಾಹುಲ್ ದ್ರಾವಿಡ್ (ಭಾರತ-10,889 ರನ್) ಸ್ಥಾನಗಳಲ್ಲಿದ್ದಾರೆ.

ಸರಣಿ ಮುನ್ನಡೆಯಲ್ಲಿ ಭಾರತ

ಸರಣಿ ಮುನ್ನಡೆಯಲ್ಲಿ ಭಾರತ

ನ್ಯೂಜಿಲ್ಯಾಂಡ್‌ನ ನೇಪಿಯರ್ ನಲ್ಲಿರುವ ಮೆಕ್‌ಲೀನ್‌ ಪಾರ್ಕ್‌ ಸ್ಟೇಡಿಯಂನಲ್ಲಿ ಬುಧವಾರ (ಜ.23) ನಡೆದ ನ್ಯೂಜಿಲ್ಯಾಂಡ್-ಭಾರತ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 45, ಶಿಖರ್ ಧವನ್ 75 ರನ್, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಶಮಿ ಬೌಲಿಂಗ್ ದಾಳಿಯ ಬೆಂಬಲದೊಂದಿಗೆ ಭಾರತ 8 ವಿಕೆಟ್ ಗೆಲುವನ್ನಾಚರಿಸಿತು. ಇದರೊಂದಿಗೆ ಭಾರತ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯ ಮುನ್ನಡೆಯನ್ನೂ ಸಾಧಿಸಿತು.

ಧವನ್ ಕೂಡಾ ದಾಖಲೆ

ಧವನ್ ಕೂಡಾ ದಾಖಲೆ

ನ್ಯೂಜಿಲ್ಯಾಂಡ್-ಭಾರತ ಇದೇ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಕೂಡ ಬ್ರಿಯಾನ್ ಲಾರಾ ದಾಖಲೆಯನ್ನು ಸರಿದೂಗಿಸಿಕೊಂಡಿದ್ದರು. 118 ಇನ್ನಿಂಗ್ಸ್‌ಗಳಲ್ಲಿ 5,000 ರನ್ ಸಾಧನೆ ಮಾಡಿದ್ದ ಧವನ್, ಲಾರಾ ದಾಖಲೆಯನ್ನು ಸರಿದೂಗಿಸಿದ್ದರು. ಆದರೆ ಇದೇ ಸಾಧನೆಗಾಗಿ ಧವನ್ ಅವರು ಭಾರತದ ಸೌರವ್ ಗಂಗೂಲಿ ಮತ್ತು ಸೌತ್ ಆಫ್ರಿಕಾದ ಗ್ರೇಮ್ ಸ್ಮಿತ್ ದಾಖಲೆಯನ್ನು ಮೀರಿಸಿದ್ದರು.

Story first published: Thursday, January 24, 2019, 14:14 [IST]
Other articles published on Jan 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X