ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ vs ವಿರಾಟ್ ಕೊಹ್ಲಿ: ಭಾರತ ಹೆಚ್ಚು ಗೆದ್ದಿದ್ದು ಯಾರ ನಾಯಕತ್ವದಲ್ಲಿ?!

Kohli is aggressive, Dhoni was hard to read: Former cricketer Laxman Sivaramakrishnan

ಬೆಂಗಳೂರು: ಆಧುನಿಕ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದ ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಇಬ್ಬರೂ ಜನಪ್ರಿಯ ಆಟಗಾರರು. ಧೋನಿ ನಾಯಕತ್ವದಡಿಯಲ್ಲಿ ಭಾರತ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಹೀಗೆ ಒಟ್ಟಿಗೆ ಮೂರು ಐಸಿಸಿ ವಿಶ್ವ ಪ್ರಶಸ್ತಿಗಳನ್ನು ಗೆದ್ದಿದೆ. ಇತ್ತ ಕೊಹ್ಲಿ ನಾಯಕತ್ವದಲ್ಲಿ ಬ್ಲೂ ಬಾಯ್ಸ್ ಪಡೆ ಹೆಚ್ಚು ಬಲಿಷ್ಠ ಕ್ರಿಕೆಟ್ ತಂಡವಾಗಿ ಹೊರಹೊಮ್ಮುತ್ತಿದೆ.

ಕೆಎಲ್ ರಾಹುಲ್, ರಿಷಭ್ ಪಂತ್‌ ವಿಕೆಟ್ ಕೀಪಿಂಗ್ ಬಗ್ಗೆ ಬಾಯ್ತೆರೆದ ಕಿರ್ಮಾನಿಕೆಎಲ್ ರಾಹುಲ್, ರಿಷಭ್ ಪಂತ್‌ ವಿಕೆಟ್ ಕೀಪಿಂಗ್ ಬಗ್ಗೆ ಬಾಯ್ತೆರೆದ ಕಿರ್ಮಾನಿ

ಎಂಎಸ್ ಧೋನಿ ಕ್ಯಾಪ್ಟನ್ಸಿಯಲ್ಲಿ ಭಾರತ ಹೆಚ್ಚು ಐಸಿಸಿ ವಿಶ್ವ ಪ್ರಶಸ್ತಿಗಳನ್ನು ಗೆದ್ದು ಬೀಗಿದ್ದರೆ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಹೆಚ್ಚು ಆಕರ್ಷಣೀಯ ತಂಡವಾಗಿ ಬೆಳೆಯುತ್ತಿದೆ ಮತ್ತು ಅಪಾಯಕಾರಿ ವೇಗಿಗಳಿರುವ ತಂಡವಾಗಿ ವಿಶ್ವ ಕ್ರಿಕೆಟ್‌ನಲ್ಲಿ ಗಮನ ಸೆಳೆಯುತ್ತಿದೆ.

'ಭಾರತ-ಇಂಗ್ಲೆಂಡ್ ಮ್ಯಾಚಿನಿಂದ ವಿಶ್ವಕಪ್‌ನಲ್ಲಿ ಪಾಕ್ ಹೊರ ಬಿದ್ದಿದ್ದಲ್ಲ!': ಹಫೀಜ್'ಭಾರತ-ಇಂಗ್ಲೆಂಡ್ ಮ್ಯಾಚಿನಿಂದ ವಿಶ್ವಕಪ್‌ನಲ್ಲಿ ಪಾಕ್ ಹೊರ ಬಿದ್ದಿದ್ದಲ್ಲ!': ಹಫೀಜ್

ಹಾಗಾದರೆ ಕೊಹ್ಲಿ ಮತ್ತು ಧೋನಿಯಲ್ಲಿ ಬೆಸ್ಟ್ ಬೆಸ್ಟ್ ಕ್ಯಾಪ್ಟನ್ ಯಾರು? ಭಾರತದ ಮಾಜಿ ಆಟಗಾರ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಇಬ್ಬರ ಬಗ್ಗೆಯೂ ಅನಿಸಿಕೆ ಹಂಚಿಕೊಂಡಿದ್ದಾರೆ. ಜೊತೆಗೆ ಕೊಹ್ಲಿ ಮತ್ತು ಧೋನಿ ನಾಯಕತ್ವದಲ್ಲಿ ಭಾರತ ಹೆಚ್ಚು ಪಂದ್ಯಗಳನ್ನು ಗೆದ್ದಿದ್ದರ ಅಂಕಿ ಅಂಶಗಳೂ ಇಲ್ಲಿವೆ.

ಇಬ್ಬರ ನಾಯಕತ್ವದ ಶೈಲಿಯೂ ಭಿನ್ನ

ಇಬ್ಬರ ನಾಯಕತ್ವದ ಶೈಲಿಯೂ ಭಿನ್ನ

ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಲಕ್ಷ್ಮಣ್, ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಇಬ್ಬರ ನಾಯಕತ್ವದ ಶೈಲಿಯೂ ಎರಡು ವಿಭಿನ್ನ ತಂಡದ ಅಭಿವೃದ್ಧಿಗೆ ಕಾರಣವಾಗಿದೆ. ಎರಡೂ ತಂಡಗಳೂ ತನ್ನದೇ ರೀತಿಯಲ್ಲಿ ಯಶಸ್ಸಿಗೆ ದಾರಿ ಕಂಡುಕೊಂಡಿವೆ ಎಂದಿದ್ದಾರೆ.

ಏಕದಿನದಲ್ಲಿ ಗೆಲುವಿನ ಶೇಕಡಾವಾರು

ಏಕದಿನದಲ್ಲಿ ಗೆಲುವಿನ ಶೇಕಡಾವಾರು

ಧೋನಿ ಒಟ್ಟಿಗೆ 200 ಏಕದಿನ ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದಾರೆ. ಇದರಲ್ಲಿ 59.52ರ ಜಯದ ಶೇಕಡಾವಾರಿನಂತೆ ಭಾರತ 110 ಪಂದ್ಯಗಳಲ್ಲಿ ಗೆದ್ದಿದೆ. ಕೊಹ್ಲಿ 89 ಏಕದಿನ ಪಂದ್ಯಗಳಲ್ಲಿ ಭಾರತಕ್ಕೆ ನಾಯಕನಾಗಿ ಜವಾಬ್ದಾರಿ ನಿರ್ವಹಿಸಿದ್ದು ಇದರಲ್ಲಿ 71.83 ಜಯದ ಶೇಕಡಾವಾರಿನಂತೆ 62 ಪಂದ್ಯಗಳಲ್ಲಿ ಭಾರತ ಗೆದ್ದಿದೆ.

ಕೊಹ್ಲಿ ಆಕ್ರಮಣಕಾರಿ ನಾಯಕ

ಕೊಹ್ಲಿ ಆಕ್ರಮಣಕಾರಿ ನಾಯಕ

'(ಕೊಹ್ಲಿ, ಧೋನಿ) ಇಬ್ಬರೂ ವಿಭಿನ್ನ ನಾಯಕರು. ವಿರಾಟ್ ಹೆಚ್ಚು ಆಕ್ರಮಣಕಾರಿ ಮತ್ತು ಅಭಿವ್ಯಕ್ತಿಶೀಲ ರೀತಿಯ ನಾಯಕ. ಎಂಎಸ್ ಧೋನಿ ತೋರಿಕೆಯಿಂದ ಕೊಂಚ ದೂರ ಉಳಿಯುತ್ತಾರೆ. ನಾವು ಕಷ್ಟಪಟ್ಟು ಅವರ ಮುಖಚಹರೆ ನೋಡಿ ಅವರ ದೇಹ ಏನು ಮಾತನಾಡುತ್ತಿದೆ ಎಂದು ನೋಡಬೇಕಾಗುತ್ತದೆ. ಆದರೆ ಎಂಎಸ್‌ಡಿ ಬೌಲರ್‌ಗಳಿಗೆ ಬಲು ಹತ್ತಿರದ ನಾಯಕ. ಇದು ಬೌಲರ್‌ಗಳಿಗೆ ಬಲುದೊಡ್ಡ ಪ್ರಯೋಜನವಾಗಿದೆ,' ಎಂದು ಲಕ್ಷ್ಮಣ್ ವಿವರಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿನ ಏಳು-ಬೀಳು

ಟೆಸ್ಟ್ ಕ್ರಿಕೆಟ್‌ನಲ್ಲಿನ ಏಳು-ಬೀಳು

ಕೂಲ್ ಕ್ಯಾಪ್ಟನ್ ಧೋನಿ ನಾಯಕತ್ವ ವಹಿಸಿದ್ದ 60 ಟೆಸ್ಟ್ ಪಂದ್ಯಗಳಲ್ಲಿ 45ರ ಶೇಕಡಾವಾರಿನಂತೆ ಭಾರತ 27 ಪಂದ್ಯಗಳನ್ನು ಗೆದ್ದು 18 ಪಂದ್ಯಗಳನ್ನು ಸೋತಿದೆ. ಕೊಹ್ಲಿಯಡಿಯಲ್ಲಿ ಭಾರತ 55 ಪಂದ್ಯಗಳನ್ನಾಡಿದ್ದು, ಇದರಲ್ಲಿ ವಿನ್ನಿಂಗ್ ಪರ್ಸೆಂಟೇಜ್ 60ರಂತೆ 33 ಪಂದ್ಯಗಳನ್ನು ಗೆದ್ದಿದೆ, 12 ಪಂದ್ಯಗಳನ್ನು ಸೋತಿದೆ.

Story first published: Wednesday, June 17, 2020, 17:48 [IST]
Other articles published on Jun 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X