ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿದೇಶಿ ನೆಲದಲ್ಲಿ ರನ್ ಗಳಿಕೆ : ನಾಯಕನಾಗಿ ಕೊಹ್ಲಿ ದಾಖಲೆ!

By Mahesh
Kohli overtakes Ganguly: Most runs scored by Indian captains outside India

ನ್ಯಾಟಿಂಗ್ ಹ್ಯಾಮ್ ,ಆಗಸ್ಟ್ 19: ಇಂಗ್ಲೆಂಡ್ ನಡುವಿನ ನ್ಯಾಟಿಂಗ್ ಹ್ಯಾಮ್ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಮೊದಲ ಅವಧಿಯಲ್ಲೇ ಭಾರತ ತನ್ನೆಲ್ಲ ವಿಕೆಟ್ ಕಳೆದುಕೊಂಡು 329ರನ್ ಸ್ಕೋರ್ ಮಾಡಿದೆ. ಇದಕ್ಕೆ ಕಾರಣವಾಗಿದ್ದು, ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ನಡುವಿನ ಜೊತೆಯಾಟ ಎಂದರೆ ತಪ್ಪಾಗಲಾರದು.

ಇಂಗ್ಲೆಂಡಲ್ಲಿ ಮೊದಲ ಶತಕ ಬಾರಿಸಿ, ಕೊಹ್ಲಿ ಮಾಡಿದ ಸಾಧನೆಗಳುಇಂಗ್ಲೆಂಡಲ್ಲಿ ಮೊದಲ ಶತಕ ಬಾರಿಸಿ, ಕೊಹ್ಲಿ ಮಾಡಿದ ಸಾಧನೆಗಳು

ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯಕ್ಕೆ 87 ಓವರ್ ಗಳಲ್ಲಿ ಭಾರತ 307/6 ಸ್ಕೋರ್ ಮಾಡಿತ್ತು. ಮೊದಲ ವಿಕೆಟ್ ಗೆ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ 60ರನ್ ಕಲೆ ಹಾಕಿ ಉತ್ತಮ ಅಡಿಪಾಯ ತಂದರು. ನಂತರ ನಾಲ್ಕನೇ ವಿಕೆಟ್ ಗೆ ನಾಯಕ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಶತಕದ ಜೊತೆಯಾಟ ನಡೆಸಿ ಬಲ ತುಂಬಿದರು.

1
42376

ನಾಲ್ಕನೆ ವಿಕೆಟ್ ಗೆ ಈ ಜೋಡಿ 159ರನ್ ಕಲೆ ಹಾಕಿ, ದಿನದ ಆಂತ್ಯಕ್ಕೆ 307ರನ್ ಗಳಿಸಿದ್ದ ಭಾರತ ದಿಢೀರ್ ಕುಸಿತ ಕಂಡು, ಬೃಹತ್ ಮೊತ್ತ ಕಲೆ ಹಾಕುವ ಅವಕಾಶ ತಪ್ಪಿಸಿಕೊಂಡಿತು.

ಈ ನಡುವೆ ವಿರಾಟ್ ಕೊಹ್ಲಿ ಅವರು 97ರನ್ ಗಳಿಸುವ ಮೂಲಕ ಕೆಲ ದಾಖಲೆಗಳನ್ನು ಬದಿಗೊತ್ತಿದರು.

ಬೇರೆ ಯಾವ ನಾಯಕ ಕೂಡಾ ಈ ದಾಖಲೆ ಮಾಡಿಲ್ಲ

ಬೇರೆ ಯಾವ ನಾಯಕ ಕೂಡಾ ಈ ದಾಖಲೆ ಮಾಡಿಲ್ಲ

ವಿದೇಶಿ ನೆಲದಲ್ಲಿ ರನ್ ಗಳಿಕೆಯಲ್ಲಿ ಯಾವೊಬ್ಬ ನಾಯಕ ಗಳಿಸದಷ್ಟು ರನ್ ಗಳಿಸಿದ್ದಾರೆ ವಿರಾಟ್ ಕೊಹ್ಲಿ. ಸೌರವ್ ಗಂಗೂಲಿ ಅವರು ಈ ಹಿಂದೆ ಈ ದಾಖಲೆ ಹೊಂದಿದ್ದರು. ಸೌರವ್ ಗಂಗೂಲಿ ಅವರು 28 ಟೆಸ್ಟ್ ಪಂದ್ಯಗಳಿಂದ 43 ರನ್ ಸರಾಸರಿಯಂತೆ 1,693ರನ್ (3 ಶತಕ, 11 ಅರ್ಧಶತಕ) ಗಳಿಸಿ, ದಾಖಲೆ ಬರೆದಿದ್ದರು.

ಈಗ ಕೊಹ್ಲಿ 1694ರನ್ ಗಳಿಸಿದ್ದಾರೆ
1693-ಸೌರವ್ ಗಂಗೂಲಿ
1591-ಎಂಎಸ್ ಧೋನಿ

ಇಂಗ್ಲೆಂಡಿನಲ್ಲಿ ಅತಿ ಹೆಚ್ಚು ಅರ್ಧಶತಕ

ಇಂಗ್ಲೆಂಡಿನಲ್ಲಿ ಅತಿ ಹೆಚ್ಚು ಅರ್ಧಶತಕ

ಇಂಗ್ಲೆಂಡಿನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ 8 ಅರ್ಧಶತಕ ಗಳಿಸಿದ್ದರೆ, ಧೋನಿ ಅವರು 10 ಅರ್ಧಶತಕ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ಭಾರತದ ನಾಯಕ: ಅತಿ ಹೆಚ್ಚು ಟೆಸ್ಟ್ ರನ್ ಗಳಿಕೆ

ಇಂಗ್ಲೆಂಡ್ ನಲ್ಲಿ ಭಾರತದ ನಾಯಕನಾಗಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಕೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕೊಹ್ಲಿ ಏರಿದ್ದಾರೆ. ಎಂಎಸ್ ಧೋನಿ, ಮೊಹಮ್ಮದ್ ಅಜರುದ್ದೀನ್ ಹಾಗೂ ಸೌರವ್ ಗಂಗೂಲಿ ನಂತರದ ಸ್ಥಾನದಲ್ಲಿ ಕೊಹ್ಲಿ ಇದ್ದಾರೆ.

50 ರಿಂದ 100ರನ್ ಪರಿವರ್ತನೆ

50ರಿಂದ 100ರನ್ ಪರಿವರ್ತನೆ ಮಾಡುವುದರಲ್ಲಿ ಡಾನ್ ಬ್ರಾಡ್ಮನ್ ಜತೆಗೆ ಕೊಹ್ಲಿ ದಾಖಲೆ ತುಲನೆ ಮಾಡಲಾಗಿದೆ. ಜೊತೆಗೆ 50ರನ್ ಗಳಿಸಿ, 100ರನ್ ಗಳಿಸಲು ಪರದಾಡಿದ ಆಟಗಾರರ ಪಟ್ಟಿಯೂ ಇದೆ.

Story first published: Sunday, August 19, 2018, 19:14 [IST]
Other articles published on Aug 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X