ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನ ಪ್ರಶ್ನಿಸಿದವರಿಗೆ ಜಾಡಿಸಿದ ಬಾಲ್ಯದ ಕೋಚ್

Virat Kohli’s Childhood Coach Rajkumar Sharma Slams Statements About Kohli Missing Out On T20 World Cup

ಭಾರತ ತಂಡದ ರನ್ ಮಷಿನ್ ಎಂದೇ ಖ್ಯಾತಿ ಹೊಂದಿರುವ ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಅವರು ಮುಂಬರುವ 2022ರ ಟಿ20 ವಿಶ್ವಕಪ್‌ನಿಂದ ಮಾಜಿ ನಾಯಕನನ್ನು ಹೊರಗಿಡುವ ಹೇಳಿಕೆಗಳನ್ನು ಸೋಮವಾರ ಕಟುವಾಗಿ ಟೀಕಿಸಿದ್ದಾರೆ.

ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ ಮತ್ತು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಬಹುದಾದರೆ, ವಿರಾಟ್ ಕೂಡ ಟಿ20 ಪಂದ್ಯದ ತಂಡದಿಂದ ಕೈಬಿಡಬಹುದು ಎಂದು ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಹೇಳಿಕೆ ನೀಡಿದ ನಂತರ ರಾಜ್‌ಕುಮಾರ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.

IND vs ENG 1ನೇ ಏಕದಿನ: ವಿರಾಟ್ ಕೊಹ್ಲಿ ಬದಲಿಗೆ ಯಾರು ಕಣಕ್ಕೆ?; 2 ತಂಡಗಳ ಆಡುವ 11ರ ಬಳಗIND vs ENG 1ನೇ ಏಕದಿನ: ವಿರಾಟ್ ಕೊಹ್ಲಿ ಬದಲಿಗೆ ಯಾರು ಕಣಕ್ಕೆ?; 2 ತಂಡಗಳ ಆಡುವ 11ರ ಬಳಗ

ಕೆಲವು ವರದಿಗಳ ಪ್ರಕಾರ, ಈ ವರ್ಷದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2022ರ ಸಮಯದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯನ್ನು ಬೆಂಚ್ ಕಾಯಿಸುವಂತೆ ಮಾಡಲಿದೆ ಎಂದಿವೆ.

ನನಗೆ ಈ ಹೇಳಿಕೆಗಳು ತಮಾಷೆಯಾಗಿವೆ ಎನಿಸುತ್ತಿದೆ

ನನಗೆ ಈ ಹೇಳಿಕೆಗಳು ತಮಾಷೆಯಾಗಿವೆ ಎನಿಸುತ್ತಿದೆ

"ನನಗೆ ಈ ಹೇಳಿಕೆಗಳು ತಮಾಷೆಯಾಗಿವೆ. ನೀವು ಅಂತಹ ಹೇಳಿಕೆಗಳನ್ನು ನೀಡುವವರ ದಾಖಲೆಗಳನ್ನು ನೋಡಬೇಕು. ನೀವು ಟಿ20 ಸ್ವರೂಪದ ಬಗ್ಗೆ ಮಾತನಾಡುತ್ತಿದ್ದೀರಿ, ಅಲ್ಲಿ ವಿರಾಟ್ ಕೊಹ್ಲಿ ಸರಾಸರಿ 50 ಪ್ಲಸ್, ಅವರ ಸ್ಟ್ರೈಕ್ ರೇಟ್ 140 ಇದೆ, ಈ ಆಟಗಾರನಿಂದ ಇನ್ನೇನು ನಿರೀಕ್ಷೆ ಮಾಡುತ್ತೀರಿ?," ಎಂದು ವಿರಾಟ್ ಲೊಹ್ಲಿ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಎಎನ್‌ಐಗೆ ತಿಳಿಸಿದ್ದಾರೆ.

"ಅವರು ಸುಮಾರು 99 ಪಂದ್ಯಗಳಲ್ಲಿ ಈ ದಾಖಲೆಗಳನ್ನು ಹೊಂದಿದ್ದಾರೆ ಮತ್ತು ಕೇವಲ 5 ಪಂದ್ಯಗಳಲ್ಲಿ ಅಲ್ಲ. ಐಪಿಎಲ್ ವೈಫಲ್ಯದ ನಂತರ ವಿರಾಟ್ ಕೊಹ್ಲಿ ಅವರನ್ನು ಟಿ20 ವಿಶ್ವಕಪ್ ತಂಡಕ್ಕೆ ಸೇರಿಸಬಾರದು ಎಂದು ನೀವು ಭಾವಿಸಿದರೆ, ಈ ಜನರು ತಮ್ಮ ಸಾಧನೆ ಏನು ಮಾಡಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಅವರಿಗೆ ಮನೆಕೆಲಸ ಸರಿಯಾಗಿದೆ," ಎಂದು ರಾಜ್‌ಕುಮಾರ್ ಶರ್ಮಾ ಟೀಕಿಸಿದರು.

ಟಿ20 ಪಂದ್ಯಗಳ ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 12 ರನ್

ಟಿ20 ಪಂದ್ಯಗಳ ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 12 ರನ್

ಮಾಜಿ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಐದನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಕೇವಲ 11 ಮತ್ತು 20 ರನ್‌ಗಳನ್ನು ಗಳಿಸಿದರು ಮತ್ತು ಟಿ20 ಪಂದ್ಯಗಳಲ್ಲಿ ತಮ್ಮ ಕೆಟ್ಟ ಪ್ರದರ್ಶನವನ್ನು ಮುಂದುವರೆಸಿದರು. ಇನ್ನು ಟಿ20 ಪಂದ್ಯಗಳ ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 12 ರನ್ ಗಳಿಸಿದರು.

ಅಲ್ಲದೇ, ವಿರಾಟ್ ಕೊಹ್ಲಿ ಕಳಪೆ ಐಪಿಎಲ್ 2022 ಅನ್ನು ಹೊಂದಿದ್ದರು. ಇದರಲ್ಲಿ ಅವರು 16 ಪಂದ್ಯಗಳಲ್ಲಿ 22.73 ಸರಾಸರಿಯಲ್ಲಿ ಮತ್ತು 115.98 ಸ್ಟ್ರೈಕ್ ರೇಟ್‌ನಲ್ಲಿ 341 ರನ್‌ಗಳನ್ನು ಮಾತ್ರ ಗಳಿಸಿದರು. ಇಡೀ ಪಂದ್ಯಾವಳಿಯಲ್ಲಿ ಅವರು ಕೇವಲ ಎರಡು ಅರ್ಧಶತಕಗಳನ್ನು ಗಳಿಸಲು ಸಾಧ್ಯವಾಯಿತು.

ವಿರಾಟ್ ಕೊಹ್ಲಿ ಗಾಯದ ಪ್ರಮಾಣವು ಇನ್ನೂ ತಿಳಿದಿಲ್ಲ

ವಿರಾಟ್ ಕೊಹ್ಲಿ ಗಾಯದ ಪ್ರಮಾಣವು ಇನ್ನೂ ತಿಳಿದಿಲ್ಲ

ಸದ್ಯ ಕ್ರಿಕೆಟ್‌ನಲ್ಲಿ ಫಾರ್ಮ್ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ಮಂಗಳವಾರ ಓವಲ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಮೂರನೇ ಟಿ20 ಅಂತರಾಷ್ಟ್ರೀಯ ಪಂದ್ಯದ ವೇಳೆ ತೊಡೆಸಂದು ಗಾಯಕ್ಕೆ ಒಳಗಾಗಿದ್ದಾರೆ.

ವಿರಾಟ್ ಕೊಹ್ಲಿ ಗಾಯದ ಪ್ರಮಾಣವು ಇನ್ನೂ ತಿಳಿದಿಲ್ಲ, ಆದರೆ 33 ವರ್ಷದ ಅನುಭವಿ ಆಟಗಾರನಿಗೆ ವಿಶ್ರಾಂತಿ ನೀಡಲು ಭಾರತ ತಂಡದ ಆಡಳಿತವು ಮನಸ್ಸಿಲ್ಲ. ಆದರೂ ಮಂಗಳವಾರದಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಉಭಯ ತಂಡಗಳು ಕಣಕ್ಕಿಳಿಯಲಿವೆ. ಲಾರ್ಡ್ಸ್ (ಜುಲೈ 14) ಮತ್ತು ಮ್ಯಾಂಚೆಸ್ಟರ್‌ನಲ್ಲಿ (ಜುಲೈ 17) ಮುಂದಿನ ಎರಡು ಪಂದ್ಯಗಳಿಗೆ ಲಭ್ಯವಿರುತ್ತಾರೆ.

"ಕಳೆದ ಪಂದ್ಯದ ವೇಳೆ ವಿರಾಟ್‌ಗೆ ತೊಡೆಸಂದು ಸೆಳೆತವಿದೆ. ಇದು ಫೀಲ್ಡಿಂಗ್ ಸಮಯದಲ್ಲಿ ಸಂಭವಿಸಿದೆಯೇ ಅಥವಾ ಬ್ಯಾಟಿಂಗ್ ಮಾಡುವಾಗ ದೃಢೀಕರಿಸಿಲ್ಲ. ಕೊಹ್ಲಿ ಬಹುಶಃ ಓವಲ್‌ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಿಂದ ಹೊರಗುಳಿಯುತ್ತಾರೆ," ಎಂದು ಬಿಸಿಸಿಐ ಮೂಲ PTIಗೆ ತಿಳಿಸಿದೆ.

Story first published: Tuesday, July 12, 2022, 13:45 [IST]
Other articles published on Jul 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X