ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ODIನಲ್ಲಿ ಕಿಂಗ್‌ ಕೊಹ್ಲಿ 42ನೇ ಶತಕ, ದಾದಾ ದಾಖಲೆ ಧೂಳೀಪಟ!

Virat Kohli surpasses Sourav Ganguly 2019

ಪೋರ್ಟ್‌ ಆಫ್‌ ಸ್ಪೇನ್‌, ಆಗಸ್ಟ್‌ 11: ಆಧುನಿಕ ಕ್ರಿಕೆಟ್‌ನ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ, ಭಾನುವಾರ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ 2ನೇ ಪಂದ್ಯದಲ್ಲಿ ಒಡಿಐ ವೃತ್ತಿ ಬದುಕಿನ 42ನೇ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

1
46248

ಪಂದ್ಯದ ಮೊದಲ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದ 30 ವರ್ಷದ ಅನುಭವಿ ಬ್ಯಾಟ್ಸ್‌ಮನ್‌, ಇದೇ ವೇಳೆ ಹಲವು ದಾಖಲೆಗಳನ್ನು ಬರೆದಿದ್ದಾರೆ. ವಿಂಡೀಸ್‌ ವಿರುದ್ಧ ಒಡಿಐನಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ವಿಶ್ವ ದಾಖಲೆಯೊಂದಿಗೆ, ಭಾರತದ ಪರ ಒಡಿಐನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರಲ್ಲಿ 2ನೇ ಸ್ಥಾನಕ್ಕೇರಿ ಮಾಜಿ ನಾಯಕ ಸೌರವ್‌ ಗಂಗೂಲಿ ಅವರ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ.

26 ವರ್ಷಗಳ ಒಡಿಐ ದಾಖಲೆ ನುಚ್ಚುನೂರು ಮಾಡಿದ ಕಿಂಗ್‌ ಕೊಹ್ಲಿ!26 ವರ್ಷಗಳ ಒಡಿಐ ದಾಖಲೆ ನುಚ್ಚುನೂರು ಮಾಡಿದ ಕಿಂಗ್‌ ಕೊಹ್ಲಿ!

ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ತಿ ಹೆಚ್ಚು ಶತಕಗಳನ್ನು ದಾಖಲಿಸಿದವರ ಪೈಕಿ ವಿರಾಟ್‌ ಎರಡನೇ ಸ್ಥಾನದಲ್ಲಿದ್ದು, ಕೇವಲ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ (49 ಶತಕ ಮತ್ತು 18,426 ರನ್‌) ಮಾತ್ರವೇ ಶತಕಗಳ ಪಟ್ಟಿಯಲ್ಲಿ ಹಾಗೂ ಭಾರತದ ಪರ ಅತಿ ಹೆಚ್ಚು ಒಡಿಐ ರನ್‌ಗಳನ್ನು ಗಳಿಸಿದವರ ಪೈಕಿ ಕೊಹ್ಲಿಗಿಂತಲೂ ಮುಂದಿದ್ದಾರೆ.

ಭಾರತ ವಿರುದ್ಧದ ಟೆಸ್ಟ್‌ ಸರಣಿಗೆ ಗೇಲ್‌ ಬದಲು ದೈತ್ಯನನ್ನು ಕರೆತಂದ ವಿಂಡೀಸ್‌!ಭಾರತ ವಿರುದ್ಧದ ಟೆಸ್ಟ್‌ ಸರಣಿಗೆ ಗೇಲ್‌ ಬದಲು ದೈತ್ಯನನ್ನು ಕರೆತಂದ ವಿಂಡೀಸ್‌!

ಅಂದಹಾಗೆ ಕೊಹ್ಲಿ, ದಾದಾ ದಾಖಲೆ ಮುರಿಯಲು 238 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ಗಂಗೂಲಿ, 311 ಏಕದಿನ ಪಂದ್ಯಗಳಲ್ಲಿ 11,363 ರನ್‌ಗಳನ್ನು ದಾಖಲಿಸಿದ್ದರು. ಇನಿಂಗ್ಸ್‌ನ 32ನೇ ಓವರ್‌ನಲ್ಲಿ ಜೇಸನ್‌ ಹೋಲ್ಡರ್‌ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸುವ ಮೂಲಕ ದಾದಾ ದಾಖಲೆಯನ್ನು ಕೊಹ್ಲಿ ಮುರಿದರು.

ಹೋಟೆಲ್‌ ಕಾರಿಡಾರ್‌ನಲ್ಲಿ ಕುಲ್ದೀಪ್‌, ಪಂತ್‌ ಕ್ರಿಕೆಟ್‌ ಪ್ರಾಕ್ಟೀಸ್‌: ವಿಡಿಯೊಹೋಟೆಲ್‌ ಕಾರಿಡಾರ್‌ನಲ್ಲಿ ಕುಲ್ದೀಪ್‌, ಪಂತ್‌ ಕ್ರಿಕೆಟ್‌ ಪ್ರಾಕ್ಟೀಸ್‌: ವಿಡಿಯೊ

ಇದಕ್ಕೂ ತಮ್ಮ ಮನಮೋಹಕ ಮುನ್ನ ಇನಿಂಗ್ಸ್‌ನಲ್ಲಿ ಮೊದಲ 19 ರನ್‌ಗಳನ್ನು ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ವೆಸ್ಟ್‌ ಇಂಡೀಸ್‌ ಎದುರು ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ವಿಶ್ವ ದಾಖಲೆಯನ್ನೂ ಕೊಹ್ಲಿ ತಮ್ಮದಾಗಿಸಿಕೊಂಡರು. ಪಾಕಿಸ್ತಾನದ ಮಾಜಿ ನಾಯಕ ಜಾವೇದ್‌ ಮಿಯಾಂದಾದ್‌ ಈ ಮೊದಲು ಈ ದಾಖಲೆ ಹೊಂದಿದ್ದರು. ಕೊಹ್ಲಿ ಕೇವಲ 34 ಇನಿಂಗ್ಸ್‌ಗಳಲ್ಲಿ ಮಿಯಾಂದಾದ್‌ (64 ಇನಿಂಗ್ಸ್, 1930 ರನ್‌) ದಾಖಲೆ ನುಚ್ಚು ನೂರು ಮಾಡಿ ವೆಸ್ಟ್‌ ಇಂಡೀಸ್‌ ಎದುರು 2000 ಒಡಿಐ ರನ್‌ಗಳನ್ನು ಗಳಿಸಿದ ಪ್ರಪ್ರಥಮ ಬ್ಯಾಟ್ಸ್‌ಮನ್‌ ಎನಿಸಿದರು.

ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿರುವ ಅಗ್ರ 5 ಬ್ಯಾಟ್ಸ್‌ಮನ್‌ಗಳು

2. ವಿರಾಟ್‌ ಕೊಹ್ಲಿ

2. ವಿರಾಟ್‌ ಕೊಹ್ಲಿ

2008-2019 ಅವಧಿ
238* ಪಂದ್ಯ
229 ಇನಿಂಗ್ಸ್‌
11406 ರನ್‌
183 ಗರಿಷ್ಠ
59.71 ಸರಾಸರಿ
93.03 ಸ್ಟ್ರೈಕ್‌ರೇಟ್‌
42 ಶತಕ
54 ಅರ್ಧಶತಕ

3. ಸೌರವ್‌ ಗಂಗೂಲಿ

3. ಸೌರವ್‌ ಗಂಗೂಲಿ

1992-2007 ಅವಧಿ
308 ಪಂದ್ಯ
297 ಇನಿಂಗ್ಸ್‌
11221 ರನ್‌
183 ಗರಿಷ್ಠ
40.95 ಸರಾಸರಿ
73.65 ಸ್ಟ್ರೈಕ್‌ರೇಟ್‌
22 ಶತಕ
71 ಅರ್ಧಶತಕ

4. ರಾಹುಲ್‌ ದ್ರಾವಿಡ್‌

4. ರಾಹುಲ್‌ ದ್ರಾವಿಡ್‌

1996-2011 ಅವಧಿ
340 ಪಂದ್
314 ಇನಿಂಗ್ಸ್‌
10768 ರನ್‌
153 ಗರಿಷ್ಠ
39.15 ಸರಾಸರಿ
71.18 ಸ್ಟ್ರೈಕ್‌ರೇಟ್‌
12 ಶತಕ
82 ಅರ್ಧಶತಕ

5. ಎಂ.ಎಸ್‌ ಧೋನಿ

5. ಎಂ.ಎಸ್‌ ಧೋನಿ

2004-2019 ಅವಧಿ
347 ಪಂದ್ಯ
294 ಇನಿಂಗ್ಸ್‌
10599 ರನ್‌
183* ಗರಿಷ್ಠ
50.23 ಸರಾಸರಿ
87.13 ಸ್ಟ್ರೈಕ್‌ರೇಟ್‌
09 ಶತಕ
73 ಅರ್ಧಶತಕ

Story first published: Sunday, August 11, 2019, 23:33 [IST]
Other articles published on Aug 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X