ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಪ್ರವಾಸ: ಟೆಸ್ಟ್ ತಂಡಕ್ಕೆ ಮರಳಿದ ರೋಹಿತ್ ಶರ್ಮ

Virat Kohli to return home after Adelaide Test; Rohit Sharma included in Test team: Full list of Indias revised squad

ಮುಂಬೈ, ನ.9: ಕೊವಿಡ್ 19 ಸಂದರ್ಭದಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಯೋಜಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸೈ ಎನಿಸಿಕೊಂಡಿದೆ. ನವೆಂಬರ್ 10 ರಂದು ಐಪಿಎಲ್ 2020 ಫೈನಲ್ ಮುಗಿಯುತ್ತಿದ್ದಂತೆ ಟೀಂ ಇಂಡಿಯಾದ ಆಟಗಾರರು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದ್ದಾರೆ.

ಮೂರು ತಿಂಗಳ ಸುದೀರ್ಘ ಪ್ರವಾಸದಲ್ಲಿ ಭಾರತ-ಆಸ್ಟ್ರೇಲಿಯಾ ಟಿ-20 ಜೊತೆಗೆ ಮೂರು ಏಕದಿನ ಪಂದ್ಯ ಆಡಲಿವೆ. ಜೊತೆಗೆ ನಾಲ್ಕು ಟೆಸ್ಟ್‌ ಪಂದ್ಯಗಳನ್ನಾಡಲಿದೆ. ಡಿಸೆಂಬರ್ 17 ರಿಂದ ಟೆಸ್ಟ್ ಸರಣಿ ಪ್ರಾರಂಭವಾಗಲಿದ್ದು, ನಾಯಕ ವಿರಾಟ್ ಕೊಹ್ಲಿ ಕೊನೆ ಎರಡು ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.

ಇಂಡೋ-ಆಸಿಸ್ ಸರಣಿ: ಸ್ಟೀವ್ ಸ್ಮಿತ್ ಪಡೆಗೆ ಎಚ್ಚರಿಕೆ ನೀಡಿದ ಮಾಜಿ ಆಸ್ಟ್ರೇಲಿಯಾ ನಾಯಕಇಂಡೋ-ಆಸಿಸ್ ಸರಣಿ: ಸ್ಟೀವ್ ಸ್ಮಿತ್ ಪಡೆಗೆ ಎಚ್ಚರಿಕೆ ನೀಡಿದ ಮಾಜಿ ಆಸ್ಟ್ರೇಲಿಯಾ ನಾಯಕ

ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜನವರಿಯಲ್ಲಿ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಇದೇ ಸಮಯಕ್ಕೆ ಟೆಸ್ಟ್ ಸರಣಿ ಜಾರಿಯಲ್ಲಿರಲಿದೆ. ಕೊಹ್ಲಿಈಗಾಗಲೇ ಪಿತೃತ್ವ ರಜೆ ತೆಗೆದುಕೊಳ್ಳಲು ಅಕ್ಟೋಬರ್ 26ರಂದು ಮನವಿ ಮಾಡಿದ್ದು ಬಿಸಿಸಿಐ ಕೂಡಾ ಪುರಸ್ಕರಿಸಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಎರಡು ಟೆಸ್ಟ್ ಪಂದ್ಯಗಳು ಸಿಡ್ನಿ (ಜನವರಿ 7 ರಿಂದ ಜನವರಿ 11) ಮತ್ತು ಬ್ರಿಸ್ಬೇನ್ (ಜನವರಿ 15 ರಿಂದ ಜನವರಿ 19) ನಲ್ಲಿ ನಡೆಯಲಿದೆ.

ತಂಡಕ್ಕೆ ಮರಳಿದ ರೋಹಿತ್ ಶರ್ಮ

ತಂಡಕ್ಕೆ ಮರಳಿದ ರೋಹಿತ್ ಶರ್ಮ

ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಂ ಇಂಡಿಯಾವನ್ನು ಈಗಾಗಲೇ ಪ್ರಕಟಿಸಲಾಗಿತ್ತು. ಆದರೆ, ಉಪ ನಾಯಕ ರೋಹಿತ್ ಶರ್ಮ ಹಾಗೂ ವೇಗಿ ಇಶಾಂತ್ ಶರ್ಮ ಅವರ ದೈಹಿಕ ಸಾಮರ್ಥ್ಯ ವರದಿಗಾಗಿ ಕಾಯಲಾಗಿತ್ತು. ನವೆಂಬರ್ 8ರಂದು ಬಿಸಿಸಿಐ ವೈದ್ಯಕೀಯ ತಂಡದಿಂದ ವರದಿ ಬಂದಿದ್ದು, ಹಿರಿಯ ಆಟಗಾರರ ಆಯ್ಕೆ ಸಮಿತಿಯು ಇಂದು ಪರಿಷ್ಕೃತ ತಂಡವನ್ನು ಪ್ರಕಟಿಸಿದ್ದಾರೆ.

ಏನೇನು ಬದಲಾವಣೆ

ಏನೇನು ಬದಲಾವಣೆ

ಅಡಿಲೇಡ್ ಟೆಸ್ಟ್ ಪಂದ್ಯದ ನಂತರ ವಿರಾಟ್ ಕೊಹ್ಲಿ ಅವರು ಭಾರತಕ್ಕೆ ಮರಳಲಿದ್ದಾರೆ. ರೋಹಿತ್ ಶರ್ಮ ಅವರು ಟೆಸ್ಟ್ ತಂಡಕ್ಕೆ ಮರಳಲಿದ್ದಾರೆ. ಆದರೆ, ಏಕದಿನ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್ ದೈಹಿಕ ಕ್ಷಮತೆ ಬಗ್ಗೆ ಬಂದಿರುವ ವರದಿ ಆಧಾರಿಸಿ ಏಕದಿನ ಹಾಗೂ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಸಂಪೂರ್ಣವಾಗಿ ಫಿಟ್ನೆಸ್ ಸಾಧಿಸಿದ ಬಳಿಕ ಎಲ್ಲಾ ಮಾದರಿಗೂ ಆಯ್ಕೆಯಾಗಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಕೇರಳ ಕ್ರಿಕೆಟರ್ ಸಂಜು ಸ್ಯಾಮ್ಸನ್ ಅವರು ಏಕದಿನ ಕ್ರಿಕೆಟ್ ತಂಡಕ್ಕೆ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ರಿಷಪ್ ಪಂತ್ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ.

ಬೆಂಗಳೂರಿನಲ್ಲಿರುವ ಇಶಾಂತ್ ಶರ್ಮ

ಬೆಂಗಳೂರಿನಲ್ಲಿರುವ ಇಶಾಂತ್ ಶರ್ಮ

ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ವೇಗಿ ಇಶಾಂತ್ ಶರ್ಮ ಅವರು ಚೇತರಿಕೆ ಹಾದಿಯಲ್ಲಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಗುಣಮುಖರಾದ ಬಳಿಕ ಫಿಟ್ನೆಸ್ ಟೆಸ್ಟ್ ನಡೆಸಿ, ವರದಿ ಆಧಾರದ ಮೇಲೆ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ವರುಣ್ ಬದಲಿಗೆ ಟಿ ನಟರಾಜನ್

ವರುಣ್ ಬದಲಿಗೆ ಟಿ ನಟರಾಜನ್

ತಮಿಳುನಾಡಿನ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಐಪಿಎಲ್ ನಲ್ಲಿ ಕೆಕೆಆರ್ ಪರ ಉತ್ತಮವಾಗಿ ಆಡಿದ್ದರಿಂದ ಟೀಮ್ ಇಂಡಿಯಾ ಟಿ20 ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಭುಜದ ನೋವು ಉಲ್ಬಣವಾಗಿದ್ದು, ಸರಣಿಯಿಂದ ಹೊರಗುಳಿಯುವಂತೆ ಮಾಡಿದೆ. ವರುಣ್ ಬದಲಿಗೆ ಸನ್ ರೈಸರ್ಸ್ ಹೈದರಾಬಾದ್ ಯಾರ್ಕ್ ತಜ್ಞ ಟಿ ನಟರಾಜನ್ ಅವರನ್ನು ಬದಲಿ ಆಟಗಾರನಾಗಿ ಬಿಸಿಸಿಐ ಹೆಸರಿಸಿದೆ.

ವೃದ್ಧಿಮಾನ್ ಸಹಾ, ನಾಗರ್ ಕೋಟಿ ಅಲಭ್ಯ

ವೃದ್ಧಿಮಾನ್ ಸಹಾ, ನಾಗರ್ ಕೋಟಿ ಅಲಭ್ಯ

ನವೆಂಬರ್ 3ರಂದು ಸನ್ ರೈಸರ್ಸ್ ಪರ ಆಡುವಾಗ ಗಾಯಗೊಂಡ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ವೃದ್ಧಿಮಾನ್ ಸಹಾ ಇನ್ನೂ ಚೇತರಿಕೆ ಕಂಡಿಲ್ಲ. ಅದೇ ರೀತಿ ಯುವ ವೇಗಿ ಕಮಲೇಶ್ ನಾಗರಕೋಟಿ ಕೂಡಾ ಗುಣಮುಖರಾಗಿಲ್ಲ. ಹೀಗಾಗಿ ಇಬ್ಬರೂ ಕೂಡಾ ವೈದ್ಯಕೀಯ ವರದಿಯಲ್ಲಿ ಫಿಟ್ ಎಂದರೆ ಬಂದರೆ ಮಾತ್ರ ಆಸ್ಟ್ರೇಲಿಯಾಕ್ಕೆ ತೆರಳಲು ಸಾಧ್ಯ ಎಂಬ ಮಾಹಿತಿ ಬಂದರೆ, ಆಟಗಾರರು ಗಾಯದಿಂದ ಗುಣಮುಖರಾದ ಬಳಿಕ ಬೆಂಗಳೂರಿನ ಎನ್ ಸಿಎಗೆ ಬಂದು ತರಬೇತಿ ಪಡೆಯಬೇಕು ನಂತರ ಫಿಟ್ನೆಸ್ ಪರೀಕ್ಷೆಯಾಗಲಿದೆ

ಪರಿಷ್ಕೃತ ಟಿ20ಐ ತಂಡ

ಪರಿಷ್ಕೃತ ಟಿ20ಐ ತಂಡ

ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಮಯಾಂಕ್ ಆಗರವಾಲ್, ಕೆಎಲ್ ರಾಹುಲ್ (ಉಪ ನಾಯಕ ಹಾಗೂ ವಿಕೆಟ್ ಕೀಪರ್), ಶ್ರೇಯರ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಾಹಲ್, ಜಸ್ ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ದೀಪರ್ ಚಾಹರ್, ಟಿ ನಟರಾಜನ್.

ಟೀಂ ಇಂಡಿಯಾ ಏಕದಿನ ತಂಡ

ಟೀಂ ಇಂಡಿಯಾ ಏಕದಿನ ತಂಡ

ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಶುಭ್ ಮನ್ ಗಿಲ್, ಕೆಎಲ್ ರಾಹುಲ್ (ಉಪ ನಾಯಕ ಹಾಗೂ ವಿಕೆಟ್ ಕೀಪರ್), ಶ್ರೇಯರ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಾಂಕ್ ಅಗರವಾಲ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ರವೀಂದ್ರ ಜಡೇಜ, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್ ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್.

ಪರಿಷ್ಕೃತ ಟೆಸ್ಟ್ ತಂಡ

ಪರಿಷ್ಕೃತ ಟೆಸ್ಟ್ ತಂಡ

ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮ, ಮಯಾಂಕ್ ಅಗರವಾಲ್, ಪೃಥ್ವಿ ಶಾ, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ(ಉಪ ನಾಯಕ), ಹನುಮ ವಿಹಾರಿ, ಶುಭ್ ಮನ್ ಗಿಲ್, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ರಿಷಬ್ ಪಂತ್(ವಿಕೆಟ್ ಕೀಪರ್), ಜಸ್ ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲದೀಪ್ ಯಾದವ್, ರವೀಂದ್ರ ಜಡೇಜ, ಆರ್ ಅಶ್ವಿನ್, ಮೊಹಮ್ಮದ್ ಸಿರಾಜ್

Story first published: Monday, November 9, 2020, 18:08 [IST]
Other articles published on Nov 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X