ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಗಸ್ಟ್ 1ಕ್ಕೆ ಕೊಹ್ಲಿ vs ಆ್ಯಂಡರ್ಸನ್ ಪಂದ್ಯ: ಕ್ಯಾಪ್ಟನ್ ಕೊಹ್ಲಿ ಗೆಲ್ತಾರಾ?

Kohli v Anderson: The Clash of the Titans

ಎಜ್ ಬಾಸ್ಟನ್, ಜುಲೈ 31: ಕುತೂಹಲಕಾರಿ ಟೆಸ್ಟ್ ಸರಣಿಗಾಗಿ ಭಾರತ-ಇಂಗ್ಲೆಂಡ್ ತಂಡಗಳು ಆಗಸ್ಟ್ 1ರಂದು ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನ ಎಜ್ ಬಾಸ್ಟನ್ ನಲ್ಲಿ ಮುಖಾಮುಖಿಯಾಗಲಿವೆ. ಇನ್ನೊಂದು ಲೆಕ್ಕದಲ್ಲಿ ಇದು ಇಂಗ್ಲೆಂಡ್-ಭಾರತ ಪಂದ್ಯ ಅನ್ನುವುದಕ್ಕಿಂತ ವಿರಾಟ್ ಕೊಹ್ಲಿ vs ಜೇಮ್ಸ್ ಆ್ಯಂಡರ್ಸನ್ ನಡುವಿನ ಪಂದ್ಯ!

ಭಾರತ vs ಇಂಗ್ಲೆಂಡ್ 1ನೇ ಟೆಸ್ಟ್: ಸಮಯ, ನೇರ ಪ್ರಸಾರ ಯಾವುದರಲ್ಲಿ?ಭಾರತ vs ಇಂಗ್ಲೆಂಡ್ 1ನೇ ಟೆಸ್ಟ್: ಸಮಯ, ನೇರ ಪ್ರಸಾರ ಯಾವುದರಲ್ಲಿ?

ಐಸಿಸಿ ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್ ನ ಆ್ಯಂಡರ್ಸನ್ ಅವರು ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿಯನ್ನು ಬ್ಯಾಟಿಂಗ್ ವಿಚಾರಕ್ಕೆ ಕಾಲೆಳೆದಿದ್ದರು.

ಹಿಂದಿನ (2014)ರ ಇಂಗ್ಲೆಂಡ್ ಪ್ರವಾಸದ ವೇಳೆ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ವೇಳೆ ಕೊಹ್ಲಿಗಿಂತಲೂ ಭಾರತದ ಬೌಲರ್ ಭುವನೇಶ್ವರ್ ಕುಮಾರ್ ಹೆಚ್ಚು ರನ್ ಮಾಡಿದ್ದರು. ಭಾರತ ಈ ಮುಖಾಮುಖಿಯಲ್ಲಿ (ಒಂದು ಪಂದ್ಯ ಡ್ರಾದೊಂದಿಗೆ) 3-1ರಿಂದ ಸರಣಿ ಸೋತಿತ್ತು. ಇಂಥದ್ದೇ ನೆಪವಿಟ್ಟುಕೊಂಡು ಆ್ಯಂಡರ್ಸನ್ ಅವರು ಕೊಹ್ಲಿಯ ಕಾಲೆಳೆದಿದ್ದರು.

'ಪಂದ್ಯದ ವೇಳೆ ನನಗೆ ತಂಡದ ಗೆಲುವು ಮುಖ್ಯವೇ ಹೊರತು ನಾನು ಗಳಿಸುವ ವೈಯಕ್ತಿಕ ರನ್ ಅಲ್ಲ. ಅಲ್ಲದೆ ಶತಕ ಖಂಡಿತಾ ಅಲ್ಲ' ಎಂದು ಕೊಹ್ಲಿ ಹೇಳಿಕೊಂಡಿದ್ದರು. ಇದಕ್ಕೆ ಆ್ಯಂಡರ್ಸನ್, 'ತಂಡದ ಗೆಲುವಿಗೆ ನೀವು ಗಳಿಸುವ ರನ್ ಬೆಂಬಲಿಸುವುದಿಲ್ಲವೆ? ಹಾಗಿದ್ದ ಮೇಲೆ ನಿಮಗೆ ನಿಮ್ಮ ವೈಯಕ್ತಿಕ ರನ್ ಮುಖ್ಯವಲ್ಲವೆಂದು ನೀವು ಹೇಗೆ ಹೇಳುತ್ತೀರಿ? ಯಾಕೆ ಸುಳ್ಳು ಹೇಳುತ್ತಿದ್ದೀರಿ?' ಎಂದು ಟೀಕಿಸಿ ಪ್ರಶಸ್ನಿಸಿದ್ದರು.

ಕೊಹ್ಲಿ ಈ ಬಗ್ಗೆ ಎಲ್ಲೂ ಪ್ರತಿಕ್ರಿಯೆ ನೀಡಿಲ್ಲ. ವಾಸ್ತವವಾಗಿ ಕೊಹ್ಲಿ ಅವರು ಸಚಿನ್, ಧೋನಿಯ ಹಾಗೆ ಶಾಂತ ಸ್ವಭಾವದವರಲ್ಲ. ಮೈದಾನದಲ್ಲಿ ಕೊಹ್ಲಿ ಆಟಗಾರರೊಂದಿಗೆ ಜಟಾಪಟಿಗೆ ನಿಂತ ಎಷ್ಟೋ ನಿದರ್ಶನಗಳನ್ನು ನಾವು ನೋಡಿದ್ದೇವೆ. ಹಾಗಿದ್ದೂ ಕೊಹ್ಲಿ, ಆ್ಯಂಡರ್ಸನ್ ಮಾತಿಗೆ ಯಾಕೆ ಮೌನಿಯಾಗಿದ್ದಾರೆ?. ಬಹುಶಃ ಕೊಹ್ಲಿ ಬ್ಯಾಟ್ ಮೂಲಕ ಆ್ಯಂಡರ್ಸನ್ ಗೆ ತಿರುಗೇಟು ನೀಡಲು ಕೈ ಬಿಗಿ ಹಿಡಿದು ಕಾಯುತ್ತಿರಬಹುದೆ? ಪಂದ್ಯ ಉತ್ತರಿಸಲಿದೆ; ಕಾದು ನೋಡೋಣ!

Story first published: Tuesday, July 31, 2018, 18:22 [IST]
Other articles published on Jul 31, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X