ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ ನೀಡಲು ಈತನೇ ಕಾರಣ ಎಂದ ರಶೀದ್ ಲತೀಫ್!

Virat kohli

ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ವಿವಾದಿತ ಹೇಳಿಕೆ ನೀಡುವ ಮೂಲಕ ಕ್ರಿಕೆಟ್‌ ದಿಗ್ಗಜರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬಿಸಿಸಿಐ ಅಧ್ಯಕ್ಷ ಗಂಗೂಲಿ ಜೊತೆಗಿನ ಕೊಹ್ಲಿ ಮನಸ್ತಾಪವೇ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಲು ಪ್ರಮುಖ ಕಾರಣ ಪಾಕಿಸ್ತಾನದ ಮಾಜಿ ನಾಯಕ ಲತೀಫ್ ಆರೋಪಿಸಿದ್ದಾರೆ. ಇದು ಇಬ್ಬರು ದಿಗ್ಗಜರಾದ ಕೊಹ್ಲಿ ಮತ್ತು ಗಂಗೂಲಿ ನಡುವಿನ ಯುದ್ಧ ಎಂದು ಲತೀಫ್ ಬಣ್ಣಿಸಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಏಕದಿನ ಮತ್ತು ಟಿ20 ನಾಯಕತ್ವದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಟೆಸ್ಟ್ ನಾಯಕತ್ವಕ್ಕೂ ರಾಜೀನಾಮೆ ನೀಡಿದ್ದಾರೆ.

ಕೊಹ್ಲಿ ಹಾಗೂ ಬಿಸಿಸಿಐ ನಡುವೆ ಭಿನ್ನಾಭಿಪ್ರಾಯ!

ಕೊಹ್ಲಿ ಹಾಗೂ ಬಿಸಿಸಿಐ ನಡುವೆ ಭಿನ್ನಾಭಿಪ್ರಾಯ!

ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲು ನಿಜವಾದ ಕಾರಣ ಬಿಸಿಸಿಐ ಜೊತೆ ಭಿನ್ನಾಭಿಪ್ರಾಯವಿದೆ. ವಿರಾಟ್ ಕೊಹ್ಲಿ ಅವರದ್ದು ಸ್ವಂತ ನಿರ್ಧಾರ, ಅವರ ನಿರ್ಧಾರವನ್ನ ಗೌರವಿಸುತ್ತೇವೆ ಎಂದು ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದರೂ ಸಹಇದು ಇಬ್ಬರು ದಿಗ್ಗಜರ ನಡುವಿನ ಯುದ್ಧವಾಗಿದೆ ಎಂದು ರಶೀದ್ ಲತೀಫ್ ಹೇಳಿದ್ದಾರೆ. ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಅವರೊಂದಿಗಿನ ವಿವಾದವು ಕೊಹ್ಲಿಯನ್ನು ನಾಯಕತ್ವಕ್ಕೆ ರಾಜೀನಾಮೆ ನೀಡಲು ಪ್ರೇರೇಪಿಸಿತು ಎಂದು ಅವರು ಹೇಳಿದರು.

MS ಧೋನಿ ಟೆಸ್ಟ್‌ ಕ್ರಿಕೆಟ್ ನಿವೃತ್ತಿ ಘೋಷಿಸಿದಾಗ, ಗಳಗಳನೆ ಅತ್ತಿದ್ರಂತೆ ವಿರಾಟ್ ಕೊಹ್ಲಿ!

ಕೊಹ್ಲಿಯನ್ನ ತೆಗೆದು ಹಾಕುವ ಮೂಲಕ ಬಿಸಿಸಿಐ ಅನಾವಶ್ಯಕ ವಿವಾದ

ಕೊಹ್ಲಿಯನ್ನ ತೆಗೆದು ಹಾಕುವ ಮೂಲಕ ಬಿಸಿಸಿಐ ಅನಾವಶ್ಯಕ ವಿವಾದ

ಡಿಸೆಂಬರ್‌ನಲ್ಲಿ ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ತೆಗೆದುಹಾಕುವ ಮೂಲಕ ಬಿಸಿಸಿಐ ವಿವಾದವನ್ನ ಸೃಷ್ಟಿಸಿತು. ಅವರನ್ನು ನಾಯಕತ್ವದಿಂದ ತೆಗೆದುಹಾಕಿದ್ದರ ಪರಿಣಾಮ ಭಾರತೀಯ ಕ್ರಿಕೆಟ್ ಮೇಲೆ ಪ್ರಭಾವ ಬೀರಿದೆ ಎಂದು ಲತೀಫ್ ಹೇಳಿದರು. ಅದೇ ಸಮಯದಲ್ಲಿ, ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯಂತಹ ಪ್ರಮುಖ ಪಂದ್ಯಗಳನ್ನು ಕಳೆದುಕೊಂಡಿತು. ವಿರಾಟ್ ಕೊಹ್ಲಿಯನ್ನು ಗುರಿಯಾಗಿಸಿಕೊಂಡು ಕೆಲವರು ಭಾರತೀಯ ಕ್ರಿಕೆಟ್‌ನ ಮೇಲೆ ಪ್ರಭಾವ ಬೀರಲು ಸಮರ್ಥರಾಗಿದ್ದಾರೆ ಎಂದು ಲತೀಫ್ ನಂಬಿದ್ದಾರೆ.

ವಿಶ್ವಕಪ್ ನಂತರ ಟಿ20 ಗಳಲ್ಲಿ ಭಾರತಕ್ಕೆ ನಾಯಕತ್ವ ಮುಂದುವರಿಸುವುದಿಲ್ಲ ಎಂದು ಕೊಹ್ಲಿ ಘೋಷಿಸಿದ ನಂತರ ಮುಂದಿನ ತಿಂಗಳು ಅವರನ್ನು ಏಕ ನಾಯಕತ್ವದಿಂದ ತೆಗೆದುಹಾಕಲಾಯಿತು ಎಂದು ಲತೀಫ್ ಪ್ರಶ್ನಿಸಿದ್ದಾರೆ.

ಇಡೀ ಭಾರತೀಯ ಕ್ರಿಕೆಟ್‌ಗೆ ಸಂಚಕಾರ ಎದುರಾಗಿದೆ!

ಇಡೀ ಭಾರತೀಯ ಕ್ರಿಕೆಟ್‌ಗೆ ಸಂಚಕಾರ ಎದುರಾಗಿದೆ!

ಆಟಗಾರರ ಆಯ್ಕೆ ಸಮಿತಿ ಕೇವಲ ಕೊಹ್ಲಿಯನ್ನು ಕಡೆಗಣಿಸಿದ್ದು ಮಾತ್ರವಷ್ಟೇ ಅಲ್ಲದೆ ಇಡೀ ಭಾರತೀಯ ಕ್ರಿಕೆಟ್‌ಗೆ ಸಂಚಕಾರ ತಂದಿದ್ದಾರೆ ಎಂದು ಲತೀಫ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಹಿಂದೆ ಕೊಹ್ಲಿಯನ್ನು ಸಂಪರ್ಕಿಸಿದೆ ಎನ್ನಲಾದ ಗಂಗೂಲಿ , ಕೊಹ್ಲಿ ತಮ್ಮ ಮಾತು ಕೇಳದೆ ಟಿ20 ನಾಯಕತ್ವದಿಂದ ಕೆಳಗಿಳಿದಿದ್ದಾರೆ ಎನ್ನಲಾಗಿದೆ. ಆದರೆ ತಮ್ಮನ್ನು ಯಾರೂ ಸಂಪರ್ಕಿಸಿಲ್ಲ ಎಂಬ ಗಂಗೂಲಿ ಹೇಳಿಕೆಯನ್ನು ಕೊಹ್ಲಿ ನಿರಾಕರಿಸಿದ್ದಾರೆ.

ಲೆಜೆಂಡ್ಸ್ ಲೀಗ್ ಕ್ರಿಕೆಟ್ 2022: ತಂಡಗಳು, ವೇಳಾಪಟ್ಟಿ, ಪಂದ್ಯದ ಸಮಯ

IPLನಲ್ಲಿ ಈ ನೂತನ ತಂಡದ captain Hardik Pandya | Oneindia Kannada
ಭಾರತದಲ್ಲಿ ವಿಭಿನ್ನ ನಾಯಕತ್ವ ಸಾಧ್ಯವಿಲ್ಲ

ಭಾರತದಲ್ಲಿ ವಿಭಿನ್ನ ನಾಯಕತ್ವ ಸಾಧ್ಯವಿಲ್ಲ

ಇತ್ತೀಚೆಗಷ್ಟೇ ಟೆಸ್ಟ್ ನಾಯಕತ್ವದಿಂದ ಹಿಂದೆ ಸರಿದ ವಿರಾಟ್ ಕೊಹ್ಲಿ , ಈ ಹಿಂದೆ ಟಿ20 ನಾಯಕತ್ವದಿಂದ ನಿರ್ಗಮಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈಗಾಗಲೇ ರೋಹಿತ್ ಶರ್ಮಾ ಏಕದಿನ ಮತ್ತು ಟಿ20 ನಾಯಕತ್ವ ವಹಿಸಿರುವ ಬೆನ್ನಲ್ಲೇ ವಿರಾಟ್ ಕೊಹ್ಲಿ, ಟೆಸ್ಟ್ ನಾಯಕತ್ವದಿಂದ ನಿರ್ಗಮಿಸಿರುವುದು ಟೀಂ ಇಂಡಿಯಾಗೆ ಇಬ್ಬರು ನಾಯಕರ ಫಾರ್ಮುಲಾ ವರ್ಕೌಟ್ ಆಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎನ್ನುತ್ತಾರೆ ಕ್ರಿಕೆಟ್ ತಜ್ಞರು. ಆದ್ರೆ ಅನನುಭವಿ ನಾಯಕ ಕೆ.ಎಲ್ ರಾಹುಲ್ ಟೀಂ ಇಂಡಿಯಾವನ್ನ ಎಷ್ಟರ ಮಟ್ಟಿಗೆ ಮುನ್ನಡೆಸಲಿದ್ದಾರೆ ಎಂಬುದು ತಿಳಿದಂತೆ ಕಾಣುತ್ತಿಲ್ಲ. ಟೆಸ್ಟ್ ನಾಯಕತ್ವದ ನಾಯಕತ್ವ ಯಾರಿಗೆ ಎಂಬುದು ಇನ್ನೂ ಅಂತಿಮಗೊಂಡಿಲ್ಲ.

Story first published: Tuesday, January 18, 2022, 14:15 [IST]
Other articles published on Jan 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X