ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನೀಗ ನಾಯಕನಲ್ಲ, ಯಾರಿಗೂ ಹೆದರುವುದೂ ಇಲ್ಲ: ಆ ಆಟಗಾರನ ವಿರುದ್ಧ ಮೈದಾನದಲ್ಲೇ ಕೊಹ್ಲಿ ಕಿಡಿ!

Kohli warns Bavuma by saying Im not captain anymore so I dont have to face anyone after the match

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಅಗ್ರೆಸಿವ್ ಆಟಗಾರ ಯಾರು ಎಂಬ ಪ್ರಶ್ನೆ ಎದುರಾದ ಕೂಡಲೇ ಎಲ್ಲರ ಬಾಯಲ್ಲಿಯೂ ಬರುವ ಏಕೈಕ ಉತ್ತರ ವಿರಾಟ್ ಕೊಹ್ಲಿ. ಈ ಹಿಂದೆ ಟೀಮ್ ಇಂಡಿಯಾ ಆಟಗಾರರನ್ನು ಎದುರಾಳಿ ತಂಡದ ಆಟಗಾರರು ಮೈದಾನದಲ್ಲಿ ಕೆಣಕಿದಾಗ ಹೆಚ್ಚಾಗಿ ಭಾರತೀಯ ಕ್ರಿಕೆಟಿಗರು ಪ್ರತಿಕ್ರಿಯೆಯನ್ನು ನೀಡುತ್ತಿರಲಿಲ್ಲ. ಆದರೆ ವಿರಾಟ್ ಕೊಹ್ಲಿ ನಾಯಕತ್ವವನ್ನು ಸ್ವೀಕರಿಸಿದ ನಂತರ ಈ ವಿಚಾರದಲ್ಲಿ ದೊಡ್ಡ ಬದಲಾವಣೆಯೇ ಆಯಿತು. ಕೊಹ್ಲಿ ಪಡೆಯಲ್ಲಿದ್ದ ಪ್ರತಿಯೊಬ್ಬ ಆಟಗಾರನೂ ಕೂಡ ಎದುರಾಳಿ ಆಟಗಾರರು ಕೆಣಕಿದಾಗ ಅಥವಾ ಮಾತಿನ ಮೂಲಕ ಚುಚ್ಚುವ ಪ್ರಯತ್ನ ಮಾಡಿದಾಗ ಆ ಕ್ಷಣದಲ್ಲಿಯೇ ಮುಟ್ಟಿ ನೋಡಿಕೊಳ್ಳುವಂತಹ ಉತ್ತರಗಳನ್ನು ನೀಡಲು ಆರಂಭಿಸಿದರು.

ನಾಯಕತ್ವಕ್ಕಾಗಿ ರೋಹಿತ್, ರಾಹುಲ್ ಮಧ್ಯ ಪೈಪೋಟಿ ಶುರು; ಅನುಮಾನ ಮೂಡಿಸಿದ ರಾಹುಲ್‌ನ ಆ ಹೇಳಿಕೆ!ನಾಯಕತ್ವಕ್ಕಾಗಿ ರೋಹಿತ್, ರಾಹುಲ್ ಮಧ್ಯ ಪೈಪೋಟಿ ಶುರು; ಅನುಮಾನ ಮೂಡಿಸಿದ ರಾಹುಲ್‌ನ ಆ ಹೇಳಿಕೆ!

ಹೀಗೆ ವಿರಾಟ್ ಕೊಹ್ಲಿ ನಾಯಕನಾಗಿ ತಂಡಕ್ಕೆ ಅಗ್ರೆಷನ್ ಟ್ರೆಂಡ್ ತಂದರು ಎಂದರೆ ತಪ್ಪಾಗಲಾರದು. ಈ ಕಾರಣದಿಂದಾಗಿ ವಿಶ್ವದ ಅಗ್ರೆಸಿವ್ ಕ್ರಿಕೆಟ್ ನಾಯಕ ಎಂಬ ಹೆಸರನ್ನು ಮಾಡಿದ್ದ ವಿರಾಟ್ ಕೊಹ್ಲಿ ಸದ್ಯ ನಾಯಕತ್ವವನ್ನು ಕಳೆದುಕೊಂಡು ಕೇವಲ ಓರ್ವ ಆಟಗಾರನಾಗಿ ಮಾತ್ರ ಟೀಮ್ ಇಂಡಿಯಾದಲ್ಲಿ ಇದ್ದಾರೆ. ಹೌದು, ಕಳೆದ ವರ್ಷದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಬಳಿಕ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ಸ್ವಇಚ್ಛೆಯಿಂದ ತ್ಯಜಿಸಿದ ವಿರಾಟ್ ಕೊಹ್ಲಿ ಅವರನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಬಿಸಿಸಿಐ ಏಕದಿನ ನಾಯಕತ್ವದಿಂದಲೂ ಕೂಡ ತೆಗೆದುಹಾಕಿತ್ತು.

ಟೆಸ್ಟ್ ಸರಣಿ ರೀತಿಯೇ ಏಕದಿನ ಸರಣಿಯಲ್ಲಿಯೂ ಭಾರತ ನೆಲಕಚ್ಚಲಿದೆ ಎಂದು ಎಚ್ಚರಿಕೆ ನೀಡಿದ ಬವುಮಾಟೆಸ್ಟ್ ಸರಣಿ ರೀತಿಯೇ ಏಕದಿನ ಸರಣಿಯಲ್ಲಿಯೂ ಭಾರತ ನೆಲಕಚ್ಚಲಿದೆ ಎಂದು ಎಚ್ಚರಿಕೆ ನೀಡಿದ ಬವುಮಾ

ಹೀಗೆ ಭಾರತ ಟಿ ಟ್ವೆಂಟಿ ಹಾಗೂ ಏಕದಿನ ತಂಡಗಳ ನಾಯಕತ್ವವನ್ನು ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೂ ಕೂಡ ರಾಜೀನಾಮೆಯನ್ನು ಸಲ್ಲಿಸಿದರು. ಇನ್ನು ವಿರಾಟ್ ಕೊಹ್ಲಿ ನಾಯಕನಾಗಿ ಆಡಿದ ಅಂತಿಮ ಟೆಸ್ಟ್ ಪಂದ್ಯದ ವೇಳೆ ಡಿಆರ್‌ಎಸ್ ತೀರ್ಪಿನ ವಿರುದ್ಧ ಮೈದಾನದಲ್ಲಿಯೇ ಸ್ಟಂಪ್ ಮೈಕ್ ಬಳಿ ತೆರಳಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಅಂದು ಪಂದ್ಯದ ವೇಳೆ ವಿರಾಟ್ ಕೊಹ್ಲಿ ನಡೆದುಕೊಂಡ ರೀತಿಗೆ ಮಿಶ್ರ ಪ್ರತಿಕ್ರಿಯೆಯೂ ಕೂಡಾ ವ್ಯಕ್ತವಾಗಿತ್ತು. ಹೀಗೆ ನಾಯಕನಾಗಿ ಮೈದಾನದಲ್ಲಿ ಎದುರಾಳಿಗಳಿಗೆ ಟಾಂಗ್ ನೀಡುತ್ತಿದ್ದ ವಿರಾಟ್ ಕೊಹ್ಲಿ ನಾಯಕತ್ವ ಕಳೆದುಕೊಂಡ ನಂತರವೂ ಕೂಡ ತಮ್ಮ ತನವನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದ ವೇಳೆಯೂ ಕೊಹ್ಲಿ ಮೈದಾನದಲ್ಲಿ ಎದುರಾಳಿ ತಂಡದ ನಾಯಕ ಟೆಂಬಾ ಬವುಮಾ ಜೊತೆ ಇದೇ ರೀತಿ ನಡೆದುಕೊಂಡಿದ್ದಾರೆ. ಈ ಘಟನೆಯ ಕುರಿತಾದ ಮತ್ತಷ್ಟು ವಿವರ ಈ ಕೆಳಕಂಡಂತಿದೆ..

ಚೆಂಡನ್ನು ಟೆಂಬಾ ಬವುಮಾ ಕಡೆ ಜೋರಾಗಿ ಎಸೆದ ಕೊಹ್ಲಿ

ಚೆಂಡನ್ನು ಟೆಂಬಾ ಬವುಮಾ ಕಡೆ ಜೋರಾಗಿ ಎಸೆದ ಕೊಹ್ಲಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಪ್ರಥಮ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಮಾಡುವಾಗ 35ನೇ ಓವರ್‌ನಲ್ಲಿ ಬೌಲರ್ ಯಜುವೇಂದ್ರ ಚಾಹಲ್ ಎಸೆದ ಎಸೆತಕ್ಕೆ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ ಟೆಂಬಾ ಬವುಮಾ ಬ್ಯಾಟ್ ಬೀಸಿದರು. ಹೀಗೆ ಟೆಂಬಾ ಬವುಮಾ ಹೊಡೆದ ಚೆಂಡು ವಿರಾಟ್ ಕೊಹ್ಲಿ ಕೈ ಸೇರಿತು. ಆ ಸಂದರ್ಭದಲ್ಲಿ ಚೆಂಡನ್ನು ರಭಸವಾಗಿ ಸ್ಟಂಪ್ ಕಡೆಗೆ ವಿರಾಟ್ ಕೊಹ್ಲಿ ಎಸೆದರು. ಕೊಹ್ಲಿ ಎಸೆದ ಚೆಂಡು ಸ್ಟಂಪ್ ಬಳಿ ಇದ್ದ ಟೆಂಬಾ ಬವುಮಾಗೆ ಬೀಳುವುದರಲ್ಲಿತ್ತು. ಆದರೆ ತಕ್ಷಣವೇ ತೆಂಬಾ ಬವುಮಾ ನೆಲಕ್ಕೆ ಬಾಗುವುದರ ಮೂಲಕ ತಪ್ಪಿಸಿಕೊಂಡರು. ನಂತರ ಟೆಂಬಾ ಬವುಮಾ ಮತ್ತು ಕೊಹ್ಲಿ ನಡುವೆ ಮೈದಾನದಲ್ಲಿಯೇ ಮಾತಿನ ಚಕಮಕಿ ನಡೆಯಿತು.

ನಾನೀಗ ನಾಯಕನಲ್ಲ ಎಂದ ವಿರಾಟ್ ಕೊಹ್ಲಿ

ನಾನೀಗ ನಾಯಕನಲ್ಲ ಎಂದ ವಿರಾಟ್ ಕೊಹ್ಲಿ

ಹೀಗೆ ವಿರಾಟ್ ಕೊಹ್ಲಿ ಚೆಂಡನ್ನು ಎಸೆದ ಬೆನ್ನಲ್ಲೇ ಮೈದಾನದಲ್ಲಿಯೇ ಪ್ರತಿಕ್ರಿಯಿಸಿದ ತೆಂಬಾ ಬವುಮಾಗೆ ಪ್ರತ್ಯುತ್ತರ ನೀಡಿದ ವಿರಾಟ್ ಕೊಹ್ಲಿ 'ಏನು? ನೀನು ಸ್ಟಂಪ್ ಗೆರೆ ಬಿಟ್ಟು ಮುಂದೆ ಬಂದಿದ್ದೆ, ಹಾಗಾಗಿ ನಾನು ಚೆಂಡನ್ನು ಎಸೆದೆ. ನಾನು ಇನ್ನು ಮುಂದೆ ನಾಯಕನಲ್ಲ, ಹೀಗಾಗಿ ನಾನು ಪಂದ್ಯ ಮುಗಿದ ನಂತರ ಯಾರಿಗೂ ಉತ್ತರವನ್ನು ನೀಡಬೇಕಾಗಿಲ್ಲ. ಆದ್ದರಿಂದ ನೀನು ನಿನ್ನ ಮಿತಿಯಲ್ಲಿರುವುದು ಒಳ್ಳೆಯದು' ಎಂದು ಹೇಳಿದರು. ವಿರಾಟ್ ಕೊಹ್ಲಿ ಈ ರೀತಿ ಹೇಳಿರುವ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಮೂಲಕ ನಾಯಕನಾಗಿದ್ದ ದಿನಗಳಲ್ಲಿ ಪಂದ್ಯದ ವೇಳೆ ಯಾವುದೇ ರೀತಿ ವರ್ತಿಸಿದರೂ ಸಹ ಪಂದ್ಯ ಮುಗಿದ ನಂತರ ಉತ್ತರ ನೀಡಬೇಕೆಂಬ ಹೆದರಿಕೆ ಇತ್ತು ಆದರೆ ಈಗ ನಾಯಕನಾಗಿ ಇಲ್ಲದ ಕಾರಣ ನನಗೆ ಆ ರೀತಿಯ ಹೆದರಿಕೆ ಇಲ್ಲ ಎಂಬುದನ್ನು ವಿರಾಟ್ ಕೊಹ್ಲಿ ಪರೋಕ್ಷವಾಗಿ ತಿಳಿಸಿದ್ದಾರೆ.

ಶತಕ ಬಾರಿಸಿದ ಬವುಮಾ

ಶತಕ ಬಾರಿಸಿದ ಬವುಮಾ

ತಂಡದ ಮೊದಲ 3 ವಿಕೆಟ್‍ಗಳನ್ನು ವೇಗವಾಗಿ ಕಳೆದುಕೊಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕ ತೆಂಬಾ ಬವುಮಾ 110 ರನ್ ಬಾರಿಸುವುದರ ಮೂಲಕ ಆಸರೆಯಾದರು. 148 ಎಸೆತಗಳಲ್ಲಿ 110 ರನ್ ಬಾರಿಸಿದ ಬವುಮಾ 8 ಬೌಂಡರಿ ಸಿಡಿಸಿದರು.

ವಿಕೆಟ್ ತೆಗೆಯೋದು ಅನಿವಾರ್ಯವಾಗಿದ್ರೂ ರಾಹುಲ್ ವೆಂಕಟೇಶ್ ಗೆ ಬಾಲ್ ನೀಡ್ಲಿಲ್ಲ ಯಾಕೆ? | Oneindia Kannada

Story first published: Wednesday, January 19, 2022, 21:13 [IST]
Other articles published on Jan 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X