ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಮಿತ್ ಹುರಿದುಂಬಿಸುವಂತೆ ಹೇಳಿದ ಕೊಹ್ಲಿಗೆ ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ: ವೀಡಿಯೋ

Steve Smith named ICC Test player for the year 2017 | Oneindia News
Kohli Was Awarded The 2019 Spirit Of Cricket Award

2019ರ ಐಸಿಸಿ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಶ್ವಕಪ್‌ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೊರಿದ ಒಂದು ವರ್ತನೆ ಕೊಹ್ಲಿಯ ಈ ಪ್ರಶಸ್ತಿಗೆ ಕಾರಣವಾಗಿದೆ.

ಬಾಲ್ ಟ್ಯಾಂಪರಿಂಗ್ ಕಾರಣಕ್ಕೆ ಆಸಿಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ ಒಂದು ವರ್ಷ ಕ್ರಿಕೆಟ್‌ನಿಂದ ನಿಶೇಧಕ್ಕೆ ಒಳಗಾಗಿ ಬಳಿಕ ವಾಪಾಸಾಗಿದ್ದರು. ವಿಶ್ವಕಪ್‌ಗೆ ಸ್ವಲ್ಪವೇ ಮುನ್ನ ತಂಡವನ್ನು ಸೇರಿಕೊಂಡಿದ್ದರು ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್. ಅಭಿಮಾನಿಗಳು ಆಸಿಸ್ ಆಟಗಾರರನ್ನು ಪಂದ್ಯದ ಸಂದರ್ಭದಲ್ಲಿ ಅಣಕಿಸುವುದು ಮುಂದುವರಿದಿತ್ತು.

ಐಸಿಸಿ ವಿಸ್ವಕಪ್‌ನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕ್ರಿಕೆಟ್‌ ಅಭಿಮಾಗಿಗಳು ಬೌಂಡರಿ ಲೈನ್‌ ಬಳಿಯಿದ್ದ ಆಸಿಸ್ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ಅಣಕಿಸಲು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳ ವರ್ತನೆಗೆ ಅಸಮಾಧಾನವನ್ನು ವ್ಯಕ್ತಪಡಿಸಿ ಪ್ರೋತ್ಸಾಹವನ್ನು ನೀಡಿ ಎಂದು ಸ್ಥಳದಲ್ಲೇ ಸೂಚಿಸಿದ್ದರು. ಎದುರಾಳಿ ಆಟಗಾರನಿಗೆ ಅವಮಾನಗುತ್ತಿರುವುದನ್ನು ಗಮನಿಸಿದ ಕೊಹ್ಲಿ ಅದನ್ನು ಸಹಿಸಿರಲಿಲ್ಲ.

ಭಾರತ ವಿರುದ್ಧ ಹೊಸ ದಾಖಲೆ ಬರೆದ ಡೇವಿಡ್ ವಾರ್ನರ್, ಆ್ಯರನ್ ಫಿಂಚ್!ಭಾರತ ವಿರುದ್ಧ ಹೊಸ ದಾಖಲೆ ಬರೆದ ಡೇವಿಡ್ ವಾರ್ನರ್, ಆ್ಯರನ್ ಫಿಂಚ್!

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಈ ವರ್ತನೆ ವಿಶ್ವ ಕ್ರಿಕೆಟ್‌ ಲೋಕದ ಗಮನ ಸೆಳೆದಿತ್ತು. ಮಾತ್ರವಲ್ಲ ಟೀಮ್ ಇಂಡಿಯಾ ನಾಯಕನ ಈ ಸ್ಪೂರ್ತಿದಾಯಕ ವರ್ತನೆ ಐಸಿಸಿಯ ಗಮನವನ್ನೂ ಸೆಳೆದಿದೆ. ಇದಕ್ಕಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

Story first published: Wednesday, January 15, 2020, 16:17 [IST]
Other articles published on Jan 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X