ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಸರಣಿ ಸೋಲಿನ ಬಗ್ಗೆ ಕೊಹ್ಲಿ ಅಷ್ಟು ತಲೆಕೆಡಿಸಿಕೊಂಡಿಲ್ಲವೇಕೆ?

Kohli: We wanted to see players reaction to pressure

ಬೆಂಗಳೂರು, ಫೆಬ್ರವರಿ 28 : ಟಿ20 ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಸೋತಿದ್ದಕ್ಕೆ ಭಾರತದ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಹೆಚ್ಚು ತಲೆಕಿಡಿಸಿಕೊಂಡಂತೆ ಕಾಣಿಸುತ್ತಿಲ್ಲ. ತಂಡದ ಆಟಗಾರರ ಬಲವನ್ನು ಬಲ್ಲ ಅವರು ಇನ್ನಷ್ಟು ಅರಿಯಲು ಪ್ರಯೋಗ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ಯಾರಿಗೆ ಎಷ್ಟು ಒತ್ತಡ ತಡೆದುಕೊಳ್ಳುವ ಸಾಮರ್ಥ್ಯವಿದೆ ಎಂಬುದನ್ನು ನೋಡಲು ಈ ಪ್ರಯೋಗ ನಡೆಸಿದ್ದಾಗ ಹೇಳಿರುವ ಅವರು, ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ಭುತ ಶತಕವನ್ನು ಸಿಡಿಸಿದ್ದಕ್ಕಾಗಿ ಆಸೀಸ್ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ಶ್ಲಾಷಿಸಿದರು.

ರಾಹುಲ್, ಪಂತ್‌ಗೆ ಇನ್ನೊಂದಿಷ್ಟು ಕಾಲಾವಕಾಶ ಕೊಡಬಯಸಿದ್ದೇವೆ: ಕೊಹ್ಲಿ ರಾಹುಲ್, ಪಂತ್‌ಗೆ ಇನ್ನೊಂದಿಷ್ಟು ಕಾಲಾವಕಾಶ ಕೊಡಬಯಸಿದ್ದೇವೆ: ಕೊಹ್ಲಿ

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಸೋತಿದ್ದರ ಬಗ್ಗೆ ಹೆಚ್ಚು ಕಾಮೆಂಟ್ ಮಾಡದ ಅವರು, ಮಾರ್ಚ್ 2ರಿಂದ ಹೈದರಾಬಾದ್ ನಲ್ಲಿ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಭಾರತ ಖಂಡಿತ ತಿರುಗೇಟು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೋಲಿಗೆ ಕೊಹ್ಲಿಯ ವಿಶ್ಲೇಷಣೆ

ಸೋಲಿಗೆ ಕೊಹ್ಲಿಯ ವಿಶ್ಲೇಷಣೆ

ಎರಡೇ ಎರಡು ಟಿ20 ಪಂದ್ಯಗಳನ್ನು ಆಡಿರುವುದರಿಂದ ಆಟಗಾರರ ಅಥವಾ ತಂಡದ ಸಾಧನೆಯನ್ನು ಅಳೆಯುವ ಅವಶ್ಯಕತೆಯಿಲ್ಲ. ಆಸ್ಟ್ರೇಲಿಯಾದ ಆಟಗಾರರು ನಮಗಿಂತ ಎಲ್ಲ ವಿಭಾಗಗಳಲ್ಲಿಯೂ ಉತ್ತಮವಾಗಿ ಆಡಿದ್ದಾರೆ ಮತ್ತು ಅರ್ಹ ಜಯ ಗಳಿಸಿದ್ದಾರೆ. ಟಿ20ಯಲ್ಲಿ 190 ಉತ್ತಮ ಸ್ಕೋರ್. ಆದರೆ, ಮೈದಾನದಲ್ಲಿ ಅಷ್ಟು ತೇವವಿದ್ದಾಗ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಅವರು ಅಷ್ಟು ಚೆನ್ನಾಗಿ ಆಡುತ್ತಿದ್ದಾಗ ನಾವು ಹೆಚ್ಚೇನೂ ಮಾಡುವಂತಿರಲಿಲ್ಲ ಎಂದಿರುವ ವಿರಾಟ್ ಕೊಹ್ಲಿ, ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ವೈಯಕ್ತಿಕ 72 ರನ್ ಗಳಿಸಿದ್ದರು.

ಈ ಪಂದ್ಯಗಳಿಂದ ಭಾರತ ಗಳಿಸಿರುವುದೇನು?

ಈ ಪಂದ್ಯಗಳಿಂದ ಭಾರತ ಗಳಿಸಿರುವುದೇನು?

ಈ ಪಂದ್ಯದಲ್ಲಿ ಖಂಡಿತ ನಮಗೆ ಗೆಲ್ಲುವ ಅವಕಾಶವಿತ್ತು. ಆದರೆ, ಅಷ್ಟೊಂದು ತೇವಾಂಶವಿದದಾಗ ಬೌಲರ್ ಗಳ ಮೇಲೆ ಕೂಡ ಹೆಚ್ಚು ಒತ್ತಡ ಹೇರಲು ಸಾಧ್ಯವಿಲ್ಲ. ನಾವು ಹಲವಾರು ಆಟಗಾರರಿಗೆ ಅವಕಾಶ ನೀಡಲು ನಿರ್ಧರಿಸಿದ್ದೆವು ಮತ್ತು ಒತ್ತಡವಿದ್ದಾಗ ಹೇಗೆ ಆಡುತ್ತಾರೆ ಎಂಬುದನ್ನು ಅಳೆಯಬಯಸಿದ್ದೆವು. ಮುಂದೆಯೂ ಸರಣಿ ಬರಲಿ, ಅಲ್ಲಿಯೂ ನಾವು ಹಲವಾರು ಪ್ರಯೋಗಗಳನ್ನು ಮಾಡಲಿದ್ದೇವೆ. ಆದರೆ, ಅವಕಾಶ ಕೊಟ್ಟಾಗ ಸದ್ಬಳಕೆ ಮಾಡುವುದು ಆಟಗಾರರಿಗೆ ಬಿಟ್ಟಿದ್ದು. ಒಳ್ಳೆಯ ಸಂಗತಿಯೆಂದರೆ, ಬೆಂಗಳೂರಿನ ಪಿಚ್ ಮತ್ತೆ ಮೊದಲಿನಂತೆ ಉತ್ತಮವಾಗಿದೆ. ನಾನು ನನ್ನ ಆಟವನ್ನೇನೋ ಎಂಜಾಯ್ ಮಾಡಿದೆ.

ಭಾರತ vs ಆಸ್ಟ್ರೇಲಿಯಾ: ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ, ಪ್ರಸಾರ ಮಾಹಿತಿ

ಮ್ಯಾಕ್ಸ್ ವೆಲ್ ಗೆಲುವಿನ ವ್ಯಾಖ್ಯಾನ

ಮ್ಯಾಕ್ಸ್ ವೆಲ್ ಗೆಲುವಿನ ವ್ಯಾಖ್ಯಾನ

ಮ್ಯಾಕ್ಸ್ ವೆಲ್ ಅವರನ್ನು ಸರಣಿ ಪುರುಷೋತ್ತಮ ಎಂದು ಘೋಷಿಸಲಾಗಿದೆ. ತಮ್ಮ ಸಾಧನೆ ಸಾಕಷ್ಟು ಆತ್ಮವಿಶ್ವಾಸ ತುಂಬಿದ್ದು, ಪ್ರತಿಬಾರಿ ಆಸ್ಟ್ರೇಲಿಯಾವನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಹೊರಲು ಸಿದ್ಧವಿರುವುದಾಗಿ ಹೇಳಿದ್ದಾರೆ.

ಈ ರೀತಿಯ ಆಟವಾಡಿದಾಗ ತುಂಬಾ ಖುಷಿಯಾಗುತ್ತದೆ. ಇತ್ತೀಚೆಗೆ ನಮಗೆ ಅಷ್ಟು ಯಶಸ್ಸು ಸಿಕ್ಕಿಲ್ಲ. ಅದನ್ನೆಲ್ಲ ಮೀರಿನಿಂತು, ಈ ಸರಣಿಯಲ್ಲಿ ಉತ್ತಮವಾಗಿ ಆಡಲು ಪ್ರಾರಂಭಿಸಿದ್ದೇವೆ. ನನ್ನ ಆಟದಲ್ಲಿ ಕೂಡ ಆತ್ಮವಿಶ್ವಾಸ ಮರಳಿಬಂದಿದ್ದು, ತಂಡದ ಯಶಸ್ಸಿನಲ್ಲಿ ಭಾಗಿಯಾಗುವುದು ನಿಜಕ್ಕೂ ಖುಷಿಯಾಗುತ್ತದೆ. ಬೆಂಗಳೂರಿನಲ್ಲಿ ಪಿಚ್ ಚೆನ್ನಾಗಿತ್ತು. ವೇಗದ ಬೌಲರ್ ಗಳನ್ನು ಎದುರಿಸುವುದು ಮತ್ತು ಓವರ್ ಗೆ 12 ರನ್ ಗಳಿಸುವುದು ಅಷ್ಟು ಕಷ್ಟವಲ್ಲ ಎಂದು ಅಂದುಕೊಂಡಿದ್ದರಿಂದ ಗುರಿ ಬೆನ್ನತ್ತುವುದು ಸುಲಭವಾಯಿತು. ಡಿಆರ್ಸಿ ಅವರು ಔಟಾದ ನಂತರ ಇನ್ನಿಂಗ್ಸ್ ಅನ್ನು ದಡಕ್ಕೆ ಕೊಂಡೊಯ್ಯುವ ಜವಾಬ್ದಾರಿ ನನ್ನ ಮೇಲೆ ಇತ್ತು. ಹ್ಯಾಂಡ್ಸ್ ಕೂಂಬ್ ಕೂಡ ಉತ್ತಮ ಜತೆಯಾಟ ನೀಡಿದರು. ಹಿಂದಿನ ಆಟದಲ್ಲಿ ಇದ್ದ ಕೆಲ ತಪ್ಪುಗಳನ್ನು ಇಲ್ಲಿ ಸರಿಪಡಿಸಿಕೊಂಡೆವು ಎಂದು ಗ್ಲೆನ್ ಗೆಲುವಿನ ವ್ಯಾಖ್ಯಾನ ಮಾಡಿದ್ದಾರೆ.

ಮ್ಯಾಕ್ಸ್‌ವೆಲ್ ಆರ್ಭಟ, ಭಾರತ ವಿರುದ್ಧ ಟಿ20 ಸರಣಿ ಗೆದ್ದ ಆಸ್ಟ್ರೇಲಿಯಾ!

ಮ್ಯಾಕ್ಸ್ ವೆಲ್, ಜಂಪಾ ಸಾಧನೆಗೆ ಶ್ಲಾಘನೆ

ಮ್ಯಾಕ್ಸ್ ವೆಲ್, ಜಂಪಾ ಸಾಧನೆಗೆ ಶ್ಲಾಘನೆ

ಆಸ್ಟ್ರೇಲಿಯಾದ ಕ್ಯಾಪ್ಟನ್ ಆರೋನ್ ಫಿಂಚ್ ಅವರು ಗೆಲುವಿನ ರೂವಾರಿಗಳಾದ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಆಡಂ ಜಂಪಾ ಮೇಲೆ ಶ್ಲಾಘನೆಯ ಮಳೆ ಸುರಿಸಿದರು. ಗ್ಲೆನ್ ಗೆಲುವಿಗೆ ಕಾರಣರಾದರೂ, ಜಂಪಾ ಅವರ ಬೌಲಿಂಗ್ (0/23) ಕೂಡ ಅಷ್ಟೇ ಬಿಗಿಯಾಗಿತ್ತು. "ಯಾವುದೇ ಸಮಯದಲ್ಲಿ ಭಾರತದಲ್ಲಿ ಭಾರತದ ವಿರುದ್ಧವೇ ಗೆಲ್ಲುವುದು ಎಂದೂ ಸ್ಪೆಷಲ್ ಆಗಿರುತ್ತದೆ. ಗ್ಲೆನ್ ಮ್ಯಾಕ್ಸ್ ವೆಲ್ ಅದ್ಭುತವಾಗಿ ಆಡಿದರೂ, ಆಡಂ ಜಂಪಾ ಅವರ ಬೌಲಿಂಗ್ ಎರಡೂ ತಂಡದ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದೆ. ಇಂಥ ಬ್ಯಾಟಿಂಗ್ ಫ್ರೆಂಡ್ಲಿ ವಿಕೆಟ್ ಮೇಲೆ ಕೇವಲ 23 ರನ್ ನೀಡಿರುವುದು ನಿಜಕ್ಕೂ ಉತ್ತಮ ಸಾಧನೆ" ಎಂದು ಫಿಂಚ್ ಪ್ರಶಂಸೆ ಮಾಡಿದ್ದಾರೆ. ವಿಶ್ವಕಪ್ ಗೆ ನಾವು ಕಳೆದ 10-11 ತಿಂಗಳಿನಿಂದ ಸಿದ್ಧತೆ ನಡೆಸುತ್ತಿದ್ದೇವೆ. ಕೆಲವು ಪೆಟ್ಟುಗಳನ್ನು ತಿಂದರೂ, ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದೇವೆ. ವಿಶ್ವಕಪ್ ಹೊತ್ತಿಗೆ ನಾವು ಅತ್ಯುತ್ತಮ ಫಾರಂನಲ್ಲಿ ಇರುತ್ತೇವೆ ಎಂಬ ಆಶಯವಿದೆ ಎಂದಿದ್ದಾರೆ ಫಿಂಚ್.

Story first published: Thursday, February 28, 2019, 16:04 [IST]
Other articles published on Feb 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X