ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿಂಗ್‌ ಕೊಹ್ಲಿ ಕ್ರೀಡಾ ಸ್ಫೂರ್ತಿಗೆ ಪಾಕಿಸ್ತಾನದ ಅಭಿಮಾನಿಗಳೂ ಫಿದಾ!

ICC World Cup 2019 : ಕೊಹ್ಲಿ ಮಾಡಿದ ಕೆಲಸ ಎಲ್ಲೆಡೆ ವೈರಲ್ ಆಗುತ್ತಿದೆ..? | Oneindia Kannada
Kohli wins hearts in Pakistan with sportsmanship

ಮ್ಯಾಂಚೆಸ್ಟರ್‌, ಜೂನ್‌ 17: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಎಲ್ಲರ ಆಸಕ್ತಿಯ ಕೇಂದ್ರ ಬಿಂದುವಾಗಿದ್ದ ಇಂಡೊ-ಪಾಕ್‌ ಪಂದ್ಯದಲ್ಲಿ ಅಕ್ಷರಶಃ ಅಧಿಕಾರಯುತ ಪ್ರದರ್ಶನ ನಿಡಿದ ಟೀಮ್‌ ಇಂಡಿಯಾ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 89 ರನ್‌ಗಳ ಭರ್ಜರಿ ಜಯ ದಾಖಲಿಸಿತು.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಇದೇ ವೇಳೆ ಪಂದ್ಯದಲ್ಲಿ ಅದ್ಭುತ ಆಟವಾಡಿದ ಉಪನಾಯಕ ರೋಹಿತ್‌ ಶರ್ಮಾ ಮತ್ತು ನಾಯಕ ವಿರಾಟ್‌ ಕೊಹ್ಲಿಗೆ ಭಾರತ ಮತ್ತು ಪಾಕಿಸ್ತಾನದೆಲ್ಲೆಡೆಯಿಂದಲೂ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ. ಅದರಲ್ಲೂ ಪಂದ್ಯದಲ್ಲಿ ಅಪ್ರತಿಮ ಕ್ರೀಡಾ ಸ್ಫೂರ್ತಿ ಮೆರೆದ ಕ್ಯಾಪ್ಟನ್‌ ಕೊಹ್ಲಿಗೆ ಪಾಕಿಸ್ತಾನದ ಕ್ರಿಕೆಟ್‌ ಅಭಿಮಾನಿಗಳಂತೂ ಸಂಪೂರ್ಣ ಮನಸೋತಿದ್ದು, ಕಿಂಗ್‌ ಕೊಹ್ಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಸುರಿಮಳೆಯನ್ನೇ ಹರಿಸಿದ್ದಾರೆ.

ಮೊದಲಿಗೆ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್‌ ಮಾಡುತ್ತಿರುವಾಗ ಪಾಕ್‌ ವೇಗಿ ವಹಾಬ್‌ ರಿಯಾಝ್‌ ಬೌಲಿಂಗ್‌ ವೇಳೆ ಫಾಲೊಥ್ರೂನಲ್ಲಿ ಆಯತಪ್ಪಿ ನೆಲಕ್ಕುರುಳಿದ್ದರು. ಈ ಸಂದರ್ಭದಲ್ಲಿ ರಿಜಾಝ್‌ ಬಳಿ ತೆರಳಿದ ಕೊಹ್ಲಿ ಅವರ ಬೆನ್ನುತಟ್ಟಿ ಕ್ರೀಡಾ ಸ್ಫೂರ್ತಿ ಮೆರೆದರು. ಬಳಿಕ ಇಬ್ಬರು ಆಟಗಾರರ ಮುಖದಲ್ಲೂ ಮಂದಹಾಸ ಮೂಡಿತ್ತು.

ಆಕಳಿಸಿ ಅಭಿಮಾನಿಗಳಿಂದ ಮಂಗಳಾರತಿ ಮಾಡಿಸಿಕೊಂಡ ಪಾಕ್‌ ನಾಯಕ!ಆಕಳಿಸಿ ಅಭಿಮಾನಿಗಳಿಂದ ಮಂಗಳಾರತಿ ಮಾಡಿಸಿಕೊಂಡ ಪಾಕ್‌ ನಾಯಕ!

ಇನ್ನು ಇನಿಂಗ್ಸ್‌ನ ಅಂತ್ಯದಲ್ಲಿ ಕೊಹ್ಲಿ ತಮ್ಮ ಏಕದಿನ ಕ್ರಿಕೆಟ್‌ ವೃತ್ತಿಬದುಕಿನ 42ನೇ ಶತಕವನ್ನು ಎದುರು ನೋಡುತ್ತಿದ್ದರು. ಈ ಸಂದರ್ಭದಲ್ಲಿ ಮೊಹಮ್ಮದ್‌ ಆಮಿರ್‌ ಅವರ ಬೌಲಿಂಗ್‌ನಲ್ಲಿ ಪುಲ್‌ ಶಾಟ್‌ ಹೊಡೆಯುವ ಪ್ರಯತ್ನ ನಡೆಸಿದ್ದರು. ಆದರೆ ಚೆಂಡು ವಿಕೆಟ್‌ಕೀಪರ್‌ ಸರ್ಫರಾಝ್‌ ಕೈಸೇರಿತ್ತು. ಪಾಕ್‌ ಆಟಗಾರರೆಲ್ಲಾ ಕಾಟ್‌ ಬಿಹೈಂಡ್‌ಗಾಗಿ ಮನವಿ ಮಾಡಿದ್ದರು. ಆದರೆ ಅಂಪೈರ್‌ ಔಟ್‌ ನಿರ್ಧಾರ ನೀಡಲಿಲ್ಲ. ಈ ಸಂದರ್ಭದಲ್ಲಿ ಕೊಹ್ಲಿ ಚೆಂಡು ಬ್ಯಾಟ್‌ಗೆ ತಾಗಿದೆ ಎಂದು ಪೆವಿಲಿಯನ್‌ ಕಡೆಗೆ ಹೆಜ್ಜೆ ಹಾಕಿದರು. ಆದರೆ, ಟೆಲಿವಿಷನ್‌ ರೀಪ್ಲೇಯಲ್ಲಿ ಚೆಂಡು ಬ್ಯಾಟ್‌ಗೆ ತಾಗಿಲ್ಲವೆಂಬುದು ಸ್ಪಷ್ಟವಾಗಿ ತಿಳಿದುಬಂದಿತ್ತು. ವಿರಾಟ್‌ ಅವರ ಈ ಕ್ರೀಡಾ ಸ್ಫೂರ್ತಿಗೆ ಇಡೀ ಕ್ರಿಕೆಟ್‌ ಜಗತ್ತೆ ಸಲಾಮ್‌ ಹೊಡೆದರೆ, ಪಾಕಿಸ್ತಾನದ ಅಭಿಮಾನಿಗಳಂತೂ ಫುಲ್‌ ಫಿದಾ ಆಗಿಬಿಟ್ಟರು.

ವಿಶ್ವಕಪ್‌: ಪಾಕ್‌ ವಿರುದ್ಧ ಔಟಾಗದೇ ಇದ್ದರೂ ವಿರಾಟ್‌ ಹೊರನಡೆದದ್ದೇಕೆ?ವಿಶ್ವಕಪ್‌: ಪಾಕ್‌ ವಿರುದ್ಧ ಔಟಾಗದೇ ಇದ್ದರೂ ವಿರಾಟ್‌ ಹೊರನಡೆದದ್ದೇಕೆ?

"ವಿರಾಟ್‌ ಜಂಟಲ್‌ಮೆನ್‌. ಮೈದಾನದಲ್ಲಿ ಅವರು ಮೆರದ ಕ್ರೀಡಾ ಸ್ಫೂರ್ತಿ ನಿಜಕ್ಕೂ ಅದ್ಭುತ. ಚೆಂಡು ಬ್ಯಾಟ್‌ಗೆ ತಾಗಿತೆ ಎಂಬುದು ತಿಳಿದಿದ್ದ ಕಾರಣಕ್ಕೆ ಅಂಪೈರ್‌ ನಿರ್ಧಾರಕ್ಕೂ ಲೆಕ್ಕಿಸದೆ ಅವರು ಪಿವಿಲಿಯನ್‌ಗೆ ಹೋದರು. ವಹಾಬ್‌ ಬಿದ್ದಾಗ ಅವರನ್ನು ಬೆನ್ನುತಟ್ಟಿ ಎಬ್ಬಿಸಿದರು. ಈ ಮೂಲಕ ಪಾಕಿಸ್ತಾನದ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅವರನ್ನು ಯಾರಿಂದಾದರೂ ದ್ವೇಶಿಸಲು ಸಾಧ್ಯವೇ?,'' ಎಂದು ಕ್ರೀಡಾಂಗಣದಲ್ಲಿ ಸೇರಿದ್ದ ಪಾಕಿಸ್ತಾನದ ಅಭಿಮಾನಿಯೊಬ್ಬರು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದಾರೆ.

"ಬೆಸ್ಟ್‌ ಬ್ಯಾಟ್ಸ್‌ಮನ್‌, ಬೆಸ್ಟ್‌ ಕ್ಯಾಪ್ಟನ್‌, ಬೆಸ್ಟ್‌ ಅಥ್ಲೀಟ್‌, ಬೆಸ್ಟ್‌ ಹ್ಯೂಮನ್‌ ಬೀಯಿಂಗ್‌. ಕ್ರಿಕೆಟ್‌ನಲ್ಲಿ ಮತ್ತೊಬ್ಬ ವಿರಾಟ್‌ ಕೊಹ್ಲಿ ಹುಟ್ಟಿಬರಲು ಬರಲು ಸಾಧ್ಯವಿಲ್ಲ,'' ಎಂದು ಕೊಹ್ಲಿಯ ಗುಣಗಾನ ಮಾಡಿದ್ದಾರೆ.

ವಿಶ್ವಕಪ್‌: ಸಚಿನ್‌ ವಿಶ್ವ ದಾಖಲೆಯನ್ನು ಮುರಿದ ವಿರಾಟ್‌ ಕೊಹ್ಲಿ!ವಿಶ್ವಕಪ್‌: ಸಚಿನ್‌ ವಿಶ್ವ ದಾಖಲೆಯನ್ನು ಮುರಿದ ವಿರಾಟ್‌ ಕೊಹ್ಲಿ!

"ಎರಡೂ ರಾಷ್ಟ್ರಗಳ ನಡುವಣ ವೈರತ್ವವನ್ನು ಮರೆತುಬಿಡಿ. ಆಟಗಾರರ ನಡುವಣ ಈ ಬಾಂಧವ್ಯವು ಇಂಡೊ-ಪಾಕ್‌ ಪಂದ್ಯವನ್ನು ಮತ್ತಷ್ಟು ವಿಶೇಷವನ್ನಾಗಿಸುತ್ತದೆ. ವಿರಾಟ್‌ ಕೊಹ್ಲಿ ಮತ್ತು ವಹಾಬ್‌ ರಿಯಾಝ್‌ಗೆ ಒಂದು ಜೈ,'' ಎಂದು ಮತ್ತೊಬ್ಬ ಅಭಿಮಾನಿ ಕೊಂಡಾಡಿದ್ದಾರೆ.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ರೋಹಿತ್‌ ಶರ್ಮಾ ಅವರ ಅದ್ಭುತ 140 ರನ್‌ಗಳ ಶತಕದೊಂದಿಗೆ 50 ಓವರ್‌ಗಳಲ್ಲಿ 336/5 ರನ್‌ಗಳ ಶಿಖರ ನಿರ್ಮಿಸಿತು. ಬಳಿಕ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಮಳೆಯಿಂದಾಗಿ ಅಡಚಣೆಯಾದ ಕಾರಣ ಡಕ್ವರ್ತ್‌ ಲೂಯಿಸ್‌ ನಿಯಮದನ್ವಯ 40 ಓವರ್‌ಗಳಲ್ಲಿ 302 ರನ್‌ಗಳ ಪರಿಷ್ಕೃತ ಗುರಿ ನೀಡಲಾಯಿತು. ಅಂತಿಮವಾಗಿ ಪಾಕ್‌ ಪಡೆ 40 ಓವರ್‌ಗಳಳಲ್ಲಿ 6 ವಿಕೆಟ್‌ಗೆ 212 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿ ಸಳಿಗೆ ಶರಣಾಯಿತು.

Story first published: Monday, June 17, 2019, 23:08 [IST]
Other articles published on Jun 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X