ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋಲ್ಕತ್ತಾ ನೈಟ್ ರೈಡರ್ಸ್‌ನ ಟಿಮ್ ಸೀಫರ್ಟ್‌ಗೆ ಕೊರೊನಾ

Kolkata Knight Riders Tim Seifert tests positive for Covid

ಅಹ್ಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ ಟಿಮ್ ಸೀಫರ್ಟ್‌ಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಇಲ್ಲಿಗೆ ಕೋಲ್ಕತ್ತಾದ ಒಟ್ಟು ಮೂವರು ಆಟಗಾರರು ಇತ್ತೀಚೆಗೆ ಕೊರೊನಾ ಸೋಂಕಿಗೆ ತುತ್ತಾದಂತಾಗಿದೆ.

ಐಪಿಎಲ್ 2021 : ಅತಿಹೆಚ್ಚು ರನ್ ನೀಡಿದ ಬೌಲರ್‌ಗಳ ಪಟ್ಟಿಐಪಿಎಲ್ 2021 : ಅತಿಹೆಚ್ಚು ರನ್ ನೀಡಿದ ಬೌಲರ್‌ಗಳ ಪಟ್ಟಿ

2021ರ ಐಪಿಎಲ್ ಅಮಾನತಾಗಿರುವುದರಿಂದ ವಿದೇಶಿ ಆಟಗಾರರೆಲ್ಲ ಅವರವರ ದೇಶಗಳಿಗೆ ವಾಪಸ್ಸಾಗುತ್ತಿದ್ದಾರೆ. ಆದರೆ ಕೋವಿಡ್ ಪಾಸಿಟಿವ್ ಬಂದಿದ್ದರಿಂದ ವಿಕೆಟ್‌ ಕೀಪರ್ ಕಮ್ ಬ್ಯಾಟ್ಸ್‌ಮನ್‌ ಟಿಮ್ ಸೀಫರ್ಟ್‌ಗೆ ಚಾರ್ಟರ್ಡ್ ವಿಮಾನದಲ್ಲಿ ಇತರ ಆಟಗಾರರೊಂದಿಗೆ ತವರಿಗೆ ವಾಪಸ್ ಹೋಗಲು ಸಾಧ್ಯವಾಗಿಲ್ಲ.

ಐಪಿಎಲ್ 14ನೇ ಆವೃತ್ತಿ ನಡೆಯುತ್ತಿದ್ದಾಗ ಕೋಲ್ಕತ್ತಾ ನೈಟ್ ರೈಡರ್ಸ್‌ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್‌ಗೆ ಕೋವಿಡ್-19 ಪಾಸಿಟಿವ್ ಬಂದಿತ್ತು. ಇನ್ನು ಸನ್ ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಾಹ, ಡೆಲ್ಲಿ ಕ್ಯಾಪಿಟಲ್ಸ್‌ನ ಅಮಿತ್ ಮಿಶ್ರಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್‌ ಕೋಚ್‌ ಲಕ್ಷ್ಮೀಪತಿ ಬಾಲಾಜಿಗೂ ಸೋಂಕು ತಗುಲಿದ್ದರಿಂದ ಈ ಬಾರಿಯ ಐಪಿಎಲ್ ಅನ್ನು ಸ್ಥಗಿತಗೊಳಿಸಲಾಯ್ತು.

ದೆಹಲಿಯಿಂದ ಮಾಲ್ಡೀವ್ಸ್‌ಗೆ ಹಾರಿದ ಕೇನ್ ವಿಲಿಯಮ್ಸನ್ ಹಾಗೂ 3 ಕೀವಿಸ್ ಆಟಗಾರರುದೆಹಲಿಯಿಂದ ಮಾಲ್ಡೀವ್ಸ್‌ಗೆ ಹಾರಿದ ಕೇನ್ ವಿಲಿಯಮ್ಸನ್ ಹಾಗೂ 3 ಕೀವಿಸ್ ಆಟಗಾರರು

ಸೀಫರ್ಟ್ ಈಗ ಅಹ್ಮದಾಬಾದ್‌ನಲ್ಲಿದ್ದು ಐಸೊಲೇಶನ್ ಪಾಲಿಸುತ್ತಿದ್ದಾರೆ. ಅವರನ್ನು ಇನ್ನು ಚೆನ್ನೈಗೆ ಕರೆತರಲಾಗುತ್ತಿದೆ. ನ್ಯೂಜಿಲೆಂಡ್‌ಗೆ ವಾಪಸ್ಸಾಗುವ ಮುನ್ನ ಸೀಫರ್ಟ್ ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

Story first published: Saturday, May 8, 2021, 10:56 [IST]
Other articles published on May 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X