ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋಲ್ಕತ್ತಾ ನೈಟ್ ರೈಡರ್ಸ್‌ಗೀಗ ಆನೆ ಬಲ: ಮೆಕಲಮ್ ಹೆಡ್‌ ಕೋಚ್

Kolkata Knight Riders appoint Brendon McCullum as head coach

ಕೋಲ್ಕತ್ತ, ಆಗಸ್ಟ್ 15: ಇತ್ತೀಚೆಗಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ನ್ಯೂಜಿಲೆಂಡ್ ಮಾಜಿ ನಾಯಕ ಬ್ರೆಂಡನ್ ಮೆಕಲಮ್, ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಮಾಜಿ ಚಾಂಪಿಯನ್ ತಂಡವಾದ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

ಸ್ವಾತಂತ್ರ್ಯ ದಿನದಂದೇ ಪಾಂಟಿಂಗ್ ಹಿಂದಿಕ್ಕಿ ಇತಿಹಾಸ ಬರೆದ ವಿರಾಟ್ ಕೊಹ್ಲಿ!ಸ್ವಾತಂತ್ರ್ಯ ದಿನದಂದೇ ಪಾಂಟಿಂಗ್ ಹಿಂದಿಕ್ಕಿ ಇತಿಹಾಸ ಬರೆದ ವಿರಾಟ್ ಕೊಹ್ಲಿ!

ಈ ಮೊದಲು ಮೆಕಲಮ್ ಕೆಕೆಆರ್‌ಗೆ ಸಹ ಕೋಚ್ ಆಗಿ ಬರಲಿದ್ದಾರೆ ಎನ್ನಲಾಗಿತ್ತು. ಆದರೆ ಮೆಕಲಮ್ ಹೆಡ್ ಕೋಚ್ ಆಗಿರುವುದನ್ನು ಕೆಕೆಆರ್ ಅಧಿಕೃತ ಟ್ವಿಟರ್ ಖಾತೆ ಖಾತರಿಪಡಿಸಿದೆ. ಮುಂದಿನ ಐಪಿಎಲ್‌ನಲ್ಲಿ ಅಂದರೆ 2020ರಲ್ಲಿ ಮೆಕಲಮ್ ಕೆಕೆಆರ್‌ ಅನ್ನು ಮಾರ್ಗದರ್ಶಕರಾಗಿ ಮುನ್ನಡೆಸಲಿದ್ದಾರೆ.

ವೆಸ್ಟ್ ಇಂಡೀಸ್‌ ಟೆಸ್ಟ್ ಮುಂದಿರುವಾಗಲೇ ವಿರಾಟ್ ಕೊಹ್ಲಿ ಕೈ ಬೆರಳಿಗೆ ಗಾಯವೆಸ್ಟ್ ಇಂಡೀಸ್‌ ಟೆಸ್ಟ್ ಮುಂದಿರುವಾಗಲೇ ವಿರಾಟ್ ಕೊಹ್ಲಿ ಕೈ ಬೆರಳಿಗೆ ಗಾಯ

ಮೆಕಲಮ್‌ಗೂ ಕೆಕೆಆರ್‌ಗೂ ತೀರ ಹತ್ತಿರದ ನಂಟಿದೆ. ಯಾಕೆಂದರೆ 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಹಿಡಿದು 2010ರ ವರೆಗೆ ಮತ್ತು 2012ರಿಂದ 2013ರ ವರೆಗೆ ಮೆಕಲಮ್ ಕೆಕೆಆರ್ ಪರ ಬ್ಯಾಟ್ ಬೀಸಿದ್ದರು. 2012ರಲ್ಲಿ ಕೆಕೆಆರ್ ಚಾಂಪಿಯನ್ ಅನ್ನಿಸಿದಾಗಲೂ ಮೆಕಲಮ್ ಕೊಡುಗೆ ನೀಡಿದ್ದರು.

'ಜವಾಬ್ದಾರಿ ತೆಗೆದುಕೊಳ್ಳುತ್ತಿರುವುದು ಶ್ರೇಷ್ಠ ಗೌರವದ ಸಂಗತಿ ಎಂದು ಭಾವಿಸಿದ್ದೇನೆ. ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಕೆಕೆಆರ್‌, ಐಪಿಎಲ್ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಎರಡರಲ್ಲೂ ಪ್ರಾಮಾಣಿತ ಫ್ರಾಂಚೈಸಿ ಆಗಿ ಗುರುತಿಸಿಕೊಂಡಿದೆ,' ಎಂದು ಬ್ರೆಂಡನ್ ಹೇಳಿಕೊಂಡಿದ್ದಾರೆ. ಸಿಪಿಎಲ್‌ನಲ್ಲಿ ಬ್ರೆಂಡನ್‌ ಟ್ರಿನ್‌ಬಾಗೊ ನೈಟ್ ರೈಡರ್ಸ್‌ಗೆ ಮುಖ್ಯ ಕೋಚ್ ಆಗಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕ್ರಿಸ್‌ ಗೇಲ್ ನಿವೃತ್ತಿ ರೀಲಾ, ರಿಯಲ್ಲಾ?!: ವಿಡಿಯೋಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕ್ರಿಸ್‌ ಗೇಲ್ ನಿವೃತ್ತಿ ರೀಲಾ, ರಿಯಲ್ಲಾ?!: ವಿಡಿಯೋ

ನ್ಯೂಜಿಲೆಂಡ್‌ ಪರ ಮೆಕಲಮ್ ಟೆಸ್ಟ್ ನಲ್ಲಿ 101 ಪಂದ್ಯಗಳಲ್ಲಿ 6453 ರನ್ ಗಳಿಸಿದ್ದಾರೆ. ಇದರಲ್ಲಿ 302 ಅತ್ಯಧಿಕ ರನ್ ಕೂಡ ಸೇರಿದೆ. ಇನ್ನು 260 ಏಕದಿನ ಪಂದ್ಯಗಳಲ್ಲಿ 96.37 ಸ್ಟ್ರೈಕ್‌ರೇಟ್‌ನಂತೆ 6083 ರನ್ ಬಾರಿಸಿದ್ದಾರೆ. ಕೆಕೆಆರ್ ಪರ ಮೆಕಲಮ್ ಅಜೇಯ 158 ರನ್ ಸಿಡಿಸಿದ ದಾಖಲೆಯಿದೆ.

Story first published: Thursday, August 15, 2019, 20:30 [IST]
Other articles published on Aug 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X