ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟ್ರೋಲಿಗರನ್ನು ಕೆಣಕಿದ 15.5 ಕೋಟಿ ಮೌಲ್ಯದ ಕೆಕೆಆರ್ ಆಟಗಾರನ ನಗು!

ಬೆಂಗಳೂರು, ಸೆಪ್ಟೆಂಬರ್ 24: ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ ಕ್ರಿಕೆಟಿಗನೆಂದರೆ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್. ವೇಗದ ಬೌಲಿಂಗ್ ಹಾಕೂ ಬಿರುಸಿನ ಬ್ಯಾಟಿಂಗ್ ಎರಡರಲ್ಲಿಯೂ ಗುರುತಿಸಿಕೊಂಡಿದ್ದ ಪ್ಯಾಟ್ ಕಮಿನ್ಸ್‌ಗೆ ಹರಾಜಿನಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದ್ದು ಸಹಜವೇ ಆಗಿತ್ತು. ಕೊನೆಗೆ ಅವರು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಪಾಲಾಗಿದ್ದರು.

ಪ್ಯಾಟ್ ಕಮಿನ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸ್ಪರ್ಧೆಯಲ್ಲಿ ಕೆಕೆಆರ್‌ಗೆ ತೀವ್ರ ಸವಾಲೊಡ್ಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆಡಳಿತ ಎನ್ನುವುದು ಗಮನಾರ್ಹ. ಪ್ಯಾಟ್ ಕಮಿನ್ಸ್ ಅವರಿಗೆ ಕೆಕೆಆರ್ ನೀಡಿದ್ದು ಸಣ್ಣ ಮೊತ್ತವಲ್ಲ. ಬರೋಬ್ಬರಿ 15.5 ಕೋಟಿ ರೂ. ಇದು ಈವರೆಗಿನ ಐಪಿಎಲ್ ಹರಾಜುಗಳಲ್ಲಿಯೇ ವಿದೇಶಿ ಆಟಗಾರನೊಬ್ಬನಿಗೆ ನೀಡಿದ ಅತ್ಯಧಿಕ ಮೊತ್ತ ಎಂದರೆ ಪ್ಯಾಟ್ ಕಮಿನ್ಸ್‌ಗೆ ಇದ್ದ ಬೇಡಿಕೆಯ ಅರಿವಾಗಬಹುದು. ಮುಂದೆ ಓದಿ.

ಡೆತ್ ಓವರ್ ಪರಿಣತ ಕಮಿನ್ಸ್

ಡೆತ್ ಓವರ್ ಪರಿಣತ ಕಮಿನ್ಸ್

ಮೊದಲ ಓವರ್‌ನಲ್ಲಿಯೇ ರೋಹಿತ್ ಶರ್ಮಾ ಎರಡು ಸಿಕ್ಸರ್ ಬಾರಿಸಿದ್ದರೆ, ನಂತರ ಸೌರಬ್ ತಿವಾರಿ ಮತ್ತು ಹಾರ್ದಿಕ್ ಪಾಂಡ್ಯ ಬೌಂಡರಿಗಳನ್ನು ಬಾರಿಸಿದ್ದರು. ನಾಲ್ಕು ವೈಡ್‌ಗಳನ್ನೂ ಕಮಿನ್ಸ್ ಎಸೆದಿದ್ದರು. 16.30ರ ಎಕಾನಮಿಯನ್ನು ರನ್ ಸೋರಿಕೆ ಮಾಡಿದ್ದರು. ಡೆತ್ ಓವರ್‌ನಲ್ಲಿ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಪ್ಯಾಟ್ ಕಮಿನ್ಸ್‌ ಕೈಗೆ ಮತ್ತೆ ಚೆಂಡು ನೀಡಿ ನಾಲ್ಕು ಓವರ್ ಕೋಟಾ ಮುಗಿಸಲು ನಾಯಕ ದಿನೇಶ್ ಕಾರ್ತಿಕ್ ಧೈರ್ಯ ಮಾಡಲಿಲ್ಲ.

ಎರಡೂ ಕಡೆ ಮನರಂಜನೆ ನೀಡಿದ ಕಮಿನ್ಸ್!

ಎರಡೂ ಕಡೆ ಮನರಂಜನೆ ನೀಡಿದ ಕಮಿನ್ಸ್!

ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಕೆಕೆಆರ್ ಹೀನಾಯ ಸೋಲು ಕಂಡರೂ ಪ್ರಶಸ್ತಿ ವಿತರಣಾ ಸಮಯದಲ್ಲಿ ಪ್ಯಾಟ್ ಕಮಿನ್ಸ್ ಮುಖದಲ್ಲಿ ನಗು ಇತ್ತು. ಬೌಲಿಂಗ್ ಮಾಡುವಾಗ ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ 'ಮನರಂಜನೆ' ನೀಡಿದ್ದ ಕಮಿನ್ಸ್, ಬ್ಯಾಟಿಂಗ್ ಮಾಡುವಾಗ ಕೆಕೆಆರ್ ಅಭಿಮಾನಿಗಳಿಗೆ ಒಂದಷ್ಟು ಖುಷಿ ಮರಳಿಸಿದ್ದರು. ಆದರೆ ಇದರಿಂದ ಪ್ರಯೋಜನವೇನೂ ಆಗಲಿಲ್ಲ, ಪ್ಯಾಟ್ ಕಮಿನ್ಸ್ ಅವರ ಖಾತೆಗೆ ಒಂದು ಲಕ್ಷ ರೂ. ಸಿಕ್ಕಿದ್ದರ ಹೊರತಾಗಿ.

ಬೂಮ್ರಾಗೆ ನಾಲ್ಕು ಸಿಕ್ಸರ್

ಬೂಮ್ರಾಗೆ ನಾಲ್ಕು ಸಿಕ್ಸರ್

ಮುಂಬೈನ ಬೆಸ್ಟ್ ಬೌಲರ್ ಎನಿಸಿಕೊಂಡಿರುವ ಜಸ್‌ಪ್ರೀತ್ ಬೂಮ್ರಾ ಅವರ ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿದ ಕಮಿನ್ಸ್, 12 ಎಸೆತಗಳಲ್ಲಿಯೇ 275ರ ಸ್ಟ್ರೈಕ್ ರೇಟ್‌ನಲ್ಲಿ 33 ರನ್ ಬಾರಿಸಿದ್ದರು. ತಾವು ರನ್ ಸೋರಿಕೆ ಮಾಡಿದಂತೆಯೇ ರನ್ ಹೊಳೆ ಕೂಡ ಹರಿಸಿದ್ದರು. ಹೀಗೆ ಕೊಟ್ಟಿದ್ದನ್ನು ವಾಪಸ್ ಪಡೆಯುವ ಪ್ರಯತ್ನ ನಡೆಸಿದ್ದಂತೂ ಹೌದು. ಅವರ ಈ ಪ್ರಯತ್ನಕ್ಕೆ 'ಸೂಪರ್ ಸ್ಟ್ರೈಕರ್ ಆಫ್ ದಿ ಮ್ಯಾಚ್' ಗೌರವದೊಂದಿಗೆ ಒಂದು ಲಕ್ಷ ರೂ. ಬಹುಮಾನ ಕೂಡ ಸಿಕ್ಕಿದೆ.

ಟ್ರೋಲ್ ಆದ ಕಮಿನ್ಸ್

ಟ್ರೋಲ್ ಆದ ಕಮಿನ್ಸ್

ದುಬಾರಿ ಮೊತ್ತವಾದ 15 ಕೋಟಿ ರೂ.ಗೆ ಹರಾಜಾಗಿ, ರನ್ ನೀಡುವುದರಲ್ಲಿಯೂ ದುಬಾರಿಯಾಗಿದ್ದ ಪ್ಯಾಟ್ ಕಮಿನ್ಸ್, ಕೊನೆಗೆ ಬ್ಯಾಟಿಂಗ್ ಕಾರಣದಿಂದ ಮತ್ತೆ ಒಂದು ಲಕ್ಷ ಪಡೆದುಕೊಂಡು ನಗೆ ಬೀರಿದ್ದಾರೆ. ಆದರೆ ಟ್ವಿಟ್ಟರಿಗರು ಅವರನ್ನು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ. 15 ಕೋಟಿಯೆಂದರೆ ಓವರ್‌ಗೆ 15 ರನ್ ನೀಡುವುದಾಗಿ ಕಮಿನ್ಸ್ ಭಾವಿಸಿದ್ದಾರೆ ಎಂದು ಟೀಕಿಸಿದ್ದಾರೆ.

Story first published: Tuesday, October 6, 2020, 15:45 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X