ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವ ಚಾಂಪಿಯನ್ಸ್‌ ತಂಡದ ಕೋಚ್‌ ಜೊತೆಗೆ ನೈಟ್‌ ರೈಡರ್ಸ್‌ ಒಪ್ಪಂದ

IPL ತಂಡ ಸೇರಿಕೊಂಡ ಇಂಗ್ಲೆಂಡ್ ತಂಡದ ಕೋಚ್..? | Oneindia Kannada
Kolkata Knight Riders rope in World Cup-winning coach Trevor Bayliss

ಮುಂಬೈ, ಜುಲೈ 17: ಬಾಲಿವುಡ್‌ ಬಾದ್ಷಾ ಕಿಂಗ್‌ ಖಾನ್‌ ಖ್ಯಾತಿಯ ಶಾರುಖ್‌ ಖಾನ್‌ ಅವರ ಸಹ ಮಾಲೀಕತ್ವದ ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡವು ನೂತನ ವಿಶ್ವ ಚಾಂಪಿಯನ್ಸ್‌ ಇಂಗ್ಲೆಂಡ್‌ ತಂಡದ ಕೋಚ್‌ ಟ್ರೊವೋರ್‌ ಬೇಲಿಸಿಸ್‌ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಬೇಲಿಸಿಸ್‌ ಜೊತೆಗೆ ನ್ಯೂಜಿಲೆಂಡ್‌ ತಂಡದ ಮಾಜಿ ನಾಯಕ ಬ್ರೆಂಡನ್‌ ಮೆಕಲಮ್‌ ಅವರೊಟ್ಟಿಗೂ ಎರಡು ಬಾರಿಯ ಐಪಿಎಲ್‌ ಚಾಂಪಿಯನ್ಸ್‌ ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡ ಒಪ್ಪಂದ ಮಾಡಿಕೊಂಡಿದ್ದು, ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್‌ ಜಾಕ್‌ ಕಾಲಿಸ್‌ ಅವರೊಟ್ಟಿಗೆ ಬ್ಯಾಟಿಂಗ್‌ ಕೋಚ್‌ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಫುಟ್ಬಾಲ್‌: ಬೈಚುಂಗ್‌ ಭುಟಿಯಾ ದಾಖಲೆ ಮುರಿದ ನರೇಂದ್ರ ಗೆಹ್ಲೋಟ್‌ಫುಟ್ಬಾಲ್‌: ಬೈಚುಂಗ್‌ ಭುಟಿಯಾ ದಾಖಲೆ ಮುರಿದ ನರೇಂದ್ರ ಗೆಹ್ಲೋಟ್‌

ಕೋಲ್ಕೊತಾ ತಂಡದ ಜೊತೆಗೆ ಈ ಹಿಂದೆ 2011ರಿಂದ 2014ರವರೆಗೆ ಕಾರ್ಯ ನಿರ್ವಹಿಸಿದ್ದ ಬೇಲಿಸಿಸ್‌, ತಂಡದ ಎರಡು ಐಪಿಎಲ್‌ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಅಷ್ಟೇ ಅಲ್ಲದೆ ಬಿಗ್‌ ಬ್ಯಾಷ್‌ನಲ್ಲಿ ಸಿಡ್ನಿ ಸಿಕ್ಸರ್‌ ತಂಡಕ್ಕೆ ಮಾರ್ಗದರ್ಶನ ನೀಡಿದ ಅನುಭವವನ್ನೂ ಹೊಂದಿದ್ದಾರೆ. ಇನ್ನು 2011ರಲ್ಲಿ ತಮ್ಮ ಮಾರ್ಗದರ್ಶನದಲ್ಲಿ ಶ್ರೀಲಂಕಾ ತಂಡವನ್ನು ವಿಶ್ವಕಪ್‌ ಟೂರ್ನಿಯ ಫೈನಲ್‌ ತಲುಪುವಂತೆ ಮಾಡಿದ್ದರು.

ಆಸ್ಟ್ರೇಲಿಯಾ ಮೂಲದ 56 ವರ್ಷದ ಕೋಚ್‌ ಟ್ರೆವೋರ್‌ ಬೇಲಿಸಿಸ್‌ 2015ರ ಬಳಿಕ ಇಂಗ್ಲೆಂಡ್‌ ತಂಡದ ಪ್ರಧಾನ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅವರೊಟ್ಟಿಗೆ ವಿಶ್ವಕಪ್‌ ಟೂರ್ನಿ ವೇಳೆ ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್‌ ಪೌಲ್‌ ಕಾಲಿಂಗ್‌ವುಡ್‌ ಮತ್ತು ಪಾಲ್‌ ಫಾಬ್ರೇಸ್‌ ಸಹಾಯಕ ಕೋಚ್‌ಗಳಾಗಿ ಕಾರ್ಯ ನಿರ್ವಹಿಸಿದ್ದರು.

ಇಂಡೊನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌: ಸಿಂಧೂ, ಶ್ರೀಕಾಂತ್‌ ಶುಭಾರಂಭಇಂಡೊನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌: ಸಿಂಧೂ, ಶ್ರೀಕಾಂತ್‌ ಶುಭಾರಂಭ

ಇನ್ನು ಕ್ರಿಕೆಟ್‌ ವೀಕ್ಷಕವಿವರಣೆಯಲ್ಲಿ ತೊಡಗಿಸಿಕೊಂಡಿರುವ ನ್ಯೂಜಿಲೆಂಡ್‌ನ ಮಾಜಿ ಆಟಗಾರ ಬ್ರೆಂಡನ್‌ ಮೆಕಲಮ್‌, ಕೋಲ್ಕೊತಾ ನೈಟ್‌ ರೈಡರ್ಸ್‌ ಪರ 2008ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಅಷ್ಟೇ ಅಲ್ಲದೆ ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಅಜೇಯ 158 ರನ್‌ ಚೆಚ್ಚಿ ಮಿಂಚಿದ್ದರು. ಇದೀಗ ಮತ್ತೊಮ್ಮೆ ಕೆಕೆಆರ್‌ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. 2020ರ ಐಪಿಎಲ್‌ ಟೂರ್ನಿಗೆ ಬೇಲಿಸಿಸ್‌ ಮತ್ತು ಮೆಕಲಮ್‌ ತಂಡ ಸೇರಿಕೊಳ್ಳಲಿದ್ದಾರೆ.

Story first published: Wednesday, July 17, 2019, 14:39 [IST]
Other articles published on Jul 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X