ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಧವನ್ ಸ್ಫೋಟಕ ಬ್ಯಾಟಿಂಗ್, ಕೋಲ್ಕತ್ತಾಕ್ಕೆ ಸೋಲುಣಿಸಿದ ಡೆಲ್ಲಿ

Kolkata vs Delhi, 26th Match - Live Cricket Score

ಕೋಲ್ಕತ್ತಾ, ಏಪ್ರಿಲ್ 12: ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಶುಕ್ರವಾರ (ಏಪ್ರಿಲ್ 12) ನಡೆದ ಐಪಿಎಲ್ 26ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ನಿಂದ ಮಣಿಸಿತು. ಆರಂಭಿಕ ಆಟಗಾರ ಶಿಖರ್ ಧವನ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಡೆಲ್ಲಿ 4ನೇ ಗೆಲುವು ದಾಖಲಿಸಿದೆ.

ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್, ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 179 ರನ್ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ ಡೆಲ್ಲಿ, ಧವನ್ 97 (63 ಎಸೆತ), ರಿಷಬ್ ಪಂತ್ 46 (31) ರನ್ ಬೆಂಬಲದಲ್ಲಿ 18.5ನೇ ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 180 ರನ್ ಬಾರಿಸಿತು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್‌ಕ್ಲಿಕ್ ಮಾಡಿ

1
45902

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಬಂತು. ಜೋ ಡೆನ್ಲಿ 0, ರಾಬಿನ್ ಉತ್ತಪ್ಪ 28, ನಿತೀಶ್ ರಾಣಾ 11, ದಿನೇಶ್ ಕಾರ್ತಿಕ್ 2, ಶುಭ್‌ಮಾನ್ ಗಿಲ್ 65 (39 ಎಸೆತ), ಆಂಡ್ರೆ ರಸೆಲ್ 45, ಕಾರ್ಲೋಸ್ ಬ್ರಾಥ್ವೈಟ್ 6, ಪಿಯೂಶ್ ಚಾವ್ಲಾ 14 ರನ್‌ನೊಂದಿಗೆ ಕೆಕೆಆರ್ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 178 ರನ್ ಬಾರಿಸಿತು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಜೋ ಡೆನ್ಲಿ, ರಾಬಿನ್ ಉತ್ತಪ್ಪ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ಸಿ & ವಿಕೆ), ಶುಭ್‌ಮಾನ್ ಗಿಲ್, ಆಂಡ್ರೆ ರಸೆಲ್, ಕಾರ್ಲೋಸ್ ಬ್ರಾಥ್ವೈಟ್, ಪಿಯೂಶ್ ಚಾವ್ಲಾ, ಕುಲ್ದೀಪ್ ಯಾದವ್, ಲಾಕೀ ಫರ್ಗುಸನ್, ಪ್ರಸಿದ್ಧ್ ಕೃಷ್ಣ.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಪೃಥ್ವಿ ಶಾ, ಶಿಖರ್ ಧವನ್, ಶ್ರೀಯಸ್ ಐಯ್ಯರ್ (ಸಿ), ರಿಷಬ್ ಪಂತ್ (ವಿಕೆ), ಕಾಲಿನ್ ಇಂಗ್ರಾಮ್, ಕ್ರಿಸ್ ಮೊರಿಸ್, ಆಕ್ಸರ್ ಪಟೇಲ್, ರಾಹುಲ್ ತೆವಾಟಿಯಾ, ಕೀಮೋ ಪಾಲ್, ಕಾಗಿಸೊ ರಬಾಡಾ, ಇಶಾಂತ್ ಶರ್ಮಾ.

Story first published: Friday, April 12, 2019, 23:49 [IST]
Other articles published on Apr 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X