ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋಲ್ಕತಾ ಎದುರು ಹೋರಾಟ ನಡೆಸಿ ಸೋಲೊಪ್ಪಿಕೊಂಡ ಪಂಜಾಬ್

By Manjunatha
kolkatta vs punjab t20 ipl 44 match

ಕೋಲ್ಕತಾ ನೈಟ್ ರೈಡರ್ಸ್ ನೀಡಿದ 245 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ದಿಟ್ಟ ಹೋರಾಟ ನಡೆಸಿದರೂ ಕಿಂಗ್ಸ್ ಇಲೆವೆನ್ ಪಂಜಾಬ್ ಸೋಲೊಪ್ಪಿಕೊಳ್ಳಬೇಕಾಯಿತು.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆರ್. ಅಶ್ವಿನ್ ಅವರ ನಿರ್ಧಾರ ತಲೆಕೆಳಗಾಯಿತು. ಕೋಲ್ಕತಾ ತಂಡದ ಆರಂಭಿಕರಾದ ಸುನೀಲ್ ನರೇನ್ ಮತ್ತು ಕ್ರಿಸ್ ಲಿನ್ ಬಿರುಸಿನ ಆರಂಭ ಒದಗಿಸಿದರು

ಪಂಜಾಬ್‌ vs ಕೊಲ್ಕತ್ತ ಸ್ಕೋರ್ ಕಾರ್ಡ್

ಸುನೀಲ್ ನರೇನ್ ಕೇವಲ 36 ಎಸೆತಗಳಲ್ಲಿ 75 ರನ್ ಚಚ್ಚಿದರು. ಕೊನೆಯಲ್ಲಿ ನಾಯಕ ದಿನೇಶ್ ಕಾರ್ತಿಕ್ ಅಬ್ಬರಿಸಿದರು. ಕೇವಲ 23 ಎಸೆತಗಳಲ್ಲಿ 50 ರನ್ ಬಾರಿಸಿದ ಕಾರ್ತಿಕ್ ಅವರು ತಂಡದ ಮೊತ್ತವನ್ನು ಇನ್ನೂರರ ಗುರಿ ದಾಟಿಸಿದರು.

ರಾಬಿನ್ ಉತ್ತಪ್ಪ, ಆಂಡ್ರೂ ರಸೆಲ್ ಸಹ ಉತ್ತಮ ಕಾಣಿಕೆ ನೀಡಿದರು. ಕಿಂಗ್ಸ್ ಇಲೆವೆನ್ ಪರ ಆಂಡ್ರೂ ಟೈ ನಾಲ್ಕು ವಿಕೆಟ್ ಕಿತ್ತರೂ ದುಬಾರಿಯಾದರು. ಪಂಜಾಬ್ ತಂಡದ ಎಲ್ಲ ಬೌಲರ್‌ಗಳೂ 10ಕ್ಕಿಂತ ಅಧಿಕ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟರು.

ದೊಡ್ಡ ಗುರಿಯನ್ನು ಬೆನ್ನತ್ತಿದ ಕಿಂಗ್ಸ್‌ ಇಲೆವೆನ್ ತಂಡಕ್ಕೆ ಉತ್ತಮ ಆರಂಭ ದೊರಕಿತು. ಅತ್ಯುತ್ತಮ ಫಾರ್ಮ್‌ನಲ್ಲಿರುವ ಕನ್ನಡಿಗ ಕೆ.ಎಲ್. ರಾಹುಲ್, ಸುನೀಲ್ ನರೇನ್ ಸೇರಿದಂತೆ ಎಲ್ಲ ಬೌಲರ್‌ಗಳನ್ನು ದಂಡಿಸತೊಡಗಿದರು. ಅವರಿಗೆ ಆರಂಭದಲ್ಲಿ ಕ್ರಿಸ್ ಗೇಲ್ ಉತ್ತಮ ಸಾತ್ ನೀಡಿದರು.

ಆದರೆ ಗೇಲ್ ಔಟಾದ ಬಳಿಕ ಪಂಜಾಬ್ ರನ್ ವೇಗಕ್ಕೆ ಹೊಡೆತ ಬಿದ್ದಿತು. ಗೇಲ್ ವಿಕೆಟ್ ಒಪ್ಪಿಸಿದ ಮರು ಎಸೆತದಲ್ಲೇ ಕರ್ನಾಟಕದ ಮತ್ತೊಬ್ಬ ಆಟಗಾರ ಮಯಂಕ್ ಅಗರ್‌ವಾಲ್ ಔಟಾದರು. ಕರುಣ್ ನಾಯರ್ ಆಟವೂ ನಡೆಯಲಿಲ್ಲ. 29 ಎಸೆತದಲ್ಲಿ 7 ಸಿಕ್ಸರ್‌ ಸಹಿತ 66 ರನ್ ಬಾರಿಸಿದ ರಾಹುಲ್ ಒಂಬತ್ತನೇ ಓವರ್‌ನಲ್ಲಿ ಔಟಾದ ನಂತರ ಪಂಜಾಬ್ ಸೋಲು ಬಹುತೇಕ ಖಚಿತವಾಗಿತ್ತು.

ಬಳಿಕ ಆರೋನ್ ಫಿಂಚ್ ಮತ್ತು ನಾಯಕ ಅಶ್ವಿನ್ ಸ್ವಲ್ಪ ಹೋರಾಟ ನಡೆಸಿದರೂ, ಕೋಲ್ಕತಾ ನೀಡಿದ್ದ ದೊಡ್ಡ ಮೊತ್ತವನ್ನು ತಲುಪಲು ಅದು ಸಾಕಾಗಲಿಲ್ಲ.

Story first published: Saturday, May 12, 2018, 21:15 [IST]
Other articles published on May 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X