ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್: ದಾಖಲೆ ಬರೆದ 15ರ ಹರೆಯದ ಮೈಸೂರು ಹುಡುಗ

By Mahesh

ಮೈಸೂರು, ಸೆ.18: ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ನ ಔಪಚಾರಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮೈಸೂರು ವಾರಿಯರ್ಸ್ ಪರ ಮೊಟ್ಟ ಮೊದಲ ಪಂದ್ಯವಾಡಿದ 15 ವರ್ಷ ವಯಸ್ಸಿನ ಸ್ಥಳೀಯ ಆಟಗಾರ ಹೊಸ ದಾಖಲೆ ನಿರ್ಮಿಸಿದ್ದಾರೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ 15 ವರ್ಷ ವಯಸ್ಸಿನ ನಿಕಿನ್ ಜೋಸ್ ಅವರು ಅದ್ಭುತ ಆಟ ಪ್ರದರ್ಶಿಸಿ ಮೈಸೂರು ತಂಡದ ಗೆಲುವಿಗೆ ಕಾರಣರಾದರು. ಆಡಿದ ಮೊದಲ ಪಂದ್ಯದಲ್ಲೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ವಾರಿಯರ್ಸ್ ಪರ ಆಡಿದ ಎಸ್ ಜೆ ನಿಕಿನ್ ಜೋಸ್ ಅವರಿಗೆ ಕೊನೆಗೂ ಕೆಪಿಎಲ್ ನಲ್ಲಿ ಪಂದ್ಯವಾಡುವ ಅವಕಾಶ ನೀಡಿದ್ದನ್ನು ಸಮರ್ಥವಾಗಿ ಬಳಸಿಕೊಂಡರು. ಕಿಚ್ಚ ಸುದೀಪ್ ಅವರ ರಾಕ್ ಸ್ಟಾರ್ ತಂಡದ ವಿರುದ್ಧ 6 ವಿಕೆಟ್ ಕಬಳಿಸಿದ ನಿಕಿನ್ ಎಲ್ಲರ ಗಮನಸೆಳೆದರು.

ಕೆಪಿಎಲ್ ನಲ್ಲಿ ಆಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡ ನಿಕಿನ್ ಅವರು ಮೈಸೂರು ಪರ 3.2 ಓವರ್ ಗಳಲ್ಲಿ 6/11 ಪಡೆದು ರಾಕ್ ಸ್ಟಾರ್ ಗಳ ಮಾನ ಮರ್ಯಾದೆ ಕಳೆದರು. ಇದು ಕೆಪಿಎಲ್ ಇತಿಹಾಸದಲ್ಲೇ ಶ್ರೇಷ್ಠ ಬೌಲಿಂಗ್ ಪ್ರದರ್ಶನ ಎನಿಸಿದೆ.

KPL 2015: 15-year-old Mysuru boy Nikin Jose sets records

ನಿಕಿನ್ ಅವರ 20 ಎಸೆತಗಳಲ್ಲಿ 14 ಡಾಟ್ ಬಾಲ್ ಇತ್ತು ಎಂದರೆ ಊಹೆ ಮಾಡಿಕೊಳ್ಳಿ.. ಇದಕ್ಕೂ ಮುನ್ನ ಬ್ಯಾಟಿಂಗ್ ನಲ್ಲೂ ಮಿಂಚಿದ ನಿಕಿನ್ 18 ಎಸೆತಗಳಲ್ಲಿ 25ರನ್ ಚೆಚ್ಚಿದ್ದರು.

ನಿಕಿನ್ ಅವರ ಆಫ್ ಸ್ಪಿನ್ ಮೋಡಿಗೆ ಸಿಲುಕಿದ ರಾಕ್ ಸ್ಟಾರ್ ತಂಡ 75ರನ್ ಗಳ ಅಂತರದ ಭಾರಿ ಸೋಲು ಅನುಭವಿಸಿತು.

10,000ರು ನೀಡಿ ಕೆಪಿಎಲ್ ಹರಾಜಿನಲ್ಲಿ ಬಲಗೈ ಬ್ಯಾಟ್ಸ್ ಮನ್, ಆಫ್ ಸ್ಪಿನ್ನರ್ ನಿಕಿನ್ ರನ್ನು ಮೈಸೂರು ವಾರಿಯರ್ಸ್ ಖರೀದಿಸಿತ್ತು. ಕರ್ನಾಟಕದ ಅಂಡರ್ 16 ತಂಡದ ಪರ ವಿಜಯ್ ಮರ್ಚಂಟ್ ಟ್ರೋಫಿಯಲ್ಲಿ ಈ ವರ್ಷ ಆಡಿರುವ ನಿಕಿನ್ ಅವರು ಬೆಂಗಳೂರಿನ ಜವಾಹರ್ ಸ್ಪೋರ್ಟ್ಸ್ ಕ್ಲಬ್ ಪರ ಕೂಡಾ ಆಡುತ್ತಾರೆ.

ಕಳೆದ ಡಿಸೆಂಬರ್ ನಲ್ಲಿ ದಕ್ಷಿಣ ವಲಯ ಏಕದಿನ ಕ್ರಿಕೆಟ್ ವಿನೂ ಮಂಕಡ್ ಟ್ರೋಫಿ ಆಡುವ ಅಂಡರ್ 19 ತಂಡಕ್ಕೂ ನಿಕಿನ್ ಆಯ್ಕೆಯಾಗಿದ್ದರು.

ಸ್ಕೋರ್ ಕಾರ್ಡ್
ಮೈಸೂರು ವಾರಿಯರ್ಸ್ : 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 175
ಅರ್ಜುನ್ ಹೊಯ್ಸಳ 73 ರನ್ (48 ಎ, 8x4,1x6), ಸಿಎಂ ಗೌತಮ್ 42 ರನ್ (36ಎಸೆತ, 5x4), ಜೆ ಸುಚಿತ್ 11 ನಾಟೌಟ್, ಮದನ್ ಮೋಹನ್ 21/3

ರಾಕ್ ಸ್ಟಾರ್ಸ್: 16.2 ಓವರ್ ಗಳಲ್ಲಿ 100 ಆಲೌಟ್
ಚರಣ್ ತೇಜ 40(30ಎ, 1x4,3x6), ನಿಕಿನ್ 11/6, ಡೇವಿಡ್ ಮಥಾಯಿಸ್ 21/2.

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X