ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್: ಮಂಗಳೂರನ್ನು ಬಗ್ಗು ಬಡಿದ ಬೆಳಗಾವಿ ಪ್ಯಾಂಥರ್ಸ್

By Mahesh

ಹುಬ್ಬಳ್ಳಿ, ಸೆ. 03: ಹುಬ್ಬಳ್ಳಿ, ಸೆ. 03: ಇಲ್ಲಿನ ರಾಜನಗರ ಸ್ಟೇಡಿಯಂನಲ್ಲಿ ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ಪಂದ್ಯಾವಳಿ ಸೆ.03ರಂದು ಆರಂಭಗೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ತಂಡವನ್ನು ಬೆಳಗಾವಿ ಪ್ಯಾಂಥರ್ಸ್ ಸುಲಭವಾಗಿ ಸೋಲಿಸಿದೆ. ಬೆಳಗಾವಿ ನಾಯಕ ವಿನಯ್ ಕುಮಾರ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಮಂಗಳೂರು ತಂಡ 20 ಓವರ್ ಗಳಲ್ಲಿ 141/5 ಸ್ಕೋರ್ ಮಾಡಿತ್ತು. ಇದಕ್ಕೆ ಉತ್ತರವಾಗಿ ಬೆಳಗಾವಿ ತಂಡ 10 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 62ರನ್ ಮಾಡಿತ್ತು.


ಆದರೆ, ನಂತರ ನಾಯಕ ವಿನಯ್ ಕುಮಾರ್ ಹಾಗೂ ಜೋನಾಥನ್ ಅವರ ಅರ್ಧಶತಕ ಹಾಗೂ ಜೊತೆಯಾಟದ ನೆರವಿನಿಂದ ಪಂದ್ಯವನ್ನು ಸುಲಭವಾಗಿ ಗೆಲ್ಲಲು ನೆರವಾಯಿತು.

ಟಿಕೆಟ್ ಗಳಿಗಾಗಿ ಸಂಪರ್ಕಿಸಿ: ಹುಬ್ಬಳ್ಳಿಯಲ್ಲಿ ಟಿಕೆಟ್ ಗಳು ರಾಜನಗರ ಸ್ಟೇಡಿಯಂ ಗೇಟ್ 4 ರ ಕೌಂಟರ್ ನಲ್ಲಿ ದೊರೆಯುತ್ತದೆ. ಉಳಿದಂತೆ ಓಯಸಿಸ್ ಮಾಲ್ ಅಥವಾ ಆನ್ ಲೈನ್ ನಲ್ಲಿ ಬುಕ್ ಮೈಶೋ.ಕಾಂ ಮೂಲಕ ಟಿಕೆಟ್ ಖರೀದಿಸಬಹುದು.

KPL 2015 Match 1 Report

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಿಟ್ಟು ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಪಂದ್ಯಾವಳಿಗಳು ನಡೆಯುತ್ತಿರುವುದು ಈ ಬಾರಿಯ ವಿಶೇಷ. ಸೆ.3 ರಿಂದ ಸೆ. 19ರವರೆಗೆ ಕರ್ನಾಟಕದ ಪ್ರತಿಭೆಗಳಿಗೆ ಈ ಟಿ 20 ಟೂರ್ನಿ ಸೂಕ್ತ ವೇದಿಕೆ ಒದಗಿಸಲಿದೆ.[ಕೆಪಿಎಲ್ 2015 ವೇಳಾಪಟ್ಟಿ: ಸೆ. 2 ರಿಂದ 19 ರ ತನಕ]

ತಂಡಗಳು: ಮೈಸೂರು ವಾರಿಯರ್ಸ್, ಮಂಗಳೂರು ಯುನೈ ಟೆಡ್, ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ್ ಬುಲ್ಸ್, ಬಳ್ಳಾರಿ ಟಸ್ಕರ್, ಹುಬ್ಬಳ್ಳಿ ಟೈಗರ್ಸ್, ನಮ್ಮ ಶಿವಮೊಗ್ಗ.

ಬೆಳಗಾವಿ ಪ್ಯಾಂಥರ್ಸ್: ಆರ್ ವಿನಯ್ ಕುಮಾರ್ (ನಾಯಕ), ಅಭಿಶೇಕ್ ರೆಡ್ಡಿ, ಚಿರಂಜೀವಿ ಜಿಎಸ್, ನಿತಿನ್ ಮುಲ್ಕಿ, ಪ್ರವೀಣ್ ದುಬೇ, ಪುಷ್ಪಕ್ ನಾಗ್, ಸ್ಟಾಲೀನ್ ಹೂವರ್, ಸುಮಿತ್ ಶಿರ್ ಗುರ್ ಕರ್, ಸುರೇಶ್ ಕರಾಣಿ, ವಿನು ಪ್ರಸಾದ್, ಜೀಷನ್ ಅಲಿ ಸಯ್ಯದ್, ಶರತ್ ಎಚ್ ಎಸ್, ಮಾಯಾಂಕ್ ಅಗರವಾಲ್, ಜೋನಾಥನ್ ಆರ್, ಕೆಎನ್ ಭರತ್, ಶರತ್ ಶ್ರೀನಿವಾಸ್, ಮಹೇಶ್ ಪಾಟೀಲ್, ನಿಖಿತ್ ಸಯಾನ್ಮಾಲ್.

KPL 2015 Match 1 Report

ಮಂಗಳೂರು ಯುನೈಟೆಡ್: ರೋಹಿತ್ ಸಭರ್ ವಾಲ್, ಕರುಣ್ ನಾಯರ್, ಉದಿತ್ ಪಟೇಲ್, ನಿಶ್ಚಿತ್ ರಾಜ್, ಭರತ್ ನಾರಾಯಣ್ ಪ್ರಸಾದ್, ಅರ್ಷ್ ದೀಪ್ ಸಿಂಗ್ ಬ್ರಾರ್, ಪ್ರವೀಣ್ ಕುಮಾರ್ ಬಿ, ಅಕ್ಷಯ್ ಬಲ್ಲಾಳ್, ನಿಹಾಲ್ ಶಿಲಾರ್, ಕೆಸಿ ಅವಿನಾಶ್, ಶಿಶಿರ್ ಭವಾನೆ, ರೋಹನ್ ಕದಂ, ರಾಹುಲ್ ಗೌತಮ್, ಮಶೂಕ್ ಹುಸೇನ್, ಅಭಿಷೇಕ್ ಭಟ್, ರೋನಿತ್ ಮೋರೆ, ಸಯ್ಯದ್ ಮೋಯಿದ್ದೀನ್, ಪ್ರದೀಪ್ ಟಿ, ಮಿತ್ರಕಾಂತ್ ಯಾದವ್ ಹಾಗೂ ಮುಹಫಿಜ್ ಎ ಖಾದರ್.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X