ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಕ್ಕಳನ್ನು ಮೆಚ್ಚಿದ ಉತ್ತಪ್ಪ, ಮ್ಯಾಚ್ ನೋಡೋಕೆ ಟಿಕೆಟ್ ಕೊಟ್ರಪ್ಪ

By Mahesh
KPL 2018: Bengaluru Blasters skipper, Robin Uthappa meet with Orphanage Children

ಬೆಂಗಳೂರು, ಆಗಸ್ಟ್ 15: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) 2018ರ ಉದ್ಘಾಟನಾ ಪಂದ್ಯದಲ್ಲಿಂದು ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ ಸೆಣಸಲಿದೆ. ಬೆಂಗಳೂರು ತಂಡದ ನಾಯಕ ರಾಬಿನ್ ಉತ್ತಪ್ಪ ಅವರು ಇದಕ್ಕೂ ಮುನ್ನ ಅನಾಥ ಮಕ್ಕಳೊಡನೆ ಕೆಲ ಕಾಲ ಕಳೆದು ಸಂಭ್ರಮಿಸಿದ್ದಾರೆ.

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ(ಆಗಸ್ಟ್ 15) ಸಂಜೆ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಬೆಂಗಳೂರು ಬ್ಲಾಸ್ಟರ್ಸ್ ಎದುರಿಸಲಿದೆ. ಏಳನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್ ) ಟ್ವೆಂಟಿ20 ಟೂರ್ನಮೆಂಟ್ ಆಗಸ್ಟ್ 15 ರಿಂದ ಸೆಪ್ಟೆಂಬರ್ 06 ರ ತನಕ ನಡೆಯಲಿದೆ.

ಕೆಪಿಎಲ್ 2018: ಬೆಳಗಾವಿ vs ಬೆಂಗಳೂರು ಪಂದ್ಯದ ಮುನ್ನೋಟ ಕೆಪಿಎಲ್ 2018: ಬೆಳಗಾವಿ vs ಬೆಂಗಳೂರು ಪಂದ್ಯದ ಮುನ್ನೋಟ

ಟಿಕೆಟ್ ಕೊಡ್ತೀನಿ ಬನ್ನಿ : ಚಿನ್ನಸ್ವಾಮಿ ಅಂಗಳಕ್ಕೆ ಬಂದಿದ್ದ ಸೈಂಟ್ ಪ್ಯಾಟ್ರಿಕ್ಸ್ ಬಾಯ್ಸ್ ಹೋಮ್ (ಅನಾಥ) ಮಕ್ಕಳನ್ನು ಭೇಟಿ ಮಾಡಿದ ರಾಬಿನ್ ಉತ್ತಪ್ಪ ಹಾಗೂ ನ್ಯೂಜಿಲೆಂಡ್ ನ ಮಾಜಿ ಆಟಗಾರ ಸ್ಕಾಟ್ ಸ್ಟ್ರೈರಿಸ್ ಅವರು, ಮಕ್ಕಳ ಉತ್ಸಾಹ ಕಂಡು ಸಂಭ್ರಮಿಸಿದರು.

ಕೆಪಿಎಲ್ 2018 : ಸಂಪೂರ್ಣ ವೇಳಾಪಟ್ಟಿ, ಟಿವಿ ಪ್ರಸಾರ ಸಮಯಕೆಪಿಎಲ್ 2018 : ಸಂಪೂರ್ಣ ವೇಳಾಪಟ್ಟಿ, ಟಿವಿ ಪ್ರಸಾರ ಸಮಯ

'ಕ್ರಿಕೆಟ್ ನಲ್ಲಿ ಯಶಸ್ಸು ಗಳಿಸಲು ಪ್ರತಿಭೆಯ ಜತೆಗೆ ಸತತ ಪರಿಶ್ರಮ ಅಗತ್ಯ' ಎಂದು ಉತ್ತಪ್ಪ ಇದೇ ಸಂದರ್ಭದಲ್ಲಿ ಹೇಳಿದರು. ಮಕ್ಕಳ ಉತ್ಸಾಹ ಕಂಡ ಉತ್ತಪ್ಪ ಅವರು ಆಗಸ್ಟ್ 17ರಂದು ಬಳ್ಳಾರಿ ಟಸ್ಕರ್ ವಿರುದ್ಧದ ಪಂದ್ಯ ನೋಡಲು ಬರುವ ಮಕ್ಕಳ ಟಿಕೆಟ್ ಪ್ರಾಯೋಜಿಸುವುದಾಗಿ ಘೋಷಿಸಿದರು.

KPL 2018: Bengaluru Blasters skipper, Robin Uthappa meet with Orphanage Children

ಪ್ರಸಕ್ತ ಋತುವಿನ ಪಂದ್ಯಗಳು ಆಗಸ್ಟ್ 15ರಂದು ಬೆಂಗಳೂರಿನಲ್ಲಿ ಆರಂಭವಾಗಲಿವೆ. ನಂತರ ಆಗಸ್ಟ್ 19ರಂದು ಹುಬ್ಬಳ್ಳಿಗೆ ಆನಂತರ 29ರಂದು ಮೈಸೂರಿಗೆ ಈ ಟೂರ್ನಿ ತೆರಳಲಿದೆ.

ಕೆಪಿಎಲ್ 2018: ಯಾರ್ಯಾರು ಯಾವ ತಂಡಕ್ಕೆ?ಕೆಪಿಎಲ್ 2018: ಯಾರ್ಯಾರು ಯಾವ ತಂಡಕ್ಕೆ?

ಈ ಪಂದ್ಯಾವಳಿಯನ್ನು ಸ್ಟಾರ್ ಸ್ಪೋರ್ಟ್, ಸ್ಟಾರ್ ಸ್ಪೋಟ್ಸ್ ಎಚ್‍ಡಿ ಮತ್ತು ಹಾರ್ಟ್ ಸ್ಟಾರ್ಟ್ ಗಳಲ್ಲಿ ಕೆನಡಾ, ಯುಕೆ ಮತ್ತು ಏಷ್ಯಾ ಪೆಸಿಫಿಕ್ ಪ್ರದೇಶಗಳಲ್ಲಿ ನೇರವಾಗಿ ಪ್ರಸಾರ ಮಾಡಲಾಗುವುದು.

ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್, ಹುಬ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್, ಶಿವಮೊಗ್ಗ ಲಯನ್ಸ್ ಹಾಗ್ ಬೆಂಗಳೂರು ಬ್ಲಾಸ್ಟರ್ಸ್. ಒಟ್ಟು 7 ತಂಡಗಳು 19.5 ಎಂಚು ಎತ್ತರದ ಆಕರ್ಷಕ ಟ್ರೋಫಿಗಾಗಿ ಕಾದಾಡಲಿವೆ.

Story first published: Wednesday, August 22, 2018, 14:11 [IST]
Other articles published on Aug 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X