ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ ಪಂದ್ಯಗಳಿಗೆ ಸಂಪೂರ್ಣ ಸಜ್ಜಾಗಿದೆ ಸಾಂಸ್ಕೃತಿಕ ನಗರಿ ಮೈಸೂರು

By Yashaswini
KPL 2018: Mysuru is getting ready for KPL Matches

ಮೈಸೂರು, ಆಗಸ್ಟ್ 24 : ಕರ್ನಾಟಕ ಪ್ರೀಮಿಯರ್‌ ಲೀಗ್ (ಕೆಪಿಎಲ್) ಟ್ವೆಂಟಿ-20 ಕ್ರಿಕೆಟ್‌ ಟೂರ್ನಿ ನಿಗದಿತ ವೇಳಾಪಟ್ಟಿಗಿಂತ ಮುಂಚಿತವಾಗಿಯೇ ಮೈಸೂರಿಗೆ ಕಾಲಿಡಲಿದ್ದು, ಆಗಸ್ಟ್ 25ರ ಶನಿವಾರದಿಂದಲೇ ಪಂದ್ಯಗಳು ಆರಂಭವಾಗಲಿವೆ.

ಬಿಸಿಸಿಐ ಅಧಿಕಾರ ಮೊಟಕು: ಸಂಪೂರ್ಣ ಆಡಳಿತ ಸಿಒಎ ವಶಕ್ಕೆಬಿಸಿಸಿಐ ಅಧಿಕಾರ ಮೊಟಕು: ಸಂಪೂರ್ಣ ಆಡಳಿತ ಸಿಒಎ ವಶಕ್ಕೆ

ಈ ಮುಂಚಿನ ವೇಳಾಪಟ್ಟಿಯಂತೆ ಮೈಸೂರಿನಲ್ಲಿ ಆಗಸ್ಟ್‌ 28ರಿಂದ ಪಂದ್ಯಗಳು ಆರಂಭವಾಗಬೇಕಿತ್ತು. ಆದರೆ, ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ಆರು ಪಂದ್ಯಗಳನ್ನು ಮಳೆಯ ಕಾರಣ ಮೈಸೂರಿಗೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಆ.25ರಿಂದಲೇ ಪಂದ್ಯಗಳು ನಡೆಯಲಿವೆ.

ಹುಬ್ಬಳ್ಳಿಯಲ್ಲಿ 11 ಪಂದ್ಯಗಳನ್ನು ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಎರಡು ಪಂದ್ಯಗಳು ಮಾತ್ರ ನಡೆದಿದ್ದು, ಮೂರು ಪಂದ್ಯಗಳು ಮಳೆಯಿಂದ ರದ್ದಾಗಿವೆ. ಇನ್ನುಳಿದಿರುವ ಪಂದ್ಯಗಳನ್ನು ಮೈಸೂರಿನಲ್ಲಿ ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ನಿರ್ಧರಿಸಿರುವುದು ಈ ಪ್ರಕ್ರಿಯೆಗೆ ಕಾರಣ.

ಏಷ್ಯನ್ ಗೇಮ್ಸ್ 2018: ಶೂಟಿಂಗ್ ನಲ್ಲಿ ಹೀನಾ ಸಿಧುಗೆ ಕಂಚಿನ ಪದಕಏಷ್ಯನ್ ಗೇಮ್ಸ್ 2018: ಶೂಟಿಂಗ್ ನಲ್ಲಿ ಹೀನಾ ಸಿಧುಗೆ ಕಂಚಿನ ಪದಕ

ಈ ಮೊದಲಿನ ವೇಳಾಪಟ್ಟಿಯಂತೆ ನಗರದ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣವು ಎರಡು ಸೆಮಿಫೈನಲ್‌ ಮತ್ತು ಫೈನಲ್‌ ಸೇರಿದಂತೆ ಒಟ್ಟು 10 ಪಂದ್ಯಗಳಿಗೆ ಆತಿಥ್ಯ ವಹಿಸಬೇಕಿತ್ತು. ಇದೀಗ 16 ಪಂದ್ಯಗಳನ್ನು ಆಯೋಜಿಸುವ ಅವಕಾಶ ಮೈಸೂರಿಗೆ ಲಭಿಸಿದೆ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಸಿದ್ಧತೆಗಳು ಭರದಿಂದ ನಡೆದಿದ್ದು, ಸ್ಪೋರ್ಟಿಂಗ್‌ ಪಿಚ್‌ ಸಿದ್ಧಪಡಿಸಲಾಗಿದೆ. ನಗರದಲ್ಲಿ ಕೆಲವೊಮ್ಮೆ ತುಂತುರು ಮಳೆಯಾಗುತ್ತಿದೆಯಾದರೂ, ಪಂದ್ಯಗಳಿಗೆ ಅಡ್ಡಿಯಾಗದು ಎಂಬ ವಿಶ್ವಾಸದಲ್ಲಿ ನಗರದ ಕ್ರಿಕೆಟ್‌ ಪ್ರೇಮಿಗಳಿದ್ದಾರೆ.

ಹುಬ್ಬಳ್ಳಿಯಿಂದ ಪಂದ್ಯಗಳು ಸ್ಥಳಾಂತರಗೊಂಡಿರುವುದರಿಂದ ಮೈಸೂರಿನಲ್ಲಿ ಶನಿವಾರದಿಂದಲೇ ಪಂದ್ಯಗಳು ನಡೆಯಲಿವೆ ಎಂದು ಕೆಎಸ್‌ಸಿಎ ಮೈಸೂರು ವಲಯ ನಿಯಂತ್ರಕ ಎಸ್‌.ಬಾಲಚಂದರ್ ತಿಳಿಸಿದರು.

ಚುನಾವಣೆ ದಿನ ಎರಡು ಪಂದ್ಯ
ಪಾಲಿಕೆ ಚುನಾವಣೆ ನಡೆಯುವ ಆಗಸ್ಟ್‌ 31ರಂದು ಎರಡು ಪಂದ್ಯಗಳು ನಡೆಯಲಿವೆ. ಈ ಹಿಂದಿನ ವೇಳಾಪಟ್ಟಿಯಂತೆ ಆ. 30 ಮತ್ತು 31ರಂದು ಯಾವುದೇ ಪಂದ್ಯಗಳಿರಲಿಲ್ಲ. ಚುನಾವಣೆ ದಿನ ಶಾಂತಿ, ಸುವ್ಯವಸ್ಥೆ ಕಾಪಾಡುವ ಜತೆಗೆ ಪಂದ್ಯಕ್ಕೆ ಭದ್ರತೆ ಒದಗಿಸಬೇಕಾದ ಅನಿವಾರ್ಯತೆ ಪೊಲೀಸರಿಗೆ ಎದುರಾಗಿದೆ.

ಶನಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್-ಬಳ್ಳಾರಿ ಟಸ್ಕರ್ಸ್ ತಂಡಗಳು ಪೈಪೋಟಿ ನಡೆಸಲಿವೆ. ಎರಡನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್- ಬೆಂಗಳೂರು ಬ್ಲಾಸ್ಟರ್ಸ್ ಎದುರಾಗಲಿವೆ. ಮೈಸೂರು ವಾರಿಯರ್ಸ್‌ ತಂಡದದವರು ಆ.26 ರಂದು ತವರಿನಲ್ಲಿ ಮೊದಲ ಪಂದ್ಯ ಆಡಲಿದ್ದಾರೆ.

KPL 2018: Mysuru is getting ready for KPL Matches

ಮೈಸೂರಿನ ಪಂದ್ಯಗಳ ವೇಳಾಪಟ್ಟಿ
ಆಗಸ್ಟ್ 25: ಬೆಳಗಾವಿ ಪ್ಯಾಂಥರ್ಸ್-ಬಳ್ಳಾರಿ ಟಸ್ಕರ್ಸ್ (ಆರಂಭ: ಮಧ್ಯಾಹ್ನ 2), ಶಿವಮೊಗ್ಗ ಲಯನ್ಸ್- ಬೆಂಗಳೂರು ಬ್ಲಾಸ್ಟರ್ಸ್ (ಆರಂಭ ಸಂಜೆ 6.30),
ಆ.26: ಮೈಸೂರು ವಾರಿಯರ್ಸ್- ಹುಬ್ಬಳ್ಳಿ ಟೈಗರ್ಸ್ (ಮಧ್ಯಾಹ್ನ 2), ಬಿಜಾಪುರ ಬುಲ್ಸ್-ಬಳ್ಳಾರಿ ಟಸ್ಕರ್ಸ್,
ಆ. 28: ಮೈಸೂರು ವಾರಿಯರ್ಸ್-ಶಿವಮೊಗ್ಗ ಲಯನ್ಸ್ (ಸಂಜೆ 6.30),
ಆ.29: ಶಿವಮೊಗ್ಗ ಲಯನ್ಸ್-ಬೆಳಗಾವಿ ಪ್ಯಾಂಥರ್ಸ್ (ಸಂಜೆ 6.30),
ಆ.31: ಹುಬ್ಬಳ್ಳಿ ಟೈಗರ್ಸ್-ಬೆಳಗಾವಿ ಪ್ಯಾಂಥರ್ಸ್ (ಮಧ್ಯಾಹ್ನ 2), ಬಿಜಾಪುರ ಬುಲ್ಸ್-ಮೈಸೂರು ವಾರಿಯರ್ಸ್ (ಸಂಜೆ 6.30),
ಸೆಪ್ಟೆಂಬರ್ 1: ಮೈಸೂರು ವಾರಿಯರ್ಸ್-ಬೆಳಗಾವಿ ಪ್ಯಾಂಥರ್ಸ್ (ಆರಂಭ ಮಧ್ಯಾಹ್ನ 2.00); ಹುಬ್ಬಳ್ಳಿ ಟೈಗರ್ಸ್- ಬೆಂಗಳೂರು ಬ್ಲಾಸ್ಟರ್ಸ್ (ಸಂಜೆ 6.30),
ಸೆ.2: ಶಿವಮೊಗ್ಗ ಲಯನ್ಸ್- ಬಿಜಾಪುರ ಬುಲ್ಸ್ (ಮಧ್ಯಾಹ್ನ 2.00); ಬೆಂಗಳೂರು ಬ್ಲಾಸ್ಟರ್ಸ್- ಮೈಸೂರು ವಾರಿಯರ್ಸ್ (ಸಂಜೆ 6.30),
ಸೆ.3: ಬಳ್ಳಾರಿ ಟಸ್ಕರ್ಸ್- ಶಿವಮೊಗ್ಗ ಲಯನ್ಸ್ (ಸಂಜೆ 6.30) ಸೆ.4: ಮೊದಲ ಸೆಮಿಫೈನಲ್

Story first published: Friday, August 24, 2018, 17:15 [IST]
Other articles published on Aug 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X